'ಸರಿಗಮಪ'ದಿಂದ ದೂರ ಇದ್ದಿದ್ದು ಯಾಕೆ?, ರಾಜೇಶ್ ಕೃಷ್ಣನ್ ನೀಡಿದ ಸ್ಪಷ್ಟನೆ

Recommended Video

ಯಾಕೆ ಕಳೆದ ಸೀಸನ್‌ನಲ್ಲಿ ರಾಜೇಶ್ ಇರಲಿಲ್ಲ..! | Filmibeat Kannada

ಜೀ ಕನ್ನಡ ವಾಹಿನಿ ಮತ್ತೆ ತಮ್ಮ ಮಾಸ್ಟರ್ ಪೀಸ್ ಕಾರ್ಯಕ್ರಮದ ಮೂಲಕ ಬಂದಿದೆ. ಸರಿಗಮಪ ಕಾರ್ಯಕ್ರಮ ಮತ್ತೆ ಪ್ರಸಾರ ಆಗುತ್ತಿದ್ದು, 'ಸರಿಗಮಪ ಸೀನಸ್ 15' ಇಂದಿನಿದಿಂದ ಶುರು ಆಗಲಿದೆ.

ಈ ಬಾರಿಯ ಕಾರ್ಯಕ್ರಮದ ವಿಶೇಷಗಳಲ್ಲಿ ಒಂದು ಗಾಯಕ ರಾಜೇಶ್ ಕೃಷ್ಣನ್. ಸರಿಗಮಪ ಕಾರ್ಯಕ್ರಮದ ಮೊದಲ ಆವೃತ್ತಿಯಿಂದ ಭಾಗಿಯಾಗಿದ್ದ ಅವರು ಕಳೆದ ಸೀಸನ್ ಬ್ರೇಕ್ ತೆಗೆದುಕೊಂಡಿದ್ದರು. ಸಣ್ಣ ಬ್ರೆಕ್ ಬಳಿಕ ಈಗ ಮತ್ತೆ ಅವರು ವಾಪಸ್ ಬಂದಿದ್ದಾರೆ.

ಇತ್ತೀಚಿಗಷ್ಟೆ, ಸರಿಗಮಪ ಕಾರ್ಯಕ್ರಮದ ಮೊದಲ ಸಂಚಿಕೆಯ ಚಿತ್ರೀಕರಣ ನಡೆದಿದ್ದು, ಅದರ ವಿಡಿಯೋವನ್ನು ಜೀ ಕನ್ನಡ ವಾಹಿನಿ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಸಂಚಿಕೆಯಲ್ಲಿ ರಾಜೇಶ್ ಕೃಷ್ಣನ್ ಕಳೆದ ಸೀಸನ್ ಗೆ ಬರದೆ ಇರುವ ಕಾರಣವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಸುಂಟರಗಾಳಿಯಂತೆ ಬಂದ ರಾಜೇಶ್ ಕೃಷ್ಣನ್

ಸುಂಟರಗಾಳಿಯಂತೆ ಬಂದ ರಾಜೇಶ್ ಕೃಷ್ಣನ್

ಗಾಯಕ ರಾಜೇಶ್ ಕೃಷ್ಣನ್ ಸರಿಗಮಪ ಕಾರ್ಯಕ್ರಮಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಸುಂಟರಗಾಳಿ ಹಾಡಿನ ಜೊತೆಗೆ ವೇದಿಕೆ ಏರಿದ್ದಾರೆ. ಪ್ರೀತಿಯಿಂದ ಅವರನ್ನು ಹಂಸಲೇಖ ಹಾಗೂ ಇಡೀ ತಂಡ ಸ್ವಾಗತ ಮಾಡಿದೆ.

ಕಾರಣ ಏನು?

ಕಾರಣ ಏನು?

ಕಳೆದ ಸೀಸನ್ ನಿಂದ ಬ್ರೇಕ್ ಪಡೆದ ಬಗ್ಗೆ ಮಾತನಾಡಿರುವ ರಾಜೇಶ್ ಕೃಷ್ಣನ್ ''ಒಂದು ಹೊಸ ಜರ್ನಿ ಶುರು ಮಾಡಿದ್ದೇನೆ. ತುಂಬ ವರ್ಷಗಳಿಂದ 24 ಗಂಟೆಯ ಮ್ಯಾಸಿಕ್ ವಾಹಿನಿ ಕನ್ನಡದಲ್ಲಿ ಮಾಡಬೇಕು ಅಂತ ಪ್ಲಾನ್ ಇತ್ತು. ಕಳೆದ ವರ್ಷ ರವಿ ಹಾಗೂ ರಾಜ ಎನ್ನುವ ಇಬ್ಬರು ಗೆಳೆಯರು ಸಿಕ್ಕಿರು. ಅವರದ್ದು ಒಂದು ಚಾನೆಲ್ ಇತ್ತು. ಅದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಕೆಲಸ ನಡೆಯುತ್ತಿದೆ.'' ಎಂದು ತಮ್ಮ ಮುಂದಿನ ಕನಸಿನ ಬಗ್ಗೆ ಮಾತನಾಡಿದ್ದಾರೆ.

