Shwetha Chengappa: ಲಂಗಾ ದಾವಣಿಯಲ್ಲಿ ಮಿರಮಿರನೇ ಮಿಂಚಿದ ನಟಿ ಶ್ವೇತಾ ಚೆಂಗಪ್ಪ
ಜೀ ಕನ್ನಡ ವಾಹಿನಿಯಲ್ಲಿ ಮನರಂಜನೆಗೆ ಯಾವ ಕೊರತೆಯೂ ಇಲ್ಲ. ವಾರ ಪೂರ್ತಿ ಒಳ್ಳೊಳ್ಳೆ ಕಥೆಯುಳ್ಳ ಧಾರಾವಾಹಿಗಳು ಮೂಡಿ ಬರುತ್ತಿವೆ. ಪ್ರೇಕ್ಷಕರು ಧಾರಾವಾಹಿಗಳನ್ನು ನೋಡುತ್ತಾ ವಾರವೆಲ್ಲಾ ಕಳೆಯುತ್ತಾರೆ. ವೀಕೆಂಡ್ ಬಂತೆಂದರೆ ಸಾಕು ಜೀ ಕನ್ನಡ ವಾಹಿನಿಯಲ್ಲಿ ಹಬ್ಬವೋ ಹಬ್ಬ. ವಾರದ ಕೊನೆಯಲ್ಲಿ ಚಾನೆಲ್ ಚೇಂಜ್ ಮಾಡುವ ಮಾತೇ ಇಲ್ಲ. ಇನ್ನು ಊಟ ತಿಂಡಿ ಬೇಕಾಗಿಲ್ಲ. ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವುದು ಗ್ಯಾರೆಂಟಿ.
'ಚೋಟಾ ಚಾಂಪಿಯನ್', 'ಭರ್ಜರಿ ಬ್ಯಾಚುಲರ್ಸ್', 'ಕಪಲ್ಸ್ ಕಿಚನ್', 'ಸರಿಗಮಪ', 'ಕಾಮಿಡಿ ಕಿಲಾಡಿ'ಗಳು ಹೀಗೆ ನೂರೆಂಟು ಶೋಗಳು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿರುತ್ತವೆ. ಸದಾ ಹೊಸತನಕೆ ತೆರೆದುಕೊಲ್ಳುವ ಜೀ ಕನ್ನಡ ವಾಹಿನಿ, 'ಜೋಡಿ ನಂಬರ್ ಒನ್', 'ಭರ್ಜರಿ ಬ್ಯಾಚುಲರ್ಸ್', 'ಕಪಲ್ಸ್ ಕಿಚನ್'ನಂತಹ ಹೊಸ ಹೊಸ ಶೋಗಳನ್ನು ಕೂಡ ಪ್ರಾರಂಭಿಸಿವೆ.

'ಛೋಟಾ ಚಾಂಪಿಯನ್' ರಿಯಾಲಿಟಿ ಶೋ ಹಲವು ವರ್ಷಗಳ ಹಿಂದೆ ಮೂಡಿ ಬರುತ್ತಿತ್ತು. ಇದೀಗ ಇದರ ಮೂರನೇ ಸೀಸನ್ ಪ್ರಾರಂಭವಾಗಿ ಒಂದು ತಿಂಗಳಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಈ ಶೋಗೆ ರಚಿತಾ ರಾಮ್ ಹಾಗೂ ವಿಜಯ್ ರಾಘವೇಂದ್ರ ಮೆರುಗು ನೀಡಿದ್ದಾರೆ. ನಿರೂಪಕರಾಗಿ ನಟಿ ಶ್ವೇತಾ ಚಂಗಪ್ಪ, ಕುರಿ ಪ್ರತಾಪ್ ಇದ್ದಾರೆ.
ಕಿರುತೆರೆಯಲ್ಲಿ ಮಿಂಚುತ್ತಿರುವ ಶ್ವೇತಾ
ಧಾರಾವಾಹಿಗಳಲ್ಲಿ ಮಿಂಚಿ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಸೈ ಎನಿಸಿಕೊಂಡಿದ್ದಾರೆ. ಮಗುವಾದ ಮೇಲೆ ಕಿರುತೆರೆಯಿಂದ ಬ್ರೇಕ್ ಪಡೆದಿದ್ದ ಶ್ವೇತಾ ಚೆಂಗಪ್ಪ ತಾಯ್ತನದ ಅನುಭವವನ್ನು ಅನುಭವಿಸಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿ ಈಗ ನಿರೂಪಣೆಯಲ್ಲಿ ಮುಂದುವರೆದಿದ್ದಾರೆ. 'ಜೋಡಿ ನಂ.1' ಹಾಗೂ 'ಸೂಪರ್ ಕ್ವೀನ್' ಶೋಗಳನ್ನು ಶ್ವೇತಾ ನಡೆಸಿಕೊಟ್ಟರು. ಜೊತೆಗೆ ಹ್ಯಾಟ್ರಿಕ್ ಹೀರೋ 125ನೇ ಸಿನಿಮಾ 'ವೇದ'ದಲ್ಲಿ ಶ್ವೇತಾ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಶ್ವೇತಾ ಚೆಂಗಪ್ಪ ಅವರು ಬೋಲ್ಡ್ ಆಗಿ ನಟಿಸಿ, ಬೆಳ್ಳಿತೆರೆಯಲ್ಲಿ ಧೂಳ್ ಎಬ್ಬಿಸಿದ್ದರು.

