For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ 5: 'ರಾಬರ್ಟ್' ಗಾಯಕಿಗೆ ಆಫರ್, ಕಂಟಕ ಆಗುತ್ತಾ ದೂರು?

  |

  ಕೊರೊನಾ ವೈರಸ್ ಮೂರನೇ ಅಲೆಯ ಭೀತಿ ಒಂದು ಕಡೆಯಾದರೆ, ಬಿಗ್ ಬಾಸ್ ಜ್ವರ ಮತ್ತೊಂದು ಕಡೆ. ಪ್ರಸ್ತುತ ಎಲ್ಲಾ ಭಾಷೆಗಳಲ್ಲಿಯೂ ಬಿಗ್ ಬಾಸ್ ಮಂತ್ರ ಜಪಿಸಲಾಗುತ್ತಿದೆ. ಕನ್ನಡದಲ್ಲಿ ಬಿಗ್ ಬಾಸ್ 8ನೇ ಆವೃತ್ತಿ ಫಿನಾಲೆ ಹಂತದಲ್ಲಿದೆ. ಹಿಂದಿಯಲ್ಲಿ ಈ ವಾರದಿಂದ ಶುರುವಾಗುತ್ತಿದೆ. ಮಲಯಾಳಂನಲ್ಲಿ ಬಿಗ್ ಬಾಸ್ 3ನೇ ಆವೃತ್ತಿಯ ವಿನ್ನರ್ ಯಾರೆಂದು ಇತ್ತೀಚಿಗಷ್ಟೆ ಘೋಷಣೆ ಮಾಡಲಾಗಿತ್ತು.

  ತೆಲುಗು ಹಾಗೂ ತಮಿಳಿನಲ್ಲಿ ಬಿಗ್ ಬಾಸ್ ಹೊಸ ಆವೃತ್ತಿಗಳಿಗೆ ಸಿದ್ಧತೆ ನಡೆಯುತ್ತಿದೆ. ತೆಲುಗು ಬಿಗ್ ಬಾಸ್ 5ನೇ ಆವೃತ್ತಿಗೆ ಈಗಾಗಲೇ ಸ್ಪರ್ಧಿಗಳ ಆಯ್ಕೆ ಅಂತಿಮವಾಗಿದ್ದು, ಹದಿನೈದು ಜನರ ಪಟ್ಟಿ ರೆಡಿಯಿದೆ. ಸೆಲೆಬ್ರಿಟಿಗಳು ಮಾತ್ರ ಪಾಲ್ಗೊಳ್ಳುತ್ತಿರುವ ಈ ಸೀಸನ್‌ನಲ್ಲಿ ಕಿರುತೆರೆ ನಟಿ, ಟಿವಿ ನಿರೂಪಕರು, ಮಾಡೆಲ್ ಹಾಗು ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಅವಕಾಶ ಪಡೆದುಕೊಂಡಿದ್ದಾರೆ.

  'ತೆಲುಗು ಬಿಗ್ ಬಾಸ್-5' ಸಂಭಾವ್ಯ ಪಟ್ಟಿ ಔಟ್: ಲಿಸ್ಟ್ ನಲ್ಲಿ ಇದ್ದಾರೆ ಕನ್ನಡದ ನಟಿ'ತೆಲುಗು ಬಿಗ್ ಬಾಸ್-5' ಸಂಭಾವ್ಯ ಪಟ್ಟಿ ಔಟ್: ಲಿಸ್ಟ್ ನಲ್ಲಿ ಇದ್ದಾರೆ ಕನ್ನಡದ ನಟಿ

  ಬಿಗ್ ಬಾಸ್ ಮನೆಗೆ ಹೋಗುವ ಅಂತಿಮ ಪಟ್ಟಿಯಲ್ಲಿ 'ರಾಬರ್ಟ್' ಚಿತ್ರದ ಗಾಯಕಿ ಮಂಗ್ಲಿ ಹೆಸರು ಸಹ ಇದೆ. ಆದರೆ ಮಂಗ್ಲಿ ದೊಡ್ಮನೆಗೆ ಎಂಟ್ರಿ ಕೊಡೋದು ಬಹುತೇಕ ಅನುಮಾನ ಎನ್ನಲಾಗಿದೆ.

