Sushma Rao ; ಭಾಗ್ಯಳ ರಿಯಲ್ ಲೈಫ್ ಮತ್ತು ಕಿರುತೆರೆ ಪಯಣದ ಬಗ್ಗೆ ನಿಮಗೆಷ್ಟು ಗೊತ್ತು..?
ಕಷ್ಟ ಪಟ್ಟು ಗಂಡನ ಪ್ರತಿಯೊಂದು ಚಾಲೆಂಜ್ ಒಪ್ಪಿಕೊಂಡು, ಈಗ ಓದಿನಲ್ಲಿ, ಕೆಲಸದಲ್ಲಿ ಎಲ್ಲಾ ಕಡೆಗಳಲ್ಲಿಯೂ ಹೆಸರು ಮಾಡಿರುವ ಭಾಗ್ಯ, ತನ್ನ ಸಂಸಾರವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾಳೆ. ಆದರೆ, ತಾಂಡವ್ ಮಾತ್ರ ಭಾಗ್ಯಳನ್ನು ಒಪ್ಪಲು ತಯಾರಿಲ್ಲ. ಭಾಗ್ಯ ಏನೇ ಸಾಧನ್ ಮಾಡಿದರೂ ಅದನ್ನು ಒಪ್ಪಿಕೊಳ್ಳದ ತಾಂಡವ್, ಶ್ರೇಷ್ಠ ಬೇಕು ಎಂದು ಮದುವೆಯಾಗಲು ಮುಂದಾಗಿದ್ದಾನೆ. ಆದರೆ ಈ ಸತ್ಯ ಇನ್ನೇನು ತಾಂಡವ್ ತಂದೆ-ತಾಯಿ ಹಾಗೂ ಭಾಗ್ಯಳಿಗೆ ತಿಳಿಯುವ ಸಮಯ ಬಂದಿದೆ. ಹಾಗಾದರೆ, ಭಾಗ್ಯಳ ರಿಯಲ್ ಲೈಫ್ ಸ್ಟೋರಿ ಏನು ಎಂದು ನೋಡೋಣ ಬನ್ನಿ.
ಮಲೆನಾಡಿನ ಬೆಡಗಿ ಭಾಗ್ಯ
ಚಿಕ್ಕಮಗಳೂರಿನ ಕೊಪ್ಪದ ಹುಡುಗಿ ಸುಷ್ಮಾ ರಾವ್ ಭಾಗೀರಥಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು, ಸೀರಿಯಲ್ಸ್, ನಿರೂಪಣೆ ಎರಡರಲ್ಲೂ ಸೈ ಎನಿಸಿಕೊಂಡವರು. ಆಗಾಗ ಸಣ್ಣ ಪುಟ್ಟ ಬ್ರೇಕ್ ಪಡೆಯುತ್ತಿದ್ದ ಸುಷ್ಮಾ ರಾವ್ ಅವರು ಕಳೆದ ವರ್ಷ ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ರಿ-ಎಂಟ್ರಿ ಕೊಟ್ಟಿದ್ದಾರೆ. ಗುಪ್ತಾಗಾಮಿನಿ ಧಾರಾವಾಹಿಯಲ್ಲಿ ಭಾವನಾ ಪಾತ್ರದಲ್ಲಿ ಮಿಂಚಿದ್ದರು. ಭಾವನಾ ಪಾತ್ರ ಸುಷ್ಮಾ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಗುಪ್ತಗಾಮಿನಿ ಧಾರಾವಾಹಿಗೆ ಕರ್ನಾಟಕ ಶ್ರೇಷ್ಠ ಕಿರುತೆರೆ ಪ್ರಶಸ್ತಿ ಕೂಡ ಲಭಿಸಿತ್ತು. ಸುಷ್ಮಾ ಅವರು ಜೀ ಕನ್ನಡದಲ್ಲಿ ಮೂಡಿ ಬಂದ ಸೊಸೆ ತಂದ ಸೌಭಾಗ್ಯ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದರು. ಇನ್ನು ಸ್ವಾತಿ ಮುತ್ತು, ಯಾವ ಜನ್ಮದ ಮೈತ್ರಿ ಧಾರಾವಾಹಿಗಳಿಗೆ ಸುಷ್ಮಾ ಅವರು ಬಣ್ಣ ಹಚ್ಚಿದ್ದರು.

