For Quick Alerts
  ALLOW NOTIFICATIONS  
  For Daily Alerts

  ಕಪಿಲ್ ಶರ್ಮಾ ಶೋ ಸೆಟ್‌ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಅವಮಾನ!

  |

  ಅತಿ ಹೆಚ್ಚು ಟಿಆರ್‌ಪಿ ಹೊಂದಿರುವ ಶೋಗಳಲ್ಲಿ ಒಂದು ಕಪಿಲ್ ಶರ್ಮಾ ಶೋ. ಬಾಲಿವುಡ್‌ಗೂ ಟಿವಿಜಗತ್ತಿಗೂ ಇರುವ ಅಂತರವನ್ನು ಕಡಿಮೆ ಮಾಡಿದ ಶ್ರೇಯ ಈ ಶೋಗೆ ಸಲ್ಲಬೇಕು. ಒಂದು ಸಮಯದಲ್ಲಿ ಕೌನ್ ಬನೇಗಾ ಕರೋಡ್‌ಪತಿ ಶೋ ಅನ್ನು ಸಹ ಟಿಆರ್‌ಪಿಯಲ್ಲಿ ಹಿಂದೆ ಹಾಕಿದ್ದ ಈ ಶೋ ಬಗ್ಗೆ ಇತ್ತೀಚೆಗೆ ಋಣಾತ್ಮಕ ಸುದ್ದಿಗಳೇ ಹೆಚ್ಚು ಕೇಳಿ ಬರುತ್ತಿವೆ.

  ಕಾಮಿಡಿಯನ್ ಕಪಿಲ್ ಶರ್ಮಾ ನಡೆಸಿಕೊಡುವ ಈ ಶೋನಲ್ಲಿ ಇತ್ತೀಚೆಗೆ ಪ್ರಮಾದವೊಂದು ನಡೆದಿದೆ. ಕೇಂದ್ರದ ಪವರ್‌ಫುಲ್ ಸಚಿವೆಯನ್ನೇ ಶೋನ ಚಿತ್ರೀಕರಣದ ಸೆಟ್‌ ಒಳಗೆ ಬಿಡದೆ ತಡೆ ಹಿಡಿಯಲಾಗಿದೆ.

  ಹೌದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಇತ್ತೀಚೆಗೆ 'ಲಾಲ್ ಸಲಾಮ್' ಹೆಸರಿನ ಕಾದಂಬರಿಯೊಂದನ್ನು ರಚಿಸಿದ್ದು, ಕಾದಂಬರಿಯ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾ ಆಗಲಿ ಯಾವುದೇ ವಿಷಯವಾಗಲಿ ಪ್ರಚಾರದ ವಿಷಯ ಬಂದಾಗ ಕಪಿಲ್ ಶರ್ಮಾ ಶೋ ಅನ್ನು ಮರೆಯದೇ ನೆನಪಿಸಿಕೊಳ್ಳಲಾಗುತ್ತದೆ. ಹಾಗಾಗಿ ಸ್ಮೃತಿ ಇರಾನಿ ಸಹ ತಮ್ಮ ಕಾದಂಬರಿಯ ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋಗೆ ಹೋಗಿದ್ದಾರೆ. ಆದರೆ ಅಲ್ಲಿ ಅವರಿಗೆ ಪ್ರವೇಶವನ್ನೇ ನಿರಾಕರಿಸಲಾಗಿದೆ!

