ವರುಣ್ -ವರ್ಷಾ ಬಿಗ್ ಬಾಸ್‌ಗಾಗಿ ನಾಟಕವಾಡ್ತಿದ್ದಾರಾ..? ಬ್ರೇಕಪ್ ಸುಳ್ಳು ಅನ್ನೋದಕ್ಕೆ ಸಾಕ್ಷಿ ಕೊಟ್ಟವರು ಯಾರು?

By ಎಸ್ ಸುಮಂತ್

ಇತ್ತೀಚೆಗಿನ ವರ್ಷಗಳಲ್ಲಿ ಸೋಷಿಯಲ್ ಮೀಡಿಯಾ ಸಿಕ್ಕಾಪಟ್ಟೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾ ಇದೆ. ಅದರ ಪರಿಣಾಮವಾಗಿ ರೀಲ್ಸ್ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಕೆಲವೊಂದಿಷ್ಟು ಮಂದಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕುವುದಕ್ಕೆ Instagram ಸೇರಿದಂತೆ ಹಲವು ಫ್ಲಾಟ್ ಫಾರ್ಮ್‌ಗಳನ್ನು ಬಳಕೆ‌ ಮಾಡಿಕೊಳ್ಳುತ್ತಾರೆ. ಇನ್ನು ಹಲವು ಮಂದಿ, ಫೇಮಸ್ ಹಾಡುಗಳಿಗೆ ಲಿಪ್ ಮೂಮೆಂಟ್ ಮಾಡಿ, ಒಂದಿಷ್ಟು ಹೆಜ್ಜೆ ಹಾಕಿ ಫೇಮಸ್ ಆಗುತ್ತಿದ್ದಾರೆ.

ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಅದು ಇದು ಮಾಡುವ ಮಂದಿಗೆ ಫಾಲೋವರ್ಸ್ ಏನು ಕಡಿಮೆ ಇಲ್ಲ. ಫ್ಯಾನ್ ಪೇಜ್ ಅಂತ ಬೇರೆ ಸೃಷ್ಠಿಯಾಗಿದೆ. ಈ ರೀತಿ ಕೊಂಚ ಹೆಸರು ಮಾಡುತ್ತಿರುವವರ ಸೋಷಿಯಲ್ ಮೀಡಿಯಾ ಮಂದಿಯಲ್ಲಿ ವರುಣ್ ವರ್ಷಾ ಕೂಡ.

Social Media influencer Varun and varsha breakup story fake

ವರುಣ್ ವರ್ಷಾ ಜೋಡಿ ಇಷ್ಟಪಡುತ್ತಿದ್ದ ಮಂದಿ

ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಜ‌ನ ಪರಿಚಯವಾಗಿ, ಮದುವೆಯಾಗಿರುವ ಉದಾಹರಣೆಗಳು ಕೂಡ ಇದೆ. ಅದರಲ್ಲೂ ವರುಣ್ ಹಾಗೂ ವರ್ಷಾ ಕೊಂಚ ಎಲ್ಲರಿಂದ ಪ್ರಶಂಸೆ ಪಡೆದಿದ್ದ ಜೋಡಿಯಾಗಿತ್ತು. ಇಬ್ಬರ ರೀಲ್ಸ್ ಮಾತ್ರ ನೋಡುತ್ತಿದ್ದ ಜನ, ಜೋಡಿ ಅಂದರೆ ಹೀಗೆ ಇರಬೇಕು ಎನ್ನುತ್ತಿದ್ದರು. ಅಷ್ಟೇ ಯಾಕೆ ಸೆಲೆಬ್ರೆಟಿ ಜೋಡಿಗಳಿಗೂ ಹೋಲಿಕೆ ಮಾಡಿದ್ದರು. ಇಬ್ಬರಿಗೂ ಮದುವೆಯಾಗಿದೆ ಎನ್ನಲಾಗುತ್ತಿದೆ. ಆದರೆ ಅದನ್ನು ವರುಣ್ -ವರ್ಷಾ ಬಹಿರಂಗ ಪಡಿಸಿಲ್ಲ. ಪ್ರೇಮಿಗಳ ರೀತಿಯೇ ಇದ್ದಾರೆ. ಮದುವೆಯ ವಿಡಿಯೋ ಮಾತ್ರ ವೈರಲ್ ಆಗುತ್ತಾ ಇದೆ.

ಇತ್ತೀಚೆಗೆ ಬ್ರೇಕಪ್ ಬಗ್ಗೆ ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಸಾವಿರಗಟ್ಟಲೇ ಫಾಲೋವರ್ಸ್ ವರುಣ್ ಮತ್ತು ವರ್ಷಾ ಯಾವಾಗಲೂ ಜೊತೆಗಿರುವ ವಿಡಿಯೋಗಳನ್ನೇ ಅಪ್ಲೋಡ್ ಮಾಡುತ್ತಿದ್ದರು. ಇತ್ತೀಚೆಗೆ ಆ ಬೆಳವಣಿಗೆ ಇಲ್ಲದ ಕಾರಣ ಒಂದಷ್ಟು ಮಂದಿ ಪ್ರಶ್ನಿಸಿದ್ದಾರೆ. ಹೀಗಾಗಿ ಇಬ್ಬರು ತಮ್ಮ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕಪ್ ಬಗ್ಗೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.

