ಕಿರುತೆರೆ ಕಲಾವಿದರ ಜಾಲಿ ರೈಡ್ ; ಹೋಗಿದ್ದೆಲ್ಲಿ ರಾಮಾಚಾರಿ, ಲಕ್ಷ್ಮಣ ಹಾಗೂ ಗೀತಾ ?

By ಪ್ರಿಯಾ ದೊರೆ

ರಾಮಾಚಾರಿ, ಗೀತಾ ಹಾಗೂ ಲಕ್ಷ್ಮಣ, ಕಲರ್ಸ್ ಕನ್ನಡ ವಾಹಿನಿಯ ಜನ ಮನ ಗೆದ್ದ ಧಾರಾವಾಹಿಗಳು. ವಿಶೇಷ ಅಂದರೆ ಈ ಜನಪ್ರಿಯ ಧಾರಾವಾಹಿಗಳ ಜನಪ್ರಿಯ ಕಲಾವಿದರು ಇತ್ತೀಚಿಗೆ ಜಾಲಿ ರೈಡ್ ತೆರಳಿದ್ದಾರೆ. ಒಟ್ಟಿಗೆ ಪ್ರವಾಸ ಮಾಡಿದ್ದಾರೆ. ಧನುಷ್ ಗೌಡ ಹಾಗೂ ಭವ್ಯ ಗೌಡ ಗೀತಾ ಧಾರಾವಾಹಿಯನ್ನ ಪ್ರತಿನಿಧಿಸಿದರೆ, ರಾಮಾಚಾರಿ ತಂಡದಿಂದ ರಿತ್ವಿಕ್ ಕೃಪಾಕರ್ ಹಾಗೂ ಲಕ್ಷಣ ಧಾರಾವಾಹಿಯಿಂದ ವಿಜಯ ಲಕ್ಷ್ಮಿ ಈ ಪ್ರವಾಸದಲ್ಲಿ ಭಾಗಿಯಾಗಿದ್ದಾರೆ

ರೋಡ್‌ ಟ್ರಿಪ್‌ ನಲ್ಲಿ ಕಲಾವಿದರ ಮಸ್ತಿ

ಧನುಷ್‌ ಮತ್ತು ಭವ್ಯ ಇಬ್ಬರೂ ಹಲವು ವರ್ಷಗಳಿಂದ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದು, ಇಬ್ಬರೂ ಕೂಡ ಒಳ್ಳೆಯ ಸ್ನೇಹಿತರು. ಹೀಗಾಗಿ ಇವರಿಬ್ಬರೂ ಒಟ್ಟಿಗೆ ರೋಡ್‌ ಟ್ರಿಪ್‌ ಮಾಡಿರುವುದು ಸಹಜವಾಗಿದ್ದು, ರಿತ್ವಿಕ್‌ ಮತ್ತು ವಿಜಯಲಕ್ಷ್ಮಿ ಅನ್ನು ಈ ಟ್ರಿಪ್‌ ನಲ್ಲಿ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ.

small screen celebrities enjoyed road trip

ಇವರಷ್ಟೇ ಅಲ್ಲದೇ, ಇನ್ನಷ್ಟು ನಟ-ನಟಿಯರು ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರವಾಸದ ಸುಂದರವಾದ ಫೊಟೋಗಳನ್ನು ಭವ್ಯ ಗೌಡ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್‌ ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಕಾರ್ಯಕ್ರಮದ ನೆಪದಲ್ಲಿ ಮಸ್ತ್ ಮಜಾ ಮಾಡಿದ ಸ್ನೇಹಿತರು

ಹೂವಿನ ಹಡಗಲಿ ಯಲ್ಲಿ ಎರಡು ದಿನಗಳ ಹಿಂದೆ ಕಾರ್ಯಕ್ರಮವೊಂದು ಜರುಗಿತ್ತು. ಈ ಕಾರ್ಯಕ್ರಮಕ್ಕೆ ಹಲವು ಸೀರಿಯಲ್ ನಟ-ನಟಿಯರನ್ನು ಆಹ್ವಾನಿಸಲಾಗಿತ್ತು. ಇದಕ್ಕಾಗಿ ಭವ್ಯ ಗೌಡು, ಧನುಷ್‌ ಗೌಡ, ರಿತ್ವಿಕ್‌, ವಿಜಯ್‌ ಲಕ್ಷ್ಮೀ, ಶರ್ಮಿತಾ, ಸಂಜನಾ ಹೀಗೆ ಹಲವರು ಭಾಗಿಯಾಗಿದ್ದರು.

