Saregamapa: ಪದ ಕಟ್ಟಿ ರಮೇಶ್ ಅರವಿಂದ್ ಸಾಧನೆ ತಿಳಿಸಿದ ಬಾಳು ಬೆಳಗುಂದಿ

By ಎಸ್ ಸುಮಂತ್

ಜೀ ಕನ್ನಡದಲ್ಲಿ ಸರಿಗಮಪ ಮತ್ತೆ ಶುರುವಾಗಿದೆ. ಈ ಶೋಗೆ ಅಭಿಮಾನಿಗಳು ಕಡಿಮೆ ಏನಿಲ್ಲ. ಸಂಗೀತ ಅಂದ್ರೆನೆ ಹಾಗಲ್ವಾ. ಪ್ರೊಫೇಷನಲ್ ಆಗಿ ಸಂಗೀತ ಕಲಿಯದವರನ್ನು ಸಂಗೀತ ಸೆಳೆಯುತ್ತದೆ. ಎಂಥದ್ದೆ ಸಮಸ್ಯೆ ಇದ್ದರು, ಏನೇ ಬೇಸರ ಇದ್ದರು ಹಾಡುಗಳನ್ನ ಕೇಳಿದರೆ ಆ ಬೇಸರವೆಲ್ಲಾ ಮರೆಯಾಗುತ್ತದೆ. ಹೀಗಾಗಿಯೇ ಸರಿಗಮಪ‌ ಕಾರ್ಯಕ್ರಮ ಸಿಕ್ಕಾಪಟ್ಟೆ ಹಿಟ್ ಆಗುತ್ತದೆ. ಸದ್ಯ ನಡೆಯುತ್ತಿರುವ ಸರಿಗಮಪ 6 ರಿಂದ 60 ವರ್ಷದವರೆಗೂ ಅವಕಾಶ ನೀಡಲಾಗಿದೆ.

ಈ ಬಾರಿಯ ಸೀಸನ್‌ನಲ್ಲಿ ಪ್ರತಿಭೆಯ ಜೊತೆಗೆ ಮನರಂಜನೆ ನೀಡುವವರು ಇದ್ದಾರೆ. ಅವರೇ ರಾಜು, ಬಾಳು ಬೆಳಗುಂದಿ ಸೇರಿದಂತೆ ಇನ್ನು ಹಲವರು. ಪದ ಕಟ್ಟಿ ಹಾಡೋದ್ರಲ್ಲಿ ಬಾಳು ಬೆಳಗುಂದಿ ಎಕ್ಸ್ ಪರ್ಟ್. ಈಗ ಸರಿಗಮಪಗೆ ಬಂದಿರುವ ಸ್ಪೆಷಲ್ ಗೆಸ್ಟ್ ಬಗ್ಗೆಯೂ ಪದ ಕಟ್ಟಿ ಹಾಡಿದ್ದಾರೆ. ಆ ಹಾಡಿಗೆ ಎಲ್ಲೆಊ ಶಿಳ್ಳೆ ಚಪ್ಪಾಳೆ ಹೊಡೆದಿದ್ದಾರೆ.

Singer Balu belagundi praises Ramesh aravind with song in Saregamapa

ರಮೇಶ್ ಅರವಿಂದ್ ಎಂಟ್ರಿ

ಈ ವಾರದ ಶೋ ಸರಿಗಮಪ ವಿತ್ ರಮೇಶ್ ಆಗಿದೆ. ವಿಶೇಷ ಅತಿಥಿಯಾಗಿ ರಮೇಶ್ ಅರವಿಂದ್ ಅವರು ಬಂದಿದ್ದಾರೆ. ಈ ವೇದಿಕೆಯಲ್ಲಿ ರಮೇಶ್ ಅರವಿಂದ್ ಅವರು ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಫ್ಯಾಮಿಲಿ, ಮಗಳು, ಹೆಂಡತಿ ಎಲ್ಲಾ ವಿಚಾರಗಳನ್ನು ಮಾತಾಡಿದ್ದಾರೆ. ಅದರಲ್ಲೂ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪದಕಟ್ಟಿದ ಬಾಳು ಬೆಳಗುಂದಿ

