twitter
    For Quick Alerts
    ALLOW NOTIFICATIONS  
    For Daily Alerts

    SIIMA Awards 2022: ಕಾರ್ಯಕ್ರಮದ ಟಿವಿ ಪ್ರಸಾರದ ದಿನಾಂಕ, ಸಮಯ ಮತ್ತು ಚಾನೆಲ್‌ ವಿವರ

    |

    ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಈ ಬಾರಿ ನಮ್ಮ ಬೆಂಗಳೂರು ನಗರದಲ್ಲಿ ನಡೆಯಿತು. ಹೆಚ್ಚಾಗಿ ವಿದೇಶಿ ನೆಲಗಳಲ್ಲಿ ನಡೆಯುತ್ತಿದ್ದ ಈ ಸೈಮಾ ಕಾರ್ಯಕ್ರಮ ಈ ಬಾರಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸುವ ಕಾರಣದಿಂದಾಗಿ ಹಾಗೂ ಇತ್ತೀಚೆಗೆ ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾರಣದಿಂದಾಗಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿತ್ತು.

    ಸೆಪ್ಟೆಂಬರ್ 10 ಹಾಗೂ 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ ಬಹಳ ಅದ್ದೂರಿಯಿಂದ ನಡೆಯಿತು. ಕನ್ನಡದ ಪರ ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಪ್ರಶಸ್ತಿಗಳನ್ನು ಗೆದ್ದರು. ಹೀಗೆ ಕಳೆದ ತಿಂಗಳು ಎರಡು ದಿನಗಳ ಕಾಲ ನಡೆದಿದ್ದ ಸೈಮಾ ಕಾರ್ಯಕ್ರಮದ ದೂರದರ್ಶನದ ಪ್ರಸಾರ ನಾಳೆ ( ಅಕ್ಟೋಬರ್ 9 ) ಸಂಜೆ 6.30ಕ್ಕೆ ಆರಂಭಗೊಳ್ಳಲಿದೆ. ಉದಯ ಟಿವಿಯಲ್ಲಿ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.

    ಇನ್ನು ಇದೇ ದಿನದಂದು ಇದೇ ಸಮಯಕ್ಕೆ ಬೆಂಗಳೂರಿನಲ್ಲಿ ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮ ಕೂಡ ಜರುಗಲಿದ್ದು, ಸಿನಿರಸಿಕರು ಸಾಮಾಜಿಕ ಜಾಲತಾಣದಲ್ಲಿ ಫಿಲ್ಮ್ ಫೇರ್ ಅಪ್ಡೇಟ್ ಹಿಂದೆ ಬೀಳುತ್ತಾರಾ ಅಥವಾ ಟಿವಿ ಮುಂದೆ ಕುಳಿತು ಸೈಮಾ ಕಾರ್ಯಕ್ರಮ ವೀಕ್ಷಿಸುತ್ತಾರಾ ಎಂಬುದು ಸದ್ಯ ಪ್ರಶ್ನೆಯಾಗಿದೆ.

    SIIMA Awards 2022: TV streaming date, time and channel details

    ಅತ್ಯುತ್ತಮ ಚಿತ್ರ - ಗರುಡ ಗಮನ ವೃಷಭ ವಾಹನ

    ಅತ್ಯುತ್ತಮ ನಿರ್ದೇಶಕ - ತರುಣ್ ಸುಧೀರ್ (ರಾಬರ್ಟ್)

    ಅತ್ಯುತ್ತಮ ಚಿತ್ರ - ಗರುಡ ಗಮನ ವೃಷಭ ವಾಹನ

    ಅತ್ಯುತ್ತಮ ನಿರ್ದೇಶಕ - ತರುಣ್ ಸುಧೀರ್ (ರಾಬರ್ಟ್)

    ಈ ಬಾರಿ ಸೈಮಾ ಗೆದ್ದವರ ಪಟ್ಟಿ

    ಅತ್ಯುತ್ತಮ ಛಾಯಾಗ್ರಾಹಕ - ಸುಧಾಕರ್ ರಾಜ್ (ರಾಬರ್ಟ್)

    ಅತ್ಯುತ್ತಮ ನಟ - ಪುನೀತ್ ರಾಜ್‌ಕುಮಾರ್ (ಯುವರತ್ನ)

    ಅತ್ಯುತ್ತಮ ನಟಿ - ಅಮೃತ ಅಯ್ಯಂಗಾರ್ - ( ಬಡವ ರಾಸ್ಕಲ್ )

    ಅತ್ಯುತ್ತಮ ಪೋಷಕ ನಟ - ಪ್ರಮೋದ್ (ರತ್ನನ್ ಪ್ರಪಂಚ)

    ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ - ಆರೋಹಿ ನಾರಾಯಣ (ದೃಶ್ಯ 2)

    ಅತ್ಯುತ್ತಮ ಖಳನಟ - ಪ್ರಮೋದ್ ಶೆಟ್ಟಿ (ಹೀರೊ)

    ಅತ್ಯುತ್ತಮ ಹಾಸ್ಯನಟ - ಚಿಕ್ಕಣ್ಣ (ಪೊಗರು)

    ಅತ್ಯುತ್ತಮ ಉದಯೋನ್ಮುಖ ನಟ - ನಾಗಭೂಷಣ ಎನ್ ಎಸ್ (ಇಕ್ಕಟ್)

    ಅತ್ಯುತ್ತಮ ಉದಯೋನ್ಮುಖ ನಟಿ - ಶರಣ್ಯ ಶೆಟ್ಟಿ (1980)

    ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ಗುರು ಶಂಕರ್ (ಬಡವ ರಾಸ್ಕಲ್)

    ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ - ಕೆಆರ್‌ಜಿ ಸ್ಟುಡಿಯೋಸ್ (ರತ್ನನ್ ಪ್ರಪಂಚ)

    ಅತ್ಯುತ್ತಮ ಸಂಗೀತ ನಿರ್ದೇಶಕ - ಅರ್ಜುನ್ ಜನ್ಯ (ರಾಬರ್ಟ್)

    ಅತ್ಯುತ್ತಮ ಗೀತರಚನೆಕಾರ - ವಾಸುಕಿ ವೈಭವ್ - ನಿನ್ನ ಸನಿಹಕೆಯಿಂದ "ನಿನ್ನ ಸನಿಹಕೆ"

    ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ - ಅರ್ಮಾನ್ ಮಲಿಕ್, ಥಮನ್ ಎಸ್ - ಯುವರತ್ನದಿಂದ "ನೀನಾದೆ ನಾ"

    English summary
    SIIMA Awards 2022: TV streaming date, time and channel details. Know more,
    Saturday, October 8, 2022, 16:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X