For Quick Alerts
  ALLOW NOTIFICATIONS  
  For Daily Alerts

  ಕೃಷ್ಣ ಜನ್ಮಾಷ್ಟಮಿಯಂದು ನೀವಿದ್ದಲ್ಲಿಗೆ ಸೀರೆ ತಂದು ಕೊಡ್ತಿದ್ದಾರೆ ರಾಮ್ ರಜಿಯಾ & ವಿಜಯದಶಮಿ ಟೀಂ!

  By ಎಸ್ ಸುಮಂತ್
  |

  ಕೃಷ್ಣ ಜನ್ಮಾಷ್ಟಮಿ ಎಂದರೆ ಹಿಂದೂಗಳ ಹಬ್ಬದಲ್ಲಿ ಇದು ಕೂಡ ಒಂದು ಶ್ರೇಷ್ಟ ಹಬ್ಬ. ಈ ದಿನವನ್ನು ಕೃಷ್ಣ ಜನ್ಮಾಷ್ಟಮಿ, ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀಜಯಂತಿ ಎಂದೆಲ್ಲಾ ಕರೆಯಲಾಗುತ್ತದೆ. ಕೃಷ್ಣ ಜನಿಸಿದ ಈ ದಿನವನ್ನು ಎಲ್ಲೆಡೆ ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಇನ್ನು ತಮ್ಮ ತಮ್ಮ ಮನೆಯಲ್ಲಿರುವ ಮಕ್ಕಳಿಗೆ ರಾಧೆ, ಕೃಷ್ಣನ ವೇಷ ಹಾಕಿ ಖುಷಿ ಪಡುತ್ತಾರೆ. ಮಕ್ಕಳನ್ನೇ ತಮ್ಮ ಮನೆಯ ಕೃಷ್ಣನೆಂದು ಸಂಭ್ರಮಿಸುತ್ತಾರೆ. ಇಂಥ ಸಂಭ್ರಮಕ್ಕೆ ಮತ್ತಷ್ಟು ಮೆರಗು ತರಲು ಸಿದ್ಧವಾಗಿದೆ ಸಿರಿ ಕನ್ನಡ ಚಾನೆಲ್.

  'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?

  ಹಬ್ಬ ಹರಿದಿನಗಳಲ್ಲಿ ಎಲ್ಲಿಂದಲೋ ಉಡುಗೊರೆ ಸಿಕ್ಕಾಗ ಆಗ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಹಬ್ಬ ಎಂದರೆ ಮನೆಯವರು ಉಡುಗೊರೆ ತಂದು ಕೊಡುವುದು ಸಾಮಾನ್ಯ. ಆದರೆ ಹೊರಗಡೆಯಿಂದ ನಮ್ಮವರೆಂದುಕೊಂಡು ಉಡುಗೊರೆ ನೀಡಿದರೆ, ಹಬ್ಬದ ಸಂಭ್ರಮ ದುಪ್ಪಟ್ಟಾಗುವುದರಲ್ಲಿ ನೋ ಡೌಟ್. ಅಂಥದ್ದೊಂದು ಸಂತಸ ನೀಡಲು ರಾಮ್ ರಜಿಯಾ ಮತ್ತು ವಿಜಯದಶಮಿ ಟೀಂ ರೆಡಿಯಾಗಿದೆ.

  ದುಷ್ಟರಿಂದ ಪಾರಾಗ್ತಾಳಾ ದಶಮಿ?

  ದುಷ್ಟರಿಂದ ಪಾರಾಗ್ತಾಳಾ ದಶಮಿ?