ಇನ್ನು ಇಲ್ಲಿ ಬಹಳ ಗಮನ ಸೆಳೆದಿದ್ದು ಬಾಳು ಬೆಳಗುಂದಿ ಅವರ ಪದ. ರಮೇಶ್ ಅರವಿಂದ್ ಅವರ ಬಗ್ಗೆ ಪದಗಳಲ್ಲಿಯೇ ಹೊಗಳಿದ್ದಾರೆ. ಕಾಲವನ್ನು ತಡೆಯೋರು ಯಾರೂ ಇಲ್ಲ ಎಂಬ ಚರಣಕ್ಕೆ ಪದಗಳನ್ನ ಜೋಡಿಸಿದ್ದಾರೆ. 'ಶತ್ರುಗಳನ್ನೇ ಕಾಣದ ವ್ಯಕ್ತಿ. ಸಾಧಕರಿಗೆ ನಿಮ್ಮ ಮಾತೇ ಶಕ್ತಿ. ನಾಡೆಲ್ಲಾ ನಿಮ್ಮ ಕೀರ್ತಿಯೂ, ನೀವಂದ್ರೆ ನಮಗೆ ಸ್ಪೂರ್ತಿಯೂ. ಪಂಚಭಾಷೆಗಳ ಆಕ್ಟರ್ ನೀವೇ. ಸಿನಿಮಾದಲ್ಲಿ ನೀವೂ ತ್ಯಾಗರಾಜ. ಜೀವನದಲ್ಲಿ ನೀವೂ ಪ್ರೇಮರಾಜ. ಎಲ್ಲರಿಗೂ ಒಳ್ಳೆ ಸ್ನೇಹಿತ. ಮಾತಾಡೋ ಮಾತು ಅದ್ಭುತ, ಮಹಾನಟಿಯ ಮಾಸ್ಟರ್ ನೀವೆ' ಎಂದು ಹಾಡಿದ್ದಾರೆ. ಬಾಳಿ ಬೆಳಗುಂದಿ ಹಾಡನ್ನ ರಮೇಶ್ ಅರವಿಂದ್ ಕೂಡ ಎಂಜಾಯ್ ಮಾಡಿದ್ದಾರೆ.

ಹೇಮಾ - ರಮೇಶ್ ಸಮಾಗಮ

ಇನ್ನು ಇದೇ ವೇದಿಕೆಯಲ್ಲಿ 'ಅಮೆರಿಕಾ ಅಮೆರಿಕಾ' ಜೋಡಿ ಕಾಣಿಸಿಕೊಂಡಿದೆ. ಆ ಜೋಡಿ, ಆ ಸಿನಿಮಾ ಎಂದರೆ ಈಗಲೂ ಜನರಿಗೆ ಸಿಕ್ಕಾಪಟ್ಟೆ ಖುಷಿ. ಹೀಗಾಗಿಯೇ ಸರಿಗಮಪ ವೇದಿಕೆ ಮತ್ತಷ್ಟು ರಂಗೇರಿತ್ತು, ಹೆಚ್ಚಿನ ಖುಷಿ ನೀಡಿತ್ತು. ರಮೇಶ್ - ಹೇಮಾರನ್ನ ಕಂಡು ಎಲ್ಲರೂ ಖುಷಿ ಪಟ್ಟರು.

ನೂರು ಜನ್ಮಕೂ ರಿಕ್ರಿಯೇಟ್

ಅಷ್ಟೇ ಅಲ್ಲ ಸರಿಗಮಪ ವೇದಿಕೆಯಲ್ಲಿ 'ನೂರು ಜನ್ಮಕೂ' ಹಾಡನ್ನ ರಿಕ್ರಿಯೇಷನ್ ಮಾಡಲಾಯ್ತು. ರಾಜೇಶ್ ಹಾಡು ಹಾಡಿದರೆ ರಮೇಶ್ ಅರವಿಂದ್ ಹಾಗೂ ಹೇಮಾ ಹಳೆ ನೆನಪುಗಳಿಗೆ ಮರಳಿದರು. ಸೇಮ್ ಟು ಸೇಮ್ ಅಂದು ಹೇಮಾ ಎಷ್ಟು ಚೈಲ್ಡಿಶ್ ಆಗಿ ಹಾಡುದ್ರೋ ಅಷ್ಟೇ ಕ್ಯೂಟ್ ಆಗಿ ಕಾಣಿಸಿಕೊಂಡರು. ಇನ್ನು ಯಾವತ್ತಿಗೂ ಮಾಸದ ಅಂದವನ್ನು ಕಾಪಾಡಿಕೊಂಡಿರುವ ರಮೇಶ್ ಅರವಿಂದ್ ಅವರು ವೇದಿಕೆ ಮೇಲೆ ಬಂದರು. ಹೇಮಾ ಹಾಗೂ ರಮೇಶ್ ಅವರನ್ನ ನೋಡುತ್ತಿದ್ದರೆ ಎಲ್ಲರಿಗೂ ಖುಷಿ, ಆನಂದ. ಮತ್ತೊಮ್ಮೆ ಅಮೆರಿಕಾ ಅಮೆರಿಕಾ ಸಿನಿಮಾ ನೋಡಿದಂತೆಯೇ ಆಯ್ತು.

More from Filmibeat

English summary
Ramesh aravind, Hema bring back 90s magic with janmaku song recreation on Saregamapa;
Read more about: ramesh aravind kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X