twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಮಾಯಾಮೃಗ: 25 ವರ್ಷದ ಬಳಿಕ ಸೀಕ್ವೆಲ್ ಭಾಗ್ಯ ಕಂಡ ಟಿಎನ್ಎಸ್ ಧಾರಾವಾಹಿ!

    By ಎಸ್ ಸುಮಂತ್
    |

    ಸಿನಿಮಾಗಳಿಗೆ ಸೀಕ್ವೆಲ್ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಒಂದು ಸಿನಿಮಾ ಗೆದ್ದ ಬಳಿಕ ಅದರ ಯಶಸ್ಸಿನಿಂದಾಗಿಯೇ ಅದರ ಮುಂದುವರೆದ ಭಾಗ ಮತ್ತೆ ಸಿನಿಮಾವಾಗಲಿದೆ. ಆದರೆ ಇಲ್ಲಿವರೆಗೂ ಈ ಸೀಕ್ವೇಲ್ ಭಾಗ್ಯ ಕಂಡಿದ್ದು ಸಿನಿಮಾಗಳಿಗೆ ಮಾತ್ರ. ಮೊದಲ ಬಾರಿಗೆ ಧಾರಾವಾಹಿಗೂ ಈ ಸೀಕ್ವೆಲ್ ಭಾಗ್ಯ ದೊರಕುತ್ತಿದೆ. ಅದು ಟಿ ಎನ್ ಸೀತರಾಮ್ ಅವರ ಧಾರಾವಾಹಿಗೆ ಅನ್ನೋದು ವಿಶೇಷ.

    ಟಿ ಎನ್ ಸೀತಾರಾಮ್ ಧಾರಾವಾಹಿ ಅಂದರೇ ಹಾಗೇ. ಮಧ್ಯಮ ವರ್ಗದ ಜನರ ಜೀವನವನ್ನು ಹಾಗೇ ತೆರೆಯ ಮೇಲೆ ತೆರೆದು ಇಟ್ಟು ಬಿಡುತ್ತಾರೆ. ಒಂದೊಂದು ಸಾಲು ಸಂಭಾಷಣೆಯಲ್ಲೂ ಗಾಂಭಿರ್ಯತೆ ಇರುತ್ತದೆ. ಆ ಗಾಂಭಿರ್ಯತೆ ನೋಡುಗರನ್ನು ಹಾಗೇ ಹಿಡಿದಿಟ್ಟುಕೊಂಡು ಬಿಡುತ್ತದೆ. ಹೀಗಾಗಿ ಅದೆಷ್ಟೇ ವರ್ಷಗಳು ಕಳೆದರು ಟಿ ಎನ್ ಸೀತರಾಮ್ ಅವರ ಧಾರಾವಾಹಿಗೆ ಇರುವ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ. ಅದೇ ಕಾರಣದಿಂದ ಇದೀಗ 'ಮತ್ತೆ ಮಾಯಾಮೃಗ' ಆಗಿ ಮೂಡಿ ಬರುತ್ತಿದೆ.

    ಬೆಟ್ಟದ ಹೂವಿನ ಟೀಂ ನೋಡಿ ವಾವ್ ಎಂದ ಪ್ರೇಕ್ಷಕರು.. ಕಾರಣ ಆ ಒಂದು ಫೋಟೊ..!ಬೆಟ್ಟದ ಹೂವಿನ ಟೀಂ ನೋಡಿ ವಾವ್ ಎಂದ ಪ್ರೇಕ್ಷಕರು.. ಕಾರಣ ಆ ಒಂದು ಫೋಟೊ..!

    25 ವರ್ಷಗಳ ಬಳಿಕ ಮತ್ತೆ 'ಮಾಯಾಮೃಗ'

    25 ವರ್ಷಗಳ ಬಳಿಕ ಮತ್ತೆ 'ಮಾಯಾಮೃಗ'