  ಸಚಿವೆಯನ್ನು ತಡೆ ಹಿಡಿದ ಭದ್ರತಾ ಸಿಬ್ಬಂದಿ

  ಸಚಿವೆಯನ್ನು ತಡೆ ಹಿಡಿದ ಭದ್ರತಾ ಸಿಬ್ಬಂದಿ

  ಕಪಿಲ್ ಶರ್ಮಾ ಶೋ ಚಿತ್ರೀಕರಣಗೊಳ್ಳುವ ಮುಂಬೈನ ಸೆಟ್‌ಗೆ ಸ್ಮೃತಿ ಇರಾನಿ ತಮ್ಮ ವಾಹನದಲ್ಲಿ ತೆರಳಿದ್ದಾರೆ. ಆದರೆ ಅಲ್ಲಿದ್ದ ಖಾಸಗಿ ಭದ್ರತೆಯವರು ಸ್ಮೃತಿ ಇರಾನಿಯನ್ನು ಒಳಗೆ ಬಿಟ್ಟಿಲ್ಲ. ಸಚಿವೆ, ಯಾವುದೇ ಭದ್ರತೆಯನ್ನು ಇರಿಸಿಕೊಂಡಿಲ್ಲ. ಹಾಗಾಗಿ ಸೆಕ್ಯುರಿಟಿ ಗಾರ್ಡ್‌ಗೆ ಸ್ಮೃತಿ ಇರಾನಿ ಸಚಿವೆ ಎಂಬುದು ಗೊತ್ತಾಗಿಲ್ಲ. ಸ್ಮೃತಿ ಇರಾನಿ, ತಾವೊಬ್ಬ ಸಚಿವೆಯಾಗಿದ್ದು, ನಾನು ಶೋನ ಅತಿಥಿ ಎಂದು ಹೇಳಿದರೂ ಸಹ ಭದ್ರತಾ ಸಿಬ್ಬಂದಿ ಸ್ಮೃತಿ ಇರಾನಿಯನ್ನು ಒಳಗೆ ಬಿಟ್ಟಿಲ್ಲ.

  ಕ್ಷಮೆ ಕೇಳಿದ ಕಪಿಲ್ ಶರ್ಮಾ

  ಕ್ಷಮೆ ಕೇಳಿದ ಕಪಿಲ್ ಶರ್ಮಾ

  ಸ್ಮೃತಿ ಇರಾನಿ ಬಳಿ ಹೆಚ್ಚು ಸಮಯವಿರಲಿಲ್ಲ. ಅವರು ಮರಳಿ ದೆಹಲಿಗೆ ವಿಮಾನ ಹತ್ತಬೇಕಿತ್ತು. ಹಾಗಾಗಿ ಹೆಚ್ಚು ಹೊತ್ತು ಅಲ್ಲಿ ಕಾಯಲಾರದೆ ಅವರು ವಾಪಸ್ ತೆರಳಿದ್ದಾರೆ. ಅತಿಥಿಯಾಗಿ ಬರಬೇಕಿದ್ದ ಸ್ಮೃತಿ ಇರಾನಿ ಶೋಗೆ ಬರದೇ ಇದ್ದಾಗ ಕಪಿಲ್ ಶರ್ಮಾ ಸಚಿವೆಗೆ ಕರೆ ಮಾಡಿದಾಗಷ್ಟೆ ವಿಷಯ ಗೊತ್ತಾಗಿದೆ. ಕೂಡಲೇ ಕಪಿಲ್ ಶರ್ಮಾ, ಸಚಿವೆಯ ಕ್ಷಮೆ ಕೇಳಿದ್ದಾರೆ.