small screen celebrities enjoyed road trip

ಆ ಪೈಕಿ ಈ ನಾಲ್ವರು ಗೆಳಯರು ಒಟ್ಟಿಗೆ ರೋಡ್‌ ಟ್ರಿಪ್‌ ಮಾಡಿದ್ದು, ರೆಸ್ಟೋರೆಂಟ್, ಹಾಗೂ ದಾರಿಯಲ್ಲೆಲ್ಲಾ ಫೊಟೋ, ರೀಲ್ಸ್‌ ಮಾಡಿದ್ದಾರೆ.ಒಟ್ಟಿಗೆ ಒಂದೇ ಕಾರಿನಲ್ಲಿ ಟ್ರಾವೆಲ್‌ ಮಾಡಿದ್ದಾರೆ. ಎಂಜಾಯ್‌ ಮಾಡುತ್ತಾ ಡೆಸ್ಟಿನೇಷನ್‌ ತಲುಪಿದ್ದಾರೆ. ಇನ್ನೂ ಪ್ರವಾಸದ ಸುಮಧುರ ಕ್ಷಣಗಳನ್ನ ಹಂಚಿಕೊಂಡಿರುವ ಭವ್ಯ ಅನಿರೀಕ್ಷಿತ ಸ್ನೇಹ, ಅನಿರೀಕ್ಷಿತ ರೋಡ್ ಟ್ರಿಪ್ ಮತ್ತು ಅನಿರೀಕ್ಷಿತ ಬಾಂಡಿಂಗ್ ಎಂದು ಬರೆದುಕೊಂಡಿದ್ದಾರೆ.

ಫುಲ್ ಖುಷಿಯಾದ ಅಭಿಮಾನಿಗಳು

ಕಿರುತೆರೆಯ ಖ್ಯಾತನಾಮರನ್ನ ಒಟ್ಟಿಗೆ ಕಂಡು, ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ತಾರೆಯರ ಪ್ರವಾಸದ ಕುರಿತು ಚರ್ಚೆಯನ್ನೂ ಮಾಡ್ತಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ಧನುಷ್‌ ಜೊತೆಗೆ ಭವ್ಯ ಟ್ರಿಪ್‌ ಹೋಗಿರುವುದು ಓಕೆ.

small screen celebrities enjoyed road trip

ಆದರೆ, ರಿತ್ವಿಕ್‌ ಜೊತೆಗೆ ವಿಜಯಲಕ್ಷ್ಮಿ ಯಾಕೆ, ಮೌನ ಎಲ್ಲಿದ್ದಾರೆ ಎಂದು ಪ್ರಶ್ನೆಯನ್ನೂ ಮಾಡ್ತಿದ್ದಾರೆ. ಕೆಲವರು ಇವರ ಸ್ನೇಹ ಸಂಬಂಧ ಹಾಡಿ ಹೊಗಳಿದ್ದಾರೆ. ನಿಮ್ಮ ಸ್ನೇಹ ಹೀಗೆ ಇರಲಿ ಎಂದು ಹಾರೈಸಿದ್ದಾರೆ. ಧನುಷ್‌ ಮತ್ತು ಭವ್ಯ ಇಬ್ಬರೂ ಗೀತಾ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದು, ರಿತ್ವಿಕ್‌ ರಾಮಾಚಾರಿ ಧಾರಾವಾಹಿಯಲ್ಲಿ ಎರಡೆರಡು ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ.

ಮೈನಾ ಧಾರಾವಾಹಿಯಲ್ಲಿ ವಿಜಯಲಕ್ಷ್ಮಿ

ನಟಿ ವಿಜಯಲಕ್ಷ್ಮಿ ಅವರು ಲಕ್ಷಣ ಧಾರಾವಾಹಿ ಮುಗಿದ ಮೇಲೆ ಸೈಲೆಂಟ್‌ ಆಗಿದ್ದರು. ಆದರೆ, ಇತ್ತೀಚೆಗೆ ಹೊಸ ಧಾರಾವಾಹಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೈನಾ ಎಂಬ ಹೊಸ ಧಾರಾವಾಹಿಗೆ ಲೀಡ್‌ ರೋಲ್‌ ಗೆ ವಿಜಯಲಕ್ಷ್ಮಿ ಅವರು ಬಣ್ಣ ಹಚ್ಚಿದ್ದಾರೆ. ಮೈನಾ ಧಾರಾವಾಹಿ ಉದಯ ಟಿವಿಯಲ್ಲಿ ಮೂಡಿಬರಲಿದ್ದು, ಈಗಾಗಲೇ ಪ್ರೋಮೋವನ್ನು ಪ್ರಸಾರ ಆಗಿದೆ. ಆದರೆ, ಯಾವತ್ತಿನಿಂದ ಧಾರಾವಾಹಿ ಆರಂಭವಾಗುತ್ತದೆ ಎಂಬುದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ

More from Filmibeat

English summary
Amidst all the stress colours kannada stars Bhavya gowda, vijaylakshmi, dhanush, rithvik enjoyed road trip together
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X