  ಗಾಯಕಿ ಮಂಗ್ಲಿ ವಿರುದ್ಧ ದೂರು ನೀಡಿದ ಬಿಜೆಪಿ ಕಾರ್ಪೊರೇಟರ್ಗಾಯಕಿ ಮಂಗ್ಲಿ ವಿರುದ್ಧ ದೂರು ನೀಡಿದ ಬಿಜೆಪಿ ಕಾರ್ಪೊರೇಟರ್

  ಸೆಪ್ಟೆಂಬರ್ ತಿಂಗಳಿನಿಂದ ತೆಲುಗಿನಲ್ಲಿ ಬಿಗ್ ಬಾಸ್ ಆರಂಭವಾಗಲಿದೆ. ಸ್ಟೈಲಿಶ್ ಕಿಂಗ್ ನಾಗಾರ್ಜುನ ಸಾರಥ್ಯದಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಈ ಹಿನ್ನೆಲೆ ದೊಡ್ಮನೆ ಸ್ಪರ್ಧಿಗಳು ಸಂಭಾವ್ಯ ಪಟ್ಟಿ ಹರಿದಾಡಿದೆ. ಈ ಪಟ್ಟಿಯಲ್ಲಿ ಗಾಯಕಿ ಮಂಗ್ಲಿ ಹೆಸರು ಇದ್ದರೂ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮಂಗ್ಲಿ ಈ ಶೋಗೆ ಹೋಗಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮುಂದೆ ಓದಿ...

  ಮಂಗ್ಲಿಗೆ ಕಾಡುತ್ತಿದೆ ಪೊಲೀಸರ ಭಯ?

  ಮಂಗ್ಲಿಗೆ ಕಾಡುತ್ತಿದೆ ಪೊಲೀಸರ ಭಯ?

  ಗಾಯಕಿ ಮಂಗ್ಲಿ ವಿರುದ್ಧ ಬಿಜೆಪಿ ಕಾರ್ಪೋರೇಟರ್ ಒಬ್ಬರು ದೂರು ದಾಖಲಿಸಿದ್ದಾರೆ. ತನ್ನ ಹಾಡಿನ ಮೂಲಕ ಹಿಂದೂ ಧರ್ಮಕ್ಕೆ ಧಕ್ಕೆ ತರಲಾಗಿದೆ ಮತ್ತು ಗ್ರಾಮದೇವತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಿದ್ದರು. ಈ ದೂರು ದಾಖಲಾಗಿರುವ ಹಿನ್ನೆಲೆ ಮಂಗ್ಲಿ ಬಿಗ್ ಬಾಸ್ ಆಟದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

  ಮಂಗ್ಲಿ ವಿರುದ್ಧ ಬಿಜೆಪಿ ಕಾರ್ಪೋರೇಟರ್ ದೂರು

  ಮಂಗ್ಲಿ ವಿರುದ್ಧ ಬಿಜೆಪಿ ಕಾರ್ಪೋರೇಟರ್ ದೂರು

  ಬೊನಾಲ ಹಬ್ಬದ ವಿಶೇಷವಾಗಿ 'ಬೋನಂ ಪಾಟ' ಎಂಬ ಹಾಡನ್ನು ಮಂಗ್ಲಿ ಹಾಡಿದ್ದರು. ಈ ಹಾಡು ವಿವಾದಕ್ಕೆ ಗುರಿಯಾಗಿತ್ತು. ಈ ಹಾಡಿನಲ್ಲಿ ಗ್ರಾಮ ದೇವತೆ ಮೈಸಮ್ಮನಿಗೆ ಅಪಮಾನ ಮಾಡಲಾಗಿದೆ ಎಂದು ಕೆಲವರು ಟೀಕಿಸಿದರು. 'ಮರದ ಕೆಳಗೆ ಸಂಬಂಧಿಗಳ ಹಾಗೆ ಕುಳಿತಿದ್ದೀಯ', 'ನಾವು ಹರಕೆಗಳನ್ನು ಮಾಡಿ ಪೂಜಿಸಿದರೂ ನೀನು ವರವನ್ನು ಕೊಡುತ್ತಿಲ್ಲ', 'ಬೊಂಬೆಯಂತೆ ಅಲುಗದೇ ಇದ್ದೀಯ', 'ನಿನ್ನ ಕರ್ತವ್ಯ ಮರೆತಿದ್ದೀಯ' ಎಂಬಿತ್ಯಾದಿ ಸಾಲುಗಳು ಹಾಡಿನಲ್ಲಿವೆ. ಇದು ಕೆಲವರ ಆಕ್ಷೇಪಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ರಚ್ಚಕೊಂಡದ ಮಲ್ಕಜ್‌ಗಿರಿ ಬಿಜೆಪಿ ಕಾರ್ಪೊರೇಟರ್, ರಚ್ಚಕೊಂಡ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಗಾಯಕಿ ಮಂಗ್ಲಿ ವಿರುದ್ಧ ದೂರು ನೀಡಿದ್ದರು.

