ಬಳಸಿಕೊಂಡು ಬಿಸಾಡಿದಳು: 'ಕೆಜಿಎಫ್' ಸುಂದರಿ ವಿರುದ್ಧ ನಟನ ಆರೋಪ

By ಫಿಲ್ಮೀಬೀಟ್ ಡೆಸ್ಕ್‌

'ಕೆಜಿಎಫ್' ಸುಂದರಿ ಮೌನಿ ರಾಯ್ ವಿರುದ್ಧ ನಟ, ಗಾಯಕ ಅಮಿತ್ ತಂಡನ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ''ಆಕೆ ನನ್ನ ಪತ್ನಿಯನ್ನು ಬಳಸಿ ಬಿಸಾಡಿದಳು. ಆಕೆಯ ಮುಖವನ್ನು ನನ್ನ ಜೀವನದಲ್ಲಿ ನೋಡುವುದಿಲ್ಲ. ಆಕೆಗೆ ಕ್ಷಮೆ ಎಂಬುದು ಇಲ್ಲ'' ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾರುವ ಅಮಿತ್ ತಂಡನ್, ''ಮೊದಲಲ್ಲಿ ನಾನು ಸಹ ಮೌನಿ ರಾಯ್ ಅನ್ನು ನಂಬಿದ್ದೆ. ಆಕೆ ಬಹಳ ಒಳ್ಳೆಯವಳು ಎಂದುಕೊಂಡಿದ್ದೆ. ಆದರೆ ಕಷ್ಟದ ಸಮಯದಲ್ಲಿ ಜನರ ನಿಜ ಮುಖ ಗೊತ್ತಾಗುತ್ತವಂತೆ ಆಕೆಯ ನಿಜ ಮುಖವೂ ಗೊತ್ತಾಯಿತು'' ಎಂದಿದ್ದಾರೆ ಅಮಿತ್.

''ಆಕೆ ನನ್ನ ಪತ್ನಿಯನ್ನು ಬಳಸಿಕೊಂಡು ಬಿಸಾಡಿದಳು. ನನ್ನ ಪತ್ನಿ ರೂಬಿ ಟಂಡನ್ ಬಹಳ ಕಷ್ಟದ ಸಮಯದಲ್ಲಿದ್ದಾಗ ಆಕೆಯನ್ನು ತ್ಯಜಿಸಿ ಮೌನಿ ಹೊರಟು ಹೋದಳು. ಪತ್ನಿಯ ಬಳಿ ಇದ್ದದ್ದನ್ನೆಲ್ಲ ಮೌನಿ ಕಸಿದುಕೊಂಡಳು, ಮಾಡಲೇ ಬೇಕಾಗಿದ್ದ ಸಣ್ಣ ಸಹಾಯವನ್ನೂ ಸಹ ಮೌನಿ ರಾಯ್ ಮಾಡಲಿಲ್ಲ. ಆಕೆಗೆ ಕ್ಷಮೆ ಎಂಬುದೇ ಇಲ್ಲ'' ಎಂದಿದ್ದಾರೆ ಅಮಿತ್.

Singer Amit Tandon Accused Mouni Roy For Cheating His Wife

''ನನಗೆ ಗೊತ್ತಿದೆ ನನ್ನ ಪತ್ನಿ ಈ ಬಗ್ಗೆ ಎಂದೂ ಮಾತನಾಡುವುದಿಲ್ಲ. ನಾನೂ ಸಹ ಇಂಥಹಾ ವಿಷಯಗಳಿಗೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಪತ್ನಿ ಈಗ ಸಾಕಷ್ಟು ಬೆಳೆದಿದ್ದಾಳೆ. ಸ್ವ ವ್ಯಕ್ತಿತ್ವದಲ್ಲಿಯೂ ಅಷ್ಟೆ, ಸಾಮಾಜಿಕ ಸ್ಥರದಲ್ಲೂ ಅಷ್ಟೆ ಆಕೆ ಹೊಸ ಎತ್ತರಗಳನ್ನು ಮುಟ್ಟಿದ್ದಾಳೆ. ನಾನಂತೂ ರೂಬಿಗೆ ಹೇಳಿಬಿಟ್ಟಿದ್ದೇನೆ, ಒಂದು ವೇಳೆ ಆಕೆ ಏನಾದರೂ ಮೌನಿ ರಾಯ್‌ ಅನ್ನು ಕ್ಷಮಿಸಿ ಮತ್ತೆ ಆಕೆಯೊಂದಿಗೆ ಸ್ನೇಹ ಬೆಳೆಸಿದರೆ ನಾನು ರೂಬಿಯ ಜೀವನದಿಂದ ದೂರ ಹೋಗಿಬಿಡುವುದಾಗಿ ಹೇಳಿದ್ದೇನೆ'' ಎಂದಿದ್ದಾರೆ ಅಮಿತ್ ಟಂಡನ್.

ಅಮಿತ್ ಹಾಗೂ ರೂಬಿ 2007 ರಲ್ಲಿ ವಿವಾಹವಾದರು. ಇವರಿಗೆ ಒಬ್ಬಳು ಮಗಳಿದ್ದಾಳೆ. 2017 ರಲ್ಲಿ ಇಬ್ಬರು ವಿಚ್ಛೇಧನಕ್ಕೆ ಅರ್ಜಿ ಹಾಕಿಕೊಂಡರು. ಅದೇ ಸಮಯದಲ್ಲಿ ದುಬೈನಲ್ಲಿ ರೂಬಿ ಬಂಧನಕ್ಕೆ ಒಳಗಾದರು. ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ರೂಬಿಯನ್ನು ದುಬೈನ ಸ್ಥಳೀಯ ಸರ್ಕಾರ ಬಂಧೀಸಿ ಹತ್ತು ತಿಂಗಳು ಜೈಲಿನಲ್ಲಿಟ್ಟಿತ್ತು. ಆ ಸಮಯದಲ್ಲಿ ಮೌನಿ ರಾಯ್ ರೂಬಿಗೆ ಹಾಗೂ ಅಮಿತ್‌ಗೆ ಸಹಾಯ ಮಾಡಲಿಲ್ಲ ಎನ್ನಲಾಗಿದೆ.

2019ರಲ್ಲಿ ರೂಬಿ ಮತ್ತು ಅಮಿತ್ ಮತ್ತೆ ಒಂದಾದರು. ಇದೀಗ ಇಬ್ಬರು ದಾಂಪತ್ಯ ನಡೆಸಿಕೊಂಡು ಹೋಗುತ್ತಿದ್ದಾರೆ. ಅಮಿತ್ ಹಾಡುಗಾರರು ಹಾಗೂ ನಟರೂ ಆಗಿದ್ದಾರೆ. ಹಿಂದಿಯ ಕೆಲವು ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ಅವರು ಭಾಗವಹಿಸಿದ್ದಾರೆ. ಕೆಲವು ಸಿನಿಮಾಗಳಿಗೆ ಹಾಡುಗಳನ್ನು ಸಹ ಹಾಡಿದ್ದಾರೆ.

More from Filmibeat

English summary
Singer Amit Tandon accused that actress Mouni Roy used his Ruby Tandon and left her when she is in deep trouble.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X