For Quick Alerts
  ALLOW NOTIFICATIONS  
  For Daily Alerts

  Sidharth Shukla Death; ಸಿದ್ಧಾರ್ಥ್ ಶುಕ್ಲಾ ಕೊನೆಯ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನಿದೆ?

  By ಫಿಲ್ಮಿಬೀಟ್ ಡೆಸ್ಕ್
  |

  ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟ, ಬಿಗ್ ಬಾಸ್ 13 ವಿನ್ನರ್ ಸಿದ್ಧಾರ್ಥ್ ಶುಕ್ಲಾ ಗುರುವಾರ ಬೆಳಗ್ಗೆ (ಸೆಪ್ಟಂಬರ್ 02) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದ ನಟ ಸಿದ್ಧಾರ್ಥ್ ಹಠಾತ್ ನಿಧನ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದೆ. ಸಿದ್ಧಾರ್ಥ್ ಶುಕ್ಲಾಗೆ 40 ವರ್ಷ ವಯಸ್ಸಾಗಿತ್ತು.

  ಫಿಟ್‌ನೆಸ್ ಫ್ರೀಕ್ ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಕಿರುತೆರೆ ಲೋಕದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದ ನಟ ಸಿದ್ಧಾರ್ಥ್ ಗೆ ಬಿಗ್ ಬಾಸ್ 13 ವಿನ್ನರ್ ಪಟ್ಟ ಮತ್ತಷ್ಟು ಉತ್ತುಂಗಕ್ಕೆ ಏರಿಸಿತ್ತು. ಬಿಗ್ ಬಾಸ್ ಬಳಿಕ ಸಿದ್ಧಾರ್ಥ್ ಮತ್ತಷ್ಟು ಬ್ಯುಸಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದ ಸಿದ್ಧಾರ್ಥ್ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದರು.

  ಇನ್ಸ್ಟಾಗ್ರಾಮ್‌ನಲ್ಲಿ ಸಿದ್ಧಾರ್ಥ್ 3.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ಟ್ವಿಟ್ಟರ್‌ನಲ್ಲಿ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದರು. ಇದೀಗ ಸಿದ್ಧರ್ಥ್ ಅಪಾರ ಸಂಖ್ಯೆ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ರಾತ್ರಿ ಊಟ ಮಾಡಿ ಮಲಗಿದ್ದ ಸಿದ್ಧಾರ್ಥ ಬೆಳಗ್ಗೆಯಷ್ಟರಲ್ಲಿ ಶವವಾಗಿದ್ದರು. ತಕ್ಷಣವನ್ನು ಅವರನ್ನು ಮುಂಬೈನ ಕೂಪರ್ ಆಸ್ಪತ್ರೆ ಕರೆದುಕೊಂಡು ಹೋಗಲಾಗಿದೆ. ಆದರೆ ಆಗಲೇ ಸಿದ್ಧಾರ್ಥ್ ಪ್ರಾಣಪಕ್ಷಿ ಹಾರಿಹೋಗಿತ್ತು. ಸಿದ್ಧಾರ್ಥ್ ನಿಧನ ಹೊಂದಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ವೈದ್ಯರು ಅನೌನ್ಸ್ ಮಾಡಿದರು.

  ಸಿದ್ಧಾರ್ಥ್ ಶುಕ್ಲಾ ಕೊನೆಯದಾಗಿ ಇನ್ಸ್ಟಾಗ್ರಾಮ್‌ನಲ್ಲಿ ವೈದ್ಯಕೀಯ ಸಿಬ್ಬಂದಿಗೆ ಗೌರವ ಸಲ್ಲಿಸುವ ಪೋಸ್ಟ್ ಮಾಡಿದ್ದರು. "ಎಲ್ಲಾ ಫ್ರಂಟ್ ಲೈನ್ ವರ್ಕರ್‌ಗಳಿಗೆ ಧನ್ಯವಾದಗಳು. ನೀವು ನಿಮ್ಮ ಜೀವನವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದೀರಿ. ಲೆಕ್ಕವಿಲ್ಲದಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತೀರಿ. ನಾವು ನಿಜವಾಗಿಯೂ ಧೈರ್ಯಶಾಲಿಗಳು. ನಿಮ್ಮ ಕೆಲಸವನ್ನು ನಾವು ಖಂಡಿತವಾಗಿಯೂ ಪ್ರಶಂಸಿಸುತ್ತೇವೆ" ಎಂದು ಬರೆದುಕೊಂಡಿದ್ದರು.

