Silli Lalli Serial: ಸೀರಿಯಲ್ ಮುಗಿದರೂ ಮುಗಿಯದ ʻಸಿಲ್ಲಿ-ಲಲ್ಲಿ' ಬಾಂಧವ್ಯ

By ಎಸ್ ಸುಮಂತ್

2003 ರಿಂದ 2007ರ ಸಮಯವದು.. 'ಸಿಲ್ಲಿ ಲಲ್ಲಿ' ಅನ್ನೋ ನಕ್ಕು ನಗಿಸೋ ಧಾರಾವಾಹಿಯನ್ನು ಯಾರು ಮಿಸ್ ಮಾಡಿಕೊಳ್ಳುತ್ತಾ ಇರಲಿಲ್ಲ. ಅದರಲ್ಲಿ ಬರುವ ಎಲ್ಲಾ ಪಾತ್ರಗಳು ಈಗಲೂ ಜೀವಂತ. ಹೆಚ್ಚು ಕಡಿಮೆ ವರ್ಷ ಆಗಿದೆ. ಹಾಗೇ ನೋಡಿಕೊಂಡ್ರೆ ಆ ಧಾರಾವಾಹಿಯ ಎಲ್ಲಾ ಮುಖಗಳು ಮರೆತು ಹೋಗಬೇಕಿತ್ತು. ಆದರೆ ಧಾರಾವಾಹಿ ಕೊಟ್ಟ ಮನರಂಜನೆಯ ಪ್ರಭಾವದಿಂದ ಇನ್ನೂ ಆ ಪಾತ್ರಗಳು ಅಚ್ಚಳಿಯದೆ ಉಳಿದಿವೆ.

ಅದಕ್ಕೆ ಈಗಲೂ ಸಮಾಜ ಸೇವಕಿ ಲಲಿತಾಂಬಾ, ಡಾಕ್ಟರ್, ಲೀಲಾ, ಪಲ್ಲಿ, ಶ್ರೀಲತಾ, ಕಾಂಪೌಂಡ್ ಗೋವಿಂದ, ರಂಗ, ಈ ಎಲ್ಲರೂ ಇನ್ನು ಮನದಾಳದಲ್ಲಿ ಉಳಿದಿರೋದು. ಎಷ್ಟೇ ಹಾಸ್ಯಮಯ ಧಾರಾವಾಹಿಗಳು ಬಂದರೂ ಈ ಪಾತ್ರಗಳು ಮನಸ್ಸಿನ ಮೂಲೆಯಲ್ಲೂ ಕೆದಕದೆ ಇರದು.

ಸಮಾಜ ಸೇವಕಿ ಬಡ್ಡಿ ಬಂಗಾರಮ್ಮ ಆಗಿದ್ದೇಗೆ ಗೊತ್ತಾ?

'ಸಿಲ್ಲಿ ಲಲ್ಲಿ' ಸೀರಿಯಲ್ ಮಾಡಿದ ಮೇಲೆ ಮಂಜು ಭಾಷಿಣಿ ಬೇರೆ ಬೇರೆ ಪಾತ್ರಗಳಲ್ಲಿ ಮನರಂಜಿಸುತ್ತಾ ಇದ್ದರು. ಆದರೆ ಇತ್ತೀಚೆಗೆ ಅವರ ಗೆಟಪ್ ಕಂಪ್ಲೀಟ್ ಚೇಂಜ್ ಆಗಿ ಹೋಗಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಅವರನ್ನು ನೋಡಿ ಅಕ್ಷರಶಃ ಶಾಕ್ ಆದವರೇ ಹೆಚ್ಚು.

Silli Lalli Kannada Serial Fame Manju Bashini Meet Serial Members

ಸಿಲ್ಲಿ ಲಲ್ಲಿಯ ಸಮಾಜ ಸೇವಕಿ ಲಲಿತಾಂಬಾಗೂ ಪುಟ್ಟಕ್ಕನ ಮಕ್ಕಳ ಬಂಗಾರಮ್ಮಗೂ ಅದೆಷ್ಟು ವ್ಯತ್ಯಾಸ ಅಂತೀರಿ. ಯಬ್ಬೋ ಅಂತ ಬಾಯಿ ಮೇಲೆ ಬೆರಳಿಟ್ಟಷ್ಟು ವ್ಯತ್ಯಾಸ ಕಾಣಿಸುತ್ತಿದೆ. ಇದು ಮಂಜು ಭಾಷಿಣಿ ಅವರೇನಾ ಅಂತ ಸಾಕಷ್ಟು ಸಲ ಪ್ರಶ್ನೆ ಮಾಡಿಕೊಂಡಿದ್ದೂ ಉಂಟು. ಆದರೆ, ಮಂಜು ಭಾಷಿಣಿಯ ಡಿಫ್ರೆಂಟ್ ಪಾತ್ರಕ್ಕೆ ಕಿರುತೆರೆ ಅಭಿಮಾನಿಗಳು ಮನಸೋತಿದ್ದಾರೆ.

