For Quick Alerts
  ALLOW NOTIFICATIONS  
  For Daily Alerts

  'ರಾಧಾ ರಮಣ' ಧಾರಾವಾಹಿಯಿಂದ ಹೊರಬಂದ ಶ್ವೇತಾ ಪ್ರಸಾದ್!

  |
  ರಾಧಾ ಮಿಸ್ ಧಾರಾವಾಹಿ ಬಿಡಲು ಕಾರಣ ಏನು ಗೊತ್ತಾ?

  ಕಿರುತೆರೆಯ ಖ್ಯಾತ ಧಾರವಾಹಿಗಳಲ್ಲಿ ರಾಧ ರಮಣ ಒಂದು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸೀರಿಯಲ್. ಅದರಲ್ಲೂ ರಾಧಾ ಮಿಸ್ ಅಂತೂ ಪ್ರೇಕ್ಷಕರ ಹಾಟ್ ಫೇವರಿಟ್ ಆಗಿದ್ದರು. ರಾಧಾ ಮಿಸ್ ನೋಡಲೆಂದೇ ರಾತ್ರಿ 9ಗಂಟೆ ವರೆಗೂ ಕಾತುರದಿಂದ ಕಾಯುತ್ತಿದ್ರು ಪ್ರೇಕ್ಷಕರು.

  ಧಾರಾವಾಹಿಯಲ್ಲಿ ರಾಧಾ ಮಿಸ್ ಆಗಿ ಕಾಣಿಸಿಕೊಂಡಿದ್ದ ನಟಿ ಶ್ವೇತಾ ಪ್ರಸಾದ್ ಇನ್ಮುಂದೆ ರಾಧಾ ರಮಣ ದಲ್ಲಿ ಇರುವುದಿಲ್ಲ ಎನ್ನುವ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಸುಮಾರು ಎರಡುವರೇ ವರ್ಷಗಳಿಂದ ರಾಧಾ ಮಿಸ್ ಆಗಿ ಕಿರುತೆರೆ ಅಭಿಮಾನಿಗಳನ್ನು ರಂಜಿಸಿದ್ದ ಶ್ವೇತಾ ಈಗ ಧಾರಾವಾಹಿಯಿಂದ ಹೊರ ಬರುತ್ತಿರುವುದು ಅಭಿಮಾನಿಗಳಿಗೆ ಅದರಲ್ಲೂ ಮಹಿಳಾಭಿಮಾನಿಗಳಿಗೆ ಭಾರಿ ಬೇಸರದ ವಿಚಾರವಾಗಿದೆ.

  'ರಾಧಾ ರಮಣ' ಸೀರಿಯಲ್ ಚೆನ್ನಾಗಿಲ್ಲ: ಒಳ್ಳೆಯವರಿಗೆ ಕಾಲ ಇಲ್ಲ.! 'ರಾಧಾ ರಮಣ' ಸೀರಿಯಲ್ ಚೆನ್ನಾಗಿಲ್ಲ: ಒಳ್ಳೆಯವರಿಗೆ ಕಾಲ ಇಲ್ಲ.!

  ರಾಧಾ ರಮಣದಲ್ಲಿ ರಮಣ್ ಪತ್ನಿಯಾಗಿ ಶಾಂತ ಸ್ವಭಾವದ ಗೃಹಿಣಿಯಾಗಿ ಇಡೀ ಮನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದ ರಾಧಾ ಮಿಸ್ ಶ್ವೇತಾ ಧಾರಾವಾಹಿಯಿಂದ ಹೊರಬರಲು ನಿಜವಾದ ಕಾರಣವೇನು ಗೊತ್ತಾ? ಮುಂದೆ ಓದಿ

  ಅಗ್ರಿಮೆಂಟ್ ಮುಗಿದ ಹಿನ್ನಲೆ

  ಅಗ್ರಿಮೆಂಟ್ ಮುಗಿದ ಹಿನ್ನಲೆ

  ರಾಧಾ ರಮಣ ಸೀರಿಯಲ್ ನಲ್ಲಿ ಅಭಿನಯಸಲು ಶ್ವೇತಾ ಪ್ರಸಾದ್ ಒಂದು ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದ್ರೀಗ ಒಪ್ಪಂದ ಮುಗಿದು ವರ್ಷವೇ ಆಗಿದೆ. ಎರಡುವರೇ ವರ್ಷಗಳ ಕಾಲ ರಾಧಾ ಮಿಸ್ ಆಗಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಶ್ವೇತಾ ಈಗ ಸೀರಿಯಲ್ ನಿಂದ ಹೊರ ಬರುವ ನಿರ್ಧಾರ ಮಾಡಿದ್ದಾರೆ. ಧಾರಾವಾಹಿಯ ಜೊತೆಗೆ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ ಶ್ವೇತಾ.

  ದಿನಕರ್ ಪಾತ್ರವನ್ನು ಕೊಲ್ಲಬೇಡಿ: 'ರಾಧಾ ರಮಣ' ನಿರ್ದೇಶಕರಿಗೆ ವೀಕ್ಷಕರ ಮನವಿ.!ದಿನಕರ್ ಪಾತ್ರವನ್ನು ಕೊಲ್ಲಬೇಡಿ: 'ರಾಧಾ ರಮಣ' ನಿರ್ದೇಶಕರಿಗೆ ವೀಕ್ಷಕರ ಮನವಿ.!

