ಆಸ್ಟ್ರೇಲಿಯಾಗೆ ಹೋದ ಸಿದ್ದಾರ್ಥ್ : ಪತಿ ಇಲ್ಲದೆ ಒಂಟಿಯಾದ ಸನ್ನಿಧಿ

Recommended Video

Agnisakshi: ಸಿದ್ದಾರ್ಥ್ ಮನೆ ಬಿಡುವ ನಿರ್ಧಾರ ಮಾಡಿದ್ದು ಎಲ್ಲರಿಗೂ ಶಾಕ್ | FILMIBEAT KANNADA

ಅಗ್ನಿಸಾಕ್ಷಿ ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಬಾರಿ ಪ್ರಸಿದ್ಧಿ ಪಡೆದಿತ್ತು. ಸದ್ಯ ಧಾರಾವಾಹಿಯಲ್ಲಿ ಒಂದು ಹಂತದ ಕಷ್ಟ ಎಲ್ಲ ಮುಗಿದು ನೆಮ್ಮದಿಯ ಜೀವನ ಪ್ರಾರಂಭವಾಗಿತ್ತು. ಅಷ್ಟರಲ್ಲಿ ಸಿದ್ದಾರ್ಥ್ ಮನೆ ಬಿಡುವ ನಿರ್ಧಾರ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಮನೆಯವರನ್ನು ಬಿಟ್ಟು ಇರದ ಸಿದ್ದಾರ್ಥ್ ಈಗ ನೆಮ್ಮದಿಯ ಜೀವನಕ್ಕಾಗಿ ವಿದೇಶಕ್ಕೆ ಹೊರಟಿದ್ದಾರೆ. ಇಡೀ ಮನೆ ಸಿದ್ದಾರ್ಥ್ ಬಿಟ್ಟು ಹೋಗುವ ದಃಖದಲ್ಲಿದೆ. ಸನ್ನಿಧಿ ಅಂತೂ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇದ್ರ ನಡುವೆ ಸನ್ನಿಧಿಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದಾರೆ ಸಿದ್ದಾರ್ಥ್.

ಈ ಎಲ್ಲಾ ಚುಟುವಟಿಗಳನ್ನು ದೂರದಲ್ಲೆ ಕುಳಿತು ಚಂದ್ರಿಕಾ ತಿಳಿದುಕೊಳ್ಳುತ್ತಿದ್ದಾರೆ. ಇನ್ನು ಸಿದ್ದಾರ್ಥ್ ಮನೆಯನ್ನು ಸರ್ವನಾಶ ಮಾಡಲು ಚಂದ್ರಿತಾ ಏನೋ ಮಾಸ್ಟರ್ ಪ್ಲಾನ್ ಕೂಡ ಮಾಡುತ್ತಿದ್ದಾರೆ. ಅಂಜಲಿ ಯಾವುದೊ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾಳೆ. ಮುಂದೆ ಓದಿ..

ಸಿದ್ದಾರ್ಥ್ ಬಿಟ್ಟುಹೋದ ದುಃಖದಲ್ಲಿ ಸನ್ನಿಧಿ

ಸಿದ್ದಾರ್ಥ್ ಬಿಟ್ಟುಹೋದ ದುಃಖದಲ್ಲಿ ಸನ್ನಿಧಿ

ಸಿದ್ದಾರ್ಥ್ ಆಸ್ಟ್ರೇಲಿಯಾಗೆ ಹೋಗಲು ಸಿದ್ದರಾಗಿದ್ದಾರೆ. ಆದ್ರೆ ಸನ್ನಿಗೆ ಮಾತ್ರ ದುಃಖ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿದ್ದಾರ್ಥ್ ಬಿಟ್ಟು ಹೋಗುತ್ತಿದ್ದಾರೆ ಎಂದು ಕಣ್ಣೀರಿಡುತ್ತಿರುವ ಪತ್ನಿಯನ್ನು ಸಮಾಧಾನ ಮಾಡಿದ್ದಾರೆ ಸಿದ್ದಾರ್ಥ್. ಇನ್ನು ಸ್ವಲ್ಪ ದಿನಗಳ ನಂತರ ಸನ್ನಿಧಿಯನ್ನು ಕರೆಸಿಕೊಳ್ಳುವ ಪ್ಲಾನ್ ಮಾಡಿದ್ದಾರೆ ಸಿದ್ದಾರ್ಥ್. ಆದಷ್ಟು ಬೇಗ ಆಸ್ಟ್ರೇಲಿಯಾಗೆ ಕರೆಸಿಕೊಳ್ಳುವುದಾಗಿ ಹೇಳಿ ಸಮಾಧಾನ ಮಾಡಿ ಹೊರಟಿದ್ದಾರೆ ಸಿದ್ದಾರ್ಥ್.