ನೆಗೆಟೀವ್ ಶೇಡ್‌ನಲ್ಲೂ ಮಂಜುಭಾಷಿಣಿ ಮಿಂಚಿಂಗ್

ಸದ್ಯ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮಂಜು ಭಾಷಿಣಿ ನೆಗೆಟೀವ್ ಶೇಡ್ ಪಾತ್ರ ಮಾಡುತ್ತಿದ್ದಾರೆ. ಬಡ್ಡಿ ಬಂಗಾರಮ್ಮ ಎಂಬ ಪಾತ್ರವದು. ಕಷ್ಟ ಎನ್ನುವವರಿಗೆ ಬಡ್ಡಿಗೆ ದುಡ್ಡು ಕೊಡುತ್ತಾರೆ. ಮನಸ್ಸಲ್ಲಿ ಮನುಷ್ಯತ್ವವೂ ಹೆಚ್ಚಾಗಿದೆ. ಆದರೆ, ಹಣದ ವಿಚಾರದಲ್ಲಿ ತೀರಾ ಕಟ್ಟು ನಿಟ್ಟು. ಹೀಗಾಗಿ ಬಡ್ಡಿ ಬಂಗಾರಮ್ಮ ಅಂದರೆ, ಎಲ್ಲರೂ ಹೆದರುತ್ತಾರೆ.

ಅಷ್ಟೇ ಅಲ್ಲ ಮಕ್ಕಳು ಕೂಡ ಅವ್ವನ ಮುಂದೆ ಮಾತಾಡೋದಕ್ಕೆ ಹೆದರುತ್ತಾರೆ. ಗಂಡು ನಾನು ಎಂಬ ಅಹಂಕಾರವನ್ನು ತೋರಿಸೋದು ಯಾವುದೇ ಕಾರಣಕ್ಕೂ ಬಡ್ಡಿ ಬಂಗಾರಮ್ಮನಿಗೆ ಇಷ್ಟವಾಗೋದಿಲ್ಲ. ಹೆಣ್ಣಿಗೂ ಗೌರವ ಕೊಡಲೇಬೇಕು ಎಂಬುದು ಬಡ್ಡಿ ಬಂಗಾರಮ್ಮ ವಾದ. ಈ ಮಟ್ಟಕ್ಕೆ ಸಮಾಜ ಸೇವಕಿ ಲಲಿತಾಂಬಾ ಬದಲಾಗಿದ್ದಾರೆ.

ಅತ್ತಿಗೆ ನಾದಿನಿ ಈಗಲೂ ಬೆಸ್ಟ್ ಫ್ರೆಂಡ್ಸ್

ಮಂಜು ಭಾಷಿಣಿಗೆ ನೇಮೂ, ಫೇಮು ತಂದು ಕೊಟ್ಟ ಧಾರಾವಾಹಿ ಅಂದ್ರೆ ಅದು 'ಸಿಲ್ಲಿ ಲಲ್ಲಿ' ಧಾರಾವಾಹಿ. ಬರೀ ಮಂಜು ಭಾಷಿಣಿಗೆ ಮಾತ್ರವಲ್ಲ ಆ ಧಾರಾವಾಹಿಯಲ್ಲಿದ್ದ ಒಂದೊಂದು ಪಾತ್ರಗಳಿಗೂ ಮಹತ್ವವಿತ್ತು. 10 ರಿಂದ 12 ಜನ ಪಾತ್ರಗಳಿದ್ದರೂ ಯಾವ ಪಾತ್ರಗಳು ಸಣ್ಣ ಮಟ್ಟದ್ದು ಎನ್ನಿಸುತ್ತಿರಲಿಲ್ಲ.

ಧಾರಾವಾಹಿಯಲ್ಲಿ ಒಂದೇ ಕುಟುಂಬದಲ್ಲಿದ್ದರು, ಧಾರಾವಾಹಿ ಮುಗಿದ ಬಳಿಕ ಮತ್ತೆ ಅದೇ ಕುಟುಂಬದಂತೆ ಒಂದಾಗೋದು ಅತಿ ವಿರಳ. ಆದರೆ, ಈ ಧಾರಾವಾಹಿಯಿಂದ ರೂಪಾ ಪ್ರಭಾಕರ್ ಅಂಡ್ ಪ್ರಶಾಂತ್ ಮತ್ತು ವಿಕ್ರಮ್ ಸೂರಿ ಹಾಗೂ ನಮಿತಾ ರಾವ್ ನಿಜವಾಗಲೂ ಕುಟುಂಬಸ್ಥರಾದರು. ಒಬ್ಬರಿಗೊಬ್ಬರು ಪ್ರೀತಿಸಿ ಮದುವೆ ಕೂಡ ಆಗಿದ್ದಾರೆ.

ಆ ಧಾರಾವಾಹಿಯಲ್ಲಿ ಮಂಜು ಭಾಷಿಣಿ ಮನೆ ಯಜಮಾನಿಯಾಗಿದ್ದರು. ಅತ್ತಿಗೆಯಾಗಿದ್ದರು. ಧಾರಾವಾಹಿ ಮುಗಿದು 15 ವರ್ಷಗಳೇ ಕಳೆದರು ಈಗಲೂ ಆ ಸಂಬಂಧ ಹಾಗೇ ಗಟ್ಟಿಯಾಗಿದೆ. ಅತ್ತ ರೂಪ ಪ್ರಭಾಕರ್ ನನ್ನಮ್ಮ ಸೂಪರ್ ಸ್ಟಾರ್ ಪ್ರೋಗ್ರಾಂನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಮಂಜು ಭಾಷಿಣಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿದ್ದಾರೆ. ಎಷ್ಟೇ ಬ್ಯುಸಿಯಾಗಿದ್ದರೂ, ತನ್ನವರನ್ನ ಆಗಾಗ ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂ ಸ್ಟೋರೀಸ್‌ಗೆ ಹೋಗಿ ತಮ್ಮ ಸ್ಟೋರಿಗಳನ್ನು ಮೆಲುಕು ಹಾಕಿ, ಅದನ್ನು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದಾರೆ.

More from Filmibeat

English summary
Silli Lalli fame Manju Bashini meet serial members. Here is the details more update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X