For Quick Alerts
  ALLOW NOTIFICATIONS  
  For Daily Alerts

  ಬಣ್ಣದಲೋಕದಲ್ಲಿ ನವತಾರೆಯಾಗಿ ಮಿಂಚುತ್ತಿರುವ ಹ್ಯಾಂಡ್‌ಸಮ್ ಹುಡುಗ ವಿನಯ್ ಕಶ್ಯಪ್

  |

  ಬಣ್ಣದ ಜಗತ್ತು ಎನ್ನುವುದೇ ಹಾಗೆ, ಎಂತವರನ್ನು ತನ್ನತ್ತ ಸೆಳೆಯುವ ಶಕ್ತಿ ಹೊಂದಿದೆ. ಐಟಿ ಕ್ಷೇತ್ರದಲ್ಲಿ ಕೈ ತುಂಬಾ ಸಂಬಳ, ಒಳ್ಳೆಯ ಸ್ಥಾನಮಾನ ಹೊಂದಿದ್ದರು ಸಿನಿಮಾ, ಧಾರಾವಾಹಿ ಪ್ರಪಂಚಕ್ಕೆ ಬಂದು ಯಶಸ್ಸು ಕಂಡಿರುವ ಅನೇಕರನ್ನು ನೋಡಿದ್ದೇವೆ.

  ಹೀಗೆ, ಐಟಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಹಾಗೂ ಒಳ್ಳೆಯ ವೇತನಕ್ಕೆ ಗುಡ್ ಬೈ ಹೇಳಿ ಬಣ್ಣದ ಜಗತ್ತಿಗೆ ಹಾಯ್ ಹೇಳಿರುವವರಲ್ಲಿ ಉದಯೋನ್ಮುಖ ಕಲಾವಿದ ವಿನಯ್ ಕಶ್ಯಪ್ ಸಿಂಹ ಸಹ ಒಬ್ಬರು.

  ನಿಶ್ಚಿತಾರ್ಥ ಮಾಡಿಕೊಂಡ ಕಿರುತೆರೆಯ ಖ್ಯಾತ ನಟಿ ಚೈತ್ರಾ ರೆಡ್ಡಿ ನಿಶ್ಚಿತಾರ್ಥ ಮಾಡಿಕೊಂಡ ಕಿರುತೆರೆಯ ಖ್ಯಾತ ನಟಿ ಚೈತ್ರಾ ರೆಡ್ಡಿ

  ಚಿತ್ರಜಗತ್ತಿನಲ್ಲಿ ಮಿಂಚಬೇಕು ಎಂಬ ಆಸೆಯಿಂದ ಐಟಿ ಕ್ಷೇತ್ರ ಬಿಟ್ಟು ಪರಿಪೂರ್ಣವಾಗಿ ನಟನೆ ಕಡೆ ಗಮನಹರಿಸಿದ್ದಾರೆ. ಸದ್ಯ ವಿನಯ್ ಕಶ್ಯಪ್ ಕನ್ನಡ ಕಿರುತೆರೆಯಲ್ಲಿ ತೊಡಗಿಕೊಂಡಿದ್ದಾರೆ. ಉದಯಟಿವಿಯಲ್ಲಿ ಪ್ರಸಾರವಾಗುವ ಸೇವಂತಿ ಧಾರಾವಾಹಿಯಲ್ಲಿ ಅಶ್ವಿನ್ ಪಾತ್ರದಲ್ಲಿ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ.

  ಅದಕ್ಕೂ ಮುಂಚೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ 'ಅರಮನೆ' ಧಾರಾವಾಹಿಯಲ್ಲಿ ಅರುಣ್ ಎಂಬ ಪಾತ್ರದಲ್ಲಿ ಮಿಂಚಿದ್ದರು.

  ಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತ

  ಆ ಕಡೆ ಸಿನಿಮಾ ಇಂಡಸ್ಟ್ರಿಗೂ ಕಾಲಿರುವ ವಿನಯ್ ಕಶ್ಯಪ್ 'ಮೃಗಶಿರಾ' ಖ್ಯಾತಿಯ ನಿರ್ದೇಶಕ ಶ್ರೀವತ್ಸ ಅವರ 'ಗದಾಯುದ್ಧ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

  Small screen actor Vinay Kashyap Simha Biography

  ಧಾರಾವಾಹಿ ಹಾಗೂ ಸಿನಿಮಾ ಹೊರತು ಪಡಿಸಿ ಕೆಲವು ಸ್ಟೇಜ್ ಕಾರ್ಯಕ್ರಮಗಳು ಹಾಗೂ ಅವಾರ್ಡ್ ಕಾರ್ಯಕ್ರಮಗಳಲ್ಲೂ ಮಿಂಚಿದ್ದಾರೆ. 2018ರ ಸೈಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದ ಒಂದು ಸ್ಟ್ರಾಂಗ್ ಕಾಫಿ ಕಿರುಚಿತ್ರದ ಅಭಿನಯಕ್ಕೆ ಉತ್ತಮ ಪ್ರಶಂಸೆ ಪಡೆದುಕೊಂಡಿದ್ದರು.

  ರಂಗಭೂಮಿಯಲ್ಲೂ ಸಹ ತೊಡಗಿಕೊಂಡಿದ್ದರು. 2017-18ನೇ ಸಾಲಿನಲ್ಲಿ ತರಂಗ ಸಂಸ್ಥೆಯ ವಿದ್ಯಾರ್ಥಿಯಾಗಿದ್ದರು. ಕೋಟಿಗೊಬ್ಬಳು, ಟ್ರೈನ್ ಟು ಪಾಕಿಸ್ತಾನ್ ಎಂಬ ನಾಟಕಗಳಲ್ಲಿ ಹಾಗೂ ಬೀದಿ ನಾಟಕಗಳಲ್ಲಿಯೂ ವಿನಯ್ ಕಶ್ಯಪ್ ನಟಿಸಿ ತರಬೇತಿ ಪಡೆದುಕೊಂಡಿದ್ದರು.

  English summary
  Small screen actor Vinay Kashyap Simha Biography. He is busy in Kannada serials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X