ಸಿಂಪಲ್ಲಾಗಿ ಸೀರೆಯುಟ್ಟ ಮಿಂಚಿದ ಸೋನು ಶ್ರೀನಿವಾಸ್; ಯಾವ ಹೀರೋಯಿನ್‌ಗಿಂತ ಕಮ್ಮಿಯಿಲ್ಲ ಎಂದ ಫ್ಯಾನ್ಸ್

By ಪೂರ್ವ

ಇತ್ತೀಚಿನ ದಿನಗಳಲ್ಲಿ ಸೋನು ಗೌಡ ಆಗಾಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಆ ರೀಲ್ಸ್‌ ಕೂಡ ಸಖತ್ ಆಗಿಯೇ ವೈರಲ್ ಆಗುತ್ತವೆ. ರೀಲ್ಸ್‌ನಲ್ಲಿ ಪಟ ಪಟ ಅಂತ ಮಾತಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ತಮ್ಮನ ಜೊತೆ ಮನದಾಳದ ಮಾತನ್ನು ಹೇಳಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಿಗೆ ಇದೀಗ ಸೋನು ಗೌಡ ಅವರು ಸಖತ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯವಾಗಿರುವ ಚೆಲುವೆ. ಆಗಾಗ ರೀಲ್ಸ್ ಮಾಡುತ್ತಾ, ಟ್ರೋಲಿಗರ ಬಾಯಿಗೆ ಸಿಕ್ಕು ಹೆಚ್ಚಾಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಹೇಳಿದರೆ ತಪ್ಪಾಗದು. ಇನ್ನು ಈ ಮುದ್ದಾದ ಚೆಲುವೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.

Social media sensation Sonu Srinivas Gowda new photoshoot goes viral

ಇದೀಗ ಮತ್ತೊಮ್ಮೆ ಸೋನು ಗೌಡ ಸುದ್ದಿಯಲ್ಲಿದ್ದಾರೆ ಎಂದು ಹೇಳಿದರೆ ತಪ್ಪಾಗದು. ಸದ್ಯ ಸೋನು ಗೌಡ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಸೋನು ಫೋಟೋ ನೋಡಿ ಫುಲ್ ಖುಷಿ ಆಗಿದ್ದಾರೆ. ಅಭಿಮಾನಿಗಳು ಸೀರೆಯಲ್ಲಿ ಸೋನು ನೋಡಿ ಕಳೆದು ಹೋಗಿದ್ದಾರೆ. ಸೋನು ನೀವು ಯಾವ ಅಪ್ಸರೆಗಿಂತ ಕಡಿಮೆ ಇಲ್ಲ ಎಂದು ಅನೇಕ ಜನರು ಕಾಮೆಂಟ್ ಮಾಡಿದ್ದಾರೆ. ಸೋನು ಫೋಟೋ ನೋಡಿ ನೆಟ್ಟಿಗರು, ಲೈಕ್ ಹಾಗು ಕಾಮೆಂಟ್ ಮಾಡುತ್ತಿದ್ದಾರೆ .

ಸೀರೆಯಲ್ಲಿ ಸೋನು ಗೌಡರನ್ನು ನೋಡಿ ಆಕೆಯ ಬೆಂಬಲಿಗರಿಗೆ ಖುಷಿ ಆಗಿದೆ. ಕಪ್ಪು ಬಣ್ಣದ ಸೀರೆಯುಟ್ಟು, ಫುಲ್ ಕೈ ಬ್ಲೌಸ್ ತೊಟ್ಟು ಸೋನು ಗೌಡ ಸಿಂಪಲ್ ಆಗಿ ಫೋಟೋ ಶೂಟ್ ಮಾಡಿದುಕೊಂಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಫೋಟೋದ ಕೆಳಗಡೆ ಭಾವಗೀತೆ, ಬಾಲಿನೋಲುಮೆಯ ಸಂಕೇತ ಎಂದು ಕ್ಯಾಪ್ಸನ್ ಬರೆದುಕೊಂಡಿದ್ದಾರೆ.

ಸೋನು ಮಾಡರ್ನ್ ಡ್ರೆಸ್ ತೊಟ್ಟು ಅದೆಷ್ಟೋ ಬಾರಿ ಟ್ರೋಲ್ ಆಗಿದ್ದರು. ಆದರೆ ಸೀರೆಯುಟ್ಟು , ಕೂದಲನ್ನು ಫ್ರೀಯಾಗಿ ಬಿಟ್ಟಿದ್ದಾರೆ. ಸಾರಿಯಲ್ಲಿ ಅಲ್ಲಲ್ಲಿ ಗೋಲ್ಡನ್ ಕಲ್ಲರ್ ಡಾಟ್‌ಗಳು ಇದ್ದು ಸೀರೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ಸೋನುಗೌಡ ಅವರನ್ನು ನೋಡಿ ಅಭಿಮಾನಿಗಳ ಸಂತೋಷಕ್ಕೆ ಇದೀಗ ಪಾರವೇ ಇಲ್ಲದ ಹಾಗೆ ಆಗಿದೆ. ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್‌ ಓಟಿಟಿಯ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು.

ಸೋನು ಇತ್ತೀಚೆಗೆ ರೀಲ್ಸ್ ಅಷ್ಟೇ ಅಲ್ಲ ಸಮಾಜ ಸೇವೆ ಮಾಡುವುದಕ್ಕೂ ಮುಂದಾಗಿದ್ದರು. ಅಪ್ರಾಪ್ತ ಬಾಲಕಿಯನ್ನು ಸೋನುಗೌಡ ಆಕ್ರಮವಾಗಿ ದತ್ತು ಪಡೆದ ಆರೋಪದಲ್ಲಿ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಇದೀಗ ಸೋನು ಗೌಡ ಅವರು ಸಂತೋಷದ ದಿನಗಳನ್ನು ಎದುರು ನೋಡುತ್ತಿದ್ದಾರೆ.

ಸೀರೆಯುಟ್ಟ ಕ್ಯಾಮರಾಗೆ ಪೋಸ್ ನಗು ಮುಖದಲ್ಲಿ ಪೋಸ್ ಕೊಟ್ಟ ಸೋನು ನಗುವಿಗೆ ಅಭಿಮಾನಿಗಳು ಫುಲ್‌ ಮಾರ್ಕ್ಸ್ ನೀಡಿದ್ದಾರೆ. ಸೋನುಗೆ ಸಿಂಪಲ್ ಆಗಿ ಕಾಣಿಸುವ ಸೀರೆಯುಟ್ಟರೆ ಅದ್ಭುತವಾಗಿ ಈಕೆ ಕಾಣಿಸುತ್ತಾರೆ. ಮಾಡರ್ನ್ ಆಗಿ ಸೋನು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಸೋನು ಫೋಟೊ ನೋಡಿ ಅನೇಕ ಜನರು ಬೇಸರ ಪಟ್ಟುಕೊಂಡಿದ್ದರು ಎಂದು ಹೇಳಿದರೆ ತಪ್ಪಾಗದು.

More from Filmibeat

English summary
Social media sensation Sonu Srinivas Gowda new photoshoot goes viral
Read more about: sonu gowda poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X