ಬ್ರೇಕಪ್ ಸುದ್ದಿ ಸುಳ್ಳು ಅಂತಿದ್ದಾರೆ

ಆದರೆ, ಇಬ್ಬರ ಬ್ರೇಕಪ್ ಸುದ್ದಿಯನ್ನು ಯೂಟ್ಯೂಬರ್‌ಗಳು ಸತ್ಯ ಎಂದು ನಂಬುತ್ತಿಲ್ಲ. ಇನ್ನೊಂದು ಕಡೆ ಅವರ ಫಾಲೋವರ್ಸ್ ಹಾಗೂ ನೆಟ್ಟಿಗರು ಅವರ ಕಮೆಂಟ್ ಬಾಕ್ಸ್ ಗಳಲ್ಲೂ ಅದನ್ನೇ ಹೇಳಿದ್ದಾರೆ. ಆದರೆ, ವರ್ಷಾ ಹಾಕಿರಯವ ಸ್ಟೇಟ್ಮೆಂಟ್ ನೋಡಿದಾಗ ಬ್ರೇಕಪ್ ಆಗಿದ್ದರು ಆಗಿರಬಹುದು ಎನ್ನಬಹುದು. ಯಾಕಂದರೆ, ವರುಣ್‌ಗೆ ಬೇರೆ ಹುಡುಗಿಯ ಜೊತೆಗೆ ಪ್ರೀತಿಯಾಗಿದೆ ಎಂದು. ಅದಾದ ಮೇಲೆ ಜನರೆಲ್ಲ ವರುಣ್‌ಗೆ ಕೆಟ್ಟದಾಗಿ ಕಮೆಂಟ್ ಹಾಕುವುದಕ್ಕೆ ಶುರು ಮಾಡಿದರು. ನೆಗೆಟಿವ್ ಕಮೆಂಟ್‌ಗಳು ಬರುತ್ತವೆ ಅಂತ ತಿಳಿದಿದ್ದು ಸುಮ್ಮ ಸುಮ್ಮನೆ ಆ ರೀತಿ ಹೇಳುವುದಕ್ಕೆ ಸಾಧ್ಯವಾ ಎಂಬುದೇ ಹಲವರ ಪ್ರಶ್ನೆ. ಆದರೆ ಅವರಿಬ್ಬರದ್ದು ಬ್ರೇಕಪ್ ಆಗಿಲ್ಲ ಅನ್ನೋದಕ್ಕೆ, ವರುಣ್ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ರೀಲ್ಸ್ ನಲ್ಲಿ ವರ್ಷಾ ಇದಾರೆ. ವರುಣ್ ಅಕ್ಕ ಚೈತ್ರಾರ ಪ್ರೊಫೈಲ್‌ನಲ್ಲೂ ವರ್ಷಾ ಇದಾರೆ. ಹೀಗಾಗಿ ಇವೆಲ್ಲಾ ನಾಟಕ ಎನ್ನುತ್ತಿದ್ದಾರೆ ಮಂದಿ.

ಬಿಗ್ ಬಾಸ್ ಗಾಗಿ ಮಾಡಿದ ಪ್ಲ್ಯಾನ್?

ಬಿಗ್ ಬಾಸ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಸಂಭಾವ್ಯರ ಪಟ್ಟಿಯಲ್ಲಿ ವರುಣ್ ಹಾಗೂ ವರ್ಷಾ ಕೂಡ ಇದ್ದರು ಎನ್ನಲಾಗಿದೆ. ಕಳೆದ ಕೆಲ ಸೀಸನ್‌ಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ Contestantಗಳನ್ನು ಬಿಗ್ ಬಾಸ್ ಮನೆಗೆ ಕರೆಸಲಾಗುತ್ತಿದೆ. ಕಳೆದ ಬಾರಿ ಸೋನು ಗೌಡ ಬಂದಿದ್ದರಲ್ಲ. ಹೀಗಾಗಿ ಬಿಗ್ ಬಾಸ್ ಮನೆಗೆ ಬರೋದಕ್ಕೆ ಇವೆಲ್ಲ ನಾಟಕ‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಶುರುವಾದ ಮೇಲೆ ಇವರಿಬ್ಬರ ವಿಚಾರದ ಗಾಸಿಪ್‌ಗಳಿಗೆ ಅಂತ್ಯ ಸಿಗಲಿದೆ.

More from Filmibeat

English summary
social media influencer Varun and varsha breakup story fake:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X