ಗೆಳತಿಯ ಜೊತೆ ಜಾಲಿ ಮೂಡ್ ನಲ್ಲಿ ನಿವೇದಿತಾ ಗೌಡ: "ನೀನು ಬಾಲಿವುಡ್ ಹೀರೋಯಿನ್" ಎಂದ ಗೆಳತಿ
ರೀಲ್‌ಗಳನ್ನು ಮಾಡುತ್ತಾ ಎಲ್ಲರ ಮನಗೆಲ್ಲುತ್ತಿರುವ ಮುದ್ದು ಮೊಗದ ಚೆಲುವೆ ನಿವೇದಿತಾ ಗೌಡ. ಬಿಗ್ ಬಾಸ್ ಮೂಲಕ ಎಲ್ಲರ ಮನಗೆದ್ದ ಉದ್ದ ಜಡೆಯ ಚೆಲುವೆ ಗೊಂಬೆ ಎಂದೇ ಪರಿಚಿತ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿ ಪ್ರೇಮಿಸಿ ಹೊರ ಬಂದ ಬಳಿಕ ಮದುವೆ ಆಗಿದ್ದರು. ಆದರೆ, ಮದುವೆಯಾದ ಬಳಿಕ ಸುಖವಾಗಿ ಸಂಸಾರ ಮಾಡಿಕೊಂಡಿದ್ದ ಈ ಜೋಡಿ ಇದೀಗ ವಿಚ್ಚೆದನ ಪಡೆದು ಕೊಂಡಿದೆ.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿಚ್ಛೇದನ ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರೂ, ಇಬ್ಬರೂ ಖುಷಿಯಾಗಿದ್ದಾರೆ. ಜೀವನದಲ್ಲಿ ಏನೇ ನಡೆದೂ ಅಂಜದ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ. ತನ್ನ ಇನ್‌ಸ್ಟಾಗ್ರಾಂನಲ್ಲಿ ಏನಾದರೂ ಒಂದು ವಿಡಿಯೋ ಹಾಕುತ್ತಲೇ ಇರುತ್ತಾರೆ.

ಇದೀಗ ನಿವೇದಿತಾ ಗೌಡ ತನ್ನ ಗೆಳತಿಯ ಜೊತೆ ಸಖತ್ ಜಾಲಿ ಮೂಡ್‌ನಲ್ಲಿ ದಿನ ಕಳೆಯುತ್ತಿದ್ದಾರೆ. ಆಗಾಗ ಟ್ರೋಲಿಗರ ಬಾಯಿಗೆ ಆಹಾರ ಆಗುತ್ತಿರುವ ಚೆಲುವೆ ಮಾತ್ರ ಯಾರ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ. ತಾನಾಯಿತು ತನ್ನ ಪಾಡಾಯಿತು ಎಂದು ನಿವೇದಿತಾ ಗೌಡ ಅಂತ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ರೀಲ್ ಹಾಗೆಯೇ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.
ಚಂದನ್ ಶೆಟ್ಟಿ ಅವರ ಜೊತೆಗೆ ವಿಚ್ಛೇದನ ಆದ ಬಳಿಕ ನಿವೇದಿತಾ ಗೌಡ ಖುಷಿಯಲ್ಲಿ ಹಾಗೆಯೇ ಜಾಲಿ ಮೂಡ್ ನಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗದು. ಆಗಾಗ ಶೋಷಿಯಲ್ ಮೀಡಿಯಾದಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಆಗಾಗ ರೀಲ್ಸ್ ಗಳನ್ನು ಮಾಡುತ್ತಾ ಜನರ ಮನಸನ್ನು ಕದಿಯುತ್ತಿದ್ದಾರೆ ಈ ಮುದ್ದು ಮೊಗದ ಚೆಲುವೆ ಎಂದು ಹೇಳಿದರೆ ತಪ್ಪಾಗದು.
ಇತ್ತೀಚಿನ ದಿನಗಳಲ್ಲಿ ನಿವೇದಿತಾ ಗೌಡ ಅವರು ಫುಲ್ ಬೆಡ್ ರೂಮ್ ನಲ್ಲಿ ತನ್ನ ಗೆಳತಿಯ ಜೊತೆ ಹರಟೆ ಹೊಡೆಯುವ ದೃಶ್ಯಾವಳಿಗಳನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಹಾಗೆಯೇ ಬೆಡ್ ರೂಮ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು, ಆದರೆ ಇದೆಲ್ಲವನ್ನೂ ನೋಡಿದ ಅಭಿಮಾನಿಗಳು ಮಾತ್ರ ನಿವೇದಿತಾ ಅವರೇ ವಿಚ್ಛೇದನ ಆದ ಬಳಿಕ ನೀವು ಫುಲ್ ಜಾಲಿ ಜಾಲಿ ಎಂದು ಹೇಳುತ್ತಿದ್ದಾರೆ. ಇನ್ನು ಗೆಳತಿಯ ಜೊತೆ ವಿಡಿಯೋ ಮಾಡಿದ್ದಕ್ಕೆ ಕೆಲವರು ಕೆಟ್ಟದಾಗಿ ಟ್ರೋಲ್ ಕೂಡ ಮಾಡಿದ್ದಾರೆ.