  ಸಿದ್ಧಾರ್ಥ್ ಶುಕ್ಲಾ ಸದ್ಯ ಮುಂಬೈ ಡೈರೀಸ್ 26/11 ವೆಬ್ ಸರಣಿಯ ಪ್ರಚಾರದಲ್ಲಿದ್ದರು. ಈ ವೆಬ್ ಸರಣಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಇದು ಮುಂಬೈ ಭಯೋತ್ಪಾದಕ ದಾಳಿಯ ಬಗ್ಗೆ ಇರುವ ಸರಣಿಯಾಗಿದ್ದು, ಆ ಭೀಕರ ಘಟನೆಗೆ ಸಾಕ್ಷಿಯಾಗಿದ್ದ ಫ್ರಂಟ್ ಲೈನ್ ಕೆಲಸಗಾರರು ಮತ್ತು ಆಸ್ಪತ್ರೆ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿದೆ.

  ಇನ್ನು ಟ್ವಿಟ್ಟರ್‌ನಲ್ಲಿ ಸಿದ್ಧಾರ್ಥ್ ಕೊನೆಯದಾಗಿ ಟೋಕಿಯೋ ಪ್ಯಾರಾ ಒಲಿಂಪಿಕ್ ಗೋಲ್ಡ್ ವಿನ್ನರ್‌ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದರು. "ಭಾರತೀಯರು ನಮ್ಮನ್ನು ಪದೇ ಪದೆ ಹೆಮ್ಮೆ ಪಡಿಸುತ್ತಿದ್ದಾರೆ. ಪ್ಯಾರಾಒಲಿಂಪಿಕ್ಸ್ ನಲ್ಲಿ ಗೋಲ್ಡ್ ಜೊತೆಗೆ ವಿಶ್ವ ದಾಖಲೆ ಬರೆದ ಸುಮಿತ್ ಅಂಟಿಲ್ ಮತ್ತು ಅವನಿ ಲೇಖರ ಅವರಿಗೆ ಧನ್ಯವಾದಗಳು" ಎಂದಿದ್ದರು.

  ಸಿದ್ಧಾರ್ಥ್ 2019ರಲ್ಲಿ ಪ್ರಸಾರವಾದ ಬಿಗ್ ಬಾಸ್ 13 ರಲ್ಲಿ ಭಾಗಿಯಾಗಿದ್ದರು. ಅದ್ಭುತವಾಗಿ ಆಟವಾಡುವ ಮೂಲಕ ಸಿದ್ಧಾರ್ಥ್ ಪ್ರೇಕ್ಷಕರ ಮಗೆದ್ದಿದ್ದರು. ಬಿಗ್ ಬಾಸ್ 13 ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದರು. ಇನ್ನು ಬಿಗ್ ಬಾಸ್ 14ನಲ್ಲೂ ಸಿದ್ಧಾರ್ಥ್ ಗೆಸ್ಟ್ ಆಗಿ ಭಾಗಿಯಾಗಿದ್ದರು.

  ಸಿದ್ಧಾರ್ಥ್ ಶುಕ್ಲಾ ಮಾಡೆಲ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಕಿರುತೆರೆಗೆ ಎಂಟ್ರಿ ಕೊಟ್ಟು ಹಲವು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಇತ್ತೀಚಿಗಷ್ಟೆ ಪ್ರಸಾರವಾದ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಉದ್ಘಾಟನೆ ವೇಳೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು. 'ಡ್ಯಾನ್ಸ್ ದಿವಾನೆ-3' ಕಾರ್ಯಕ್ರಮದಲ್ಲಿ ಶೆಹನಾಜ್ ಗಿಲ್ಲ್ ಜೊತೆ ಸೇರಿ ಭಾಗವಹಿಸಿದ್ದರು. ಅಂದ್ಹಾಗೆ, ಶೆಹನಾಜ್ ಗಿಲ್ಲಿ ಜೊತೆ ಸಿದ್ಧಾರ್ಥ್ ಶುಕ್ಲಾ ಪ್ರೀತಿಯಲ್ಲಿದ್ದರು ಎಂಬ ಸುದ್ದಿಯೂ ಇದೆ. ಇವರಿಬ್ಬರು ಹಲವು ವೇದಿಕೆಗಳಲ್ಲಿ ಒಟ್ಟಿಗೆ ಡ್ಯಾನ್ಸ್ ಸಹ ಮಾಡಿದ್ದರು. ಇವರಿಬ್ಬರ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ 'ಸಿದ್ನಾಜ್' ಎಂದು ಕರೆಯುತ್ತಿದ್ದರು.

  ಇನ್ನು ಸಿದ್ಧಾರ್ಥ 'ಬಾಲಿಕಾ ವಧು', 'ದಿಲ್ ಸೆ ದಿಲ್ ತಕ್' ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ನಟಿಸುತ್ತಿದ್ದು, ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. 'ಜಲಕಾ ದಿಕ್ ಲಾಜಾ 6', 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ' ಮತ್ತು 'ಬಿಗ್ ಬಾಸ್ 13' ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

  English summary
  Sidharth Shukla Death: Sidharth Shukla's last Instagram post was a tribute to hospital staff.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X