ಇನ್ನೂ ಕೆಲವಿದ್ದಾವೆ ; ಅಶ್ವಿನಿ ಗೌಡ ಬಳಸಿದ ಕೆಟ್ಟ ಪದಗಳ ಆಡಿಯೋ ಹಾಕಿದ ಸುದೀಪ್ - ರಾಜಮಾತೆ ತಬ್ಬಿಬ್ಬು

''ಬಿಗ್ ಬಾಸ್'' ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದು ತಲುಪುತ್ತಿದೆ. ದಿನದಿಂದ ದಿನಕ್ಕೆ ಮನೆಯಲ್ಲಿ ರಂಪ-ರಾಮಾಯಣ ಹೆಚ್ಚಾಗುತ್ತಿದೆ. ಅದರಲ್ಲಿಯೂ ಈ ವಾರ ಮನೆಯಲ್ಲಿ ಬರೀ ನಡೆದಿದ್ದು ಕಿರಿಕ್ಕೇ. ಒಂದು ಕಡೆ ಅಶ್ವಿನಿ ಗೌಡ ಅವರ ವಿರುದ್ಧ ಗಿಲ್ಲಿ ಸಮರ ಸಾರಿದ್ದರೆ ಮತ್ತೊಂದು ಕಡೆ ಅಶ್ವಿನಿ ಗೌಡ ಅವರಿಗೆ ರಘು ಕೂಡ ಕಣ್ಣೀರು ಹಾಕಿಸಿದ್ದಾರೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ...

ಅಶ್ವಿನಿ ಗೌಡ ಎಲ್ಲರಿಂದ ಮರ್ಯಾದೆ ಸಿಗಬೇಕು ಎನ್ನುವುದನ್ನು ನಿರೀಕ್ಷೆ ಮಾಡುತ್ತಾರೆಯೇ ಹೊರತು ಬೇರೆಯವರಿಗೆ ಮರ್ಯಾದೆ ಕೊಡುವುದಿಲ್ಲ. ಇವರ ಈ ವರ್ತನೆಯೇ ''ಬಿಗ್ ಬಾಸ್‌'' ಮನೆಯಲ್ಲಿ ಜಗಳಕ್ಕೆ ಕಾರಣವಾಗುತ್ತಿದೆ. ಮನೆಯ ಹೊರಗಡೆ ಕೂಡ ಅಶ್ವಿನಿ ಗೌಡ ಅವರ ನಡೆ ನುಡಿಯ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.

SLUR SHOCKER Kichcha Sudeep EXPOSES Ashwini Gowda s Foul Audio in Bigg Boss House

ಈ ಹಿನ್ನೆಲೆ ನಿನ್ನೆ ( ಶನಿವಾರ ) ವಾರದ ಕಥೆಗೆ ಮಂಗಳ ಹಾಡಲು ಬಂದಿದ್ದ ಕಿಚ್ಚ ಸುದೀಪ್ ಪಾಠ ಮಾಡಿದ್ದಾರೆ. ಅಶ್ವಿನಿ ಗೌಡ ಅವರ ಬಾಯಿಂದ ಉದುರಿದ ಅಣಿಮುತ್ತುಗಳನ್ನು ಅವರಿಗೆ ಕೇಳಿಸಿ ಅಭಿಪ್ರಾಯ ಕೇಳಿದರು.

ಅಶ್ವಿನಿ ಅವರೇ, ಒಂದು ಆಡಿಯೋ ಪ್ಲೇ ಮಾಡಬೇಕು ಮೇಡಂ ಎಲ್ಲೆಲ್ಲಿ ಏನೇನಾಯ್ತು ಅಂತ ಕೇಳಿಸಿಕೊಳ್ಳಿ ಎಂದು ಹೇಳಿದ ಸುದೀಪ್, ಅಶ್ವಿನಿ ಗೌಡ ಅವರ ಆಡಿಯೋವನ್ನು ಆಡಿಯೋ ಪ್ಲೇ ಮಾಡಿದರು. ಆಡಿಯೋದಲ್ಲಿ ಅಮಾವಾಸ್ಯೆನ ಜೊತೆಯಲ್ಲೇ ಇಟ್ಟುಕೊಂಡಿದ್ಯಾ ಹೋಗು.. ಈ ಕಾರ್ಟೂನ್ ಯಾವುದು..? ಫ್ರೀ ಪ್ರಾಡಕ್ಟ್.. ಯಾವನೋ ನೀನು.. ಹೋಗೋಲೇ.. ಹೋಗೋ.. ಮುಚ್ಕೊಂಡ್ ಮಲ್ಕೋ.. ನಿನಗೆ ಯೋಗ್ಯತೆ ಇಲ್ಲ.. ಟಾಪ್ ಟು ಬಾಟಂ ಗಾಂಚಲಿ.. ಯಾರೋ ನೀನು ಬ್ಲಡಿ ಫೆಲೋ.. ನಿನ್ ಯೋಗ್ಯತೆಗೆ ಇಷ್ಟು.. ಬ್ಲಡಿ ಲೂಸರ್.. ಎಂದೆಲ್ಲಾ ಅಶ್ವಿನಿ ಗೌಡ ಪದಗಳನ್ನು ಬಳಸಿದ್ದರು. ಇನ್ನೂ ಕೆಲವಿದ್ದಾವೆ. ಅವುಗಳನ್ನೆಲ್ಲಾ ಇಲ್ಲಿ ವೇದಿಕೆಯಲ್ಲಿ ಪ್ರಸಾರ ಮಾಡಲು ಬಯಸುವುದಿಲ್ಲ ಎಂದು ಸುದೀಪ್ ಹೇಳಿದರು.

