Actress Manjubhashini: ಬಡ್ಡಿ ಬಂಗಾರಮ್ಮ ಆಗಿ ಬದಲಾದ ಸಮಾಜ ಸೇವಕಿ ಲಲಿತಾಂಬ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಆರೂರು ಜಗದೀಶ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ'ಪುಟ್ಟಕ್ಕನ ಮಕ್ಕಳು'. ಈ ಸೀರಿಯಲ್‌ನಲ್ಲಿ ನಾಯಕ ಕಂಠಿ ಅಮ್ಮ ಬಡ್ಡಿ ಬಂಗಾರಮ್ಮ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ನಟಿ ಮಂಜುಭಾಷಿಣಿ.

ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಧಾರಾವಾಹಿ 'ಸಿಲ್ಲಿ ಲಲ್ಲಿ'ಯಲ್ಲಿ ಸಮಾಜ ಸೇವಕಿ ಲಲಿತಾಂಬ ಆಗಿ ಅಭಿನಯಿಸಿದ್ದ ಮಂಜುಭಾಷಿಣಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಪರಿಚಿತರು.

Silli Lalli serial fame actress Manjubhashini entertaining as Buddy Bangaramma

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪ್ರಭಾವಿ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಂಜುಭಾಷಿಣಿ ತಮ್ಮ ಗತ್ತು, ವೇಷ ಭೂಷಣದ ಜೊತೆಗೆ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ. ಅರಳು ಹುರಿದಂತೆ ಗ್ರಾಂಥಿಕ ಭಾಷೆಯನ್ನು ಮಾತನಾಡುವ ಮಂಜುಭಾಷಿಣಿ 'ಮತ್ತೆ ಮಯಾಮೃಗ' ಧಾರಾವಾಹಿಯಲ್ಲಿಯೂ ಅಭಿನಯಿಸುತ್ತಿದ್ದಾರೆ.

ಟೀಚರ್ ಬೃಂದಾ ಆಗಿ ಮೋಡಿ

ಟಿ.ಎನ್. ಸೀತಾರಾಮ್ ನಿರ್ದೇಶನದಡಿಯಲ್ಲಿ ಸಿರಿಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಟೀಚರ್ ಬೃಂದಾ ಆಗಿ ನಟಿಸುತ್ತಿದ್ದಾರೆ ಮಂಜುಭಾಷಿಣಿ. ವಿಶೇಷ ಎಂದರೆ, ಇದರಲ್ಲಿ ಸೌಮ್ಯ ಸ್ವಭಾವದ ಹೆಣ್ಣು ಮಗಳ ಪಾತ್ರಕ್ಕೆ ಮಂಜುಭಾಷಿಣಿ ಜೀವ ತುಂಬಿದ್ದಾರೆ .

Silli Lalli serial fame actress Manjubhashini entertaining as Buddy Bangaramma

ನೆಗೆಟಿವ್ ಪಾತ್ರದ ಮೂಲಕ ಫೇಮಸ್ಸು!

'ಸಿಲ್ಲಿ ಲಲ್ಲಿ' ಧಾರಾವಾಹಿಯ ನಂತರ ಬಣ್ಣದ ಲೋಕದ ನಂಟಿನಿಂದ ಕೊಂಚ ದೂರವಿದ್ದ ಮಂಜುಭಾಷಿಣಿ ಮತ್ತೆ ನಟನೆಗೆ ಮರಳಿದ್ದು 2018ರಲ್ಲಿ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಮಂಜುಭಾಷಿಣಿ ಮೋಡಿ ಮಾಡಿದ್ದರು.

ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟನೆ

ಟಿ.ಎನ್. ಸೀತಾರಾಮ್ ಅವರ 'ಮಾಯಾಮೃಗ'ದಲ್ಲಿ ಬೃಂದಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮಂಜುಭಾಷಿಣಿ ನಟಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಆದರೂ ಮನೋಜ್ಞ ನಟನೆಯ ಮೂಲಕ ಮನ ಸೆಳೆದಿದ್ದಾರೆ. 'ಸಿಲ್ಲಿ ಲಲ್ಲಿ', 'ಯದ್ವಾ ತದ್ವಾ', 'ರಾಜ ರಾಣಿ' ಧಾರಾವಾಹಿಗಳಲ್ಲಿ ಈಕೆ ಅಭಿನಯಿಸಿದ್ದಾರೆ.

ಸಿನಿಮಾದಲ್ಲಿಯೂ ಮೋಡಿ

'ಅಮ್ಮಾವ್ರ ಗಂಡ' ಸಿನಿಮಾದಲ್ಲಿ ನಾಯಕಿಯ ತಂಗಿಯಾಗಿ ನಟಿಸಿದ್ದ ಈಕೆ 'ಭೂಮಿಗೀತ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ 'ಗಂಡ ಹೆಂಡತಿ', 'ರಾಜ್ ದಿ ಶೋ ಮ್ಯಾನ್' ಸಿನಿಮಾಗಳಲ್ಲಿ ಮಂಜುಭಾಷಿಣಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Silli Lalli serial fame actress Manjubhashini entertaining as Buddy Bangaramma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X