ಹಲವು ವರ್ಷಗಳ ಕಿರುತೆರೆ ಪಯಣ
ಸುಷ್ಮಾ ರಾವ್ ಅವರು ನಟನೆಗೆ ಮಾತ್ರ ಸೀಮಿತವಾಗಿರದೆ ನಿರೂಪಣೆಗೂ ಸೈ ಎಂದಿದ್ದರು. ಸುಷ್ಮಾ ರಾವ್ ನಟನೆಗಿಂತಲೂ ನಿರೂಪಣೆ ಮಾಡಿದ್ದೇ ಹೆಚ್ಚು. ಸೃಜನ್ ಲೋಕೇಶ್ ನೇತೃತ್ವದ ಸೈ ಎಂಬ ರಿಯಾಲಿಟಿ ಶೋ ನಲ್ಲಿ ನಿರೂಪಣೆ ಮಾಡಿದ್ದರು. ಮೊದಮೊದಲು ಕಷ್ಟ ಪಟ್ಟರಾದರೂ ಸುಲಿಲತವಾಗಿ ಕನ್ನಡ ಮಾತನಾಡುತ್ತಾ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸೈ ಬಳಿಕ ಸೀರಿಯಲ್ ಸಂತೆ, ಹಾಡು ಹರಟೆ, ಯಾರಿಗುಂಟು ಯಾರಿಗಿಲ್ಲ. ಮನೆ ಮನೆ ಮೀನಾಕ್ಷಿ, ಜೀನ್ಸ್, ನಮ್ಮಮ್ಮ ಸೂಪರ್ ಸ್ಟಾರ್ ಹೀಗೆ ಹಲವು ರಿಯಾಲಿಟಿ ಶೋ ಗಳಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲದೇ, ಇತರೆ ವೇದಿಕೆ ಸಮಾರಂಭಗಳಿಗೂ ನಿರೂಪಣೆ ಮಾಡಿರುವ ಸುಷ್ಮಾ ರಾವ್ ಅವರು ಇಂದಿಗೂ ಆಂಕರಿಂಗ್ ಮಾಡುತ್ತಿರುತ್ತಾರೆ.
ಎರಡೆರಡು ಬಾರಿ ಆರ್ಯಭಟ ಪ್ರಶಸ್ತಿ
ನಟನೆ, ನಿರೂಪಣೆ ಮಾಡಿಕೊಂಡು ಬಂದಿರುವ ಸುಷ್ಮಾ ರಾವ್ ಡ್ಯಾನ್ಸರ್ ಕೂಡಾ ಹೌದು. ಸುಷ್ಪಾ ರಾವ್ ಅವರು ಭರತನಾಟ್ಯ ನೃತ್ಯಗಾರ್ತಿ. ಆದರೆ ಸುಷ್ಮಾ ರಾವ್ ಡ್ಯಾನ್ಸರ್ ಎಂಬ ವಿಚಾರ ಹಲವರಿಗೆ ತಿಳಿದಿಲ್ಲ. ಖ್ಯಾತ ನೃತ್ಯಗಾರ್ತಿ ವೈಜಯಂತಿ ಕಾಶಿ ಅವರ ಬಳಿ ನೃತ್ಯ ಕಲಿತಿದ್ದು, ವೈಜಯಂತಿ ಅವರ ನೆಚ್ಚಿನ ಶಿಷ್ಯೆ ಕೂಡ ಹೌದು. ಸುಷ್ಮಾ ರಾವ್ ಅವರು ಅದ್ಭುತವಾಗಿ ಭರತನಾಟ್ಯ ನೃತ್ಯ ಮಾಡುತ್ತಾರೆ. 1997ರಲ್ಲೇ ಭರತನಾಟ್ಯಕ್ಕೆ ಆರ್ಯಭಟ ಪ್ರಶಸ್ತಿಯನ್ನು ಪಡೆದಿದ್ದಾರೆ. 2005 ರಲ್ಲಿ ತಮ್ಮ ನಟನೆಗೆ ಆರ್ಯಭಟ್ಟ ಪ್ರಶಸ್ತಿಯನ್ನು ಪಡೆದಿದ್ದರು.

ರಿಯಲ್ ಲೈಫ್ ನಲ್ಲಿ ಡಬಲ್ ಡಿಗ್ರಿ ಪಡೆದ ಭಾಗ್ಯ
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ದಡ್ಡಿಯಾಗಿದ್ದ ಭಾಗ್ಯ ಸದ್ಯ ಮಗಳ ಜೊತೆಗೆ ಶಾಲೆಗೆ ಹೋಗಿ ಹತ್ತನೇ ಕ್ಲಾಸ್ ಮುಗಿಸಿದ್ದಾರೆ. ಬಳಿಕ ಕೆಲವನ್ನೂ ಪಡೆದಿದ್ದಾರೆ. ಆದರೆ, ರಿಯಲ್ ಲೈಫ್ ನಲ್ಲಿ ಸುಷ್ಮಾ ಅವರು ಡಬಲ್ ಡಿಗ್ರಿ ಪಡೆದಿದ್ದು, ಬಿಎಸ್ಸಿ ಹಾಗೂ ಹಿಂದಿಯಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ನಿರ್ದೇಶಕ ಪ್ರೀತಂ ಗುಬ್ಬಿ ಅವರನ್ನು ಮದುವೆಯಾದ ನಟಿ ಸುಷ್ಮಾ ಅವರು ಕಾರಣಾಂತರಗಳಿಂದ ಬೇರೆ ಆಗಿದ್ದು, ಈ ಮತ್ತೆ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.


Click it and Unblock the Notifications