  'ರಾಬರ್ಟ್' ನಂತರ ಮತ್ತೊಂದು ದೊಡ್ಡ ಚಿತ್ರದಲ್ಲಿ ಮಂಗ್ಲಿ ಗಾನ'ರಾಬರ್ಟ್' ನಂತರ ಮತ್ತೊಂದು ದೊಡ್ಡ ಚಿತ್ರದಲ್ಲಿ ಮಂಗ್ಲಿ ಗಾನ

  ಬಿಗ್ ಬಾಸ್ ಸಂಭಾವ್ಯ ಪಟ್ಟಿಯಲ್ಲಿ ಯಾರೆಲ್ಲಾ ಹೆಸರಿದೆ

  ಬಿಗ್ ಬಾಸ್ ಸಂಭಾವ್ಯ ಪಟ್ಟಿಯಲ್ಲಿ ಯಾರೆಲ್ಲಾ ಹೆಸರಿದೆ

  ತೆಲುಗು ಬಿಗ್ ಬಾಸ್‌ನಲ್ಲಿ ಮಂಗ್ಲಿ ಹೊರತುಪಡಿಸಿ ಉಳಿದ ಸೆಲೆಬ್ರಿಟಿಗಳು ಹೆಸರು ಇಂತಿವೆ. ನಟಿ ನವ್ಯಾ ಸ್ವಾಮಿ, ಇಶಾ ಚಾವ್ಲಾ, ವರ್ಷಿಣಿ ಸೌಂದೇರಾಜನ್, ನಿರೂಪಕ ಶಿವ, ಕಾಮಿಡಿಯನ್ ಲೋಬೋ, ನಿರೂಪಕ ರವಿ, ನಟಿ-ನಿರೂಪಕಿ ಸುರೇಖಾ ವಾಣಿ, ಆರ್‌ಜೆ ಕಾಜಲ್, ಸಿರಿ ಹನುಮಂತ್, ನಟ ಸಿದ್ಧಾರ್ಥ್ ವರ್ಮಾ, ನಿರೂಪಕಿ ಪ್ರತ್ಯೂಷ, ನೃತ್ಯ ನಿರ್ದೇಶಕ ರಘು, ಟಿಕ್‌ಟಾಕ್ ಸ್ಟಾರ್ ಒಬ್ಬರ ಹೆಸರು ಸಹ ಇದೆ.

  'ಏಕ್ ಲವ್ ಯಾ' ಚಿತ್ರದಲ್ಲಿ ಮಂಗ್ಲಿ ಗಾನ

  'ಏಕ್ ಲವ್ ಯಾ' ಚಿತ್ರದಲ್ಲಿ ಮಂಗ್ಲಿ ಗಾನ

  ನಟ ದರ್ಶನ್ ಅಭಿನಯಿಸಿದ್ದ 'ರಾಬರ್ಟ್' ಚಿತ್ರದ ತೆಲುಗು ವರ್ಷನ್‌ನಲ್ಲಿ ಮಂಗ್ಲಿ ಹಾಡೊಂದನ್ನು ಹಾಡಿದ್ದರು. ಈ ಹಾಡು ಬಹಳ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಇದರ ಪರಿಣಾಮ ಕನ್ನಡಿಗರಿಗೂ ಮಂಗ್ಲಿ ಹತ್ತಿರವಾಗಿದ್ದರು. ಇದೀಗ, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ 'ಏಕ್ ಲವ್ ಯಾ' ಚಿತ್ರದಲ್ಲಿ ಮಂಗ್ಲಿ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ರಾಣಾ ನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಬೆಂಗಳೂರಿಗೆ ಬಂದಿದ್ದ ಮಂಗ್ಲಿ ಸಾಂಗ್ ರೆಕಾರ್ಡಿಂಗ್ ಮುಗಿಸಿ ಹೋಗಿದ್ದಾರೆ.

  English summary
  Telugu singer Mangli is doubtful to enter Bigg Boss Telugu Season 5 due to Police complaint.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X