    'ಮಾಯಾಮೃಗ' ಧಾರಾವಾಹಿ 90 ಮಕ್ಕಳಿಗೂ ಚೆನ್ನಾಗಿ ನೆನಪಿರುತ್ತೆ. ಅಂದು ಪ್ರಸಾರವಾಗುತ್ತಿದ್ದ 'ಮಾಯಾಮೃಗ' ಧಾರಾವಾಹಿ ಅಚ್ಚು ಮೆಚ್ಚಿನ ಧಾರಾವಾಹಿಗಳಲ್ಲೊಂದು. 'ಮಾಯಾಮೃಗ' ಧಾರಾವಾಹಿ ಬರುತ್ತಿದ್ದ ಕಾಲದಲ್ಲಿ ಉಳ್ಳವರ ಮನೆಯಲ್ಲಿ ಮಾತ್ರ ಟಿವಿ ಇರುತ್ತಿತ್ತು. ಸಂಜೆ 4.30 ಆದರೆ ಸಾಕು 'ಮಾಯಾಮೃಗ' ನೋಡಲೇಬೇಕು ಅಂತ ಒಳ್ಳೆ ಟೆಂಟ್‌ಗಳಲ್ಲಿ ಸಿನಿಮಾ ನೋಡಿದ ರೀತಿಯಲ್ಲಿ ಮನೆಯಲ್ಲಿನ ಮಹಿಳೆಯರೆಲ್ಲ ಟಿವಿ ಇದ್ದವರ ಮನೆ ಮುಂದೆ ಕುಳಿತು ಬಿಟ್ಟರೆ, ಸ್ಕೂಲು ಬಿಟ್ಟ ತಕ್ಷಣ ಮಕ್ಕಳು ಓಡಿ ಹೋಗಿ ಆ ಧಾರಾವಾಹಿ ನೋಡುತ್ತಾ ಕುಳಿತು ಬಿಡುತ್ತಿದ್ದರು. ಧಾರಾವಾಹಿ ಮುಗಿದ ಮೇಲೆ ಮನೆಗೆ ಹಿಂದಿರುಗುವಾಗ ಅದೇನೋ ಮನಸ್ಸೆಲ್ಲಾ ಭಾರ. ಸುಮ್ಮನೆ ಭಾರದ ಹೆಜ್ಜೆಗಳನ್ನಾಕುತ್ತಾ ಮನೆಗೆ ವಾಪಾಸ್ಸಾಗುತ್ತಿದ್ದರು. ಇಷ್ಟರ ಮಟ್ಟಿಗೆ 'ಮಾಯಾಮೃಗ' ಜನರನ್ನು ಹಿಡಿದಿಟ್ಟಿದ್ದಂತು ಸತ್ಯ. ಈಗ ಮತ್ತೆ 'ಮಾಯಾಮೃಗ' ಆರಂಭವಾಗಿದೆ.

    'ಮತ್ತೆ ಮಾಯಾಮೃಗ' ಪ್ರಸಾರಕ್ಕೆ ಮುಹೂರ್ತ

    'ಮತ್ತೆ ಮಾಯಾಮೃಗ' ಪ್ರಸಾರಕ್ಕೆ ಮುಹೂರ್ತ

    ಕೆಲವೊಮ್ಮೆ ಸಿನಿಮಾಗಳ ಸೀಕ್ವೆಲ್ ಓಡುವುದಿಲ್ಲ. ಕೆಲ ಸಿನಿಮಾಗಳು ಹಿಟ್ ಆದರೆ ಇನ್ನು ಕೆಲವು ಸಿನಿಮಾಗಳು ಅಟ್ಟರ್ ಪ್ಲಾಫ್ ಆಗಿದೆ. ಹೀಗಿರುವಾಗ ಒಂದಲ್ಲ ಎರಡಲ್ಲ ಸುಮಾರು 25 ವರ್ಷಗಳ ನಂತರ ಧಾರಾವಾಹಿಯೊಂದರ ಸೀಕ್ವೆಲ್ ತೆಗೆಯುವುದು ಎಂದರೆ ಸುಲಭದ ಮಾತಲ್ಲ. ಆದರೂ ಈ ಎಲ್ಲಾ ಸವಾಲುಗಳ ನಡುವೆ ಟಿ ಎನ್ ಸೀತರಾಮ್ ಅವರ 'ಮಾಯಾಮೃಗ' ಈಗ' ಮತ್ತೆ ಮಾಯಾಮೃಗ'ವಾಗಿ ಸಿದ್ಧವಾಗಿದೆ. ಇದೇ ಅಕ್ಟೋಬರ್ 31 ರಿಂದ ತನ್ನ ಹೊಸ ಅಧ್ಯಾಯದೊಂದಿಗೆ ಹೊಸ ಸಂಚಿಕೆಗಳ 'ಮತ್ತೆ ಮಾಯಾಮೃಗ' ರಾತ್ರಿ 9:00 ಗಂಟೆಗೆ ಸಿರಿ ಕನ್ನಡದಲ್ಲಿ ಪ್ರಸಾರವಾಗಲಿದೆ.

