For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿತೆರೆಯನ್ನು ಆಳುತ್ತಿದ್ದಾರೆ ಕಿರುತೆರೆ ಸುಂದರಿಯರು!

  By ಕುಸುಮ
  |

  ಸ್ಯಾಂಡಲ್ವುಡ್ನಲ್ಲಿ ಈಗ ಕಿರುತೆರೆ ತಾರೆಯರದ್ದೇ ಹವಾ. ಚಂದನವನದ ನಾಯಕಿಯರಲ್ಲಿ ಟಾಪ್ 5 ಅಂತ ಲಿಸ್ಟ್ ಮಾಡಿದಲ್ಲಿ ಕಾಣಿಸಿಕೊಳ್ಳೋ 3 ಬ್ಯೂಟಿಗಳು ಕಿರುತೆರೆಯಿಂದ ಬಂದವರೇ. ಹಿಂದೆ ಇಲ್ಲದಷ್ಟು ಬೇಡಿಕೆ ಈಗ ಕಿರುತೆರೆಗೆ ಸೃಷ್ಟಿಯಾಗಿರೋದೇ ಈ ಕಾರಣಕ್ಕೆ.

  ಕಿರುತೆರೆಯಲ್ಲಿ ಮಿಂಚಿದರೆ ಬೆಳ್ಳಿತೆರೆಗೆ ಬಾಗಿಲು ತೆರೆದಂತೆಯೇ. ಇನ್ನು ಕಿರುತೆರೆಯಲ್ಲಿ ಸಾಕಷ್ಟು ಅಭಿನಯದ ಅನುಭವ ಪಡೆದುಕೊಂಡಿರೋದ್ರಿಂದ ಯಾವುದೇ ಪಾತ್ರಕ್ಕೂ ನಟಿಯರು ಸುಲಭವಾಗಿ ಹೊಂದಿಕೊಳ್ತಾರೆ. ಸಾಕಷ್ಟು ನಟಿಯರು ಚಿತ್ರರಂಗಕ್ಕೆ ಕಾಲಿಡುತ್ತಿದ್ದರೂ ಕಿರುತೆರೆಯ ನಟಿಯರೇ ಗೆಲುವಿನ ಸಿನಿಮಾಗಳ ಪಾಲುದಾರರಾಗುತ್ತಿರುವುದು ಮತ್ತಷ್ಟು ಕನಸುಗಾರರನ್ನು ಕಿರುತೆರೆಗೆ ಕಾಲಿಡುವಂತೆ ಮಾಡುತ್ತಿದೆ.

  ಕಿರುತೆರೆ ನಟನಟಿಯರಿಗೆ ಅಭಿನಯ ತರಬೇತಿ ಶಾಲೆ ಇದ್ದಹಾಗೆ. ಧಾರಾವಾಹಿಗಳಲ್ಲಿ ನಟಿಸಿನಟಿಸಿ ಪಳಗಿದವರು ಹಿರಿತೆರೆಗೆ ಹೆಜ್ಜೆ ಇಟ್ಟಾಗ ಯಾವುದೇ ಅಳುಕಿಲ್ಲದಂತೆ ಕ್ಯಾಮೆರಾ ಎದುರಿಸುವ ವಿಶ್ವಾಸ ಗಳಿಸಿರುತ್ತಾರೆ. ಅಲ್ಲದೆ, ಕಿರುತೆರೆಯಲ್ಲಿ ಸಿಗುವ ಜನಪ್ರಿಯತೆ ಕೂಡ ಹಿರಿತೆರೆಯ ನಟಿಯರಿಗಿಂತ ಕಡಿಮೆಯೇನಿಲ್ಲ.

  ಈ ಕಾರಣದಿಂದಾಗಿಯೇ ಹಲವಾರು ಕಲಾವಿದರು ಸಿಲ್ವರ್ ಸ್ಕ್ರೀನ್ ನಿಂದ ಸ್ಮಾಲ್ ಸ್ಕ್ರೀನ್ ಗೆ ಜಂಪಾಗಿರುವುದು ಗೊತ್ತೇ ಇರುವ ಸಂಗತಿ. ದಶಕಗಳ ಹಿಂದೆ ಕಿರುತೆರೆಯೆಂದರೆ ಮೂಗು ಮುರಿಯುವವರಿದ್ದರು. ಕಿರುತೆರೆಯಲ್ಲಿ ನಟಿಸುವುದೆಂದರೆ ಡಿಮೋಶನ್ ಪಡೆದಂತೆ ಎಂದೂ ಭಾವಿಸುವವರಿದ್ದರು. ಆದರೆ, ಆದರೆ ಈಗ ಕಾಲಾ ಬದಲಾಗಿದೆ. ಕಾಲಾಯ ತಸ್ಮೈನ್ನಮಃ!