  ಕಿರುತೆರೆಯಿಂದ ಬ್ರೇಕ್ ಪಡೆಯುವ ಉದ್ದೇಶ

  ಕಿರುತೆರೆಯಿಂದ ಬ್ರೇಕ್ ಪಡೆಯುವ ಉದ್ದೇಶ

  ಸುಮಾರು ವರ್ಷಗಳಿಂದ ಬಣ್ಣ ಹಚ್ಚುತ್ತಿರುವ ಶ್ವೇತಾ ಕೆಲವು ದಿನಗಳು ಬ್ರೇಕ್ ಪಡೆಯಲಿದ್ದಾರೆ. ಕೆಲವರು ಉತ್ತಮ ಸಿನಿಮಾ ಆಫರ್ ಬಂದ ತಕ್ಷಣ ಕಿರುತೆರೆಯಿಂದ ಹಿರಿತೆರೆಗೆ ಜಿಗಿಯುತ್ತಾರೆ. ಆದ್ರೆ ಶ್ವೇತಾ ಸ್ವಲ್ಪ ದಿನಗಳು ವಿಶ್ರಾತಿ ಪಡೆಯಲಿದ್ದಾರಂತೆ. ಆನಂತರ ಮುಂದಿನ ನಿರ್ಧಾರದ ಬಗ್ಗೆ ಹೇಳುತ್ತಾರಂತೆ. ಉತ್ತುಂಗದಲ್ಲಿ ಇರುವಾಗಲೇ ಸೀರಿಯಲ್ ನಿಂದ ಹೊರ ಬರುವುದು ಒಳ್ಳೆಯದೆಂದು ನಿರ್ಧರಿಸಿ ರಾಧಾ ಮಿಸ್ ಪಾತ್ರದಿಂದ ಹೊರ ಬರುತ್ತಿದ್ದಾರೆ ಶ್ವೇತಾ.

  ರಾಧಾ ಮಿಸ್ ಪಾತ್ರ

  ರಾಧಾ ಮಿಸ್ ಪಾತ್ರ

  ರಾಧಾ ಮಿಸ್ ಪಾತ್ರ ಶ್ವೇತಾ ಅವರಿಗೆ ತುಂಬಾ ಖ್ಯಾತಿ ತಂದುಕೊಟ್ಟಿತ್ತು. ಶ್ವೇತಾ ಎನ್ನುವುದಕ್ಕಿಂತ ಹೆಚ್ಚಾಗಿ ರಾಧಾ ಮಿಸ್ ಅಂತಾನೆ ಕೆರೆಯುತ್ತಿದ್ದರು. ಸೀರಿಯಲ್ ನಲ್ಲಿ ರಮಣ್ ಪತ್ನಿಯಾಗಿ ಸೌಮ್ಯ ಸ್ವಭಾವದ ಹೆಣ್ಣು ಮಗಳಾಗಿ ಎಲ್ಲರ ಅಚ್ಚುಮೆಚ್ಚಾಗಿದ್ದರು. ನಿಜವಾದ ರಮಣ್ ತಂಗಿ ಅವನಿ ಹುಡುಕಾಟ, ಘಾಟಿ ಅತ್ತೆ ವಿಲನ್ ಸಿತಾರ ದೇವಿಯ ಕಾಠ ತಡೆದುಕೊಳ್ಳಲು, ಸರಸ್ವತಿಯ ಮುದ್ದಿಯ ಸೊಸೆಯಾಗಿ, ಮಾನಸಿಯ ನೆಚ್ಚಿನ ಅತ್ತಿಗೆ ರಾಧಾ ಮಿಸ್ ಪಾತ್ರದಲ್ಲಿ ಇನ್ಮುಂದೆ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.

  ಇನ್ನು 15 ದಿನಗಳು ಮಾತ್ರ ಇರಲಿದ್ದಾರೆ ಶ್ವೇತಾ

  ಇನ್ನು 15 ದಿನಗಳು ಮಾತ್ರ ಇರಲಿದ್ದಾರೆ ಶ್ವೇತಾ

  ರಾಧಾ ಮಿಸ್ ಆಗಿ ಇನ್ನು 15 ದಿನಗಳು ಮಾತ್ರ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದ್ಮೇಲೆ ಇನ್ನು 15 ದಿನಗಳು ಶ್ವೇತಾ ಅವರನ್ನು ಆದಷ್ಟು ಕಣ್ತುಂಬಿಕೊಳ್ಳಿ. ಆ ನಂತರ ಹೊಸ ರಾಧಾ ಮಿಸ್ ಎಂಟ್ರಿ ಕೊಡಲಿದ್ದಾರೆ. ಈಗಾಗಲೆ ಪ್ರೇಕ್ಷಕರ ಮನದಲ್ಲಿ ಆಳವಾಗಿ ಬೇರೂರಿದ್ದಾರೆ ಶ್ವೇತಾ. ಶ್ವೇತಾ ಜಾಗಕ್ಕೆ ಬರುವ ಹೊಸ ರಾಧಾ ಮಿಸ್ ಅನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾದು ನೋಡಬೇಕು.

  English summary
  Famous small screen actress Shwetha Prasad quits from Radha Ramana serial. The most desirable women of television is calling it quits from the serial audience are shocking.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X