Rithu Singh: ಕುಟುಂಬ ನಡೀತಿರೋದೆ ಸಿಹಿ ದುಡಿಮೆಯಿಂದ; 'ಸೀತಾರಾಮ'ದಲ್ಲಿ ಪಾತ್ರ ಸತ್ತರೆ ಜೀವನ ನಡೆಯೋದೇಗೆ?

By ಎಸ್ ಸುಮಂತ್

ಜೀ ಕನ್ನಡದ 'ಸೀತಾರಾಮ' ಧಾರಾವಾಹಿಯಲ್ಲಿ ಸಿಹಿಯ ಪಾತ್ರವೇ ಹೈಲೇಟ್. ಈಗ ಕಥೆ ನಡೆಯುತ್ತಿರುವುದೇ ಸಿಹಿ ಪಾತ್ರದ ಸುತ್ತಾ. ಆರಂಭದಿಂದಾನೂ ಸಿಹಿಯ ಪಾತ್ರವೇ ಧಾರಾವಾಹಿಗೆ ಮುಖ್ಯವಾಗಿತ್ತು. ಸೀತಾಗೆ ಸಿಹಿಯೇ ಪ್ರಪಂಚವಾಗಿದ್ದಳು. ಸಿಹಿಗಾಗಿಯೇ ಬದುಕು ಸಾಗಿಸುತ್ತಿದ್ದಳು.

ಸೀತಾ ಜೀವನದಲ್ಲಿ ರಾಮ್ ಬಂದ ಮೇಲೆ ಬದುಕು ಇನ್ನಷ್ಟು ಬ್ಯೂಟಿಫುಲ್ ಆಗಿತ್ತು. ಸಿಹಿಗೆ ತಾನೂ ಬಯಸಿದ್ದ ಅಪ್ಪನೂ ಸಿಕ್ಕಿದ್ದ. ಸುಖವಾಗಿ ಜೀವನ ಸಾಗಿಸುತ್ತಿದ್ದ ಸಿಹಿ-ಸೀತಾ-ರಾಮ್ ಬದುಕಲ್ಲೇ ಈಗ ಶ್ಯಾಮ್ - ಶಾಲಿನಿ ವಿಲನ್ ಗಳಾಗಿದ್ದಾರೆ.

sihi character ending in Seetharama serial do you know rithu singh family depending on her

ಧಾರಾವಾಹಿ ಆರಂಭವಾದಾಗಿನಿಂದ ಸಿಹಿ ಪಾತ್ರಧಾರಿ ರಿತು ಸಿಂಗ್ ಆಕ್ಟಿಂಗ್ ಫಿದಾ ಆದವರೇ ಹೆಚ್ಚು. ಅವಳಿಗಾಗಿಯೇ ಸೀರಿಯಲ್ ನೋಡುತ್ತಿದ್ದವರು ಜಾಸ್ತಿ. ಕೋಪವಿರಲಿ, ತಮಾಷೆಯಿರಲಿ, ಜಗಳವಿರಲಿ, ನಗು ಇರಲಿ ನವರಸಗಳನ್ನು ಅರೆದು ಕುಡಿದವಳಂತೆ ಅಭಿನಯಿಸುತ್ತಾಳೆ. ಇದು ರಿತು ಸಿಂಗ್ ನಟನೆಯ ಸಾಮರ್ಥ್ಯ. ಆದರೆ ಈಚೆಗೊಂದು ಸತ್ಯ ನೋಡುಗರಿಗೆ ಶಾಕ್ ಎನಿಸಿದೆ. ಇಷ್ಟು ಪುಟಾಣಿಗೆ ಅಷ್ಟು ದೊಡ್ಡ ಜವಾಬ್ದಾರಿಯ ಎನಿಸಿದೆ.

ಮನೆಯನ್ನು ನಡೆಸುತ್ತಿರುವ ಸಿಹಿ

ಧಾರಾವಾಹಿಯಲ್ಲಿ ಸಿಹಿಯ ಪಾತ್ರ ನೋಡಿದಾಗ ಪ್ಯಾಷನ್‌ಗೋಸ್ಕರ ಆಕ್ಟಿಂಗ್ ಮಾಡುತ್ತಿದ್ದಾಳೆ. ಒಳ್ಳೆ ಹಣವಿರಬೇಕು ಎಂದುಕೊಂಡ ವೀಕ್ಷಕರೇ ಹೆಚ್ಚು. ಎಲ್ಲರ ಬದುಕು ಒಂದೇ ರೀತಿ ಇರಲ್ಲ ಎಂಬುದಕ್ಕೆ ರಿತು ಸಿಂಗ್ ಉದಾಹರಣೆ. ಇಷ್ಟು ಚಿಕ್ಕ ಹುಡುಗಿ ನಟನೆ ಮಾಡ್ತಾ ಇದ್ದದ್ದು ಪ್ಯಾಷನ್‌ಗೋಸ್ಕರ ಅಲ್ಲ, ಜೀವನಕ್ಕಾಗಿ. ರಿತು ದುಡಿಮೆಯಲ್ಲೇ ಅವರ ಮನೆ ನಡೆಯುತ್ತಿರೋದು.

