"ನಾವು ಓಡಿ ಹೋಗಿ ಮದ್ವೆ ಆಗ್ಲಿಲ್ಲ, ಕ್ಯಾಬ್‌ನಲ್ಲೇ ಹೋದ್ವಿ, ಅವತ್ತು ಏನೆಲ್ಲಾ ಆಯ್ತು ಅಂದ್ರೆ"
ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಮದುವೆ ವಿಚಾರದ ಇತ್ತೀಚೆಗೆ ಚರ್ಚೆ ಹುಟ್ಟುಹಾಕಿತ್ತು. ಜೀ ಕನ್ನಡ ಸರಿಗಮಪ ಶೋ ಸ್ಪರ್ಧಿಯಾಗಿದ್ದ ಪೃಥ್ವಿಭಟ್ ಅದೇ ವಾಹಿನಿಯಲ್ಲಿ ಕೆಲಸ ಮಾಡುವ ಅಭಿಷೇಕ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಆದರೆ ಈ ಮದುವೆ ಪೃಥ್ವಿ ಭಟ್ ಪೋಷಕರಿಗೆ ಇಷ್ಟವಿಲ್ಲ. ಅವರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗನ ಕೈಹಿಡಿದ್ದಿದ್ದಾರೆ.
ವಶೀಕರಣ ಮಾಡಿ ನನ್ನ ಮಗಳ ಮದುವೆ ಮಾಡಿಸಿದ್ದಾರೆ ಎಂದು ಪೃಥ್ವಿಭಟ್ ಅವರ ತಂದೆ ಶಿವಪ್ರಸಾದ್ ಆರೋಪಿಸಿದ್ದರು. ಮಾರ್ಚ್ 27ರಂದು ಇಬ್ಬರ ಮದುವೆ ನಡೆದಿತ್ತು. ಅಭಿ ಪೋಷಕರು ಮದುವೆಗೆ ಮದುವೆಗೆ ಒಪ್ಪಿದ್ದರು. ಹಾಗಾಗಿ ಅವರ ಮನೆಯಲ್ಲೇ ದಂಪತಿ ಇದ್ದಾರೆ. ಸರಳವಾಗಿ ಮದುವೆಯಾಗಿದ್ದ ಜೋಡಿ ಬಳಿಕ ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದರು.

ಜೀ ಕನ್ನೆ ವಾಹಿನಿಯ ತಂತ್ರಜ್ಞರು, ಗಾಯಕ ವಿಜಯ್ ಪ್ರಕಾಶ್, ಆಂಕರ್ ಅನುಶ್ರೀ, ನಟಿ ಮೋಕ್ಷಿತಾ ಪೈ, ಗಾಯಕ ಹನುಮಂತ ಲಮಾಣಿ, ನಟ ಪ್ರಥಮ್ ಸೇರಿ ಹಲವರು ಈ ಆರತಕ್ಷತೆ ಕಾರ್ಯಕ್ರಮಕ್ಕೆ ಹಾಜರಾಗಿ ನವಜೋಡಿಗೆ ಶುಭ ಹಾರೈಸಿದ್ದರು. ಇವತ್ತಿಗೂ ಈ ಮದುವೆಯನ್ನು ಪೃಥ್ವಿಭಟ್ ಪೋಷಕರು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಜೋಡಿ ಹನಿಮೂನ್‌ಗಾಗಿ ಮಲೇಷಿಯಾಗೆ ಹೋಗಿ ಬಂದಿದ್ದಾರೆ. ಕೀರ್ತಿ ENT ಕ್ಲಿನಿಕ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ದಂಪತಿ ಭಾಗಿ ಆಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ತಮ್ಮಿಬ್ಬರು ಪ್ರೀತಿ ಶುರುವಾಗಿದ್ದು ಹೇಗೆ? ಮದುವೆ ದಿನ ಏನೆಲ್ಲಾ ನಡೀತು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಂಡಿತ ಪೋಷಕರ ವಿರೋಧ ಕಟ್ಟಿಕೊಂಡು ಮದುವೆ ಆಗುವ ಆಲೋಚನೆ ಇರಲಿಲ್ಲ. ಆದರೆ ಆ ಸಮಯ, ಸಂದರ್ಭ ಅಂತಹ ನಿರ್ಧಾರಕ್ಕೆ ಬರುವಂತೆ ಮಾಡಿಬಿಡ್ತು ಎಂದು ಇಬ್ಬರೂ ಹೇಳಿದ್ದಾರೆ.
