ಐಎಎಸ್ ಆಕಾಂಕ್ಷಿ ಶ್ವೇತಾಗೆ 'ಕೋಟ್ಯಧಿಪತಿ'ಯಲ್ಲಿ ಕೈಕೊಟ್ಟ ಪ್ರಶ್ನೆ ಇದು
ಕನ್ನಡದ ಕೋಟ್ಯಧಿಪತಿ ಶನಿವಾರ ಸಂಚಿಕೆಯ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಸುತ್ತಿನಲ್ಲಿ ಅತಿ ವೇಗವಾಗಿ ಉತ್ತರಿಸಿದ ಶ್ವೇತಾ ಹಾಟ್ ಸೀಟ್ ಗೆ ಆಯ್ಕೆಯಾಗಿದ್ದರು. ಆರಂಭದಿಂದಲೂ ಆತ್ಮವಿಶ್ವಾಸದಿಂದ ಆಟ ಆಡಿದ ಶ್ವೇತಾ ದೊಡ್ಡ ಮೊತ್ತವನ್ನ ಗೆಲ್ಲುವ ಭರವಸೆ ಹುಟ್ಟಿಸಿದ್ದರು.
ಆದ್ರೆ, ಶ್ವೇತಾ ಅವರ ಅತಿಯಾದ ಆತ್ಮವಿಶ್ವಾಸ ತಮ್ಮ ಜರ್ನಿಯನ್ನ ಅರ್ಧದಲ್ಲೇ ನಿಲ್ಲುವಂತೆ ಮಾಡಿತು. 80 ಸಾವಿರ ಗೆದ್ದು ಮುನ್ನುಗ್ಗುತ್ತಿದ್ದ ಶ್ವೇತಾ 10 ಸಾವಿರ ರೂಪಾಯಿಗೆ ಜಾರಿದರು.
1.60 ಲಕ್ಷದ ಪ್ರಶ್ನೆ ಎದುರಿಸಿದ ಶ್ವೇತಾ ತಪ್ಪು ಉತ್ತರ ನೀಡಿ ಕೋಟ್ಯಧಿಪತಿ ಆಗುವ ಅವಕಾಶವನ್ನ ಕೈಚೆಲ್ಲಿದರು. ಅಷ್ಟಕ್ಕೂ, ಶ್ವೇತಾ ಅವರು ಎದುರಿಸಿದ ಒಂಭತ್ತನೇ ಪ್ರಶ್ನೆ ಯಾವುದು ಎಂದು ನೋಡುವುದಾದರೇ.....

ಭಾರತೀಯರೊಬ್ಬರು ಇಲ್ಲಿನ ಯಾವ ಸ್ಥಳಕ್ಕೆ ಇಲ್ಲಿಯವರೆಗೂ ಭೇಟಿಕೊಟ್ಟಿಲ್ಲ?
A ಚಂದ್ರ
B ಮೌಂಟ್ ಎವರೆಸ್ಟ್
C ದಕ್ಷಿಣ ಧ್ರುವ
D ಉತ್ತರ ಧ್ರುವ
ಈ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿಲ್ಲದ ಶ್ವೇತಾ ಅವರು 'ಫಿಫ್ಟಿ ಫಿಫ್ಟಿ' ಲೈಫ್ ಲೈನ್ ಬಳಸಿದರು. ಆಗ C ದಕ್ಷಿಣ ಧ್ರುವ ಮತ್ತು D ಉತ್ತರ ಧ್ರುವ ಆಯ್ಕೆಗಳು ಮಾಯವಾದವು. ಉಳಿದ ಎರಡರಲ್ಲಿ ಶ್ವೇತಾ B ಮೌಂಟ್ ಎವರೆಸ್ಟ್ ಎಂದು ಉತ್ತರಿಸಿದರು. ದುರಾದೃಷ್ಟವಶಾತ್ ಅದು ತಪ್ಪು ಉತ್ತರ ಆಗಿತ್ತು. ಸರಿಯಾದ ಉತ್ತರ A ಚಂದ್ರ.
ಅಲ್ಲಿಗೆ ಬಹಳ ಕಾನ್ಫಿಡೆನ್ಸ್ ನಿಂದ ಆಟ ಆಡ್ತಿದ್ದ ಶ್ವೇತಾ 80 ಸಾವಿರದಿಂದ 10 ಸಾವಿರಕ್ಕೆ ಜಾರಿದರು. ನಿರಾಸೆಯಿಂದ ಕೋಟ್ಯಧಿಪತಿ ಆಟದಿಂದ ನಿರ್ಗಮಿಸಿದರು.


Click it and Unblock the Notifications











