For Quick Alerts
  ALLOW NOTIFICATIONS  
  For Daily Alerts

  ಈ ಶೋಗೆ ಹೋದ್ಮೇಲೆ ''ಯಾಕಾದ್ರು ಬಂದೆ'' ಅಂತಿದ್ದಾರೆ ಸ್ಟಾರ್ಸ್

  By Bharath Kumar
  |
  ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಇಷ್ಟು ಕಷ್ಟ ಪಡುತ್ತಿರುವುದು ಯಾಕೆ..?

  ಹೊಸ ಹೊಸ ರೀತಿಯಾ ರಿಯಾಲಿಟಿ ಶೋಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನ ರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿ ಮತ್ತೊಂದು ರೋಚಕ ಆಟವನ್ನ ನಿಮ್ಮ ಮುಂದೆ ತರುತ್ತಿದೆ.

  ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ ನಾಲ್ಕು ಮುಗಿಸಿದ ಬೆನ್ನಲ್ಲೆ ನಿರೂಪಕ ಅಕುಲ್ ಬಾಲಾಜಿ ಇನ್ನೊಂದು ಹೊಸ ಕಾರ್ಯಕ್ರಮಕ್ಕೆ ಆಂಕರ್ ಆಗಿದ್ದಾರೆ.

  ಈ ಕಾರ್ಯಕ್ರಮದ ಹೆಸರು 'ಸಿಕ್ಸ್ತ್ ಸೆನ್ಸ್' (SixthSense). ಈ ಶೋನ ಪ್ರೋಮೋ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ಗಳು ಭಾಗಿಯಾಗಿದ್ದಾರೆ.

  ಆದ್ರೆ, ಈ ಶೋನಲ್ಲಿ ಕಾಣಿಸಿಕೊಂಡಿರುವ ಎಲ್ಲರ ಬಾಯಲ್ಲೂ ಒಂದೇ ಮಾತು, ನಮ್ಮನ್ನ ಬಿಟ್ ಬಿಡ್ರಪ್ಪಾ, ಯಾಕಾದ್ರು ಬಂದ್ನೋ, ನಾನು ಹೋಗ್ಬಿಡ್ತೀನಿ'' ಅನ್ನೋ ಡೈಲಾಗ್ ಗಳೇ ಹೈಲೈಟ್ ಆಗಿದೆ.

  ಇದನ್ನ ಗಮನಿಸಿದ ಮೇಲೆ ಈ ಶೋ ಬಗ್ಗೆ ಮತ್ತಷ್ಟು ಕುತೂಹಲ, ನಿರೀಕ್ಷೆ ಡಬಲ್ ಆಗುತ್ತಿದೆ. ಏನಿರಬಹುದು, ಯಾವ ರೀತಿಯ ಆಟ, ಟಾಸ್ಕ್ ಇರಬಹುದು ಎಂಬ ಆಲೋಚನೆ, ಕಲ್ಪನೆ ಕಾಣುತ್ತಿದೆ.

  ಚಂದನ್ ಶೆಟ್ಟಿ, ದಿಗಂತ್, ಐಂದ್ರಿತಾ ರೈ, ಅನುಪಮಾ ಗೌಡ, ಆಶಿಕಾ ರಂಗನಾಥ್, ವಸಿಷ್ಠ ಸಿಂಹ, ಕಾರುಣ್ಯ ರಾಮ್, ಹರ್ಷಿಕಾ ಪೂಣಚ್ಚ, ರಾಧಿಕಾ ಚೇತನ್, ಸತೀಶ್ ನೀನಾಸಂ, ಹಿತಾ ಚಂದ್ರಶೇಖರ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

  ಈ ಎಲ್ಲ ಕುತೂಹಲಗಳಿಗೆ ಉತ್ತರ ಇದೇ ಶನಿವಾರ ಸಿಗಲಿದೆ. ಹೌದು, 'ಸಿಕ್ಸ್ತ್ ಸೆನ್ಸ್' (SixthSense) ಕಾರ್ಯಕ್ರಮ ಇದೇ ವಾರದಿಂದ ಆರಂಭವಾಗುತ್ತಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರಲಿದೆ.

  English summary
  Star suvarna presented new game show called ''sixth sense'' from this week july 7th. akul balaji will host the programme.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X