ತಮ್ಮ ಆಪ್ತರ ಮೂಲಕ ನಾನು ಪೃಥ್ವಿಭಟ್ ಮನೆಗೆ ಹೋಗಿ ಮದುವೆ ಪ್ರಸ್ತಾಪ ಮಾಡಿಸಿದ್ದೆ ಎಂದು ಅಭಿ ಹೇಳಿದ್ದಾರೆ. ನಮ್ಮ ಮನೆಯಲ್ಲಿ ಅಪ್ಪ- ಅಮ್ಮ ಒಪ್ಪಲಿಲ್ಲ. ಆದರೆ ನನಗೆ ಅಭಿ ಸರ್, ಅಂದ್ರೆ ಬಹಳ ಇಷ್ಟ. ನನಗೆ ಸಂಗೀತ ಅಂದ್ರೆ ಬಹಳ ಇಷ್ಟ. ಅದಕ್ಕೆ ಪ್ರೋತ್ಸಾಹ ಕೊಡುವಂಹವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುವವರು ಬೇಕು. ಅದಕ್ಕೆ ಅಭಿ ಅವ್ರೇ ಸೂಕ್ತ ಎಂದು ಅವರನ್ನೇ ಮದುವೆ ಆಗಬೇಕು ಎಂದು ನಿರ್ಧರಿಸಿ ಎಂದು ಪೃಥ್ವಿ ಹೇಳಿದ್ದಾರೆ.
ಮದುವೆ ದಿನ ಆಗಿದ್ದೇನು?
ವಶೀಕರಣ ಮಾಡಿಸಿದ್ದರು ಎನ್ನುವುದೆಲ್ಲಾ ಸುಳ್ಳು. ಎಲ್ಲರೂ ನಾಬಿಬ್ಬರೂ ಓಡಿ ಹೋಗಿ ಮದುವೆ ಆದ್ವಿ ಎನ್ನುತ್ತಾರೆ. ನಾವು ಓಡಿ ಹೋಗಲಿಲ್ಲ, ಕ್ಯಾಬ್ ಅಲ್ಲೇ ಹೋದ್ವಿ ಎಂದು ತಮಾಷೆಯಾಗಿ ಅಭಿ ಹೇಳಿದ್ದಾರೆ. ಹೀಗೆ ಇಬ್ಬರ ಮನೆಯಲ್ಲಿ ಮದುವೆ ಬಗ್ಗೆ ಚರ್ಚೆ ನಡೀತಿತ್ತು. ಕೊನೆಗೊಂದು ದಿನ ಮದುವೆ ಆಗುವುದು ಎಂದು ನಿರ್ಧರಿಸಿದೆವು. ಪೃಥ್ವಿ ಅವರನ್ನು ಕೇಳಿದೆ. ಆಕೆ ಕೂಡ ಒಪ್ಪಿಕೊಂಡಿದ್ದರು.
"ಮದುವೆ ಆಗೋಣ ಎಂದಾಗ ಪೃಥ್ವಿ ಭಟ್ ಒಪ್ಪಿದ್ದರು. ಬಳಿಕ ಮದುವೆಗೆ ಸಿದ್ಧತೆ ನಡೀತು. ನಮ್ಮ ಆಪ್ತರು ಬೆಂಬಲಕ್ಕೆ ನಿಂತಿದ್ದರು. ಶಾಪಿಂಗ್ ಮಾಡಿ ಮಾರ್ಚ್ 27ರಂದು ಮದುವೆಗೆ ಡೇಟ್ ಫಿಕ್ಸ್ ಮಾಡಿದ್ದೆವು" ಎಂದು ಅಭಿ ಹೇಳಿದ್ದಾರೆ. "ಮರುದಿ ನನ್ನನ್ನು ಊರಿಗೆ ಕರೆದುಕೊಂಡು ಹೋಗಲು ಪೋಷಕರು ಮುಂದಾಗಿದ್ದರು. ಕರೆದುಕೊಂಡು ಹೋಗಿ ಬೇರೆಯವರ ಜೊತೆ ಮದುವೆ ಮಾಡಿಬಿಡ್ತಾರಾ? ಎನ್ನುವ ಭಯ ಇತ್ತು. ಮದುವೆ ಆಗುವುದು ಸೇಫ್ ಎನಿಸಿತು. ಹಾಗಾಗಿ ಒಪ್ಪಿಕೊಂಡೆ" ಎಂದು ಪೃಥ್ವಿ ಹೇಳಿದ್ದಾರೆ.