  ಪ್ರಿನ್ಸಸ್ ರಾಧಿಕಾ ಪಂಡಿತ್

  ಪ್ರಿನ್ಸಸ್ ರಾಧಿಕಾ ಪಂಡಿತ್

  ಕಿರುತೆರೆಯಿಂದ ಬಂದು ಕನ್ನಡ ಚಿತ್ರರಂಗದ ಪ್ರಿನ್ಸಸ್ ಆಗಿ ಮಿಂಚುತ್ತಿರುವ ರಾಧಿಕಾ ಪಂಡಿತ್ 10 ವರ್ಷಗಳ ಅಭಿನಯದಲ್ಲಿ, ಮೊಗ್ಗಿನ ಮನಸು ಮುಂತಾದ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಕೂಡ ರಾಧಿಕಾ ಪಂಡಿತ್ ಎಡವಿದ್ದು ಕಡಿಮೆ. ಹಿಂದೆ ಅವರು ಸುಮಂಗಲಿ, ಕಾದಂಬರಿ, ನಂದಗೋಲುಕ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

  ಲಕ್ಕಿ ಗರ್ಲ್ ರಚಿತಾ ರಾಮ್

  ಲಕ್ಕಿ ಗರ್ಲ್ ರಚಿತಾ ರಾಮ್

  2012ಕ್ಕೆ ಚಿತ್ರರಂಗಕ್ಕೆ ಬುಲ್ ಬುಲ್ ಸಿನಿಮಾ ಮೂಲಕ ಕಾಲಿಟ್ಟ ರಚಿತಾರಾಮ್ ಸಾಲು ಸಾಲು ಹಿಟ್ ಕೊಟ್ಟಿದ್ದಾರೆ. ಮೊದಲ ಸಿನಿಮಾದಿಂದಲೇ ಸ್ಟಾರ್ ನಟರಿಗೆ ಜೋಡಿಯಾಗಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಫೇವರಿಟ್ ನಟಿಯಾಗುತ್ತಿದ್ದಾರೆ. ಬಿಗ್ ಸ್ಕ್ರೀನಲ್ಲಿ ಚಿಗುರಿಕೊಳ್ಳುವ ಮೊದಲು ಅರಸಿ ಎಂಬ ಧಾರಾವಾಹಿಯಲ್ಲಿ ರಚಿತಾ ರಾಮ್ ಮಿಂಚಿದ್ದರು.

  ಸ್ನಿಗ್ಧ ಸುಂದರಿ ಮಯೂರಿ

  ಸ್ನಿಗ್ಧ ಸುಂದರಿ ಮಯೂರಿ

  ಈಗ ಮತ್ತೊಬ್ಬ ಭರವಸೆಯ ನಟಿ ಮಯೂರಿ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟು ಭರವಸೆ ಮೂಡಿಸುತ್ತಿದ್ದಾರೆ. ಮಯೂರಿ ಅಭಿನಯದ ಮೊದಲ ಸಿನಿಮಾ ಕೃಷ್ಣಲೀಲಾ ಸೂಪರ್ ಹಿಟ್. ನಂತರ ಬಂದ ಇಷ್ಟಕಾಮ್ಯ ಕೂಡ ಚಿತ್ರಪ್ರೇಮಿಗಳಿಗೆ ಇಷ್ಟವಾಗಿದೆ. ಈಗ ನಟರಾಜ ಸರ್ವೀಸ್ ಚಿತ್ರದ ಸವಾರಿಯಲ್ಲಿರುವ ಮಯೂರಿ, ಹ್ಯಾಟ್ರಿಕ್ ಗೆಲುವು ಪಡೆಯುವ ನಿರೀಕ್ಷೆ ಮೂಡಿಸಿದ್ದಾರೆ.

  ಓಂ ಪ್ರಕಾಶ್ ರಾವ್ ಮಗಳು ಶ್ರಾವ್ಯ

  ಓಂ ಪ್ರಕಾಶ್ ರಾವ್ ಮಗಳು ಶ್ರಾವ್ಯ

  ಅಜೇಯ್ ರಾವ್ ಜೊತೆ ರೋಸ್ ಚಿತ್ರದಲ್ಲಿ ಸಖತ್ ಆಗಿ ಮಿಂಚಿದ್ದ ಶ್ರಾವ್ಯ ರಾವ್ (ಓಂ ಪ್ರಕಾಶ್ ರಾವ್ ಮಗಳು) ಕೂಡ ಕಿರುತೆರೆಯಿಂದ ಬಂದವರೆ. ಅವರು ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿ ನಡಿಸಿ, ಅಭಿನಯ ತರಬೇತಿ ಪಡೆದವರು.

  ಟ್ಯಾಲೆಂಟೆಡ್ ನಟಿ ಮೇಘನಾ ಗಾಂವಕರ್

  ಟ್ಯಾಲೆಂಟೆಡ್ ನಟಿ ಮೇಘನಾ ಗಾಂವಕರ್

  ಆರ್ ಚಂದ್ರು ಅವರ ಚಾರ್ ಮಿನಾರ್ ಚಿತ್ರದಲ್ಲಿ ಮಿಂಚಿ ಭದ್ರ ನೆಲೆ ಕಂಡುಕೊಂಡಿರುವ ಉತ್ತರ ಕನ್ನಡದ ಚೆಲುವೆ ಮೇಘನಾ ಗಾಂವಕರ್ ಕೂಡ ಕಿರುತೆರೆಯ ಪ್ರಾಡಕ್ಟ್. ಅವರು ಮೊದಲು ಕುಮುದ ಧಾರಾವಾಹಿಯಲ್ಲಿ ನಟಿಸಿದ್ದರು. ನಂತರ ರಿಯಾಲಿಟಿ ಶೋನಲ್ಲಿ ಕೂಡ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು.

  English summary
  Many small screen actresses like Radhika Pandit, Mayuri, Rachita Ram, Shravya Rao are ruling in Kannada film industry. All these artists get trained in tv serials and jumping to big screen. ಬೆಳ್ಳಿತೆರೆಯನ್ನು ಆಳುತ್ತಿದ್ದಾರೆ ಕಿರುತೆರೆ ಸುಂದರಿಯರು!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X