ಕನ್ನಡಿಗರ ಮನೆ ಮನಕೆ ಹೊಸ ಮನರಂಜನಾ ವಾಹಿನಿ 'ಸಿರಿ ಕನ್ನಡ'
ಕನ್ನಡ ಸಿನಿ ರಸಿಕರಿಗೊಂದು ಸಂತಸದ ಸುದ್ದಿ. 'ಸಿರಿ ಕನ್ನಡ' - ಸಿನಿಮಾ ಮತ್ತು ಮನರಂಜನಾ ವಾಹಿನಿ ವೀಕ್ಷಕರ ಮನೆಯಂಗಳದಲ್ಲಿ ಸಿನಿಮಾ ಮತ್ತು ಮನರಂಜನಾ ಕಾರ್ಯಕ್ರಮಗಳ ಕಂಪನ್ನು ಬೀರಲಿದೆ.
'ಸಿರಿ ಕನ್ನಡ' ವಾಹಿನಿಯ ಮುಖ್ಯಸ್ಥರು ಹೇಳುವಂತೆ 84ರ ವಸಂತದಲ್ಲಿರುವ ಕನ್ನಡ ಸಿನಿಮಾ ರಂಗಕ್ಕೆ 'ಸಿರಿ ಕನ್ನಡ' ವಾಹಿನಿಯು ಹೆಮ್ಮೆಯ ಕೊಡುಗೆಯಾಗಿದ್ದು ಈ ವಾಹಿನಿಯ ಪರಿಕಲ್ಪನೆಯೇ ವಿಭಿನ್ನ.
ಸಿನಿಮಾ ವಾಹಿನಿಗಳೆಂದರೆ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿರುತ್ತವೆ. ಆದರೆ 'ಸಿರಿ ಕನ್ನಡ' ಇದಕ್ಕೂ ಮೀರಿದ ಮನರಂಜನೆಯನ್ನು ತನ್ನ ವೀಕ್ಷಕರಿಗೆ ನೀಡಲಿದೆ. ಒಂದು ಸಿನಿಮಾದಿಂದ ವೀಕ್ಷಕರು ಬಯಸುವುದು ಪರಿಪೂರ್ಣ ಮನರಂಜನೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮೇಕಿಂಗ್ ನ ಪ್ರತಿಯೊಂದು ಹಂತವನ್ನು ಒಂದು ಎಂಟರ್ಟೈನ್ಮೆಂಟ್ ಪ್ಯಾಕೇಜ್ ಮೂಲಕ ವೀಕ್ಷಕರಿಗೆ ಕೊಡುವುದಲ್ಲದೇ ಹೊಸ ಸಿನಿಮಾಗಳ ಹೊಸ ವಿಷಯ, ನಟ ನಟಿಯರ ಲೈಫ್ ಸ್ಟೈಲ್, ಹಳೆಯ ಸಿನಿಮಾಗಳ ಮಧುರ ನೆನಪು... ಎಲ್ಲವೂ ಕಾರ್ಯಕ್ರಮಗಳಾಗಿ ವೀಕ್ಷಕರನ್ನು ರಂಜಿಸಲಿವೆ.

ಎವರ್ ಗ್ರೀನ್ ಸಾಂಗ್ಸ್, ನಕ್ಕು ನಗಿಸುವ ಕಾಮಿಡಿ ಸೀನ್ಸ್ ಇದರೊಟ್ಟಿಗೆ ಭವಿಷ್ಯದ ಚಿಂತಕರಿಗೆ ಜ್ಯೋತಿಷ್ಯ, ಆರೋಗ್ಯ ವೃದ್ದಿಗಾಗಿ ಹೆಲ್ತ್ ಪ್ರೋಗ್ರಾಮ್, ಕಣ್ಮನ ತಣಿಸುವ ಟ್ರಾವೆಲ್ ಶೋ ಈ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಸಿರಿ ಕನ್ನಡ ವಾಹಿನಿ ವೀಕ್ಷಕರಿಗೆ ನೀಡಲಿದೆ.
