"ತಾಯಿ ಶಾರದೆ ಅಂತಿದ್ದವಳು, ಹಿಂಗ್ಯಾಕೆ ಆಡ್ತಿದ್ದೀಯಾ": ಗಾಯಕಿ ಅಂಕಿತಾ ಕುಂಡು ಲುಕ್ ಹೆವೀ ಟ್ರೋಲ್!
ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಮೂಲಕ ಎಲ್ಲರಿಗೂ ಪರಿಚಿತರಾಗಿದ್ದ ಬೆಂಗಾಲಿ ಮೂಲದ ಗಾಯಕಿ ಅಂಕಿತಾ ಕುಂಡು. ಇದೇ ಗಾಯಕಿ ಹೊಸ ಫೋಟೋ ಶೂಟ್ ಮಾಡಿಸಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಂಕಿತಾ ಕುಂಡು ಲಿಟಲ್ ಚಾಂಪ್ಸ್ ರನ್ನರ್ ಅಪ್ ಆಗಿದ್ದರೂ, ಸಂಗೀತ ಅರ್ಜುನ್ ಜನ್ಯ ಮನಗೆದ್ದಿದ್ದರು. ವೇದಿಕೆ ಮೇಲೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಅದೇ ಗಾಯಕಿಯ ಲುಕ್ ಈಗ ಬದಲಾಗಿದೆ. ಬಾಬ್ ಕಟ್ ಮಾಡಿಸಿಕೊಂಡು, ಟಾಮ್ ಬಾಯ್ ಲುಕ್ ಕೊಟ್ಟಿದ್ದಾರೆ. ಈ ಲುಕ್‌ಗೆ ನೆಟ್ಟಿಗರು ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ರೀತಿಯ ಕಮೆಂಟ್ ಕೊಡುತ್ತಿದ್ದಾರೆ.

ಅಂಕಿತಾ ಕುಂಡು ಬ್ಲ್ಯಾಕ್ ಹೈ ಸ್ಲಿಟ್ ಗೌನ್ ಧರಿಸಿರುವ ಸಿಂಗರ್ ಹಲವರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಹಾಗೇ ಸಿಕ್ಕಾಪಟ್ಟೆ ಟ್ರೋಲ್‌ಗೂ ಒಳಗಾಗಿದ್ದಾರೆ. "ತಾಯಿ ಶಾರದೆ ಅಂತಿದ್ದವಳು ಡಿಸ್ಕೊ ಶಾಂತಿ ತರ ಆಡ್ತಿದ್ದೀಯಾ" ಅಂತೆಲ್ಲಾ ಕಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಹುಟ್ಟಿದ್ದು ದೆಹಲಿಯಲ್ಲಿ, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ
ಜೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋ ಮೂಲಕ ಮಿಂಚಿದ್ದ ಗಾಯಕಿ ಅಂಕಿತಾ ಕುಂಡು. ಇವರು ಮೂಲತಃ ಕರ್ನಾಟಕದವರಲ್ಲ. ಆದರೆ ತಮ್ಮ ಸುಮಧುರ ಕಂಠದ ಮೂಲಕ ಕರುನಾಡಿನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಅಮಿತಾಬ್ ಕುಂಡು ಮತ್ತು ಸುರಶ್ರೀ ಕುಂಡು ಅವರ ಪುತ್ರಿಯಾಗಿರುವ ಅಂಕಿತಾ ಕುಂಡು ಮೂಲತಃ ಬೆಂಗಾಳಿ ಕುಟುಂಬದವರು. ದೆಹಲಿಯಲ್ಲಿ ಹುಟ್ಟಿದ ಇವರು ಬೆಳೆದದ್ದು ಮಾತ್ರ ಕರ್ನಾಟಕದ ಬೆಂಗಳೂರಿನಲ್ಲಿ.
ಅದೆಷ್ಟೋ ಹಾಡಿಗೆ ದನಿಯಾದ ಅಂಕಿತಾ
ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದ ಮೂಲಕ ಕನ್ನಡದ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಕಾರ್ಯಕ್ರಮಕ್ಕೆ ಬಂದಾಗ ಇವರಿಗೆ ಕನ್ನಡವೇ ಬರುತ್ತಿರಲಿಲ್ಲ. ಆದರೆ ಹಾಡಿಗೆಲ್ಲಿ ಭಾಷೆಯ ಭೇದ ಎಂಬಂತೆ ಕನ್ನಡವೇ ಬಾರದ ಇವರು, ಕನ್ನಡದ ಅದೆಷ್ಟೋ ಗೀತೆಗಳಿಗೆ ಧ್ವನಿಯಾದರು. ಹಾಡಿಗೆ ಜೀವ ತುಂಬಿ ಹಾಡಿ ಮನೆಮಾತಾದರು. ಹೀಗಾಗಿ ಅಂಕಿತಾ ಕುಂಡು ಕನ್ನಡಿಗರಿಗೆ, ಅದರಲ್ಲೂ ಸಂಗೀತ ಪ್ರಿಯರಿಗೆ ಚಿರಪರಿಚಿತ.

