ಎಂಗೇಜ್‌ ಮೆಂಟ್‌ ಮಾಡಿಕೊಂಡ ಮತ್ತೊಂದು ಕಿರುತೆರೆ ಜೋಡಿ

By ಪ್ರಿಯಾ ದೊರೆ

ಕನ್ನಡ ಕಿರುತೆರೆಯಲ್ಲಿ ಈಗ ನಟ ನಟಿಯರು ಕೈ ಹಿಡಿದು ಹೊಸ ಬಾಳಿಗೆ ಕಾಲಿಡುವುದು ಹೆಚ್ಚಾಗಿದೆ. ಕಿರುತೆರೆಯಲ್ಲಿ ಮದುವೆಯ ಸಂಭ್ರಮವೇ ತುಂಬಿ ಹೋಗಿದೆ. ಧಾರಾವಾಹಿ ಕಲಾವಿದರು ಸಾಲು ಸಾಲಾಗಿ ಮದುವೆಯಾಗುತ್ತಿದ್ದಾರೆ.

ಇತ್ತೀಚೆಗೆ ಕಿರುತೆರೆ ಕಲಾವಿದರೂ ಪ್ರೀತಿಸಿ ಮದುವೆಯ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಹಲವರು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಸೆಮಣೆ ಏರಿ ಆಪ್ತರು, ಸ್ನೇಹಿತರನ್ನು ಕರೆದು ಮದುವೆ ಊಟ ಹಾಕಿಸಿದ್ದಾರೆ.

ಕೆಲವರು ಅದಾಗಲೇ ಮದುವೆಯಾಗಿದ್ದರೆ, ಇನ್ನೂ ಕೆಲವರು ಉಂಗುರ ಬದಲಾಯಿಸಿಕೊಂಡು ಮದುವೆಯ ದಿನವನ್ನು ಎದುರು ನೋಡುತ್ತಿದ್ದಾರೆ. ಅದೆಷ್ಟೋ ಜೋಡಿಗಳು ಕಿರುತೆರೆಯಲ್ಲೇ ಪರಿಚಯವಾಗಿ ಮದುವೆಯಾಗಿರುತ್ತಾರೆ.

ಪ್ರೀತಿಸಿ ಒಂದಾದ ಜೋಡಿಗಳು

ಪ್ರೀತಿಸಿ ಒಂದಾದ ಜೋಡಿಗಳು

ಇತ್ತೀಚೆಗಷ್ಟೇ ಎರಡು ಮೂರು ದಿನದ ಅಂತರಲ್ಲಿ ಎರಡೆರಡು ಕಿರುತೆರೆ ಜೋಡಿಗಳು ಎಂಗೇಜ್‌ ಆಗಿದ್ದರು. ಪ್ರೀತಿಯ ವಿಚಾರವನ್ನು ಗುಟ್ಟಾಗಿಟ್ಟು ಎಂಗೇಜ್ ಮೆಂಟ್ ಸಂದರ್ಭದಲ್ಲಿ ಬಹಿರಂಗ ಪಡಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಕೆಲವೇ ದಿನದ ಅಂತರದಲ್ಲಿ ಈಗ ಮತ್ತೊಂದು ಜೋಡಿ ಉಂಗುರ ಬದಲಾಯಿಸಿಕೊಂಡು ಸಂತಸವನ್ನು ಹಂಚಿಕೊಂಡಿತ್ತು. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಚಂದನ್-ಕವಿತಾ ಪ್ರೀತಿಸಿ ಮದುವೆಯಾದರು. ಇವರಂತೆಯೇ ಅಮೃತಾ ಮತ್ತು ಚಂದು ಗೌಡ, ಗ್ಯಾಬ್ರಿಯಾಲಾ ಸ್ಮಿತ್, ಐಶ್ವರ್ಯ ಸಿಂದೋಗಿ ಸೇರಿದಂತೆ ಹಲವು ಕಿರುತೆರೆ ನಟರು ಪ್ರೀತಿ ಮದುವೆಯಾಗಿದ್ದಾರೆ.