ಸಿರಿ ಕನ್ನಡದಲ್ಲಿ ಅತ್ಯುತ್ತಮ ಸಾಂಸಾರಿಕ, ಹಾಸ್ಯ, ಥ್ರಿಲ್ಲರ್, ಭಕ್ತಿಪ್ರಧಾನ, ಪ್ರೇಮಕಥೆ ಎಲ್ಲಾ ರೀತಿಯ ಸಿನಿಮಾಗಳ ಸಂಗ್ರಹವಿದ್ದು ಎಲ್ಲಾ ವರ್ಗದ ವೀಕ್ಷಕರನ್ನು ರಂಗಿಸಲಿದೆ.
ಮುಂಬರುವ ದಿನಗಳಲ್ಲಿ ಸಿನಿಮಾ ಸಂಗ್ರಹವನ್ನು ಹೆಚ್ಚಿಸುತ್ತ ಸಾಗುವ ಯೋಜನೆ ವಾಹಿನಿಯದಾಗಿದ್ದು, ಹೆಚ್ಚು ಹೆಚ್ಚು ಉತ್ತಮ ಚಿತ್ರಗಳನ್ನು ಚಿತ್ರ ಪ್ರೇಮಿಗಳಿಗೆ ಕೊಡುವ ಹೆಬ್ಬಯಕೆ ಸಿರಿ ಕನ್ನಡದ್ದು. ಕಾರ್ಯಕ್ರಮಗಳಲ್ಲೂ ವಿಭಿನ್ನ ಬಗೆಯ ವಿನೂತನ ಪ್ರೋಗ್ರಾಮ್ ರೂಪಿಸುವ ಬಯಕೆ ಇದ್ದು, ಇದಕ್ಕಾಗಿ ಪ್ರತಿಭಾವಂತರ ತಂಡ ಮತ್ತು ಉತ್ಕೃಷ್ಟ ತಂತ್ರಜ್ಞಾನದಿಂದ ಬರುತ್ತಿರುವ ಸಿರಿಕನ್ನಡ ವಾಹಿನಿ ಉಚಿತವಾಗಿ (ಪ್ರೀ ಟು ಏರ್) ನಿಮಗೆ ಲಭ್ಯವಾಗಿದ್ದು, ಸಿರಿಕನ್ನಡ ವಾಹಿನಿ ವೀಕ್ಷಿಸಲು ನಿಮ್ಮ ಕೇಬಲ್ ಆಪರೇಟರ್ ಗಳನ್ನು ಸಂಪರ್ಕಿಸಬಹುದಾಗಿದೆ.
ತಾರೆಯರ ಅಂದ ಚಂದಕ್ಕೆ ಅವರು ತಿನ್ನುವ ಆಹಾರವೂ ಅಷ್ಟೇ ಮುಖ್ಯ. ಆ ಬಗೆಗೆ ತಿಳಿಸಲು ಈ ವಾಹಿನಿಯಲ್ಲಿ ವಿಭಿನ್ನವಾದ ಅಡುಗೆ ಶೋ ಪ್ರಾರಂಭ ಆಗಲಿದೆ. ಒಟ್ಟಾರೆ ಕರ್ನಾಟಕದ ಮೊದಲ ಸಿನಿಮಾ ಮತ್ತು ಮನರಂಜನಾ ವಾಹಿನಿ ಎಂಬ ಹೆಗ್ಗಳಿಕೆ 'ಸಿರಿ ಕನ್ನಡ' ಚಾನಲ್ ಗೆ ಇದೆ.
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಕನ್ನಡಿಗರ ನಾಡಿಯಾಗಿ ಮೂಡಿಬರಲಿದೆ 'ಸಿರಿ ಕನ್ನಡ' ವಾಹಿನಿ. ಈ ನಿಮ್ಮ ಅಭಿಮಾನದ ವಾಹಿನಿಯನ್ನು ಎಲ್ಲರೂ ಹರಸಿ ಹಾರೈಸಬೇಕೆಂಬುದು ಸಿರಿಕನ್ನಡ ತಂಡದ ಆಶಯ.


Click it and Unblock the Notifications