    ಹೊಸಬರ ಜೊತೆಗೆ ಹಳಬರು ಸಂಗಮ

    ಹೊಸಬರ ಜೊತೆಗೆ ಹಳಬರು ಸಂಗಮ

    ಒಮ್ಮೆ ಒಂದು ಧಾರಾವಾಹಿ ಹಿಟ್ ಆದರೆ, ಆ ಧಾರಾವಾಹಿಯಲ್ಲಿ ಬರುವ ಪಾತ್ರಗಳು ಜನರ ಮನಸ್ಸಿನಿಂದ ಅಳಿಸಿ ಹಾಕುವುದಕ್ಕೆ ಸಾಧ್ಯವಿರುವುದಿಲ್ಲ. ಆ ಪಾತ್ರಕ್ಕೆ ಮತ್ತೊಬ್ಬರನ್ನು ತಂದಾಗ ಜನರಿಂದ ಅದನ್ನು ರಿಸೀವ್ ಮಾಡಿಕೊಳ್ಳುವುದಕ್ಕೆ ಕಷ್ಟ ಸಾಧ್ಯವಾಗಿ ಬಿಡುತ್ತೆ. 'ಮತ್ತೆ ಮಾಯಾಮೃಗ'ದಲ್ಲಿ ಅದಕ್ಕೆ ಅವಕಾಶ ನೀಡಿಲ್ಲ. ಹೊಸ ಪಾತ್ರಗಳ ಜೊತೆಗೆ ಹಳಬರು ಹಾಗೇ ಕಂಟಿನ್ಯೂ ಆಗಿದ್ದಾರೆ. ಅದರಲ್ಲಿ ಮಾಳವಿಕ, ಮುಖ್ಯಮಂತ್ರಿ ಚಂದ್ರು, ಲಕ್ಷ್ಮೀ ಚಂದ್ರಶೇಖರ್, ಶಶಿಕುಮಾರ್, ವಿಕ್ರಂ ಸೂರಿ, ಟಿಎನ್ ಸೀತರಾಮ್, ಪಿ ಶೇಷಾದ್ರಿ ಇದರಲ್ಲೂ ಮುಂದುವರೆಯಲಿದ್ದಾರೆ.

    ಮತ್ತೆ ಮಾಯಾಮೃಗ ಮುಂದುವರೆದ ಭಾಗವೇ?

    ಮತ್ತೆ ಮಾಯಾಮೃಗ ಮುಂದುವರೆದ ಭಾಗವೇ?

    'ಮಾಯಾಮೃಗ' ಹೆಸರನ್ನಿಟ್ಟುಕೊಂಡು ಬೇರೆ ಯಾವುದೋ ಕಥೆಯನ್ನು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಅದರ ಮುಂದುವರೆದ ಕಥೆಯನ್ನು ಹೇಳಿದಾಗ ಜನರನ್ನು ಬೇಗ ತಲುಪಬಹುದು. ಮಾಯಾಮೃಗ ಯೂಟ್ಯೂಬ್‌ನಲ್ಲಿ ಪ್ರಸಾರವಾದಾಗಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. 'ಮಾಯಾಮೃಗ'ದಲ್ಲಿ ಮಧ್ಯಮವರ್ಗದ ಜನರ ಕಥೆಯನ್ನು ಎಣೆಯಲಾಗಿತ್ತು. ಈಗ ಅವರ ಮಕ್ಕಳು ಹಾಗೂ ಮೊಮ್ಮಕ್ಕಳ ಕಥೆಯ ಮುಂದುವರೆದ ಭಾಗವಾಗುತ್ತದೆ. ಅದರಲ್ಲೂ ಬೃಂದಾ ಸುರೇಶ್ ಮುಂದಿನ ಕಥೆ ಹಾಗೂ ಮಾಳವಿಕ ಮಗುವಿನ ಮುಂದಿನ ಕಥೆ ಬಗ್ಗೆ ಕುತೂಹಲವಿದೆ.

    Comedy Khiladigalu 4: ಅರ್ಜುನ್ ಜನ್ಯಾ ಮಾತು ಕೇಳಿ ಗಳಗಳನೇ ಕಣ್ಣೀರಿಟ್ಟ ಅನುಶ್ರೀ..!Comedy Khiladigalu 4: ಅರ್ಜುನ್ ಜನ್ಯಾ ಮಾತು ಕೇಳಿ ಗಳಗಳನೇ ಕಣ್ಣೀರಿಟ್ಟ ಅನುಶ್ರೀ..!

    English summary
    Siri kannada's Matte Mayamruga Written Update in New Serial Episode. Here is the details.
    Wednesday, October 12, 2022, 21:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X