VJ Manoj & Bhagyamma: ಸೋಷಿಯಲ್ ಮೀಡಿಯಾ ಸೆನ್ಸೇಷನ್ ಮದರ್ ಭಾಗ್ಯಮ್ಮ ಬಳಿ ಇರುವ ದುಬಾರಿ ಸೀರೆ ಯಾವ್ದು?
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರೋರಿಗೆ ಭಾಗ್ಯಮ್ಮ ಗೊತ್ತೆ ಗೊತ್ತಿರುತ್ತಾರೆ. VJ Manoj ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಒಂದಷ್ಟು ವಿಡಿಯೋಗಳನ್ನ ಮಾಡುತ್ತಾರೆ. ಮಾಡುವ ಪ್ರತಿಯೊಂದು ವಿಡಿಯೋಗಳು ಸೂಪರ್ ಆಗಿ ರೀಚ್ ಆಗುತ್ತವೆ. ಅದಕ್ಕೆ ಕಾರಣವೂ ಇದೇ ಭಾಗ್ಯಮ್ಮ.
ತಮ್ಮ ಮುಗ್ಧತೆಯ ಗುಣದಿಂದಾನೇ ಭಾಗ್ಯಮ್ಮ ಎಲ್ಲರನ್ನು ಆಕರ್ಷಿಸುತ್ತಾರೆ. ಇವರು ಬರೀ ಮನೋಜ್ ಅವರ ತಾಯಿ ಅನ್ನಿಸಲ್ಲ, ನೋಡುಗರಿಗೂ ತಾಯಿಯ ಭಾವನೆ ಮೂಡಿಸುವಂತಿರುತ್ತೆ ಅವರ ಮಾತುಗಳು. ಹೆಚ್ಚು ವಿಡಿಯೋ ಮಾಡುವುದು ಅಮ್ಮ ಮಗ ಮಾತ್ರ.

ಅಮ್ಮ ಮಗನ ಸಂಬಂಧ ಅದೆಷ್ಟು ಅನ್ಯೋನ್ಯವಾಗಿದೆ ಎಂಬುದು ಅವರಿಬ್ಬರ ವಿಡಿಯೋಗಳಿಂದಾನೇ ತಿಳಿಯುತ್ತೆ. ತುಂಬಾ ಬೇಸರ ಆದಾಗ ಅವರ ಪೇಜ್ ಓಪನ್ ಮಾಡಿದರೆ ಮನದಲ್ಲಿರುವ ಕೋಪ ತಾಪ ಕಡಿಮೆಯಾಗಿ, ನಗು ಜಾಸ್ತಿಯಾಗಿ ಮನಸ್ಥಿತಿ ಸಹಜ ಸ್ಥಿತಿಗೆ ಬರೋದು ಗ್ಯಾರಂಟಿ. ಈಗ ಮನೋಜ್ ಅವ್ರು ತಮ್ಮ ಅಮ್ಮನ ವಾರ್ಡ್ ರೂಬ್ ನಲ್ಲಿರುವ ಸೀರೆಗಳನ್ನೆಲ್ಲಾ ತೆಗೆದು ಸ್ಪೆಷಾಲಿಟಿ ಬಗ್ಗೆ ವಿವರಿಸುತ್ತಿದ್ದಾರೆ.
ಭಾಗ್ಯಮ್ಮನ ಬಳಿ ನೂರು-ಇನ್ನೂರು ರೂಪಾಯಿ ಸೀರೆ ಇಲ್ಲ..!
ಹೆಣ್ಣು ಮಕ್ಕಳಿಗೆ ಬಟ್ಟೆ ಮೇಲೆ ಅತಿಯಾದ ಪ್ರೀತಿ ಇದ್ದೆ ಇರುತ್ತದೆ. ಸ್ವಲ್ಪ ಕಾಸ್ಟ್ಲೀ ಆದ್ರೂ ಇಷ್ಟಪಟ್ಟ ಸೀರೆಯನ್ನ ತೆಗೆದುಕೊಳ್ಳದೆ ಇರುವುದಿಲ್ಲ. ಸಾವಿರ, ಮೂರು ಸಾವಿರ, ಎರಡೂವರೆ ಸಾವಿರ ಹೀಗೆ ಹಲವು ದರದಲ್ಲಿರುವ ಸೀರೆಗಳನ್ನ ಭಾಗ್ಯಮ್ಮ ಇಟ್ಟಿದ್ದಾರೆ. ನೋಡುವುದಕ್ಕೇನೆ ಫುಲ್ ಕಲರ್ ಫುಲ್ ಸೀರೆಗಳು. ಭಾಗ್ಯಮ್ಮ ಕೂಡ ಯಾವಾಗಲೂ ಸೀರೆಯಲ್ಲಿಯೇ ಕಾಣಿಸುತ್ತಾರೆ. ಮಗನ ಜೊತೆಗೆ ರೀಲ್ಸ್ ಮಾಡುವಾಗ ಪ್ಯಾಂಟ್ ಶರ್ಟ್ ಹಾಕಿರೋದು ಇದೆ.