ಸಂಕಷ್ಟದಲ್ಲಿ ಕುಟುಂಬ

ಈ ಮನಕಲುಕುವ ಸತ್ಯ ಗೊತ್ತಾಗಿದ್ದೆ ಜೀ ಕುಟುಂಬ ಅವಾರ್ಡ್ ಸಮಯದಲ್ಲಿ. ಅಕುಲ್ ಬಾಲಾಜಿ ವೇದಿಕೆ ಮೇಲೆ ಈ ವಿಚಾರ ತಿಳಿಸಿದ್ದಾರೆ. 'ಸಿಹಿ ಮೊದಲು ಬೆಂಗಳೂರಿಗೆ ಬಂದಾಗ ಮನೆ ಇರಲಿಲ್ಲ, ಕೈಯಲ್ಲಿ ದುಡ್ಡಿರಲಿಲ್ಲ, ಜೀವನ ಹೇಗಪ್ಪ ಎಂದು ಕಷ್ಟ ಎದುರಾಗುತ್ತೆ. ಮೆಜೆಸ್ಟಿಕ್ ಎಲ್ಲಾ ಸುತ್ತಾಡ್ತಾರೆ. ನಾಳೆ ಜೀವನ ಹೇಗಪ್ಪ ಅನ್ನೋದಕ್ಕೆ ಅವರ ಬಳಿ ಉತ್ತರವಿಲ್ಲ. ಆದರೆ ಅವರ ಮನೆಯಲ್ಲಿ ಒಂದು ಬೆಳಕು ಬರುತ್ತೆ. ಸಿಹಿಗೆ ಅವಕಾಶ ಸಿಕ್ಕಿದ ಮೇಲೆ ಅವರ ಜೀವನವೇ ಬದಲಾಗುತ್ತೆ' ಎಂಬ ಅಂದಿನ ಸನ್ನಿವೇಶ ವಿವರಿಸಿದ್ದಾರೆ.

ಕಥೆ ಕೇಳಿ ಕಣ್ಣೀರಿಟ್ಟ ತಾಯಿ

ರಿತು ಓದುತ್ತಾ, ಅಭಿನಯ ಮಾಡುತ್ತಾ ತಮ್ಮ ಮನೆಯನ್ನು ನೋಡಿಕೊಳ್ಳುತ್ತಿದ್ದಾಳೆ. ರಿತು ದುಡಿಮೆಯಿಂದ ಜೀವನ ನಡೆಯುತ್ತಿದೆ. ರಿತು ಆ ಮನೆಯ ತಾಯಿ. ಈ ಮಾತನ್ನು ಅಕುಲ್ ಬಾಲಾಜಿ ಹೇಳುತ್ತಿದ್ದಂತೆ ರಿತು ತಾಯಿಯ ಕಣ್ಣಲ್ಲೂ ನೀರು ಬಂದಿದೆ. ಅಲ್ಲಿವರೆಗೂ ಸುಮ್ಮನೆ ಕೇಳುತ್ತಾ ನಿಂತಿದ್ದ ಸಿಹಿಗೂ ನೋವು ತಡೆಯಲಾಗಲಿಲ್ಲ. ಅಕುಲ್ ಬಾಲಾಜಿ ಎದೆಗೆ ಹೊರಗೆ ನೋವು ಹೊರಗೆ ಹಾಕಿದಳು.

ಸೀತಾರಾಮದಲ್ಲಿ ಸಿಹಿಯ ಅಂತ್ಯ

ರಿತು ಕಷ್ಟಕ್ಕೆ ಕೇಳಿ ಎಲ್ಲರ ಮನ ಕರಗಿದೆ. ವೇದಿಕೆ ಮೇಲಿದ್ದವರು ಕೂಡ ಕಣ್ಣೀರಾಗಿದ್ದಾರೆ. ರಿತುಗೆ ಟ್ಯಾಲೆಂಟ್ ಇದೆ. ಅವಕಾಶಗಳು ಸಿಕ್ಕೆ ಸಿಗುತ್ತವೆ. ಆದರೆ ಇಂಥ ಪರಿಸ್ಥಿತಿಯಲ್ಲಿ ಸೀತಾರಾಮ ಹೊಸ ಪ್ರೋಮೋ ನೆನಪಿಸಿಕೊಳ್ಳುತ್ತಿದ್ದಾರೆ ಜನ. ಹೊಸ ಪ್ರೋಮೋದಲ್ಲಿ ಸಿಹಿಗೆ ಆಕ್ಸಿಡೆಂಟ್ ಆಗಿ ಪಾತ್ರ ಅಂತ್ಯವಾಗುತ್ತದೆ. ಪಾತ್ರ ಅಂತ್ಯವಾದರೆ ಅವರ ಜೀವನ ನಡೆಯೋದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಅವರ ತಾಯಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸಬಹುದು. ಆದರೂ ಸಿಹಿಯ ಪಾತ್ರ ಅಂತ್ಯವಾಗಬಾರದಿತ್ತು ಎಂದೇ ಹೇಳುತ್ತಿದ್ದಾರೆ.

More from Filmibeat

English summary
Zee kannada Seetharama Written Update; Here is the details about Ritu has taken responsibility for the house.
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X