ಮತ್ತೆ ಬಣ್ಣ ಹಚ್ಚಿದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಒಮ್ಮೆ ಬಣ್ಣ ಹಚ್ಚಿದರೆ ಮುಗೀತು. ಆ ಬಣ್ಣದ ಗೀಳು ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ. ರಾಜಕೀಯರಂಗಕ್ಕೆ ಬಂದ ಬಳಿಕ ದೊಡ್ಡ ಜವಾಬ್ದಾರಿ ವಹಿಸಿಕೊಂಡ ಬಳಿಕವೂ ಕೆಲವರು ಬಣ್ಣ ಹಚ್ಚಿ ನಟಿಸಿದ್ದಾರೆ. ಇದೀಗ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತೆ ಕ್ಯಾಮರಾ ಮುಂದೆ ನಿಂತಿದ್ದಾರೆ ಎಂದು ವರದಿಯಾಗಿದೆ.

ಸ್ಮೃತಿ ಇರಾನಿ ನಟನೆಯ 'ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ' ಹಿಂದಿ ಧಾರಾವಾಹಿ ದಶಕದ ಹಿಂದೆ ಸಂಚಲನ ಸೃಷ್ಟಿಸಿತ್ತು. ಕಿರುತೆರೆಯಲ್ಲಿ ಭರ್ಜರಿ ಯಶಸ್ಸು ಕಂಡು ದಾಖಲೆ ಬರೆದಿತ್ತು. ತುಳಸಿ ಮಿಹಿರ್ ವಿರಾನಿ ಪಾತ್ರದಲ್ಲಿ ಆಕೆಯ ನಟನೆ ಮೋಡಿ ಮಾಡಿತ್ತು. ಇದೀಗ ಈ ಧಾರಾವಾಹಿಯ ಸೀಕ್ವೆಲ್ ಬರ್ತಿದ್ದು ಸದ್ದಿಲ್ಲದೇ ಚಿತ್ರೀಕರಣ ಆರಂಭವಾಗಿದೆ. ಸ್ಮೃತಿ ಇರಾನಿ ಕೂಡ ಭಾರೀ ಭದ್ರತೆ ನಡುವೆ ನಟಿಸುತ್ತಿದ್ದಾರೆ ಎಂದು India Forums ವೆಬ್ ಸೈಟ್ ಸುದ್ದಿ ಮಾಡಿದೆ.

Smriti Irani Returns to Acting in Kyunki Saas Bhi Kabhi Bahu Thi 2 After a Decade

'ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ'-2 ಧಾರಾವಾಹಿ ನಿರ್ಮಾಣ ಮಾಡುವುದಾಗಿ ಏಕ್ತಾ ಕಪೂರ್ ಕಳೆದ ತಿಂಗಳು ಮಾಹಿತಿ ನೀಡಿದ್ದರು. ಇನ್ನು 150 ಎಪಿಸೋಡ್‌ಗಳಾಗಿ ಕಥೆಯನ್ನು ಕಟ್ಟಿಕೊಡುತ್ತಿದ್ದಾರೆ ಎನ್ನಲಾಗ್ತಿದೆ. 17 ವರ್ಷಗಳ ಹಿಂದೆ 150 ಎಪಿಸೋಡ್‌ಗಳಲ್ಲಿ ಧಾರಾವಾಹಿ ಮಾಡಲಿ ತೀರ್ಮಾನಿಸಿದ್ದರು. ಆದರೆ ವೀಕ್ಷಕರಿಂದ ಸಿಕ್ಕ ಪ್ರತಿಕ್ರಿಯೆ ನೋಡಿ 1800ಕ್ಕೂ ಅಧಿಕ ಎಪಿಸೋಡ್‌ಗಳನ್ನು ಕಟ್ಟಿಕೊಡಲಾಗಿತ್ತು. 8 ವರ್ಷಗಳ ಕಾಲ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರವಾಗಿತ್ತು. ಇದೀಗ ಸ್ಮೃತಿ ಇರಾನಿ ಜೊತೆ ಅಮರ್ ಉಪಾಧ್ಯಾಯ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗ್ತಿದೆ.

ಝಡ್ ಪ್ಲಸ್ ಸೆಕ್ಯೂರಿಟಿ ನಡುವೆ ಇದೀಗ 'ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ' ಸೀಕ್ವೆಲ್ ಶೂಟಿಂಗ್ ನಡೀತಿದೆ. ಯಾರಿಗೂ ಸೆಟ್‌ನಲ್ಲಿ ಫೋನ್ ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಗುಟ್ಟಾಗಿ ಚಿತ್ರೀಕರಣದ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. 2013ರಲ್ಲಿ 'ಏಕ್ ಥಿ ನಾಯ್ಕ' ಎಂಬ ಧಾರಾವಾಹಿಯಲ್ಲಿ ಕೊನೆಯದಾಗಿ ಸ್ಮೃತಿ ನಟಿಸಿದ್ದರು. ಆ ಬಳಿಕ ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ.

1998ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಮೃತಿ ಇರಾನಿ ಭಾಗವಹಿಸಿದ್ದರು. ಬಳಿಕ 'ಬೊಲಿಯಾನ್' ಎಂಬ ಆಲ್ಬಮ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. 'ಆತಿಶ್ ಅಂಡ್ ಹಮ್ ಹೈ ಕಲ್ ಆಜ್ ಔರ್ ಕಲ್' ಎಂಬ ಧಾರಾವಾಹಿಯಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ 'ಕವಿತಾ' ಎಂಬ ಮತ್ತೊಂದು ಧಾರಾವಾಹಿಯಲ್ಲಿ ಮಿಂಚಿದ್ದರು. ಅದೇ ಸಮಯದಲ್ಲಿ 'ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ' ಧಾರಾವಾಹಿಯಲ್ಲಿ ನಟಿಸುವಂತಾಯಿತು.

ಬಳಿಕ ಸಾಲು ಸಾಲು ಧಾರಾವಾಹಿಗಳಲ್ಲಿ ಸ್ಮೃತಿ ಬಣ್ಣ ಹಚ್ಚಿದ್ದರು. ನಡುವೆ ಕೆಲ ಹಿಂದಿ ಸಿನಿಮಾಗಳಲ್ಲಿ ಕೂಡ ಅದೃಷ್ಟ ಪರೀಕ್ಷಿಸಿಕೊಂಡಿದ್ದರು. 2002ರಲ್ಲಿ ಬಂದಿದ್ದ ರಾಮಾಯಣ ಕಿರುತೆರೆ ಧಾರಾವಾಹಿಯಲ್ಲಿ ಸೀತೆಯ ಪಾತ್ರಕ್ಕೆ ಜೀವ ತುಂಬಿದ್ದರು. 2003ರಲ್ಲೇ ಬಿಜೆಪಿ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದರು. ಬಳಿಕ ಕೇಂದ್ರ ಸಚಿವೆ ಆಗುವವರೆಗೂ ರಾಜಕೀಯರಂಗದಲ್ಲಿ ಯಶಸ್ಸು ಸಾಧಿಸಿದರು.

More from Filmibeat

English summary
Former Union Minister Smriti Irani is reportedly back on set for the sequel of her iconic TV serial
Read more about: bollywood politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X