ಸೀರೆಯಲ್ಲಿ ಮಿಂಚಿದ ನಿವೇದಿತಾ ಗೌಡ; ಮೈ ತುಂಬಾ ಬಟ್ಟೆ ಹಾಕಿಕೊಳ್ಳಮ್ಮ ಅಂತಿದ್ದ ನೆಟ್ಟಿಗರು ಏನಂದ್ರು?

By ಪೂರ್ವ

ಪಟ ಪಟ ಅಂತ ಮಾತನಾಡುತ್ತಾ ಎಲ್ಲರ ಮನ ಗೆದ್ದ ಚೆಲುವೆ ನಿವೇದಿತಾ ಗೌಡ. ಮುದ್ದು ಮುದ್ದಾಗಿ ನಗುತ್ತಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ನಿವೇದಿತಾ ಗೌಡ ಲುಕ್‌ಗೆ ಫಿದಾ ಆಗದವರೇ ಇಲ್ಲ. ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಆಗಾಗ ತಮ್ಮ ಫೋಟೋ ಅಥವಾ ರೀಲ್ಸ್ ಅನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ನಿವೇದಿತಾ ಗೌಡ ಅವರನ್ನು ಸೀರೆಯಲ್ಲಿ ನೋಡಿ ಎಲ್ಲರೂ ಖುಷಿ ಪಟ್ಟಿದ್ದಾರೆ. ಯಾವತ್ತೂ ಚಿಕ್ಕ ಚಿಕ್ಕ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಿವೇದಿತಾ ಗೌಡ ಇದೀಗ ಸೀರೆಯಲ್ಲಿ ಮಿಂಚಿದ್ದಾರೆ.

ನಿವೇದಿತಾ ಗೌಡ ಅವರ ಫೋಟೋ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ವಿಚ್ಛೇದನ ಆದ ಬಳಿಕ ನಿವೇದಿತಾ ಗೌಡ ಬಿಂದಾಸ್ ಆಗಿ ಜೀವನವನ್ನು ನಡೆಸುತ್ತಿದ್ದಾರೆ. ಹಾಗೆಯೇ ಆಗಾಗ ರೀಲ್ಸ್ ಮಾಡುತ್ತಾ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಸಿದ್ದಾರೆ. ನಿವೇದಿತಾ ಗೌಡ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ನಿವೇದಿತಾ ಗೌಡ ತಿಳಿ ಗುಲಾಬಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

Social media sensation Niveditha Gowda photoshoot with saree goes viral

ಕೈಗೆ ಬಳೆ ತೊಟ್ಟು, ಕುತ್ತಿಗೆ ನೆಕ್ಲೆಸ್ ಹಾಕಿ, ಕಿವಿಗೆ ಕಿವಿಯೋಲೆಯನ್ನು ಧರಿಸಿ ಬಹಳ ಮುದ್ದಾಗಿ ಈ ಚೆಲುವೆ ಕಾಣಿಸುತ್ತಿದ್ದಾರೆ. ನಾನು ಯಾರಿಗೆ ಕೂಡ ಕಮ್ಮಿ ಇಲ್ಲ ಎನ್ನುವ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನು ಈ ಫೋಟೋ ನೋಡಿದ ಅಭಿಮಾನಿಗಳು ಬಹಳ ಕಾಮೆಂಟ್ ಮಾಡುತ್ತಿದ್ದಾರೆ. ನಮ್ಮ ರಾಜಕುಮಾರಿ ಎಷ್ಟು ಮುದ್ದಾಗಿದ್ದಾಳೆ, ಬ್ಯೂಟಿಫುಲ್, ಲುಕಿಂಗ್ ಸೋ ಕ್ಯೂಟ್ ಎಂದೆಲ್ಲ ಕಾಮೆಂಟ್ ಮಾಡಿ ಖುಷಿ ಪಡುತ್ತಿದ್ದಾರೆ. ಇನ್ನು ಈ ಫೋಟೋಗೆ ಸಾಕಷ್ಟು ಲೈಕ್ ಕೂಡ ಬಂದಿದೆ. ನಿವೇದಿತಾ ಗೌಡ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಸುಮಾರು 18 ಲಕ್ಷ ಜನಕ್ಕಿಂತ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ.

ಬಿಗ್ ಬಾಸ್ ಮೂಲಕ ಎಲ್ಲರ ಮನಗೆದ್ದ ಚೆಲುವೆ

ಬಿಗ್ ಬಾಸ್ ಮೂಲಕ ಎಲ್ಲರ ಮನಸನ್ನು ಗೆದ್ದ ಚೆಲುವೆ ಇದೀಗ ಚಿತ್ರರಂಗಕ್ಕೆ ಕೂಡ ಕಾಲಿಟ್ಟಿದ್ದಾರೆ. ಬಿಗ್ ಬಾಸ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಈ ಬ್ಯೂಟಿಗೆ ನಟನೆ ಎಂದರೆ ಬಹಳ ಇಷ್ಟ. ಇನ್ನು ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಮಿನಿ ಡ್ರೆಸ್‌ಗಳನ್ನು ತೊಟ್ಟು ತನ್ನದೇ ಆದ ಛಾಪನ್ನು ಮೂಡಿಸಿದ್ದರು ಎಂದು ಹೇಳಿದರೆ ತಪ್ಪಾಗದು. ಆದರೆ, ಅನೇಕ ಜನರಿಗೆ ನಿವೇದಿತಾ ಗೌಡ ಆ ರೀತಿಯ ಡ್ರೆಸ್ ತೊಡುವುದು ಇಷ್ಟವೇ ಆಗುತ್ತಿರಲಿಲ್ಲ ಎಂದು ಹೇಳಿದರೆ ತಪ್ಪಾಗದು.

ಮಾಡರ್ನ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದ ನಟಿ

ಬಹಳ ಜನರು "ಮೈ ತುಂಬಾ ಬಟ್ಟೆ ಹಾಕಿಕೊಳ್ಳಮ್ಮ" ಎಂದು ಹೇಳುತ್ತಿದ್ದರು. ಇದೀಗ ಸೀರೆಯಲ್ಲಿ ನೋಡಿದ ನಿವೇದಿತಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಬಿಗ್ ಬಾಸ್ ಬಳಿಕ ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಇನ್ನು ಮಾಡರ್ನ್ ಡ್ರೆಸ್ ತೊಟ್ಟ ನಟಿಯನ್ನು ನೋಡಿ ಅನೇಕರು ಬೈಯುತ್ತಿದ್ದರು. ಹಾಗೆಯೇ ಡೈವೋರ್ಸ್ ಕಾರಣದಿಂದ ಕೂಡ ಬಹಳಷ್ಟು ಸದ್ದು ಮಾಡಿದ ಬ್ಯೂಟಿ ಇದೀಗ ಬಿಂದಾಸ್ ಜೀವನ ನಡೆಸುತ್ತಿದ್ದಾರೆ.

More from Filmibeat

English summary
Social media sensation Niveditha Gowda photoshoot with saree goes viral:
Read more about: tv serial poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X