Skanda Ashok: ನಟನಾ ಬದುಕಿಗೆ ಮುನ್ನುಡಿ ಬರೆದಿದ್ದು 'ನೋಟ್ ಬುಕ್'.. 'ಚಾರುಲತ' ಮೂಲಕ ಚಾರ್ಮಿಂಗ್

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಸು' ಧಾರಾವಾಹಿಯಲ್ಲಿ ನಾಯಕ ಅರವಿಂದ ಆಗಿ ಅಭಿನಯಿಸಿ, ಸೀರಿಯಲ್ ಪ್ರಿಯರ ಅದರಲ್ಲೂ ಹೆಣ್ಣು ಮಕ್ಕಳ ದಿಲ್ ಕದ್ದ ಹ್ಯಾಂಡ್ ಸಮ್ ಹುಡುಗನ ಹೆಸರು ಸ್ಕಂದ ಅಶೋಕ್. 'ಸರಸು' ಧಾರಾವಾಹಿಯ ನಂತರ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸ್ಕಂದ ಅಶೋಕ್ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ.

ಹಿರಿತೆರೆಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಚಿಕ್ಕಮಗಳೂರಿನ ಹುಡುಗ ಸ್ಕಂದ ಅಶೋಕ್ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದು ಮಾತ್ರ ಕಿರುತೆರೆಗೆ ಕಾಲಿಟ್ಟ ಬಳಿಕವೇ! ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣ ಆಗಿ ಅಭಿನಯಿಸಿದ್ದ ಸ್ಕಂದ ಅಶೋಕ್ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದುಬಿಟ್ಟರು.

Skanda Ashok, who charmed on Kannada television as Ramana acting journey on the big screen

ನಟನಾ ಬದುಕಿಗೆ ಮುನ್ನುಡಿಯಾಗಿದ್ದು 'ನೋಟ್ ಬುಕ್'

ಕಾಲೇಜು ದಿನಗಳಿಂದಲೂ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾ ಮಾಡಿದ ಸ್ಕಂದ ಟಿವಿಯ ಜೊತೆಗೆ ಮುದ್ರಣ ಮಾಧ್ಯಮಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರು. ಜನರು ಕೂಗು, ಅವರು ಹುರಿದುಂಬಿಸುವ ರೀತಿಗೆ ಬೆರಗಾದ ಸ್ಕಂದ ತಾನು ಕೂಡ ಜನರ ಪ್ರಶಂಸೆಗೆ ಪಾತ್ರರಾಗಬೇಕು. ಜನರ ಪ್ರಶಂಸೆಯನ್ನು ಒಂದಲ್ಲ ಒಂದು ಬಾರಿ ಅನುಭವಿಸಬೇಕು ಎಂದು ಬಯಸಿದ್ದರು. ಆ ಸಮಯದಲ್ಲಿ ನಟನಾ ರಂಗ ಕೈ ಬೀಸಿ ಕರೆದ ಕಾರಣ ಬೇರೆ ಯೋಚನೆ ಮಾಡದೆ ಅಸ್ತು ಎಂದರು.

ಮಲಯಾಳಂ ಸಿನಿಮಾ 'ನೋಟ್ ಬುಕ್'ನಲ್ಲಿ ನಾಯಕನಾಗಿ ನಟಿಸುವ ಮೂಲಕ ನಟನೆಗೆ ಕಾಲಿಟ್ಟ ಕಾಫಿ ನಾಡಿನ ಕುವರ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಮೊದಲ ಸಿನಿಮಾದ ನಟನೆಗೆ ಏಷಿಯನೇಟ್ ಫಿಲಂ ನೀಡುವ ಹೊಸ ಮುಖ ಪ್ರಶಸ್ತಿ ಸ್ಕಂದ ಅವರನ್ನು ನಟನೆಯಲ್ಲಿ ಮತ್ತಷ್ಟು ಮುಂದುವರಿಯುವಂತೆ ಮಾಡಿತು.

Skanda Ashok, who charmed on Kannada television as Ramana acting journey on the big screen

'ಚಾರುಲತಾ' ಸಿನಿಮಾ ಮೂಲಕ ಕನ್ನಡ ಸಿನಿಜಗತ್ತಿಗೆ ಎಂಟ್ರಿ

ಮಲಯಾಳಂನ 'ನೋಟ್ ಬುಕ್' ಮೂಲಕ ನಟನೆಗೆ ಕಾಲಿಟ್ಟ ಸ್ಕಂದ ಅಶೋಕ್ ಮುಂದೆ ಮಲಯಾಳಂನ 'ಪಾಸಿಟಿವ್', ತೆಲುಗಿನ 'ಮಲ್ಲಿ ಮಲ್ಲಿ', ಮಲಯಾಳಂನ 'ಎಲೆಕ್ಟ್ರಾ', ತಮಿಳಿನ 'ಅಂಗುಸಂ' ಹಾಗೂ 'ಮುಪ್ಪರಿಮಾನಂ' ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.

'ಚಾರುಲತಾ' ಸಿನಿಮಾದ ಮೂಲಕ ಕನ್ನಡ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಸ್ಕಂದ ಅಶೋಕ್ ಮನೋಜ್ಞ ನಟನೆಯ ಮೂಲಕ ಸಿನಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾದರು. ನಂತರ "ಯೂ ಟರ್ನ್" ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಸ್ಕಂದ ಮುಂದೆ 'ಕಾನೂರಾಯಣ', 'ಜಿಗ್ರಿ ದೋಸ್ತ್', 'ದೇವಯಾನಿ', 'ಭೈರಾದೇವಿ' ಹಾಗೂ 'ರಣಾಂಗಣ' ಸಿನಿಮಾಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಇದರ ಜೊತೆಗೆ 'ಫ್ಲಾಟ್ ನಂ 9', 'ಬರ್ಬರಿಕಾ' ಸಿನಿಮಾದಲ್ಲಿ ಸ್ಕಂದ ನಟಿಸಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ಸ್ಕಂದ ಅಶೋಕ್ ಮತ್ತೆ ಕಿರುತೆರೆಗೆ ಮರಳುತ್ತಾರಾ ಎಂದು ಕಾದುನೋಡಬೇಕಾಗಿದೆ.

More from Filmibeat

English summary
Skanda Ashok, who charmed on Kannada television as Ramana acting journey on the big screen, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X