ಇಂತಹ ಫ್ರೆಂಡ್ಸ್ ನಿಮ್ಗೂ ಇದ್ದಾರಾ?
ಭಾಗ್ಯಮ್ಮ ಹಾಗೂ ಮನೋಜ್ ಅನುಬಂಧ ಹೇಘಿದೆ ಎಂದು ವಿಡಿಯೋಗಳಿಂದಾನೇ ಗೊತ್ತಾಗುತ್ತೆ. ಹೀಗಾಗಿ ಅಮ್ಮನಿಗೆ ಹಲವು ಸೀರೆಗಳನ್ನ ನೀಡಿದ್ದಾರೆ. ಅದನ್ನು ಹೊರತುಪಡಿಸಿ ಬೇರೆಯವರು ಗಿಫ್ಟ್ ನೀಡಿದ್ದಾರೆ. ಯುಗಾದಿ ಹಬ್ಬಕ್ಕೆ ಭಾಗ್ಯಮ್ಮನಿಗೆ ಒಂದು ಅದ್ಭುತ ಸೀರೆ ಬೆಂಗಳೂರಿನಿಂದ ಬಂದಿದೆ. ಆದ್ರೆ ಅವ್ರ ಹೆಸರು ಗೊತ್ತಿಲ್ಲ. ಯುಗಾದಿ ಹಬ್ಬಕ್ಕೆಂದೆ ನಾಲ್ಕು ಸೀರೆಗಳು ಫ್ರೆಂಡ್ಸ್ ಕಡೆಯಿಂದ ಬಂದಿವೆ. ಈ ರೀತಿಯ ಫ್ರೆಂಡ್ಸ್ ನಮಗಿಲ್ಲ ಅಂತ ಮಕ್ಕಳು ಕಣ್ಣೀರಿಟ್ಟಿದ್ದಾರೆ.
ಭಾಗ್ಯಮ್ಮನ ಬಳಿ ಇದೆ ಕಾಸ್ಟ್ಲೀ ಸೀರೆ
ಡಾರ್ಕ್ ಬ್ಲೂ, ಮರೂನ್ ಬಾರ್ಡರ್ ಇರುವ ಸೀರೆ ಭಾಗ್ಯಮ್ಮನ ಬಳಿ ಇರುವ ದುಬಾರಿ ಸೀರೆಯಾಗಿದೆ. ಆ ಸೀರೆಗೆ 18 ಸಾವಿರ ಬೆಲೆ. ಮಕ್ಕಳು ಇದು 18 ಸಾವಿರನಾ..? ಒಳ್ಳೆ 5 ಸಾವಿರ ರೂಪಾಯಿ ಸೀರೆ ಇದ್ದಂಗೆ ಇದೆ ಎಂದು ರೇಗಿಸಿದ್ದಾರೆ. ಮೊದಲೇ ದುಬಾರಿ ಸೀರೆಯನ್ನ ಕರ್ಟನ್ ಗೆಲ್ಲಾ ಹೋಲಿಕೆ ಮಾಡಿದರೆ ಭಾಗ್ಯಮ್ಮ ಸುಮ್ಮನೆ ಬಿಡುತ್ತಾರಾ..? ಮಕ್ಕಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆ ಸೀರೆ ಕಂಡು ನಾಚಿದ ಭಾಗ್ಯಮ್ಮ
ಭಾಗ್ಯಮ್ಮ ಒಂದೊಂದೇ ಸೀರೆಯನ್ನ ತೆಗೆದು ತೋರಿಸುವಾಗ ಅದರಲ್ಲಿರೋದೆಲ್ಲಾ ಗಿಫ್ಟ್ ಬಂದಿರೋದೆ. ದುಬಾರಿ ಬೆಲೆಯ ಸೀರೆಯನ್ನೇ ಗಿಫ್ಟ್ ಆಗಿ ನೀಡಿದ್ದಾರೆ. ಅದರಲ್ಲಿ ಅವರ ಗಂಡ ಕೊಡಿಸಿದ್ದ ಸೀರೆಗಳನ್ನ ಜೋಪಾನವಾಗಿ ಎತ್ತಿಟ್ಟಿದ್ದಾರೆ. ಸೀರೆಗಳನ್ನ ತೋರಿಸುವಾಗ ಮುಖದಲ್ಲಿ ಆ ದಿನಗಳ ನೆನಪಾಯ್ತು ಅನ್ಸುತ್ತೆ. ಕೊಂಚ ನಗುವು ಕಾಣಿಸಿಕೊಂಡಿದೆ. ಆದರೆ ಮದುವೆ ಸಮಯದಲ್ಲಿ 200, 500 ರೂಪಾಯಿ ಕೊಡಿಸಿ ಮದುವೆ ಮಾಡಿ ಕಳುಗಿಸಿದ್ದರಂತೆ. ಆದರೆ ಈಗ ಭಾಗ್ಯಮ್ಮನ ಬಳಿ ವಾರ್ಡ್ ರೂಬ್ ತುಂಬೆಲ್ಲಾ ಒಳ್ಳೆ ಸೀರೆ ಕಲೆಕ್ಷನ್ ಇದೆ.


Click it and Unblock the Notifications