  ಅಣ್ಣಾವ್ರ ಕುಟುಂಬದಿಂದ ವಿಜಯದಶಮಿ ಧಾರಾವಾಹಿ ನಿರ್ಮಾಣವಾಗುತ್ತಿದೆ. ರಾಘವೇಂದ್ರ ರಾಜ್ ಕುಮಾತ್ತು‌ಮತ್ತು ಮಂಗಳಾ ದಂಪತಿ ನೇತೃತ್ವದಲ್ಲಿ ಧಾರಾವಾಹಿ ನಿರ್ಮಾಣವಾಗುತ್ತಿದೆ. ಧಾರಾವಾಹಿ ಆರಂಭವಾದಾಗಿನಿಂದಲೂ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಇದೊಂದು ಭಕ್ತಿ, ಭಾವದ, ದೈವೀಕ ಇತಿಹಾಸ ಇರುವ ಧಾರಾವಾಹಿಯಾಗಿದೆ. ಆದರೆ ಇದರಲ್ಲಿ ಬರುವ ದಶಮಿಯ ಮೇಲೆ ದುಷ್ಟರ ಕಣ್ಣು ಬಿದ್ದಿದೆ. ದಶಮಿಯಿಂದಲೇ ಈಶ್ಚರ ದೇವಸ್ಥಾನದ ಯಾವುದೋ ಒಂದು ಕೆಲಸವಾಗಬೇಕಿದೆ. ಅದು ದಶಮಿಯ ಕನಸಲ್ಲಿ ಕಾಡುತ್ತಿದೆ. ಅದನ್ನು ಅರಸಿ ಹೊರಟಾಗ ಅನಾಹುತವೊಂದು ಎದುರಾಗಿದೆ. ರಾಯಗಢದಲ್ಲಿ ದಶಮಿಯನ್ನು ಕಾಪಾಡಲು ಹೋದ ರಾಧಾ-ಕೃಷ್ಣ ಕೂಡ ಸಂಕಟದಲ್ಲಿ ಸಿಲುಕುವ ಸಾಧ್ಯತೆ ಇದೆ.

  ರಜಿಯಾ, ಜನನಿಯಾಗಿ ಬದಲಾವಣೆ

  ರಜಿಯಾ, ಜನನಿಯಾಗಿ ಬದಲಾವಣೆ

  ಸಿರಿಕನ್ನಡದಲ್ಲಿ ರಜೀಯಾ ರಾಮ್ ಎಂಬ ಧರ್ಮಕ್ಕೂ ಮಿಗಿಲಾದ ಪ್ರೇಮಕಥೆಯನ್ನೊಳಗೊಂಡ ಧಾರಾವಾಹಿಯೊಂದು ಮೂಡಿ ಬರುತ್ತಿದೆ. ರಾಮ್, ರಜಿಯಾಳನ್ನು ಕಾಪಾಡಿ ತನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದಾನೆ. ಅದು ಹೆಂಡತಿಯಾಗಿ. ಪಕ್ಕಾ ಬ್ರಾಹ್ಮಣ ಕುಟುಂಬ ರಾಮ್ ಅವರದ್ದು. ಆದರೆ ರಜಿಯಾ ಒಬ್ಬ ಮುಸ್ಲಿಂ ಹೆಣ್ಣು ಎಂಬುದನ್ನು ಹೇಳದೆ, ಬ್ರಾಹ್ಮಣಳು ಎಂದು ಸುಳ್ಳು ಹೇಳಿ, ಹೆಂಡತಿಯಾಗಿ ನೋಡಿಕೊಳ್ಳುತ್ತಿದ್ದಾನೆ. ಅಡುಗೆ ವಿಚಾರ, ಕೆಲವೊಂದು ಶಾಸ್ತ್ರ ಸಂಪ್ರದಾಯ ವಿಚಾರದಲ್ಲಿ ರಜೀಯಾ ಆಗಾಗ ಸಿಕ್ಕಿಬೀಳುತ್ತಿದ್ದಾಳೆ. ಆದರೆ ರಾಮ್ ಹೇಗೋ ಎಲ್ಲವನ್ನು ಸಂಭಾಳಿಸುತ್ತಿದ್ದಾನೆ.

