Haasya Darbar 2: ಸಿರಿಕನ್ನಡದಲ್ಲಿ 'ಹಾಸ್ಯ ದರ್ಬಾರ್ ಸೀಸನ್ 2'.. ಪುಟಾಣಿ ಮಕ್ಕಳ ಲಿಟಲ್ ಕಿಲಾಡೀಸ್ ಶುರು
ಮನರಂಜನಾ ವಾಹಿನಿಗಳಲ್ಲಿ ಮನರಂಜನೆಗೇನು ಕೊರತೆ ಹೇಳಿ. ಕಿರಿತೆರೆ ವೀಕ್ಷಕರನ್ನು ಎಂಟರ್‌ಟೈನ್ ಮಾಡಲೇಬೇಕು ಅಂತ ಎಂಟರ್‌ಟೈನ್ಮೆಂಟ್ ವಾಹಿನಿಗಳು ಕೂಡ ಪಟ್ಟು ಹಿಡಿದು ಕೂತಿವೆ. ಈ ನಿಟ್ಟಿನಲ್ಲಿ ಸಿರಿ ಕನ್ನಡ ವಾಹಿನಿ ಹೊಸ ಹೊಸ ಕಾರ್ಯಕ್ರಮವನ್ನು ವೀಕ್ಷಕರ ಮುಂದೆ ಇಡುತ್ತಿದೆ.
ಸಿರಿಕನ್ನಡ ವಾಹಿನಿ ಎರಡು ಹೊಸ ಕಾರ್ಯಕ್ರಮಗಳೊಂದಿಗೆ ಕಿರುತೆರೆ ಕ್ಷೇತ್ರದಲ್ಲಿ ಮತ್ತೆ ಸಂಚಲನ ಮೂಡಿಸಲು ಸಜ್ಜಾಗಿದೆ. ಜನಪ್ರಿಯರ ರಿಯಾಲಿಟಿ ಶೋ ಹಾಸ್ಯ ದರ್ಬಾರ್ ಕಾರ್ಯಕ್ರಮ ಜನ ಮನ್ನಣೆ ಗಳಿಸಿತ್ತು. ಈಗ ಇದೇ ಕಾರ್ಯಕ್ರಮದ ಸೀಸನ್ 2 ಮತ್ತೆ ಆರಂಭ ಆಗುತ್ತಿದೆ.

ಹಾಸ್ಯ ದರ್ಬಾರ್ ಸೀಸನ್ 2 ಕಾರ್ಯಕ್ರಮದಲ್ಲಿ, ಹಾಸ್ಯ ದಿಗ್ಗಜರಾದ ಪ್ರಾಣೇಶ್, ಪ್ರೊಫೆಸರ್ ಕೃಷ್ಣೇಗೌಡ, ಸುಧಾಬರಗೂರು, ರಿಚರ್ಡ್ ಲೂಯಿಸ್, ಮುಖ್ಯಮಂತ್ರಿ ಚಂದ್ರು, ಎಮ್ ಎಸ್ ನರಸಿಂಹಮೂರ್ತಿ , ಗುಂಡೂರಾವ್, ಮಿಮಿಕ್ರಿ ದಯಾನಂದ್ ಭಾಗವಹಿಸಲಿದ್ದು ಹಿರೇಮಗಳೂರು ಕಣ್ಣನ್ ನಡೆಸಿಕೊಡಲಿದ್ದಾರೆ. 'ಹಾಸ್ಯ ದರ್ಬಾರ್ ಸೀಸನ್ 2'ಗಾಗಿ ಅದ್ಧೂರಿ ಸೆಟ್ ನಿರ್ಮಿಸಿದ್ದು, ಆಗಸ್ಟ್ 28 ರಿಂದ ಪ್ರಸಾರ ಆಗಲಿದೆ.
ವಿಶೇಷ ಅಂದ್ರೆ, ಇದು ವೀಕೆಂಡ್‌ನಲ್ಲಿ ಅಲ್ಲ, ಸೋಮವಾರದಿಂದ ಶುಕ್ರವಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಪ್ರಸಾರ ಆಗಲಿದೆ. 'ಹಾಸ್ಯ ದರ್ಬಾರ್ ಸೀಸನ್ 2' ಕಾರ್ಯಕ್ರಮವು ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಆಗುತ್ತಿದ್ದು, ಉಚಿತ ಇ ಪಾಸ್ ಗಳನ್ನು ನೀಡಲಾಗುತ್ತಿದೆ.
'ಹಾಸ್ಯ ದರ್ಬಾರ್ 2' ಜೊತೆಗೆ ಪುಟಾಣಿ ಮಕ್ಕಳ ಪವರ್‌ಫುಲ್ ಎಂಟರ್ಟೈನ್ಮೆಂಟ್ ಶೋ 'ಲಿಟಲ್ ಕಿಲಾಡೀಸ್' ಕೂಡ ಪ್ರಸಾರ ಆಗಲಿದೆ. ಸೋಮವಾರದಿಂದ ಶುಕ್ರವಾರ ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. 'ಲಿಟಲ್ ಕಿಲಾಡೀಸ್' ಕಾರ್ಯಕ್ರಮ ಕುಡ ಇದೇ ಮೊದಲ ಬಾರಿಗೆ ಅದ್ಧೂರಿ ಸೆಟ್‌ನಲ್ಲಿ ವಿಭಿನ್ನ ಪರಿಕಲ್ಪನೆಯೊಂದಿಗೆ ನಿರ್ಮಾಣ ಮಾಡಲಾಗಿದೆ.
ರಿಯಾಲಿಟಿ ಶೋಗಳ ಜೊತೆ ಕಿರುತೆರೆ ವೀಕ್ಷಕರ ಮೆಚ್ಚುಗೆ ಗಳಿಸಿ 100 ನೇ ಸಂಚಿಕೆಯತ್ತ ಮುನ್ನುಗ್ಗುತ್ತಿರುವ 'ಊರ್ಮಿಳಾ' ಧಾರಾವಾಹಿ ರಾತ್ರಿ 7 ಗಂಟೆಗೆ ಮೂಡಿಬರಲಿದ್ದು ಸಮಯ ಬದಲಾವಣೆ ಮಾಡಿದ್ದಾರೆ. ಇದರೊಂದಿಗೆ ಎಂದಿನಂತೆ ದೈನಂದಿನ ಧಾರಾವಾಹಿಗಳು, ವಿಭಿನ್ನ ಕಾರ್ಯಕ್ರಮಗಳು, ಜನಪ್ರಿಯ ಚಲನಚಿತ್ರಗಳು ಸಿರಿಕನ್ನಡದ ಕಿರುಪರದೆಯಲ್ಲಿ ಪ್ರಸಾರ ಆಗುತ್ತಿದೆ.


Click it and Unblock the Notifications










