ತಮಿಳು 'ಸರಿಗಮಪ'ಗೆ ಆಯ್ಕೆಯಾದ ಕನ್ನಡದ ಐಶ್ವರ್ಯ

ಜೀ ಕನ್ನಡ ವಾಹಿನಿಯ ಸ್ಪರ್ಧಿಗಳು ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದನ್ನು ಪ್ರತಿ ಸೀಸನ್ ನಲ್ಲಿ ನೋಡುತ್ತಿದ್ದೇವೆ. ಅದೇ ರೀತಿ ತನ್ನ ಹಾಡುಗಳು ಮೂಲಕ ಮೆಚ್ಚುಗೆ ಪಡೆದಿದ್ದ ಗಾಯಕಿ ಐಶ್ವರ್ಯ ರಂಗರಾಜನ್.

ಐಶ್ವರ್ಯ ರಂಗನಾಥ್ 'ಸರಿಗಮಪ ಸೀಸನ್ 11' ರಲ್ಲಿ ಭಾಗಿಯಾಗಿದ್ದರು, ತಮ್ಮ ಗಾಯನ ಪ್ರತಿಭೆ ಮೂಲಕ ಟಾಪ್ 3 ಸ್ಥಾನಕ್ಕೆ ಆಯ್ಕೆ ಆದರು. ಟ್ರೋಫಿ ಗೆಲ್ಲದೆ ಇದ್ದರೂ ಅವರಿಗೆ ಅವಕಾಶಗಳು ಸಿಗುತ್ತಾ ಹೊಯ್ತು.

ಈಗ ಈ ಗಾಯಕಿ ತಮಿಳಿನ ಸರಿಗಮಪ ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದಾರೆ. ಮೆಗಾ ಆಡಿಷನ್ ನಲ್ಲಿ ಅವರು ಹಾಡಿದ ಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ. ತೀರ್ಪುಗಾರರಾದ ಶ್ರೀನಿವಾಸ್ ಹಾಗೂ ಸುಜಾತ ಹಾಡು ಕೇಳಿ ಖುಷಿ ಆಗಿದ್ದಾರೆ. ನಿಮ್ಮನ್ನು ಪಡೆಯಲು ಈ ಕಾರ್ಯಕ್ರಮ ಅದೃಷ್ಟ ಮಾಡಿದೆ ಎಂದು ಐಶ್ವರ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತ ಮಾಡಿಕೊಂಡರು.

singer aishwarya rangarajan selected in saregamapa tamil show

ಈ ಹಿಂದೆ ಗಾಯಕ ಸಂಚಿತ್ ಹೆಗ್ಡೆ ಕೂಡ ಕನ್ನಡದ ಕಾರ್ಯಕ್ರಮದ ನಂತರ ತಮಿಳಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಬಾರಿ ಕಾರ್ಯಕ್ರಮದಲ್ಲಿ ಬರೋಬ್ಬರಿ ನೂರು ಜೂರಿ ಮೆಂಬರ್ ಗಳು ಇದ್ದು, ಅದ್ದೂರಿಯಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ.

ಗಾಯನ ಮಾತ್ರವಲ್ಲದೆ ಐಶ್ವರ್ಯ ಕಿರುಚಿತ್ರಗಳು ಹಾಗೂ 'ಮಗಳು ಜಾನಕಿ' ಧಾರಾವಾಹಿಯಲ್ಲಿಯೂ ಒಂದು ಪಾತ್ರ ಮಾಡಿದ್ದರು.

More from Filmibeat

English summary
Kannda singer Aishwarya Rangarajan selected in Saregamapa tamil show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X