ಅಪ್ಪನ ಜವಾಬ್ದಾರಿ ಸನ್ನಿಧಿ ಹೆಗಲಿಗೆ

ಅಪ್ಪನ ಜವಾಬ್ದಾರಿ ಸನ್ನಿಧಿ ಹೆಗಲಿಗೆ

ಸಿದ್ದಾರ್ಥ್ ಮನೆ ಬಿಟ್ಟು ಹೋಗುತ್ತಿರುವ ದುಃಖದಲ್ಲಿದೆ ಇಡೀ ಮನೆ. ಜೊತೆಗೆ ಸನ್ನಿಧಿಗೆ ಇಡೀ ಮನೆಯನ್ನು ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ವಹಿಸಿದ್ದಾರೆ ಸಿದ್ದಾರ್ಥ್. ಅದರಲ್ಲೂ ವಿಶೇಷವಾಗಿ ಅಪ್ಪನ ಆರೋಗ್ಯ, ತಂಗಿಯ ಕಾಳಜಿ ಸೇರಿದಂತೆ ಇಡೀ ಮನೆಯವರೆಲ್ಲರನ್ನು ನೋಡಿಕೊಂಡು ಹೋಗಲು ಸಿದ್ದಾರ್ಥ್ ಹೇಳಿದ್ದಾರೆ.

ಸಿದ್ದಾರ್ಥ್ ಬೀಳ್ಕೋಟ್ಟ ಕುಟುಂಬ

ಸಿದ್ದಾರ್ಥ್ ಬೀಳ್ಕೋಟ್ಟ ಕುಟುಂಬ

ಇಡೀ ಕುಟುಂಬ ಭಾವುಕರಾಗಿ ಸಿದ್ದಾರ್ಥ್ ಅನ್ನು ಬೀಳ್ಕೊಟ್ಟಿದೆ. ಪ್ರತಿಯೊಬ್ಬರು ಒಂದೊಂದು ಧೈರ್ಯದ ಮಾತುಗಳನ್ನು ಹೇಳಿ ಸಿದ್ದಾರ್ಥ್ ಅನ್ನು ಕಳುಹಿಸಿಕೊಟ್ಟಿದ್ದಾರೆ. ಆದ್ರೆ ಸನ್ನಿಧಿಯ ದುಃಖ ಮಾತ್ರ ಹೇಳತೀರದು. ಸನ್ನಿಧಿ ಈಗ ಗಂಡನನ್ನು ಕಳುಹಿಸಿಕೊಟ್ಟು ಒಂಟಿಯಾಗಿದ್ದಾರೆ. ಸಹೋದರ ಅಖಿಲ್ ಕೂಡ ಕಣ್ಣೀರಿಡುತ್ತಲೆ ಅಣ್ಣನನ್ನು ಏರ್ ಪೋರ್ಟ್ ವರೆಗು ಹೋಗಿ ಕಳುಹಿಸಿಕೊಟ್ಟಿದ್ದಾರೆ.

ಧಾರಾವಾಹಿಯಲ್ಲಿ ಸಿದ್ದಾರ್ಥ್ ಪಾತ್ರ ಕೊನೆ

ಧಾರಾವಾಹಿಯಲ್ಲಿ ಸಿದ್ದಾರ್ಥ್ ಪಾತ್ರ ಕೊನೆ

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ದಾರ್ಥ್ ಪಾತ್ರ ಕೊನೆಗೊಂಡಿದೆ. ಸಿದ್ದಾರ್ಥ್ ಮನೆಯಿಂದ ಮಾತ್ರ ದೂರ ಆಗಿಲ್ಲ. ಧಾರಾವಾಹಿಯಿಂದನೆ ದೂರಸರಿದಿದ್ದಾರೆ. ಮನೆಯವರೆಲ್ಲ ನಿಜಕ್ಕು ಭಾವುಕರಾಗಿ ಸಿದ್ದಾರ್ಥ್ ಅನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ಮುಂದೆ ಸಿದ್ದಾರ್ಥ್ ಇಲ್ಲದ ಅಗ್ನಿಸಾಕ್ಷಿಯನ್ನು ಪ್ರೇಕ್ಷಕರಿಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

More from Filmibeat

English summary
Siddharth has left home and traveled to abroad in Agnisakshi. family members sent Siddharth with treas abroad. Family members sent to Siddharth with sorrow.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X