ನನ್ನ ಹೃದಯದ ಬಡಿತ ಇಲ್ಲಿತ್ತು

ನನ್ನ ಹೃದಯದ ಬಡಿತ ಇಲ್ಲಿತ್ತು

''ನಾನು ನನ್ನ ಸ್ವತಃ ಮ್ಯೂಸಿಕ್ ವಾಹಿನಿಯ ಕೆಲಸಗಳು ಇದ್ದ ಕಾರಣ ಒಂದು ವರ್ಷ ಕಾರ್ಯಕ್ರಮದಿಂದ ದೂರ ಇದ್ದೇ. ಆದರೂ, ಯಾವಾಗಲೂ ನನ್ನ ಹೃದಯದ ಬಡಿತ ಈ ಕಾರ್ಯಕ್ರಮದಲ್ಲಿಯೇ ಇತ್ತು. ಇಲ್ಲಿ ಟ್ಯಾಲೆಂಟ್ ಗಳು ಬರುತ್ತಾನೆ ಇದ್ದಾರೆ. ಹೊಸ ಶೈಲಿ, ಹೊಸ ಸೌಂಡ್, ಹೊಸತನವನ್ನು ಈ ಸೀಸನ್ ನಲ್ಲಿ ನಾನು ಹುಡುಕುತ್ತಾ ಇದ್ದೇನೆ.'' ಎಂದಿದ್ದಾರೆ ರಾಜೇಶ್ ಕೃಷ್ಣನ್.

ಮೂರು ತೀರ್ಪುಗಾರರ ಜೊತೆಗೆ ಮಹಾ ಗುರುಗಳು

ಮೂರು ತೀರ್ಪುಗಾರರ ಜೊತೆಗೆ ಮಹಾ ಗುರುಗಳು

ಕಾರ್ಯಕ್ರಮದಲ್ಲಿ ಸದ್ಯ ಮೂರು ತೀರ್ಪುಗಾರರು ಇದ್ದಾರೆ. ವಿಜಯ ಪ್ರಕಾಶ್, ಅರ್ಜುನ್ ಜನ್ಯಾ ಹಾಗೂ ರಾಜೇಶ್ ಕೃಷ್ಣನ್ ಕಾರ್ಯಕ್ರಮದ ಸಾರಥ್ಯ ವಹಿಸಿದ್ದಾರೆ. ಈ ಬಾರಿಯೂ ಮಹಾಗುರುಗಳ ಸ್ಥಾನದಲ್ಲಿ ಹಂಸಲೇಖ ಅವರು ಇದ್ದಾರೆ.

'ಗೀತಾಂಜಲಿ..' ಹಾಡು ಹಾಡಿದ ರಾಜೇಶ್

'ಗೀತಾಂಜಲಿ..' ಹಾಡು ಹಾಡಿದ ರಾಜೇಶ್

ಶಂಕರ್ ನಾಗ್ ಅವರ 'ಗೀತಾಂಜಲಿ..' ಹಾಡನ್ನು ಹಾಡುವ ಮೂಲಕ ರಾಜೇಶ್ ಕೃಷ್ಣನ್ ಈ ಸೀಸನ್ ಶುರು ಮಾಡಿದರು. ಎಂದು ಮರೆಯದ ಕನ್ನಡ ಜನಪ್ರಿಯ ಗೀತೆ ಇದಾಗಿದ್ದು, ಚಿತ್ರದಲ್ಲಿ ಈ ಹಾಡಿಗೆ ಹಂಸಲೇಖ ಸಂಗೀತ ಹಾಗೂ ಎಸ್ ಪಿ ಬಿ ಧ್ವನಿ ಇದೆ.

ಇದೇ ಶನಿವಾರದಿಂದ ಪ್ರಾರಂಭ

ಇದೇ ಶನಿವಾರದಿಂದ ಸರಿಗಮಪ ಸೀಸನ್ 15 ಆರಂಭವಾಗುತ್ತಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಕಾರ್ಯಕ್ರಮ ಪ್ರಸಾರ ಆಗಲಿದೆ. ಈ ಬಾರಿಯೂ ಅನುಶ್ರೀ ನಿರೂಪಣೆ ಮಾಡಲಿದ್ದಾರೆ. ಸರಿಗಮಪ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.

More from Filmibeat

English summary
Singer Rajesh Krishnan comeback to Zee Kannada popular singing show sa ri ga ma pa. sa ri ga ma pa show 15 starts from 29th september.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X