ಸರಳವಾಗಿ ಮದುವೆ ನಡೀತು. ಬಳಿಕ ನಂದಿನಿ ಲೇಔಟ್ ಪೊಲೀಸ್ ಸ್ಟೇಷನ್‌ಗೆ ಹೋಗಿ ಹೇಳಿಕೆ ಕೊಟ್ಟಿದ್ದೆವು. ನಮ್ಮ ಪೋಷಕರು ಕೂಡ ಮದುವೆ ಬಂದಿರಲಿಲ್ಲ. ಬಳಿಕ ಪೊಲೀಸರ ಮೂಲಕವೇ ಪೃಥ್ವಿಭಟ್ ಅವರ ಪೋಷಕರಿಗೆ ಫೋನ್ ಮಾಡಿಸಿ ವಿಷಯ ತಿಳಿಸಿದ್ದೆವು. ಅವ್ರು ಕೂಡ ಚೆನ್ನಾಗಿರಲಿ ಎಂದು ಹಾರೈಸಿದ್ದರು ಎಂದು ಅಭಿ ತಿಳಿಸಿದ್ದಾರೆ. ಮದುವೆಯಾದ ದಿನದಿಂದಲೂ ನಾವು ಅಭಿ ಅವರ ಮನೆಯಲ್ಲೇ ಇದ್ದೀವಿ, ಯಾವುದೇ ಸಮಸ್ಯೆ ಇಲ್ಲ ಎಂದು ಪೃಥ್ವಿ ಹೇಳಿದ್ದಾರೆ.
ಲವ್ ಸ್ಟೋರಿ
ಸರಿಗಮಪ ಸೀಸನ್ 15ರ ಸಮಯದಲ್ಲೇ ಇಬ್ಬರ ಪರಿಚಯವಾಗಿತ್ತು. "ಮೊದಲಿಗೆ ಬಹಳ ಚಿಕ್ಕ ಹುಡುಗಿ ತರ ಬಂದು ಪೃಥ್ವಿ ಮಾತನಾಡಿಸುತ್ತಿದ್ದರು. ಶೋಗೆ ಸಿದ್ಧವಾದಾಗ ನನ್ನ ಬಟ್ಟೆ ಹೇಗಿದೆ? ಚೆನ್ನಾಗಿ ಹಾಡು ಹಾಡಿನ್ನಾ? ಅಂತ ಹೇಳುತ್ತಿದ್ದರು. ನಾನು ಈ ಹುಡುಗಿ ಚೈಲ್ಡ್ ತರ ಆಡುತ್ತೆ ಎಂದುಕೊಂಡಿದ್ದೆ. ಕೊನೆಗೆ ಅದೇ ಹುಡುಗಿ ನನ್ನ ಬಾಳಿಗೆ ಬರ್ತಾಳೆ ಅಂದುಕೊಂಡಿರಲಿಲ್ಲ" ಎಂದು ಅಭಿ ನಕ್ಕಿದ್ದಾರೆ. ವರ್ಷದ ಹಿಂದೆಯಷ್ಟೆ ಪ್ರೀತಿ ಎನ್ನುವುದೆಲ್ಲಾ ಶುರುವಾಯಿತು" ಎಂದು ಪೃಥ್ವಿ ತಿಳಿಸಿದ್ದಾರೆ.
"5 ವರ್ಷದಿಂದ ಪೃಥ್ವಿ ಅಂದ್ರೆ ನನಗೆ ಇಷ್ಟ ಇತ್ತು. ಆದರೆ ಆಗ ಆಕೆ ಕಾಲೇಜಿಗೆ ಹೋಗುತ್ತಿದ್ದಳು. ಕಾಲೇಜು ಮುಗೀಲಿ ಎಂದುಕೊಂಡೆ. ಬಳಿಕ ನಾನು ಈ ವಿಚಾರ ಹೇಳಿದೆ. ಆಕೆ ಕೂಡ ಸರಿ ಎಂದಳು. ಆದರೆ ಪೋಷಕರ ಒಪ್ಪಿಗೆ ಪಡೆದು ಮದುವೆ, ಅವರು ಒಪ್ಪಬೇಕು ಎಂದು ಹೇಳಿದ್ದರು" ಎಂದು ಅಭಿ ವಿವರಿಸಿದ್ದಾರೆ.


Click it and Unblock the Notifications











