ಸಿದ್ಧಾರ್ಥ್ ಶುಕ್ಲಾ ಪ್ರಾಣಬಿಡುವಾಗ ಜೊತೆಯಲ್ಲಿ ಇದ್ರಾ ಪ್ರೇಯಸಿ ಶೆಹನಾಜ್?, ಸಾಯುವ ಮುನ್ನ ನಿಜಕ್ಕೂ ನಡೆದಿದ್ದೇನು?

By ಫಿಲ್ಮಿಬೀಟ್ ಡೆಸ್ಕ್

ಹಿಂದಿ ಕಿರುತೆರೆ ಲೋಕದ ಖ್ಯಾತ ನಟ, ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಸಾವು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸೆಪ್ಟಂಬರ್ 2 ಹಿಂದಿ ಕಿರುತೆರೆ ಲೋಕಕ್ಕೆ ಕರಾಳ ದಿನ. ಸೆಪ್ಟಂಬರ್ 2 ಬೆಳಗ್ಗೆ ಸಿದ್ಧಾರ್ಥ್ ಶುಕ್ಲಾ ನಿಧನ ಎನ್ನುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಸಿದ್ಧಾರ್ಥ್ ಸಾವಿನಿಂದ ಪ್ರೇಯಸಿ ಶೆಹನಾಜ್ ಗಿಲ್ ಮಾನಸಿಕವಾಗಿ ಕುಸಿದು ಹೋಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಸಿದ್ಧಾರ್ಥ್ ಸಾವು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಸಾವಿನ ಬಳಿಕ ಅಚ್ಚರಿಕರ ಸಂಗತಿಗಳು ಹೊರಬರುತ್ತಿವೆ. ಸಿದ್ಧಾರ್ಥ್ ಹೃದಯಾಘಾತ ಆಗುವ ಸಮಯದಲ್ಲಿ ಪ್ರೇಯಸು ಶೆಹನಾಜ್ ಜೊತೆಯಲ್ಲಿ ಇದ್ದರು ಎನ್ನುವ ಮಾಹಿತಿ ತಿಳಿದುಬರುತ್ತಿದೆ. ಸಿದ್ಧಾರ್ಥ್ ಸಾವಿನ ಬಳಿಕ ಅನೇಕ ಸೆಲೆಬ್ರಿಟಿಗಳು ಸಿದ್ಧಾರ್ಥ್ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ.

ಮೂಲಗಳ ಪ್ರಕಾರ, ಬುಧವಾರ (ಸೆಪ್ಟೆಂಬರ್ 01) ರಾತ್ರಿ 9.30ಕ್ಕೆ ಸಿದ್ದಾರ್ಥ್​ ಶುಕ್ಲಾ ಅವರು ಮನೆಗೆ ಬಂದಿದ್ದರು. ಆಗಲೇ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ತಾಯಿ ಮತ್ತು ಗೆಳತಿ ಶೆಹನಾಜ್​ ಗಿಲ್​ ಅವರು ನಿಂಬು ಪಾನಿ ಮತ್ತು ಐಸ್​ ಕ್ರೀಮ್ ನೀಡಿದರು. ಬಳಿಕ ವಿಶ್ರಾಂತಿ ಪಡೆದುಕೊಳ್ಳುವಂತೆ ಹೇಳಿದರು ಎಂಬ ಮಾಹಿತಿ ಕೇಳಿಬಂದಿದೆ.

Sidharth Shukla death: Rumored Girlfriend Shehnaaz Gill by his side when sidharth shukla death

ರಾತ್ರಿ ತುಂಬಾ ಸಮಯವಾದರೂ ಸಿದ್ದಾರ್ಥ್‌ಗೆ ನಿದ್ದೆ ಬರಲಿಲ್ಲ. ಹಾಗಾಗಿ ತಮ್ಮ ಜೊತೆಯೇ ಇರುವಂತೆ ಗೆಳತಿ ಶೆಹನಾಜ್‌ಗೆ ಅವರು ಕೇಳಿಕೊಂಡರು. ಮಧ್ಯ ರಾತ್ರಿ 1.30ರ ಸುಮಾರಿಗೆ ಶೆಹನಾಜ್​ ಅವರ ಮಡಿಲ ಮೇಲೆ ಸಿದ್ದಾರ್ಥ್​ ನಿದ್ರಿಸಿದರು. ಬಳಿಕ ಅವರನ್ನು ಪಕ್ಕಕ್ಕೆ ಸರಿಸಿ ಶೆಹನಾಜ್​ ಕೂಡ ಮಲಗಿದರು. ಬೆಳಗ್ಗೆ 7.30ರ ಸುಮಾರಿಗೆ ಶೆಹನಾಜ್​ಗೆ ಎಚ್ಚರವಾಗಿ ನೋಡಿದಾಗ ಸಿದ್ದಾರ್ಥ್​ ರಾತ್ರಿ ನಿದ್ರಿಸುತ್ತಿದ್ದ ಹಾಗೆ ಮಲಗಿದ್ದರು. ಯಾವುದೇ ರೀತಿ ಚಲನೆ ಇಲ್ಲದಿರುವುದನ್ನು ನೋಡಿ ಶೆಹನಾಜ್‌ಗೆ ಆಘಾತವಾಯಿತು.

