ಮಾನಸಿ ಜೋಶಿಯನ್ನು ಮದುವೆಯಾಗುತ್ತಿರುವ ಹುಡುಗ ಯಾರು ? ಯಾವತ್ತು ಮದುವೆ ?
ಎರಡು ದಿನಗಳ ಹಿಂದೆಯಷ್ಟೇ ಕಿರುತೆರೆ ನಟಿ ಮಾನಸಿ ಜೋಶಿ ಅವರು ತಮ್ಮ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು.
ಕಳೆದ ವರ್ಷವೇ ಎಂಗೇಜ್ ಮೆಂಟ್ ಮಾಡಿಕೊಂಡ ನಟಿ ಮಾನಸಿ ಜೋಶಿ ಅವರು ಇದೀಗ ತಮ್ಮ ಮದುವೆಯ ದಿನಾಂಕವನ್ನು ಸೇವ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಸದ್ಯ ನಟಿ ಮಾನಸಿ ಜೋಶಿ ಅವರು 'ಚಂದ್ರಕಲಲೆಯುಮ್ ಚಂದ್ರಕಾಂತಮ್' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ನಟನೆಯ ಜೊತೆಗೆ ವ್ಯೆಯಕ್ತಿಕ ಜೀವನದಲ್ಲಿ ಬಡ್ತಿ ಪಡೆಯಲು ಮುಂದಾಗಿದ್ದಾರೆ.

ಮದುವೆ ದಿನಾಂಕ ತಿಳಿಸಿದ ನಟಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪಾರು ಧಾರಾವಾಹಿಯಲ್ಲಿ ಅನುಷ್ಕಾ ಆಗಿ ಅಭಿನಯಿಸಿದ್ದ ಮಾನಸಿ ಜೋಶಿ ಅವರು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ರಾಘವ್ ಎಂಬುವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಮಾನ್ಸಿ ಜೋಶಿ ತಮ್ಮ ಎಂಗೇಜ್ಮೆಂಟ್ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಮಲಯಾಳಂನ ಚಂದ್ರಕಲಲೆಯುಮ್ ಚಂದ್ರಕಾಂತಮ್ ಧಾರಾವಾಹಿಯಲ್ಲಿ ನಾಯಕಿಯಾಗಿದ್ದು, ನಂದಾ ಎಂಬ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇನ್ನು ನಟಿ ಮಾನ್ಸಿ ಜೋಶಿ ಅವರು ತಮ್ಮ ಮದುವೆ ದಿನಾಂಕವನ್ನು ತಿಳಿಸಿದ್ದು, ಫೆಬ್ರವರಿ ತಿಂಗಳ 16ರಂದು ಮಾನ್ಸಿ ಜೋಶಿ ಅವರು ರಾಘವ್ ಎಂಬುವರ ಕೈ ಹಿಡಿಯಲಿದ್ದಾರೆ. ಈ ಬಗ್ಗೆ ವೀಡಿಯೋ ಅಪ್ ಲೋಡ್ ಮಾಡಿ ಅಭಿಮಾನಿಗೆ ಡೇಟ್ ಸೇವ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಬೆಂಗಳೂರಿನ ಬೆಡಗಿ ಡ್ಯಾನ್ಸರ್ ಕೂಡ ಹೌದು
ಬಿಳಿ ಹೆಂಡ್ತಿ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಮಾನಸಿ ಜೋಶಿ ಅವರು ಪರಭಾಷೆಳಲ್ಲೂ ನಟಿಸುತ್ತಿದ್ದಾರೆ. ಕಳೆದ ಐದಾರು ವರ್ಷದಿಂದ ಕಿರುತೆರೆಯಲ್ಲಿರುವ ಮಾನ್ಸಿ ಜೋಶಿ ಅವರು, ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಶೇಡ್ ನಲ್ಲಿ ನಟಿಸಿದ್ದಾರೆ. ಭರತನಾಟ್ಯ ಡ್ಯಾನ್ಸರ್ ಆಗಿರುವ ಮಾನ್ಸಿ ಜೋಷಿ ಅವರಿಗೆ ಹಲವು ಕನಸುಗಳಿವೆ. ಮೂಲತಃ ಧಾರವಾಡದವರಾಗಿರುವ ನಟಿ ಮಾನ್ಸಿ ಜೋಶಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಾನ್ಸಿ ಜೋಷಿ ಅವರಿಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಭರತನಾಟ್ಯ ಕಲಿತಿರುವ ಮಾನ್ಸಿ ಅವರು ದೇಶದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ. ಬರೋಬ್ಬರಿ 250ಕ್ಕೂ ಹೆಚ್ಚು ಡ್ಯಾನ್ಸ್ ಶೋಗಳನ್ನು ನೀಡಿದ್ದಾರೆ.