ಜಾಲಿ ಮೂಡ್ನಲ್ಲಿರುವ ನಟಿ ನಿವೇದಿತಾ ಗೌಡ
ಇನ್ನು ಇತ್ತೀಚಿನ ದಿನಗಳಲ್ಲಿ ನಿವೇದಿತಾ ಗೌಡ ಅವರು ಬಹಳ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಗೌಡ ಅವರು ತನ್ನ ಗೆಳತಿ ವಾಣಿಯ ಜೊತೆ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಗೆಳತಿ ನಿವೇದಿತಾರನ್ನು ನೋಡಿ "ನೀನು ಬಾಲಿವುಡ್ ಹೀರೋಯಿನ್ ಹಾಗೆ ಕಾಣುತ್ತಿದ್ದೀಯ" ಎಂದು ಹೇಳುತ್ತಾರೆ. ಕಪ್ಪು ಬಣ್ಣದ ಬಟ್ಟೆ ತೊಟ್ಟು , ಅದಕ್ಕೆ ಮ್ಯಾಚಿಂಗ್ ಆಗಿ ಜೀನ್ಸ್ ಪ್ಯಾಂಟ್ ಹಾಗೆಯೇ ಕಣ್ಣಿಗೆ ಕಪ್ಪುಬಣ್ಣದ ಕೂಲಿಂಗ್ ಗ್ಲಾಸ್ ಹಾಕಿ ಅದ್ಭುತವಾಗಿ ಕಾಣಿಸುತ್ತಿದ್ದರು ನಿವೇದಿತಾ ಗೌಡ. ತನ್ನ ಗೆಳತಿಯ ಜೊತೆ ಕಳೆದ ಕ್ಷಣವನ್ನು ಬಹಳ ಅದ್ಭುತವಾಗಿ ಕ್ಯಾಪ್ಚರ್ ಮಾಡಿದ್ದಾರೆ.
ನಿವೇದಿತಾ ಗೆಳತಿಯ ಬಗ್ಗೆ ಮೆಚ್ಚುಗೆ
ಹಲವಾರು ಜನ ಗೆಳತಿ ಎಂದರೆ ಹೀಗೆಯೇ ಇರಬೇಕು ಎಂದು ಹೇಳಿದರೆ, ಇನ್ನು ಕೆಲವರು ಚಂದನ್ ಶೆಟ್ಟಿಯಿಂದಾಗಿಯೇ ನೀನು ಇಷ್ಟೆಲ್ಲ ಬೆಳೆಯಲು ಸಾಧ್ಯ ಆಯಿತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಅನೇಕ ಜನರು ನಿವೇದಿತಾ ಗೌಡ ಅವರ ಬಗ್ಗೆ ಕೆಟ್ಟ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಆದರೆ ನಿವೇದಿತಾ ಗೌಡ ಅವರು ಯಾವುದಕ್ಕೂ ಕೂಡ ತಲೆಕೆಡಿಸಿಕೊಂಡ ಹಾಗೆ ಕಾಣಿಸುತ್ತಿಲ್ಲ.
ಸಿನಿಮಾದಲ್ಲಿ ನಟನೆ ಮಾಡಿರುವ ನಿವೇದಿತಾ ಗೌಡ
ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಜೊತೆ ಮುದ್ದು ರಾಕ್ಷಸಿ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಹಾಗೆಯೇ ಜಿಎಸ್‌ಟಿ ಸಿನಿಮಾದಲ್ಲಿ ಕೂಡ ಇವರು ನಟನೆ ಮಾಡಿದ್ದಾರೆ. ಹಾಗೆಯೇ ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022 ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನು ಹಲವು ಕಿರುತೆರೆ ರಿಯಾಲಿಟಿ ಶೋನಲ್ಲಿ ಕೂಡ ಇವರು ಭಾಗಿ ಆಗಿದ್ದರು.


Click it and Unblock the Notifications










