ಖ್ಯಾತ ಗಾಯಕಿಗೆ ವೇದಿಕೆ ಮೇಲೆ ಬಲವಂತವಾಗಿ ಕಿಸ್ ಕೊಟ್ಟ ಸ್ಪರ್ಧಿ
Recommended Video
ಕಿರುತೆರೆ ಲೋಕದಲ್ಲಿ ರಿಯಾಲಿಟಿ ಶೋಗಳ ಅಬ್ಬರ ಜೋರಾಗಿದೆ. ಸಿಂಗಿಂಗ್, ಡ್ಯಾನ್ಸಿಂಗ್, ಬಿಗ್ ಬಾಸ್, ಕಾಮಿಡಿ ಹೀಗೆ ಸಾಕಷ್ಟು ರಿಯಾಲಿಟಿ ಶೋಗಳು ಕಿರುತೆರೆ ಲೋಕದಲ್ಲಿ ಸದ್ದುಮಾಡುತ್ತಿವೆ. ಹಿಂದಿಯಲ್ಲಿ ಖಾಸಗಿ ವಾಹಿನಿಯಲ್ಲಿ 'ಇಂಡಿಯನ್ ಐಡಲ್' ಸಿಂಗಿಂಗ್ ರಿಯಾಲಿಟಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ.
ಇಂಡಿಯನ್ ಐಡಲ್ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್ ಜಡ್ಜ್ ಆಗಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಹಾಡಿದ ಸ್ಪರ್ಧಿಯೊಬ್ಬರನ್ನು ಅಭಿನಂದಿಸಲು ವೇದಿಕೆ ಮೇಲೆ ಬಂದ ನೇಹಾಗೆ ಶಾಕಿಂಗ್ ಘಟನೆ ಎದುರಾಗಿದೆ.
ಸ್ಪರ್ಧಿಗೆ ಉಡುಗೊರೆ ನೀಡಿದ ನೇಹಾ ಆತನನ್ನು ಹಗ್ ಮಾಡಿ ಅಭಿನಂದಿಸಿದ್ದಾರೆ. ಇದೆ ಸಂದರ್ಭವನ್ನು ಬಳಸಿಕೊಂಡು ಆತ ನೇಹಾ ಕಕ್ಕರ್ ಕೆನ್ನೆಗೆ ಮುತ್ತಿಕ್ಕಿದ್ದಾನೆ. ನೇಹಾ ತಪ್ಪಿಸಿಕೊಳ್ಳಲು ನೋಡಿದರು ಗಟ್ಟಿಯಾಗಿ ಹಿಡಿದುಕೊಂಡು ಬಲವಂತವಾಗಿ ಕಿಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಕಾರ್ಯಕ್ರಮದಲ್ಲಿ ನೇಹಾ ಕಕ್ಕರ್ ಕಣ್ಣೀರು ಹಾಕಿರುವ ವಿಡಿಯೋ ಕೂಡ ವೈರಲ್ ಆಗಿದೆ. ಈ ಕಾರ್ಯಕ್ರಮದಲ್ಲಿ ಉತ್ತಮವಾಗಿ ಹಾಡಿದ ಒಬ್ಬ ಸ್ಪರ್ಧಿಯ ಹಾಡನ್ನು ಕೇಳಿ ತೀರ್ಪುಗಾರರು ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


Click it and Unblock the Notifications