ವಿಶ್ವನಾಥ್ ಜಾಗಕ್ಕೆ ಬಂದಿರೋ ವರುಣ್ ಆರಾಧ್ಯ ವಿದ್ಯಾರ್ಹತೆ ಏನು? 'ಬೃಂದಾವನ'ಕ್ಕೆ ಕಾಲಿಡೋಕು ಮುನ್ನ ಏನಾಗಿದ್ರು?
ನಟನಾಗಬೇಕು, ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕು ಎಂದು ಅನೇಕ ಮಂದಿ ಕನಸು ಕಾಣುತ್ತಾರೆ. ಪಿಯುಸಿ ವಿದ್ಯಾಭ್ಯಾಸ ಮುಗಿಸಿರುವ ಇವರಿಗೂ ನಟನೆಯಂದರೆ ವಿಶೇಷ ಪ್ರೀತಿ. ನಟನಾಗಬೇಕು ಎಂಬ ಹಂಬಲ. ನಟನಾ ಜಗತ್ತಿನಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಇವರು ಇದ್ದಂತಹ ಎಲ್ಲಾ ಆಡಿಶನ್‌ಗಳಿಗೆ ಹೋಗಿ ಬರುತ್ತಿದ್ದರು.
ಒಂದಷ್ಟು ಆಡಿಷನ್ ಕೊಟ್ಟ ಬಳಿಕ ಕೊನೆಗೂ ಈ ನಟನಿಗೆ ಅದೃಷ್ಟದ ಬಾಗಿಲು ತೆಗೆದಿದೆ ಎಂದು ಹೇಳಬಹುದು. ನಟನಾಗಿ ಕಿರುತೆರೆಗೆ ಕಾಲಿಟ್ಟು ಕನಸು ನನಸು ಮಾಡಿಕೊಂಡಿರುವ ಈ ಹುಡುಗ ಬೇರಾರು ಅಲ್ಲ, ಬೃಂದಾವನ ಧಾರಾವಾಹಿಯ ವರುಣ್ ಆರಾಧ್ಯ.

ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಬೃಂದಾವನ'ದಲ್ಲಿ ನಾಯಕ ಆಕಾಶ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವರುಣ್ ಆರಾಧ್ಯ ಅವರಿಗೆ ಓದಿನಲ್ಲಿ ವಿಶೇಷವಾದಂತಹ ಆಸಕ್ತಿಯೇನೂ ಇರಲಿಲ್ಲವಂತೆ. ನಟನಾಗಬೇಕು ಎಂದೇ ನಿರ್ಧಾರ ಮಾಡಿದ ಇವರಿಗೆ ಮುಂದೊಂದು ದಿನ ಸಿನಿಮಾ ರಂಗದಲ್ಲಿ ನಾಯಕನಾಗಿ ನಟಿಸುವ ಹಂಬಲವಿದೆಯಂತೆ.
ಇದೇ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ವರುಣ್ ಆರಾಧ್ಯಗೆ ಮೊದಲಿಗೆ ಭಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಕ್ಯಾಮೆರಾವನ್ನು ಎದುರಿಸುವಾಗಲೂ ಕೊಂಚ ನಡುಕ ಉಂಟಾಗಿತ್ತಂತೆ. ಮೊದಲ ಧಾರಾವಾಹಿಯೇ ಬಹುದೊಡ್ಡ ಪ್ರಾಜೆಕ್ಟ್ ಆಗಿದ್ದ ಕಾರಣ ಅಳುಕು ಕೂಡಾ ಇತ್ತಂತೆ. ಆದರೆ, ನಟನಾಗಬೇಕು ಎಂಬ ಅದಮ್ಯ ಆಸೆ ವರುಣ್ ಅವರ ಭಯ, ಅಳುಕನ್ನು ಎಲ್ಲಾ ದೂರ ಮಾಡಿತ್ತಂತೆ.