ಅದೇ ಅಪಾರ್ಟ್​ ಮೆಂಟ್​ ನ 5ನೇ ಮಹಡಿಗೆ ತೆರಳಿ ಅಲ್ಲಿರುವ ಕುಟುಂಬದವರಿಗೆ ಶೆಹನಾಜ್​ ಸುದ್ದಿ ತಿಳಿಸಿದರು. ಕೂಡಲೇ ಫ್ಯಾಮಿಲಿ ಡಾಕ್ಟರ್‌ರನ್ನು ಕರೆಸಿ ನೋಡಿದಾಗ ಸಿದ್ದಾರ್ಥ್​ ನಿಧನರಾಗಿದ್ದಾರೆ ಎಂದು ಹೇಳಿದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಆದರೆ ಈ ಎಲ್ಲಾ ಘಟನೆಗಳ ಕುರಿತು ಪ್ರತಿಕ್ರಿಯೆ ನೀಡಲು ಇನ್ನೂ ಶೆಹನಾಜ್​ ಗಿಲ್​ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಘಟನೆ ಬಳಿಕ ಅವರ ಮೊಬೈಲ್​ ಫೋನ್​ ಸ್ವಿಚ್​ ಆಫ್​ ಆಗಿರುವ ಬಗ್ಗೆ ವರದಿ ಆಗಿದೆ.

ನಿನ್ನೆ ಕೇಳಿಬಂದ ಮಾಹಿತಿ ಪ್ರಕಾರ ಶೆಹನಾಜ್ ಚಿತ್ರೀಕರಣಕ್ಕೆ ತೆರಳಿದ್ದರು ಮಾಹಿತಿ ಗೊತ್ತಾಗುತ್ತಿದ್ದಂತೆ ವಾಪಸ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ಶೆಹನಾಜ್ ತಂದೆ ಮಾಧ್ಯಮದ ಜೊತೆ ಮಾತನಾಡಿ, ಶೆಹನಾಜ್ ಗಿಲ್ ಕುಸಿದು ಹೋಗಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಶೆಹನಾಜ್ ತಂದೆ, "ನಾನು ಈಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಆಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಶೆಹನಾಜ್​ಜೊತೆ ಮಾತನಾಡಿದ್ದೇನೆ. ಆಕೆಯ ಪರಿಸ್ಥಿತಿ ಚೆನ್ನಾಗಿಲ್ಲ. ಅವಳ ಜೊತೆ ಇರಲು ನನ್ನ ಮಗ ಈಗ ಮುಂಬೈಗೆ ತೆರಳುತ್ತಿದ್ದಾನೆ. ನಂತರ ನಾನು ಕೂಡ ಅಲ್ಲಿಗೆ ಹೋಗುತ್ತೇನೆ" ಎಂದು ಶೆಹನಾಜ್​ತಂದೆ ಹೇಳಿದ್ದರು.

ಸಿದ್ಧಾರ್ಥ್ ಮತ್ತು ಶೆಹನಾಜ್ ಸ್ನೇಹ ಪ್ರಾರಂಭವಾಗಿದ್ದು ಬಿಗ್ ಬಾಸ್ 13 ಶೋನಿಂದ. ಬಿಗ್ ಬಾಸ್ ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಪ್ರಾರಂಭದಲ್ಲಿ ಇಬ್ಬರು ಸ್ನೇಹಿತರರಾಗಿದ್ದರು, ಬಳಿಕ ಒಬ್ಬರಿಗೊಬ್ಬರು ಪ್ರೀತಿಸಲು ಪ್ರಾರಂಭಿಸಿದ್ದರು. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ಅಭಿಮಾನಿಗಳು ಈ ಜೋಡಿಯನ್ನು ಸಿದ್ನಾಜ್ ಎಂದೇ ಕರೆಯುತ್ತಿದ್ದರು. ಇದೀಗ ಗೆಳೆಯನನ್ನು ಕಳೆದುಕೊಂಡು ಶೆಹನಾಜ್ ಒಂಟಿಯಾಗಿದ್ದಾರೆ.

More from Filmibeat

English summary
Sidharth Shukla death: Rumored Girlfriend Shehnaaz Gill by his side when sidharth shukla death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X