ಮೊದಲ ರನ್ನರ್ ಆಪ್ ಅಂಕಿತಾ
2015ರ ಜೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್‌ನ ಸ್ಪರ್ಧಿಯಾಗಿದ್ದರು. ಆ ವೇಳೆ ಭಾಗವಹಿಸಿದ ಅಂಕಿತಾ ಮೊದಲ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡರು. ನಂತರ 2017 ರಲ್ಲಿ ಕಲರ್ಸ್ ಟಿವಿಯಲ್ಲಿ ಪ್ರಸಾರವಾದ ರೈಸಿಂಗ್ ಸ್ಟಾರ್ ಶೋನಲ್ಲೂ ಪಾಲ್ಗೊಂಡರು. ಅಂಕಿತಾ ಸುಮಧುರ ಕಂಠಕ್ಕೆ ಕನ್ನಡಿಗರೂ ಮರುಳಾಗಿದ್ದು, ಕನ್ನಡ ಸಿನಿಮಾಗಳಲ್ಲೂ ಹಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್
ಇದೀಗ ಸೋಶಿಯಲ್ ಮೀಡೀಯಾದಲ್ಲಿ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿರುವ ಈ ಗಾಯಕಿ ಮೊದಲಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದವರು. ಫೋಟೋ ಮಾತ್ರವಲ್ಲದೆ ತಮ್ಮ ಹೊಸ ಹಾಡುಗಳನ್ನು, ಆಲ್ಬಂ ಸಾಂಗ್ ಗಳನ್ನು ಸೋಶಿಯಲ್ ಮೀಡಿಯಾ ಮುಖಾಂತರ ಹಂಚಿಕೊಳ್ಳುತ್ತಲೇ ಇರುತ್ತಾರೆ. ಹೀಗಾಗಿ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕ ಹೊಂದಿರುವ ಸೆಲೆಬ್ರಿಟಿಗಳಲ್ಲಿ ಇವರು ಒಬ್ಬರಾಗಿದ್ದಾರೆ. ಅಲ್ಲದೆ ರಾಜ್ಯದ ವಿವಿಧೆಡೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನೂ ನೀಡುತ್ತಲೇ ಇರುತ್ತಾರೆ. 'ಜಗತ್ ಕಿಲಾಡಿ', '5ಜಿ' ಇತ್ಯಾದಿ ಫೇಮಸ್ ಆಲ್ಬಂ ಸಾಂಗ್‌ಗಳಿಗೆ ದನಿಯಾಗಿರುವ ಅಂಕಿತಾ ಇತ್ತೀಚೆಗೆ ಕನ್ನಡದ ಸಿನಿಮಾದಲ್ಲೂ ಹಾಡು ಹಾಡಿದ್ದಾರೆ.


Click it and Unblock the Notifications











