ಸಿರಿ ಕನ್ನಡ ವಾಹಿನಿಯಲ್ಲಿ ನೂತನ ರಿಯಾಲಿಟಿ ಶೋ; ಇಲ್ಲಿ ಬಂಗಾರದ ಬೇಟೆಯಾಡಬಹುದು

By ಅನಿತಾ ಬನಾರಿ

ಇತೀಚೆಗೆ ಕಿರುತೆರೆಯಲ್ಲಿ ಧಾರಾವಾಹಿಗಳಷ್ಟೇ ಅಲ್ಲದೆ ರಿಯಾಲಿಟಿ ಶೋಗಳ ಹವಾ ಬಹಳ ಹೆಚ್ಚುತ್ತಿದೆ. ನಿತ್ಯ ನೂತನ ರಿಯಾಲಿಟಿ ಶೋಗಳನ್ನು ಜನರ ಮುಂದೆ ಪ್ರಸಾರ ಮಾಡಲು ಕನ್ನಡ ಕಿರುತೆರೆ ವಾಹಿನಿಗಳು ನಾ ಮುಂದು ತಾ ಮುಂದು ಎಂದು ಹೆಜ್ಜೆ ಇಡುತ್ತಿದೆ. ಇಂತಹ ರಿಯಾಲಿಟಿ ಶೋಗಳು ಬಹಳಷ್ಟು ಕ್ರಿಯಾಶೀಲತೆಯಿಂದ ಕೂಡಿರುವುದಲ್ಲದೆ ಸಾಮಾನ್ಯ ಜನರಿಗೆ ವೇದಿಕೆ ಮಾಡಿಕೊಡುವಲ್ಲಿ ಆ ಮೂಲಕ

ಅವರನ್ನು ಗುರುತಿಸುವಲ್ಲಿ ಯಶಸ್ವಿಯಾಗಿವೆ. ಸೆಲೆಬ್ರಿಟಿಗಳ ರಿಯಾಲಿಟಿ ಶೋ, ಮಕ್ಕಳ ಶೋ, ಪ್ರತಿಭಾ ಅನಾವರಣಕ್ಕೆ ಒಂದಷ್ಟು ರಿಯಾಲಿಟಿ ಶೋ ಬಿಗ್ ಬಾಸ್ ಸಂಗೀತದ ಶೋ, ಡಾನ್ಸ್ ಶೋ ಹೀಗೆ ನಾನಾ ರೀತಿಯಲ್ಲಿ ವೇದಿಕೆ ಮಾಡಿ ಕೊಡುತ್ತಿರುವ ಈ ರಿಯಾಲಿಟಿ ಶೋಗಳು ಜೋಡಿಗಳಿಗೂ ಹಲವಾರು ಕಾರ್ಯಕ್ರಮಗಳನ್ನು ಮೀಸಲಿಟ್ಟಿವೆ.

Siri Kannada channel announce its New reality show Bangarada Bete

'ರಾಜ ರಾಣಿ' ಎಂಬ ರಿಯಾಲಿಟಿ ಶೋ ಆಗಲೇ 3 ಸೀಸನ್‌ಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದರೆ 'ಸೂಪರ್ ಜೋಡಿ', 'ಇಸ್ಮಾರ್ಟ್ ಜೋಡಿ'ಯಂತಹ ದಂಪತಿ ಶೋ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜನ ಮನ ರಂಜಿಸಿತು. ಜಿ ಕನ್ನಡ ವಾಹಿನಿ 'ಯಾರಿಗುಂಟು ಯಾರಿಗಿಲ್ಲ', 'ಕಪಲ್ಸ್ ಕಿಚನ್' ಮುಂತಾದ ರಿಯಾಲಿಟಿ ಶೋ ಮೂಲಕ ಜನ ಗಮನ ಸೆಳೆಯುತ್ತಿದೆ.

ಈಗ ಇಂತದ್ದೇ ಒಂದೂ ಅದ್ಧೂರಿ ರಿಯಾಲಿಟಿ ಶೋಗೆ ಕನ್ನಡದ ವಾಹಿನಿ ಸಜ್ಜಾಗುತ್ತಿದೆ. ಈ ಹೊಸ ಜೋಡಿ ರಿಯಾಲಿಟಿ ಶೋನಲ್ಲಿ 10 ಕೋಟಿಯವರೆಗಿನ ಬಹುಮಾನ ಗೆಲ್ಲಬಹುದು ಎಂದು ವಾಹಿನಿ ಪ್ರಾಮಿಸ್ ಮಾಡಿ ಹೇಳಿಕೊಂಡಿದೆ.

