ಚಿತ್ರರಂಗದಲ್ಲಿ ಮಿಂಚುತ್ತಿರುವ ಸಮೀಕ್ಷಾರ ಕಿರುತೆರೆ ಪಯಣ ಹೇಗಿತ್ತು..?
ಕೆಲ ವರ್ಷಗಳ ಹಿಂದೆ ಸಿನಿಮಾ ನಟಿಯಾಗಬೇಕು. ಹೀರೋಯಿನ್ ಆಗಿ ಮಿಂಚಬೇಕು ಎಂದೆಲ್ಲಾ ಕನಸು ಕಾಣುತ್ತಿದ್ದ ನಟಿ ಸಮೀಕ್ಷಾ ಈಗ ಅವರ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಮುದ್ದು ಮುಖದ ಸುಂದರಿ ಕರಾಳತೆಯ ದರ್ಶನ ನೀಡುವ ನೆಗೆಟಿವ್ ಶೇಡ್ ನಲ್ಲಿಯೂ ಅದ್ಭುತವಾದ ಅಭಿನಯ ನೀಡಿದ್ದಾರೆ. ಮುಗ್ಧತೆಯ ಶಾಂತ ಮುಖ ಹೊತ್ತು ಪ್ರೇಕ್ಷಕರ ಮನ ಗೆಲ್ಲುವಲ್ಲೂ ಜೈ ಎನಿಸಿಕೊಂಡಿದ್ದಾರೆ ಸಮೀಕ್ಷಾ. ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ನಟಿಸಿರುವ ಮುದ್ದು ಮುಖದ ಚೆಲುವೆ ಸಮೀಕ್ಷಾ ಅವರು ಈಗ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಮಲೆನಾಡಿನಿಂದ ಬಂದು, ಯಾರ ಸಹಾಯವೂ ಇಲ್ಲದೇ, ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಕಿರುತೆರೆ ಹಾಗೂ ಬೆಳ್ಳೆತೆರೆಯಲ್ಲಿ ತಮ್ಮ ನಟನೆಯ ಮೂಲಕವೇ ಛಾಪು ಮೂಡಿಸಿದ್ದಾರೆ. ಓದು ಮುಗಿಯುತ್ತಿದ್ದಂತೆ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದ ಸಮೀಕ್ಷಾ ಹಾಗೇ ನಟನಾ ರಂಗಕ್ಕೂ ಪಾದಾರ್ಪಣೆ ಮಾಡಿದರು.

ಮೀನಾಕ್ಷಿ ಮದುವೆಗೆ ಬಂದ ಕ್ಯೂಟ್ ಜಾನು
ಚಿಕ್ಕ ವಯಸ್ಸಿನಿಂದಲೇ ನಟಿಯಾಗಬೇಕು ಎಂದು ಆಸೆ ಪಟ್ಟಿದ್ದ ಸಮೀಕ್ಷಾ ಡಿಗ್ರಿ ಮುಗಿಸಿದ್ದೇ ತಡ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಬಿಟ್ಟರು. ಅಲ್ಲಿಂದ ಸೀದಾ ಅವರು ಬಂದು ಸೇರಿದ್ದು, ಸಿನಿರಂಗಕ್ಕೆ. ಉದಯ ಟಿವಿಯಲ್ಲಿ ಮೂಡಿ ಬಂದ ಮೀನಾಕ್ಷಿ ಮದುವೆ ಧಾರಾವಾಹಿ ಮೂಲಕ ಸಮೀಕ್ಷಾ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ತಮ್ಮ ನಟನಾ ಜರ್ನಿಯನ್ನು ಪ್ರಾರಂಭಿಸಿದರು. ನಂತರ ಮುದ್ದುಲಕ್ಷ್ಮೀ, ಮೂರುಗಂಟು, ಸುಬ್ಬಲಕ್ಷ್ಮೀ ಸಂಸಾರ, ಮನಸೆಲ್ಲಾ ನೀನೇ ಹೀಗೆ ಕೆಲ ಧಾರಾವಾಹಿಗಳಲ್ಲಿ ನಟಿಸಿದರು. ಒಂದಾದ ಮೇಲೆ ಒಂದರಂತೆ ಬಂದ ಅವಕಾಶಗಳನ್ನು ಬಿಡದೇ ಸದುಪಯೋಗ ಪಡಿಸಿಕೊಂಡರು.

