India
  For Quick Alerts
  ALLOW NOTIFICATIONS  
  For Daily Alerts

  ಭಾವನಾ ಆಗಿ ತೆರೆ ಮೇಲೆ ಮತ್ತೆ ಮಿಂಚುತ್ತಿರುವ ನಿರೂಪಕಿ ಸುಷ್ಮಾ ರಾವ್

  By ಪ್ರಿಯಾ ದೊರೆ
  |

  ಮಾತಿನ ಮಲ್ಲಿ ಮಲೆನಾಡ ಬೆಡಗಿ ಸುಷ್ಮಾ ರಾವ್‌ ಈಗ ಮತ್ತೆ ಕಿರುತೆರೆಗೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ಅದೂ ಕೂಡ ನಿರೂಪಕಿಯಾಗಿ ಅಲ್ಲ, ಬದಲಿಗೆ ನಟಿಯಾಗಿ, ಧಾರಾವಾಹಿಯೊಂದರಲ್ಲಿ ಮಿಂಚುತ್ತಿದ್ದಾರೆ. ಮತ್ತದೇ ಹಳೆಯ ಭಾವನಾ ಎಂಬ ಹೆಸರಿನ ಮೂಲಕವೇ ಕಾಣಿಸಿಕೊಂಡಿರುವುದು ವಿಶೇಷ.

  ಚಿಕ್ಕಮಗಳೂರಿನ ಕೊಪ್ಪದ ಹುಡುಗಿ ಸುಷ್ಮಾ ರಾವ್‌ ಗುಪ್ತಗಾಮಿನಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು, ಸೀರಿಯಲ್ಸ್‌, ನಿರೂಪಣೆ ಎರಡರಲ್ಲೂ ಸೈ ಎನಿಸಿಕೊಂಡವರು. ಆಗಾಗ ಸಣ್ಣ ಪುಟ್ಟ ಬ್ರೇಕ್‌ ಪಡೆಯುತ್ತಿದ್ದ ಸುಷ್ಮಾ ರಾವ್‌ ಅವರು ಈಗ ಧಾರಾವಾಹಿಗೆ ರಿ-ಎಂಟ್ರಿ ಕೊಟ್ಟಿದ್ದಾರೆ.

  ಜೇನುಗೂಡಿನಲ್ಲಿ ಅಮೆರಿಕ ಅಮ್ಮನದ್ದೇ ಕಾಟ!ಜೇನುಗೂಡಿನಲ್ಲಿ ಅಮೆರಿಕ ಅಮ್ಮನದ್ದೇ ಕಾಟ!

  ಆದರೆ, ಸುಷ್ಮಾ ರಾವ್‌ ಅವರು ಯಾವುದೋ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ಈಗಾಗಲೇ ಮೂಡಿ ಬರುತ್ತಿರುವ ಧಾರಾವಾಹಿಯಲ್ಲಿ ಹೊಸ ಪಾತ್ರವನ್ನು ಸುಷ್ಮಾ ನಿರ್ವಹಿಸಲಿದ್ದಾರೆ. ಅದೂ ಕೂಡ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗೆ. ಯಾವುದು ಆ ಧಾರಾವಾಹಿ ಮುಂದೆ ಓದಿ..

  ಕಿರುತೆರೆಯಲ್ಲಿ ಮಿಂಚಿದ್ದ ಭಾವನಾ

  ಕಿರುತೆರೆಯಲ್ಲಿ ಮಿಂಚಿದ್ದ ಭಾವನಾ

  ಸುಷ್ಮಾ ಕೆ ರಾವ್‌ ಅವರು ಮೂಲತಃ ಚಿಕ್ಕಮಗಳೂರಿನವರು. ಭಾಗೀರತಿ ಧಾರಾವಾಹಿ ಮೂಲಕ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟರು. 'ಗುಪ್ತಾಗಾಮಿನಿ' ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ಮಿಂಚಿದ್ದರು. ಭಾವನಾ ಪಾತ್ರ ಸುಷ್ಮಾ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. 'ಗುಪ್ತಗಾಮಿನಿ' ಧಾರಾವಾಹಿಗೆ ಕರ್ನಾಟಕ ಶ್ರೇಷ್ಠ ಕಿರುತೆರೆ ಧಾರಾವಾಹಿ ಪ್ರಶಸ್ತಿ ಕೂಡ ಲಭಿಸಿತ್ತು. ಸುಷ್ಮಾ ಅವರು ಜೀ ಕನ್ನಡದಲ್ಲಿ ಮೂಡಿ ಬಂದ 'ಸೊಸೆ ತಂದ ಸೌಭಾಗ್ಯ' ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದರು. ಇನ್ನು 'ಸ್ವಾತಿ ಮುತ್ತು', 'ಯಾವ ಜನ್ಮದ ಮೈತ್ರಿ' ಧಾರಾವಾಹಿಗಳಿಗೆ ಸುಷ್ಮಾ ಅವರು ಬಣ್ಣ ಹಚ್ಚಿದ್ದರು.

  ಹಾಸಿಗೆಯಿಂದ ಎದ್ದು ಓಡಿದ ಆರ್ಯನ ಹೊಸ ಪ್ಲ್ಯಾನ್ ಏನು?ಹಾಸಿಗೆಯಿಂದ ಎದ್ದು ಓಡಿದ ಆರ್ಯನ ಹೊಸ ಪ್ಲ್ಯಾನ್ ಏನು?