ಹೌದು, ತೆರೆ ಮೇಲೆ ಬರುವ ಸಿದ್ಧತೆಯಲ್ಲಿದೆ ಹೊಸ ರಿಯಾಲಿಟಿ ಶೋ 'ಬಂಗಾರದ ಜೋಡಿ'. ಸಿರಿಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ 'ಬಂಗಾರದ ಜೋಡಿ' ರಿಯಾಲಿಟಿ ಶೋಗೆ ಕನ್ನಡ ಜೋಡಿಗಳಿಗೆ ಕರೆ ಬಂದಿದೆ. ಇತ್ತೀಚೆಗಷ್ಟೇ ಪ್ರಸಾರ ಮಾಡಿರುವ ಈ ಶೋ ನಾ ಪ್ರೊಮೋದಲ್ಲಿ ನಟ ನಿರೂಪಕ ನಿರಂಜನ್ ಹಾಗು ನಟಿ ಪ್ರಿಯಾಂಕಾ ಶಿವಣ್ಣ ಶೋ ಬಗ್ಗೆ ಮಾತನಾಡಿದ್ದಾರೆ.

ಸದ್ಯ ಪ್ರೋಮೋದಲ್ಲಿ ಇಷ್ಟು ಮಾಹಿತಿ ದೊರಕಿದೆ. ಸಿರಿ ಕನ್ನಡ ವಾಹಿನಿ ಆರಂಭವಾಗಿ 7 ನೇ ವರ್ಷದ ಕಡೆಗೆ ಹೆಜ್ಜೆ ಇಡುತ್ತಿದ್ದು, ಈ ಪ್ರಯುಕ್ತ ವಾಹಿನಿ ನೂತನ ಯೋಜನೆಗಳನ್ನು ಆಯೋಜಿಸಲಿದೆ. ಇದರ ಮೊದಲ ಹೆಜ್ಜೆಯಾಗಿ ದಾವಣಗೆರೆಯಲ್ಲಿ ಡಿಸೆಂಬರ್ 14 ರಿಂದ 'ಬಂಗಾರದ ಜೋಡಿ' ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ.‌

ದಾವಣಗೆರೆ ಸೇರಿದಂತೆ ಹನ್ನೆರಡು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ಆಡುವರಿಗಷ್ಟೇ ಅಲ್ಲ ನೋಡುವವರಿಗೂ ವಿಶೇಷ ಬಹುಮಾನಗಳನ್ನು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. 24 ದಿನಗಳಲ್ಲಿ 48 ಕಾರ್ಯಕ್ರಮಗಳ, 12 ಮೆಗಾ ಇವೆಂಟ್‌ಗಳ ಮೂಲಕ 25 ಲಕ್ಷ ಜನರನ್ನು 10 ಬಾರಿ ಸಂಪರ್ಕಿಸುವ ಅಭಿಯಾನ ಸಿರಿ ಕನ್ನಡ ವಾಹಿನಿ ಹಾಕಿಕೊಂಡಿದೆ.

ಕಾರ್ಯಕ್ರಮಗಳಲ್ಲಿ ಭಾಗಿಯಾಗುವ 50,000 ಜನರಿಗೆ ಒಂದು ಕೋಟಿಯ ತನಕ ಬಹುಮಾನ ಹಾಗೂ ಕಾರ್ಯಕ್ರಮ ವೀಕ್ಷಿಸುವ ಸುಮಾರು 3 ಲಕ್ಷ ಜನರಿಗೆ ಹತ್ತು ಕೋಟಿಯ ತನಕ ಬಹುಮಾನ ನೀಡಲಾಗುವುದು ಎಂದು ಘೋಷಿಸಿದೆ. ಕಾರು, ರೇಷ್ಮೇ ಸೀರೆ, ಚಿನ್ನದ ನಾಣ್ಯಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಅನೇಕ ಬಹುಮಾನಗಳಿರುತ್ತದೆ.ಯಾವೆಲ್ಲ ಜೋಡಿಗಳು ಹೇಗೆ ಆಯ್ಕೆ ಆಗಲಿದ್ದಾರೆ ಮತ್ತು ರಿಯಾಲಿಟಿ ಶೋ ಯಾವ ರೀತಿಯಲ್ಲಿ ಡಿಸೈನ್ ಮಾಡಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.

More from Filmibeat

English summary
Siri Kannada channel announce its New reality show Bangarada Bete;
Read more about: reality show anitha banari tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X