ಆಹಾರ ಪ್ರಿಯೆ ಬೊಂಬಾಟ್ ಲಕ್ಷ್ಮೀ
ಬೆಸಿಕಲಿ ಮಲೆನಾಡು ಪ್ರದೇಶದಿಂದ ಬಂದಿರುವ ಸಮೀಕ್ಷಾಗೆ ನಾನ್ವೆಜ್ ಅಂದರೆ ಅಚ್ಚುಮೆಚ್ಚಂತೆ. ಅದರಲ್ಲೂ ಸೀ ಫುಡ್ ಅನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರಂತೆ. ಸಿ ಫುಡ್ ನಲ್ಲೂ ರವಾ ಫಿಶ್ ಫ್ರೈ, ಫಿಶ್ ಕರ್ರಿ, ಫಿಶ್ ಕಬಾಬ್ ಗಳು ಸಮೀಕ್ಷಾ ಅವರ ಆಲ್ ಟೈಮ್ ಫೇವರಿಟ್ ಅಂತೆ. ಇನ್ನು ವೆಜ್‌ನಲ್ಲಿ ಸಮೀಕ್ಷಾ ಅವರಿಗೆ ಅನ್ನ ಸಾಂಬಾರು, ಚಿತ್ರಾನ್ನ, ಪುಳಿಯೋಗರೆಯನ್ನು ಇಷ್ಟಪಟ್ಟು ತಿನ್ನುತ್ತಾರಂತೆ. ಇನ್ನು ನಿತ್ಯ ಅನ್ನ ಸಾಂಬಾರ್ ಅನ್ನು ಪ್ರಿಫರ್ ಮಾಡುತ್ತಾರಂತೆ. ಆದಷ್ಟು ಮನೆಯ ಊಟ ತಿನ್ನಲು ಬಯಸುತ್ತಾರಂತೆ. ಇವರ ತಂದೆ ಅಡುಗೆ ಮಾಡುವುದರಲ್ಲಿ ಎಕ್ಸ್ ಪರ್ಟ್ ಅಂತೆ. ಇವರ ಟೇಸ್ಟಿಗೆ ತಕ್ಕಂತೆ ರುಚಿ ರುಚಿಯಾಗಿ ಮಾಡಿ ಬಡಿಸುತ್ತಾರಂತೆ.

ಡಿಫರೆಂಟ್ ಡಯೆಟ್
ಇನ್ನು ಸಮೀಕ್ಷಾ ಅವರ ಡಯಟ್ ಒಂಥರಾ ಡಿಫರೆಂಟ್ ಡಯಟ್ ಎಂದರೆ ತಪ್ಪಾಗೋದಿಲ್ಲ. ಸಮೀಕ್ಷಾ ಅವರು ಡಯಟ್ ಮಾಡುವುದಿಲ್ಲವಂತೆ. ಆದರೆ ವಾರದಲ್ಲಿ ಮೂರು ದಿನ ವೆಜ್ ತಿಂದರೆ, ಉಳಿದ ಮೂರು ದಿನ ನಾನ್ ವೆಜ್ ತಿನ್ನುತ್ತಾರಂತೆ. ಇನ್ನು ಹದಿನೈದು ದಿನಕ್ಕೊಮ್ಮೆ ಲಿಮಿಟೆಡ್ ಚಾಟ್ಸ್ ಸೇವಿಸುತ್ತಾರಂತೆ. ಇದು ಸಮೀಕ್ಷಾ ಅವರ ಸೌಂದರ್ಯದ ಗುಟ್ಟು. ಜೊತೆಗೆ ಶೂಟಿಂಗ್ ನಲ್ಲಿ ಎಷ್ಟೇ ಬ್ಯುಸಿ ಇದ್ದರೂ, ಮನೆಗೆ ಹೋಗಿ ಅಡುಗೆ ಮಾಡಿಕೊಂಡು ಊಟ ಮಾಡುತ್ತಾರಂತೆ.

ಲವ್ ಲಿ ಎನ್ನಲಿರುವ ಸಮೀಕ್ಷಾ
ಮೂಲತಃ ಶಿವಮೊಗ್ಗದವರಾದರೂ, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಸಮೀಕ್ಷಾ ಅವರಿಗೆ ಈಗೀಗ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ದೊರಕಿ ಬರುತ್ತಿವೆ. ದಿ ಟೆರರಿಸ್ಟ್, 99, ಫ್ಯಾನ್, ಜೇಮ್ಸ್ ಚಿತ್ರಗಳಲ್ಲಿ ಸಮೀಕ್ಷಾ ಈಗಾಗಲೇ ನಟಿಸಿದ್ದು, ಸೈ ಎನಿಸಿಕೊಂಡಿದ್ದಾರೆ. ಇನ್ನು ಇದೀಗ ನಾಯಕಿಯಾಗಿ ನಟಿಸುವ ಚಾನ್ಸ್ ದೊರಕಿದ್ದು, ವಸಿಷ್ಠ ಸಿಂಹ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಲವ್ ಲಿ ಎಂಬ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಸಮೀಕ್ಷಾ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