  ಅತಿಥಿಗಳಿಗೆ ಅವಮಾನ ಮೊದಲೇನೂ ಅಲ್ಲ

  ಅತಿಥಿಗಳಿಗೆ ಅವಮಾನ ಮೊದಲೇನೂ ಅಲ್ಲ

  ಕಪಿಲ್ ಶರ್ಮಾ ಶೋನಲ್ಲಿ ಅತಿಥಿಗಳಿಗೆ ಅವಮಾನ ಆಗುತ್ತಿರುವುದು ಇದು ಹೊಸದೇನೂ ಅಲ್ಲ. ಈ ಹಿಂದೆ ಖ್ಯಾತ ನಟ ಶಾರುಖ್ ಖಾನ್ ಅನ್ನು ಕೆಲವು ಗಂಟೆಗಳ ವರೆಗೆ ಕಾಯಿಸಲಾಗಿತ್ತು. ಹೊಸ ನಟನೊಬ್ಬನನ್ನು ಏಕವಚನದಲ್ಲಿ ಮಾತನಾಡಿಸಿ ಅವಮಾನ ಮಾಡಲಾಗಿತ್ತು. ಈ ಬಗ್ಗೆ ಆ ಯುವನಟ ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತೊಮ್ಮೆ ಸ್ವತಃ ಕಪಿಲ್ ಶರ್ಮಾ ಅದೇ ಶೋನ ಸಹನಟ ಡಾ ಮಶೂರ್ ಗುಲಾಟಿ ಪಾತ್ರದಲ್ಲಿ ನಟಿಸುತ್ತಿದ್ದ ಸುನಿಲ್ ಗ್ರೋವರ್ ಅನ್ನು ವಿಮಾನವೊಂದರಲ್ಲಿ ಚಪ್ಪಲಿಯಿಂದ ಹೊಡೆದಿದ್ದರು. ಇದು ಭಾರಿ ವಿವಾದ ಹುಟ್ಟುಹಾಕಿತು. ಕೊನೆಗೆ ಸುನಿಲ್ ಗ್ರೋವರ್ ಕಪಿಲ್ ಶರ್ಮಾ ಶೋ ಬಿಟ್ಟು ಹೊರಗೆ ಹೋದರು.

  ಸ್ಮೃತಿ ಇರಾನಿ ಸಹ ಧಾರಾವಾಹಿ ನಟಿಯಾಗಿದ್ದವರು

  ಸ್ಮೃತಿ ಇರಾನಿ ಸಹ ಧಾರಾವಾಹಿ ನಟಿಯಾಗಿದ್ದವರು

  ಇನ್ನು ಸಚಿವೆ ಸ್ಮೃತಿ ಇರಾನಿಗೆ ಟಿವಿ, ಸಿನಿಮಾಗಳು ಹೊಸದೇನೂ ಅಲ್ಲ. ಸ್ಮೃತಿ ಇರಾನಿ ನಟಿಯಾಗಿದ್ದು ನಂತರ ರಾಜಕಾರಣಿ ಆದವರು. ಈ ಮೊದಲು ಸ್ಮೃತಿ ಇರಾನಿ ಟಿವಿಯ ಜನಪ್ರಿಯ ನಟಿಯಾಗಿದ್ದರು. ಮಿಸ್ ಇಂಡಿಯಾ ಆಗಿದ್ದ ಸ್ಮೃತಿ ಇರಾನಿ ಆರಂಭದಲ್ಲಿ ಕೆಲವು ಆಲ್ಬಂ ಹಾಡುಗಳಲ್ಲಿ ನಟಿಸಿ ನಂತರ ಟಿವಿ ಲೋಕಕ್ಕೆ ಪದಾರ್ಪಣೆ ಮಾಡಿದರು. ಅವರಿಗೆ ಬಹಳ ದೊಡ್ಡ ಹೆಸರು ತಂದುಕೊಟ್ಟಿದ್ದು 'ಸಾಸ್ ಭಿ ಕಬಿ ಬಹು ಥೀ' ಧಾರಾವಾಹಿಯ ತುಳಸಿ ಪಾತ್ರ. ಹಲವು ವರ್ಷ ಆ ಪಾತ್ರದಲ್ಲಿ ನಟಿಸಿದ ಸ್ಮೃತಿ ಇರಾನಿ ಆ ಬಳಿಕ ಕೆಲವು ಧಾರಾವಾಹಿಗಳನ್ನು ನಿರ್ಮಾಣ ಸಹ ಮಾಡಿದರು. ಆದರೆ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದ ಬಳಿಕ ಮನೋರಂಜನಾ ಲೋಕದಿಂದ ದೂರ ಉಳಿದರು.

  English summary
  Central minister Smriti Irani refused to enter Kapil Sharma show by a security guard. Smriti Irani left the set. Then Kapil apologized the minister.
  Wednesday, December 1, 2021, 19:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X