ಇಲ್ಲಿಯವರೆಗೆ ಬೇರೆಯವರ ನಟನೆಯನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದ ವರುಣ್‌ಗೆ ಇದೀಗ ತಾನು ಹೇಗೆ ನಟನೆ ಮಾಡುತ್ತೇನೆ ಎಂಬ ಕುತೂಹಲವಿದೆಯಂತೆ. ಇದರ ಜೊತೆಗೆ ವೀಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕೂಡಾ ಮುಂದಿನ ದಿನಗಳಲ್ಲಿ ವರುಣ್ ಅವರಿಗೆ ತಿಳಿಯಬೇಕಿದೆ.
ವಿಭಕ್ತ ಕುಟುಂಬಗಳನ್ನಷ್ಟೇ ಕಂಡಿರುವ ವರುಣ್ ಆರಾಧ್ಯಗೆ, ಇದೀಗ ರೀಲ್ ಲೈಫ್‌ನಲ್ಲಿ ಅವಿಭಕ್ತ ಕುಟುಂಬ ದೊರೆತಿರುವುದು ತುಂಬಾ ಖುಷಿಯಾಗಿದೆ. ಇದರ ಜೊತೆಗೆ ಪ್ರತಿ ಪಾತ್ರವನ್ನು ಸಂಬಂಧಕ್ಕೆ ಅನುಗುಣವಾಗಿ ಸಂಭೋದಿಸುವುದು ಕೂಡಾ ಅವರಿಗೆ ಸಂತಸ ನೀಡಿದೆಯಂತೆ. ವರುಣ್ ಆರಾಧ್ಯ ನಾಯಕನಾಗಿ ನಟಿಸುವ ಕಾರಣ ಸಹಜವಾಗಿ ಪ್ರತಿಯೊಂದು ಪಾತ್ರಕ್ಕೂ ಅವರಿಗೂ ಸಂಬಂಧ ಇರಲೇಬೇಕು. ಜೊತೆಗೆ ಈಗಷ್ಟೇ ಧಾರಾವಾಹಿ ತಂಡಕ್ಕೆ ಸೇರಿರುವ ವರುಣ್ 'ಬೃಂದಾವನ'ದ ಸಹಕಲಾವಿದರುಗಳೊಂದಿಗೆ ಆರಾಮವಾಗಿ ಬೆರೆಯುತ್ತಿದ್ದಾರಂತೆ.
ಇನ್ನು ನಟನೆಯ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ವರುಣ್ ಆರಾಧ್ಯ ಡಿಜಿಟಲ್ ಇನ್‌ಫ್ಯುಯೆನ್ಸರ್ ಆಗಿ ಗುರುತಿಸಿಕೊಂಡವರು. ತಾವು ಕ್ರಿಯೇಟ್ ಮಾಡಿರುವಂತಹ ವಿಡಿಯೋಗಳನ್ನು ಇನ್‌ಸ್ಟಾಗ್ರಾಂ, ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುವ ವರುಣ್‌ಗೆ ಇನ್‌ಸ್ಟಾಗ್ರಾಂನಲ್ಲಿ 902K ಫಾಲೋವರ್ಸ್ ಇದ್ದಾರೆ.
ಇದರ ಜೊತೆಗೆ ವರುಣ್ ಆರಾಧ್ಯ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'ಗೆ ಹೋಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಅಸಲಿಗೆ ವರುಣ್ ಆರಾಧ್ಯಗೆ ಬಿಗ್ ಬಾಸ್ ನಿಂದ ಆಫರ್ ಬರಲಿಲ್ಲ. ಒಂದು ವೇಳೆ ಬಂದಿದ್ದರೆ ಖಂಡಿತವಾಗಿಯೂ ದೊಡ್ಮನೆಯೊಳಗೆ ಕಾಲಿಡಲು ವರುಣ್ ತಯಾರಿದ್ದಿದ್ದಾಗಿ ಹೇಳಿಕೊಂಡಿದ್ದಾರೆ.


Click it and Unblock the Notifications