  ಜನ್ಮಾಷ್ಟಮಿಗೆ ಸೀರೆ ಉಡುಗೊರೆ

  ಜನ್ಮಾಷ್ಟಮಿಗೆ ಸೀರೆ ಉಡುಗೊರೆ

  ಎರಡು ಧಾರಾವಾಹಿಯಲ್ಲೂ ಒಂದಷ್ಟು ಸಮಸ್ಯೆಗಳಿದೆ. ಆದರೆ ಈ ಜನ್ಮಾಷ್ಟಮಿ‌ಅದೆಲ್ಲವನ್ನು ಕಳೆಯುತ್ತಾ ಎಂಬುದನ್ನು ನೋಡಬೇಕಿದೆ. ದಶಮಿ ಅಂದುಕೊಂಡದ್ದನ್ನು ಸಾಧಿಸಲು ಕೃಷ್ಣನ ಆಶೀರ್ವಾದ ಸಿಗಬಹುದು ಎಂಬ ನಿರೀಕ್ಷೆ ಇದೆ. ಇದೇ ಖುಷಿಯಲ್ಲಿ ಸಿರಿಕನ್ನಡದಿಂದ ಸೀರೆ ಉಡುಗೊರೆ ನೀಡುತ್ತಿದ್ದಾರೆ. ಅದರಲ್ಲೂ ನೀವೇನು ಹುಡುಕಿಕೊಂಡು ಹೋಗಬೇಕಿಲ್ಲ, ಯಾವುದೋ ಸ್ಪರ್ಧೆಯನ್ನು ಗೆಲ್ಲಬೇಕಿಲ್ಲ. ಜಸ್ಟ್ ಒಂದ್ ಮೆಸೇಜ್ ಮಾಡಿದರೆ ಸಾಕು.

  ಸೀರೆ ಪಡೆಯುವುದು ಈಗ ಸುಲಭ

  ಸೀರೆ ಪಡೆಯುವುದು ಈಗ ಸುಲಭ

  ಕೆಲವೊಂದು ಧಾರಾವಾಹಿಗಳಿಂದ ಉಡುಗೊರೆ ನೀಡುವುದು ಒಂದು ರೀತಿಯ ಪ್ರಮೋಷನ್. ಆದರೆ ಆ ಧಾರಾವಾಹಿ ಬಗ್ಗೆ ಪ್ರಶ್ನೆಗಳನ್ನು ಕೇಳಿ, ಅದಕ್ಕೆ ಉತ್ತರ ಕೊಟ್ಟವರಿಗೆ ಉಡುಗೊರೆ ಸಿಗುತ್ತೆ. ಆದರೆ ಸಿರಿಕನ್ನಡದ ರೀತಿ ಅದಲ್ಲ‌. ಸೀರೆ ಪಡೆಯುವುದು ಈಗ ಬಹಳ ಸುಲಭ. ಜಸ್ಟ್ ಅವರು ಕೊಟ್ಟಿರುವ ವಾಟ್ಸಾಪ್ ನಂಬರ್ ಸೇವ್ ಮಾಡಿಕೊಂಡು, ನೀವಿರುವ ಅಡ್ರೆಸ್ ಅನ್ನು ಸೆಂಡ್ ಮಾಡಿದರೆ ಸಾಕು. ಆ ಲೊಕೇಷನ್‌ಗೆ ಸೀರೆ ಹೊತ್ತು ತಂಡ ಬರುತ್ತದೆ. ಈಗಾಗಲೇ ಒಂದಷ್ಟು ಜನ ಲೊಕೇಷನ್ ಶೇರ್ ಮಾಡಿ, ಕಮೆಂಟ್ ಕೂಡ ಹಾಕಿದ್ದಾರೆ.

  English summary
  Siri Kannada Serial Ram Raziya And Vijayadashami Distributing Saree On Krishna Janmashtami. Here is the details.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X