ಪ್ರಿಯಾಳನ್ನು ಅರಸಿದ ಮೂಲಿಮನಿ

ಪ್ರಿಯಾಳನ್ನು ಅರಸಿದ ಮೂಲಿಮನಿ

ಕಳೆದ ತಿಂಗಳು 'ಸತ್ಯ' ಧಾರಾವಾಹಿಯ ನಾಯಕ ನಟ ಸಾಗರ್ ಬಿಳಿ ಗೌಡ ಅವರು ಕೂಡ ತಮ್ಮ ಪ್ರೀತಿಯ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಬಗ್ಗೆ ಸಾಗರ್ ಬಿಳಿ ಗೌಡ ಫೋಟೋ ಹಂಚಿಕೊಂಡಿದ್ದರು. ಸಾಗರ್ ಬಿಳಿ ಗೌಡ ಅವರು ಕೂಡ ಕಿರುತೆರೆ ನಟಿ ಸಿರಿ ರಾಜು ಅವರನ್ನು ಪ್ರೀತಿಸಿ ಎಂಗೇಜ್‌ ಆಗಿದ್ದಾರೆ. ಮುಂದಿನ ವರ್ಷ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಇನ್ನು ಮೂರೇ ದಿನದ ಅಂತರದಲ್ಲಿ ನಟಿ ಪ್ರಿಯಾ ಆಚಾರ್ ಮತ್ತು ನಟ ಸಿದ್ದು ಮೂಲಿಮನಿ ಸದ್ದಿಲ್ಲದೇ ಒಂದಾಗಿದ್ದರು. ಎಂಗೇಜ್‌ ಮೆಂಟ್‌ ದಿನ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದರು. ಈ ಜೋಡಿ ಹಸೆ ಮಣೆ ಏರಲು ತುದಿಗಾಲಲ್ಲಿ ನಿಂತಿದೆ. ಇದೀಗ ಈ ಸಾಲಿಗೆ ಮತ್ತೊಂದು ಜೋಡಿ ಸೇರ್ಪಡೆಯಾಗಿದೆ.

ಹಾಸ್ಯ ಪಾತ್ರಗಳ ಮೂಲಕ ಫೇಮಸ್

ಹಾಸ್ಯ ಪಾತ್ರಗಳ ಮೂಲಕ ಫೇಮಸ್

ಹಾಸ್ಯ ನಟ ಲೋಕೇಶ್‌ ಬಸವಟ್ಟಿ ಅವರು ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟನಾ ಸಂಸ್ಥೆ ಸೇರಿ ಅಭಿನಯಿಸಲು ಪ್ರಾರಂಭಿಸಿದ ಲೋಕೇಶ್‌ ಬಸವಟ್ಟಿ ಅವರು 'ಪಾಯಿಂಟ್‌ ಪರಿಮಳಾ', 'ಪಾರ್ವತಿ ಪರಮೇಶ್ವರ' ಹಾಗೂ 'ಸಿಲ್ಲಿ ಲಲ್ಲಿ' ಧಾರಾವಾಹಿಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದರು. ಇವರಿಗೆ ಪಾರ್ವತಿ ಪರಮೇಶ್ವರ ಧಾರಾವಾಹಿ ಹೆಸರು ತಂದುಕೊಟ್ಟಿತು. ಇನ್ನು 'ಚತುರ್ಭುಜ' ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ನಟನೆ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಲೋಕೇಶ್‌ ಅವರು ಬಣ್ಣದ ಲೋಕದಲ್ಲೇ ತಮ್ಮ ಜೋಡಿಯನ್ನು ಆರಿಸಿಕೊಂಡಿದ್ದಾರೆ.

ಪ್ರೀತಿಸಿ ಒಂದಾದ ಜೋಡಿ

ಪ್ರೀತಿಸಿ ಒಂದಾದ ಜೋಡಿ

ಲೋಕೇಶ್‌ ಬಸವಟ್ಟಿ ಅವರು ರಚನಾ ದಶರಥ್ ಅವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ರಚನಾ ಅವರು ಸ್ಯಾಂಡಲ್‌ ವುಡ್‌ ನಲ್ಲಿ ಸಕ್ರಿಯರಾಗಿದ್ದಾರೆ. 'ಯೋಗಿ ದುನಿಯಾ', 'ಸಮರ್ಥ', 'ಮಾತು ಕಥೆ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೂಲತಃ ರಚನಾ ನೇಪಾಳಿಯವರಾದರೂ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ರಚನಾ ಹಾಗೂ ಲೋಕೇಶ್‌ ಬಸವಟ್ಟಿ ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದಾರೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇನ್ನು ಮದುವೆಯ ದಿನಾಂಕವನ್ನು ಈ ಜೋಡಿ ತಿಳಸಬೇಕಿದೆ.

More from Filmibeat

English summary
Small Screen Actor Lokesh basavatti gets engaged to Rachana dasharath. Lokesh Acted In pain Parimala, Parvathy parameshwara and Silly lally Serials. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X