ಮಾನ್ಸಿ ನಾಲ್ಕು ಭಾಷೆಗಳಲ್ಲೂ ನಟನೆ
ಮಾನ್ಸಿ ಜೋಶಿ ಅವರು ರಾಧಾ ರಮಣ, ಪಾರು, ನಾಯಕಿ ನಟಿಸಿದ್ದಾರೆ. ಕನ್ನಡದ ಕಸ್ತೂರಿ ನಿವಾಸ ಧಾರಾವಾಹಿಯ ರೀಮೇಕ್ ತೆಲುಗಿನಲ್ಲಿ ಮೂಡಿ ಬಂದಿತ್ತು. ಇದರಲ್ಲಿ ಮಾನ್ಸಿ ನಟಿಸಿದ್ದರು. ತೆಲುಗಿನಲ್ಲಿ ಮೂಡಿ ಬಂದ ಆಕಾಸಮಂತ ಧಾರಾವಾಹಿಯು ಈಗ ಕನ್ನಡದಲ್ಲೂ ರಿಮೇಕ್ ಆಗಿದೆ. ಅದೇ ಅಣ್ಣ ತಂಗಿ ಧಾರಾವಾಹಿ. ಬಾಳೆ ಕುಮಾರ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಮಾನ್ಸಿ ಜೋಶಿ ಕೂಡ ಬಣ್ಣ ಹಚ್ಚಿದ್ದರು. ಇನ್ನು ತಮಿಳಿನ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.
ಮಾನ್ಸಿ ಸಹೋದರಿಯೂ ಕಿರುತೆರೆ ನಟಿ
ಇನ್ನು ಮಾನ್ಸಿ ಅವರು ಹೆಚ್ಚಾಗಿ ತಮ್ಮ ಸಹೋದರಿಯ ಜೊತೆಗೆ ರೀಲ್ಸ್ ಮಾಡುವುದು, ಟ್ರಾವೆಲ್ ಮಾಡುವುದನ್ನು ಮಾಡುತ್ತಿರುತ್ತಾರೆ. ಈಗಾಗಲೇ ತಾಜ್ ಮಹಲ್, ವಾರಣಾಸಿ, ದುಬೈ ಸೇರಿದಂತೆ ಹಲವೆಡೆ ಕುಟುಂಬದ ಜೊತೆಗೆ ಟ್ರಾವೆಲ್ ಮಾಡಿದ್ದಾರೆ. ಇನ್ನು ಮಾನ್ಸಿ ಸಹೋದರಿ ಇಂಚರಾ ಜೋಶಿ ಕೂಡ ಕಿರುತೆರೆ ನಟಿಯಾಗಿದ್ದು, ಸರಸು, ರಂಗನಾಯಕಿ, ಮರಳಿ ಬಂದಳು ಸೀತೆ, ಅರವಿಂದ ಸಮೇತ, ಕಥೆಯೊಂದು ಶುರುವಾಗಿದೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಮುಂದಿನ ಬದುಕಿನ ಬಗ್ಗೆ ಪ್ಲಾನ್ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