  ನಿರೂಪಣೆಗೂ ಸೈ ಎಂದಿದ್ದ ನಟಿ

  ನಿರೂಪಣೆಗೂ ಸೈ ಎಂದಿದ್ದ ನಟಿ

  ಇನ್ನು ಸುಷ್ಮಾ ರಾವ್‌ ಅವರು ನಟನೆಗೆ ಮಾತ್ರ ಸೀಮಿತವಾಗಿರದೆ ನಿರೂಪಣೆಗೂ ಸೈ ಎಂದಿದ್ದರು. ಸುಷ್ಮಾ ರಾವ್ ನಟನೆಗಿಂತಲೂ ನಿರೂಪಣೆ ಮಾಡಿದ್ದೇ ಹೆಚ್ಚು. ಸೃಜನ್‌ ಲೋಕೇಶ್‌ ನೇತೃತ್ವದ 'ಸೈ' ಎಂಬ ರಿಯಾಲಿಟಿ ಶೋ ನಲ್ಲಿ ನಿರೂಪಣೆ ಮಾಡಿದ್ದರು. ಮೊದ-ಮೊದಲು ಕಷ್ಟ ಪಟ್ಟರಾದರೂ ಸುಲಿಲತವಾಗಿ ಕನ್ನಡ ಮಾತನಾಡುತ್ತಾ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸೈ ಬಳಿಕ ಸೀರಿಯಲ್ ಸಂತೆ, ಹಾಡು ಹರಟೆ, ಯಾರಿಗುಂಟು ಯಾರಿಗಿಲ್ಲ. ಮನೆ ಮನೆ ಮೀನಾಕ್ಷಿ, ಜೀನ್ಸ್ ಹೀಗೆ ಹಲವು ರಿಯಾಲಿಟಿ ಶೋ ಗಳಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲದೇ, ಇತರೆ ವೇದಿಕೆ ಸಮಾರಂಭಗಳಿಗೂ ನಿರೂಪಣೆ ಮಾಡಿರುವ ಸುಷ್ಮಾ ರಾವ್‌ ಅವರು ಇಂದಿಗೂ ಆಂಕರಿಂಗ್‌ ಮಾಡುತ್ತಿರುತ್ತಾರೆ.

  ಭರತನಾಟ್ಯ ಕಲಾವಿದೆ ಸುಷ್ಮಾ ರಾವ್

  ಭರತನಾಟ್ಯ ಕಲಾವಿದೆ ಸುಷ್ಮಾ ರಾವ್

  ನಟನೆ, ನಿರೂಪಣೆ ಮಾಡಿಕೊಂಡು ಬಂದಿರುವ ಸುಷ್ಮಾ ರಾವ್ ಡ್ಯಾನ್ಸರ್ ಕೂಡಾ ಹೌದು. ಸುಷ್ಮಾ ರಾವ್ ಅವರು ಭರತನಾಟ್ಯ ನೃತ್ಯಗಾರ್ತಿ. ಆದರೆ ಸುಷ್ಮಾ ರಾವ್ ಡ್ಯಾನ್ಸರ್ ಎಂಬ ವಿಚಾರ ಹಲವರಿಗೆ ತಿಳಿದಿಲ್ಲ. ಖ್ಯಾತ ನೃತ್ಯಗಾರ್ತಿ ವೈಜಯಂತಿ ಕಾಶಿ ಅವರ ಬಳಿ ನೃತ್ಯ ಕಲಿತಿದ್ದು, ವೈಜಯಂತಿ ಅವರ ನೆಚ್ಚಿನ ಶಷ್ಯೆ ಕೂಡ ಹೌದು. ಸುಷ್ಮಾ ರಾವ್‌ ಅವರು ಅದ್ಭುತವಾಗಿ ಭರತನಾಟ್ಯ ನೃತ್ಯ ಮಾಡುತ್ತಾರೆ.

  ಸೆಕೆಂಡ್‌ ಇನ್ನಿಂಗ್ಸ್‌ ಪ್ರಾರಂಭಿಸಿದ ಸುಷ್ಮಾ ರಾವ್

  ಸೆಕೆಂಡ್‌ ಇನ್ನಿಂಗ್ಸ್‌ ಪ್ರಾರಂಭಿಸಿದ ಸುಷ್ಮಾ ರಾವ್

  ಸ್ಟಾರ್‌ ಸುವರ್ಣ ವಾಹಿನಿ ಮೂಲಕ ಧಾರಾವಾಹಿಗೆ ರಿ-ಎಂಟ್ರಿ ಕೊಟ್ಟಿರುವ ಸುಷ್ಮಾ ಅವರು ಮತ್ತದೇ ಭಾವನಾ ಹೆಸರಿನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸ್ಟಾರ್‌ ಸುವರ್ಣದಲ್ಲಿ ಇತ್ತೀಚೆಗಷ್ಟೇ 100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದ ಧಾರಾವಾಹಿಗೆ ಸುಷ್ಮಾ ಎಂಟ್ರಿ ಕೊಟ್ಟಿದ್ದಾರೆ. ಬೆಟ್ಟದ ಹೂ ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧಾರಾವಾಹಿಯ ನಾಯಕಿ ಹೂವಿ ಪರವಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಪಾತ್ರದ ಎಂಟ್ರಿಯಿಂದಾಗಿ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ.

  English summary
  Actress Sushma Rao is back to small screen for a serial in star Suvarna. here is information about her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X