ಸುದೀಪ್ ನೀಡಿದ ಈ ಶಾಕ್‌ಗೆ ಪ್ರತಿಕ್ರಿಯಿಸಿದ ಅಶ್ವಿನಿ ಗೌಡ, ಹೌದು, ನಾನು ಮಾತನಾಡಿದ್ದೇನೆ ಎಂದು ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡರು. ನನ್ನ ಮೆಚ್ಯೂರಿಟಿ ಲೆವಲ್‌ಗೆ ತೀರಾ ಕೆಳಹಂತಕ್ಕೆ ಇಳಿಯಲು ನಾನು ಇಷ್ಟ ಪಡುವುದಿಲ್ಲ ಎಂದು ಹೇಳಿದ ಅಶ್ವಿನಿ ಎಡವಿದ್ದೇನೆ ಆ ನಂತರ ತಿದ್ದುಕೊಂಡಿದ್ದೇನೆ ಎಂದು ಹೇಳಿದರು.

ಮುಂದುವರೆದು ಗಿಲ್ಲಿ ಮತ್ತು ರಘು ವಿಷಯದಲ್ಲಿ ನಾನು ಪ್ರಚೋದನೆಗೊಳಗಾದೆ ಅವರು ನನ್ನನ್ನು ಪ್ರೊವೋಕ್ ಮಾಡಿದರು ಎಂದು ಹೇಳಿದ ಅಶ್ವಿನಿ ಗೌಡ, ಸಂದರ್ಭಕ್ಕೆ ತಕ್ಕಂತೆ ನಾನು ಪ್ರತಿಕ್ರಿಯೆ ನೀಡಿದ್ದೇನೆ, ನಾನು ಸರಿ ಅಂತಾನೂ ಹೇಳಲ್ಲ, ತಪ್ಪು ಅಂತಾನೂ ಹೇಳಲ್ಲ, ನನಗೆ ನಾನೇ ಸ್ಟ್ಯಾಂಡ್ ತಗೊಬೇಕಿತ್ತು, ತಗೊಂಡಿದ್ದೇನೆ ಎಂದು ಹೇಳಿದರು.

slur-shocker-kichcha-sudeep-exposes-ashwini-gowdas-foul-audio-in-bigg-boss-house

ಅಶ್ವಿನಿ ಗೌಡ ಅವರ ಈ ಮಾತುಗಳಿಗೆ ಉತ್ತರ ನೀಡಿದ ಸುದೀಪ್, ಈ ಮನೆಯಲ್ಲಿ ಯಾರು ಅವರಿಗೆ ಅವರು ಸ್ಟ್ಯಾಂಡ್ ತಗೊಳ್ಳಲ್ಲ? ಆಗ ವಾದ ಆಗೇ ಆಗುತ್ತೆ. ಟ್ರಿಗರ್‌ ಆಗ್ತಿದೆ ಅಂದಾಗ ನೀವೂ ಹರ್ಟ್ ಮಾಡಿರಬಹುದಲ್ವಾ? ಎಂದು ಪ್ರಶ್ನೆ ಮಾಡಿದರು. ಆಗ ಅಶ್ವಿನಿ ಗೌಡ ಇರಬಹುದು ಅಣ್ಣ ಎಂದು ಹೇಳಿದರು.
ಮನೆಯಲ್ಲಿ ಮಹಿಳೆಯರಿಗೆ ಅವಮಾನ ಆಗುತ್ತಿಲ್ಲ. ಆ ರೀತಿ ಆದರೆ, ''ಬಿಗ್ ಬಾಸ್'' ಮಧ್ಯ ಪ್ರವೇಶ ಮಾಡುತ್ತಾರೆ ಎಂದ ಸುದೀಪ್ ಆ ಬಗ್ಗೆ ಪ್ರಶ್ನೆ ಮಾಡಬೇಡಿ. ಪದೇ ಪದೇ ಅವಮಾನ ಆಗಿದೆ ಎಂದು ಹೇಳಬೇಡಿ ಎಂದು ಮಾತಿನಲ್ಲಿಯೇ ತಿವಿದರು.ಮನೆಯಲ್ಲಿ ನಡೆದ ಜಗಳದಲ್ಲಿ ನಿಮ್ಮ ಪಾಲು ಕೂಡ ತುಂಬಾನೇ ಇದೆ ಎಂದು ಕೂಡ ಸುದೀಪ್ ಇದೇ ಸಂದರ್ಭದಲ್ಲಿ ಅಶ್ವಿನಿ ಗೌಡ ಅವರಿಗೆ ಹೇಳಿದರು.

More from Filmibeat

English summary
Host Kichcha Sudeep exposes Ashwini Gowda's secret foul language! Find out what shocking words were heard in the Bigg Boss house audio clip.
Read more about: ಟಿವಿ biggboss bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X