ಗ್ಲಾಮರಸ್ ಆಗಿ ಮಿಂಚು
ತಾಯಿ ಆ ಮೇಲೂ ಶ್ವೇತಾ ಚೆಂಗಪ್ಪ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಚೆಲುವೆ ರೀಲ್ಸ್ ಮಾಡುತ್ತಿರುತ್ತಾರೆ. ಪತಿ ಹಾಗೂ ಮಗುವಿನ ಜೊತೆ ಸಮಯ ಕಳೆಯುತ್ತಾರೆ. ಆಗಾಗ ಪ್ರವಾಸ ಕೈಗೊಳ್ಳುವ ಶ್ವೇತಾ ಅವರು ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮಾಲ್ಡೀವ್ಸ್‌ಗೆ ತೆರಳಿದ್ದ ಶ್ವೇತಾ ಅವರು ಕಡಲ ದಡದಲ್ಲಿ ಸಕತ್ ಆಗಿ ಎಂಜಾಯ್ ಮಾಡಿದ್ದರು. ಡ್ಯಾನ್ಸ್ ಮಾಡಿ, ಕಡಲ ತೀರದಲ್ಲಿ ಮಿಂದೆದ್ದು ಫ್ಯಾಮಿಲಿ ಜೊತೆಗೆ ಟೈಮ್ ಸ್ಪೆಂಡ್ ಮಾಡಿದ್ದರು.
ಲಂಗಾ ದಾವಣಿಯಲ್ಲಿ ಶ್ವೇತಾ
ಶ್ವೇತಾ ಮಕ್ಕಳ ಕಾರ್ಯಕ್ರಮ ನಡೆಸಿಕೊಡಲು ಅವರೂ ಕೂಡ ಚಿಕ್ಕವರಾಗಿದ್ದಾರೆ. ಲಂಗಾ ದಾವಣಿ ಹಾಕಿಕೊಂಡು ಮಿರಮಿರನೇ ಮಿಂಚುತ್ತಿದ್ದಾರೆ. ಈಗಾಗಲೇ 'ಛೋಟಾ ಚಾಂಪಿಯನ್' ಕಾರ್ಯಕ್ರಮದ ಒಟ್ಟು 6 ಎಪಿಸೋಡ್‌ಗಳು ಪ್ರಸಾರವಾಗಿದೆ. ಈ ಶೋಗಾಗಿ ಶ್ವೇತಾ ಅವರು ತಮ್ಮ ಗೆಟಪ್ ಅನ್ನು ಬದಲಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯಂತೆ ಲಂಗ ದಾವಣಿ ಹಾಕಿಕೊಂಡು ನಿರೂಪಣೆ ಮಾಡುತ್ತಿದ್ದಾರೆ. ಮೊದಲ ಎಪಿಸೋಡ್‌ನಲ್ಲಿ ನೀಲಿ ಲಂಗಕ್ಕೆ ಪಿಂಕ್ ದಾವಣಿ ಧರಿಸಿ ಕಾಸಿನ ಸರ ಹಾಕಿಕೊಂಡು ಪಕ್ಕಾ ಹಳ್ಳಿ ಹುಡುಗಿ ಆಗಿದ್ದರು. ಬಳಿಕ ಬಿಳಿ ಲಂಗಕ್ಕೆ ನೀಲಿ ದಾವಣಿ ಧರಿಸಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರು.
ಕ್ಯಾಂಡಿ ಬೆಡಗಿ ನಮ್ ಹುಡುಗಿ
ಮುಂದಿನ ಸಂಚಿಕೆಯಲ್ಲಿ ಅರಿಶಿಣ ಬಣ್ಣದ ಲಂಗಕ್ಕೆ ಹಸಿರು ದಾವಣಿ ಧರಿಸಿ ಎರಡು ಜುಟ್ಟನ್ನು ಹಾಕಿಕೊಂಡಿದ್ದಾರೆ. ಮುದ್ದಾಗಿ ಕಾಣಿಸುತ್ತಿರುವ ಶ್ವೇತಾ ಅವರು ಕೈಯಲ್ಲಿ ಕ್ಯಾಂಡಿಯನ್ನೂ ಹಿಡಿದುಕೊಂಡಿದ್ದಾರೆ. ಅಭಿಮಾನಿಗಳು ನೀವೇ ಒಂದು ಕ್ಯಾಂಡಿ, ನಿಮ್ಮ ಕೈಯಲ್ಲಿ ಕಾಟನ್ ಕ್ಯಾಂಡಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕುರಿ ಪ್ರತಾಪ್ ಹಾಗೂ ಶ್ವೇತಾ ಮಕ್ಕಳ ಜೊತೆ ಸೇರಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











