twitter
    For Quick Alerts
    ALLOW NOTIFICATIONS  
    For Daily Alerts

    ಕಿರುತೆರೆ ನಟ ಚೇತನ, ಗಾಯಕ ವೆಂಕಟಾದ್ರಿ ವಿಧಿವಶ

    By Rajendra
    |

    ಕನ್ನಡ ಕಿರುತೆರೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿ ವೆಂಕಟಾದ್ರಿ ಎಂದೇ ಆತ್ಮೀಯರಾಗಿದ್ದ ವೆಂಕಟಾದ್ರಿ ಮೈಸೂರು ಸುಬ್ಬಾರಾವ್ (57) ಇನ್ನು ನೆನಪು ಮಾತ್ರ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ (ಜನವರಿ 31) ಮಧ್ಯಾಹ್ನ 2.15ಕ್ಕೆ ವಿಧಿವಶರಾಗಿದ್ದಾರೆ.

    ಕಳೆದ 10 ದಿನಗಳಿಂದ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 4 ದಿನಗಳಿಂದ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    Venkatadri passes away
    ವೆಂಕಟಾದ್ರಿ ಅವರು 50ಕ್ಕೂ ಹೆಚ್ಚು ಧಾರಾವಾಹಿಗಳು ಹಾಗೂ ಅಷ್ಟೇ ಸಂಖ್ಯೆಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಹಠಾತ್ ನಿಧನಕ್ಕೆ ಕನ್ನಡ ಕಿರುತೆರೆ ಲೋಕ ಹಾಗೂ ಚಿತ್ರರಂಗ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದು ಕಂಬನಿ ಮಿಡಿದಿದೆ.

    ಮೃತರ ಅಂತ್ಯಕ್ರಿಯೆಗಳು ಭಾನುವಾರ (ಫೆಬ್ರವರಿ 1) ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಬಾಗಲಕುಂಟೆಯ ಅವರ ಸ್ವಗೃಹದಲ್ಲಿ ನೆರವೇರಲಿವೆ. ಅವರ ಸ್ವಗೃಹದ ವಿಳಾಸ ಹೀಗಿದೆ - #567, ಹಂಸಧ್ವನಿ, 23ನೇ ಕ್ರಾಸ್, ಬಾಗಲಕುಂಟೆ, ಹೆಸರಘಟ್ಟ ರಸ್ತೆ, ಬೆಂಗಳೂರು- 560073.

    ವೆಂಕಟಾದ್ರಿ ಅವರು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಫೇಸ್ ಬುಕ್ ನಲ್ಲಿ ಶೀಘ್ರ ಗುಣಮುಖರಾಗಲಿ ಎಂಬ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿತ್ತು. ಇದೀಗ ಅವರ ಹಠಾತ್ ಕಣ್ಮರೆಯಿಂದ ಅವರ ಫೇಸ್ ಬುಕ್ ಪುಟಗಳ ತುಂಬ ಸಂತಾಪ ಮಡುಗಟ್ಟಿದೆ. (ಫಿಲ್ಮಿಬೀಟ್ ಕನ್ನಡ)

    English summary
    Kannada small screen actor and singer Venkatadri Mysore Subba Rao, popularly known as Venkatadri passes away in Bengaluru on 31st January, 2015. He was suffering from Degue fever for last 10 days.
    Saturday, January 31, 2015, 17:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X