ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧವ್ ಅಲಿಯಾಸ್ ಅಜಿತ್ ಹಂದೆ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಸೀರಿಯಲ್ ಶುರುವಾಗಿ ಒಂದೂವರೆ ವರ್ಷವಾಗಿದೆ. ಆದರೆ ಚಿಕ್ಕವರಿಂದ ದೊಡ್ಡವರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ.

ಪ್ರತಿಯೊಂದು ಪಾತ್ರಗಳಿಗೂ ವಿಶೇಷವಾದ ಗಮನವನ್ನು ಕೊಟ್ಟಿದ್ದು, ಎಲ್ಲರೂ ತಮ್ಮ ಮನೆಯಲ್ಲಿರುವವರಿಗೆ ಹೋಲಿಸಿಕೊಳ್ಳುವಂತಿದೆ. ಈ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಾಧವ್ ಕಾಣಿಸಿಕೊಂಡಿದ್ದಾರೆ.

Sindhu hande celebrates hubby actor Ajith hande birtday

ಮಾಧವ್ ನಿಜವಾದ ಹೆಸರು ಅಜಿತ್ ಹಂದೆ. ಕಳೆದ ಹಲವು ವರ್ಷಗಳ ಹಿಂದೆ ನಟಿಸಿದ್ದ ಇವರು, ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ರಂಗಭೂಮಿಯಲ್ಲಿ ಪಳಗಿದ ಅಜಿತ್

ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಅಜಿತ್ ಹಂದೆ, ಈ ಹಿಂದೆ 'ಬಿದಿಗೆ ಚಂದ್ರಮ', 'ಗರ್ವ', 'ಮುಕ್ತ' ಧಾರಾವಾಹಿಗಳಲ್ಲಿ ನಟಿಸಿದ್ದರು. ಇಷ್ಟೇ ಅಲ್ಲದೇ ಹಿಂದೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ 'ಚೋಟಿಮಾ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು 'ಮುಕ್ತ' ಧಾರಾವಾಹಿಯಲ್ಲಿ ಸ್ವಾಮೀಜಿ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಅಜಿತ್ ಹಂದೆ ಯುಎಸ್‌ಗೆ ಹೊರಟು ಬಿಟ್ಟರು. ಅಲ್ಲಿ ಫಿಲ್ಮಂ ಮೇಕಿಂಗ್ ಕೋರ್ಸ್ ಮಾಡಿ ಬಂದರು. ಯುಎಸ್‌ನಿಂದ ಬಂದ ಬಳಿಕ ಅಜಿತ್ ಹಂದೆ ತೆರೆಮೇಲೆ ಕಾಣಿಸಿಕೊಳ್ಳುವುದಕ್ಕಿಂತಲೂ ಪರದೆಯ ಹಿಂದೆ ಇದ್ದದ್ದೇ ಹೆಚ್ಚು.

Sindhu hande celebrates hubby actor Ajith hande birtday

ಮಾಧವ್ ಆಗಿ ಬದಲಾದ ಅಜಿತ್

ಅಜಿತ್ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. ಇದರಲ್ಲಿ ಕಿರುಚಿತ್ರ, ಮ್ಯೂಸಿಕ್ ಆಲ್ಬಂಗಳು, ಸಾಕ್ಷ್ಯಾ ಚಿತ್ರಗಳನ್ನು ನಿರ್ಮಿಸಿದರು. ಇದರ ಜೊತೆಗೆ 'ಅವಲಕ್ಕಿ ಪವಲಕ್ಕಿ' ಎಂಬ ಧಾರಾವಾಹಿಯನ್ನು ನಿರ್ದೇಶಿಸಿ, ನಿರ್ಮಿಸಿದ್ದರು ಕೂಡ. ಹಾಗೆ ನೋಡಿದರೆ, ಅಜಿತ್ ಹಂದೆ ಬಣ್ಣದ ಲೋಕದ ನಂಟು ಬಹಳ ದೊಡ್ಡದಿದೆ. ಆದರೆ ಮೊದಲಿದ್ದ ಅಜಿತ್ ಹಂದೆಗೂ ಈಗ ನೋಡುವ ಮಾಧವನಿಗೂ ತುಂಬಾನೇ ವ್ಯತ್ಯಾಸ ಕಾಣುತ್ತದೆ. ಅಜಿತ್ ಹಂದೆ ಲುಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನು ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲೂ ಅಜಿತ್ ಹಂದೆ ನಟಿಸಿದ್ದಾರೆ. ಕನ್ನಡದ 'ಚಂಬಲ್', 'ಮಿನುಗು' ಹಾಗೂ '5 ಒಂದ್ಲಾ ಐದು' ಎಂಬ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಹಿಂದಿಯಲ್ಲಿ ಮೂಡಿ ಬಂದ 'ಏಕ್ ಅಲಗ್ ಮೌಸಮ್' ಎಂಬ ಸಿನಿಮಾದಲ್ಲೂ ಅಜಿತ್ ಹಂದೆ ಮಿಂಚಿದ್ದಾರೆ. ಆದರೆ ಅಜಿತ್ ಹಂದೆಗೆ ಹೆಸರು ತಂದುಕೊಟ್ಟದ್ದು ಶ್ರೀರಸ್ತು ಶುಭಮಸ್ತು ಧಾರಾವಾಹಿ. ಈ ಧಾರಾವಾಹಿಯಲ್ಲಿ ಮಧ್ಯ ವಯಸ್ಕನ ಪಾತ್ರ ಮಾಡಿರುವ ಅವರಿಗೆ ಇನ್ನೂ ಐದು ವರ್ಷದ ಪುಟಾಣಿ ಮಗು ಇದೆ.

ಅಜಿತ್ ಹಂದೆ ಹುಟ್ಟುಹಬ್ಬ

ಅಜಿತ್ ಹಂದೆಗೆ ಹುಟ್ಟುಹಬ್ಬದ ಸಂಭ್ರಮ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಯನ್ನು ಮದುವೆಯಾಗಿ, ಈ ಹೊಸ ಸಂಬಂಧದ ಜೊತೆಗೆ ಹಳೆಯ ಸಂಬಂಧಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಇನ್ನು ಅಜಿತ್ ಹಂದೆ ಪತ್ನಿ ಸಿಂಧು ಹಂದೆ ಸ್ಪೆಷಲ್ ಕೇಕ್ ತರಿಸಿ ಹುಟ್ಟುಹಬ್ಬ ಸೆಲಬ್ರೇಟ್ ಮಾಡಿದ್ದಾರೆ. ಸಿಂಧು ಹಂದೆ ಕೂಡ ಆರ್ಟಿಸ್ಟ್. ಆದರೆ, ಕ್ಯಾಮರಾ ಮುಂದೆ ಅಲ್ಲ. ಸಿಂಧು ಚಿತ್ರಗಳನ್ನು ಬಿಡಿಸುತ್ತಾರೆ. ಪತಿ ಪತ್ನಿ ಒಂದೊಂದು ಕ್ಷೇತ್ರದಲ್ಲಿ ಇಬ್ಬರೂ ಕಲಾವಿದರಾಗಿದ್ದಾರೆ. ಇಬ್ಬರೂ ಕೂಡ ಹೆಚ್ಚಾಗಿ ಸೋಶಿಯಲ್ ಮೀಡಿಯಾವನ್ನು ಬಳಸುವುದಿಲ್ಲ ಅನ್ನೋದು ಮತ್ತೊಂದು ವಿಶೇಷ.

More from Filmibeat

English summary
Srirasthu shubhamasthu serial madhav alias Ajith hande birthday;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X