twitter
    For Quick Alerts
    ALLOW NOTIFICATIONS  
    For Daily Alerts

    ಕೋಟ್ಯಧಿಪತಿಯಲ್ಲಿ ದೊಡ್ಡ ಮೊತ್ತ ಗೆದ್ದ ಸಾಫ್ಟ್ ವೇರ್ ಇಂಜಿನಿಯರ್ ಜ್ಞಾನೇಶ್

    |

    ಟಿ.ನರಸೀಪುರ ಮೂಲದ ಜ್ಞಾನೇಶ್ ಅವರು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ತಂದೆಯೇ ರೋಲ್ ಮಾಡೆಲ್. ತಂದೆಯ ಮಾರ್ಗದರ್ಶನದಂತೆ ಓದಿ ಒಳ್ಳೆಯ ಕೆಲಸ ಮಾಡ್ತಿರುವ ಜ್ಞಾನೇಶ್ ಅವರಿಗೆ ಹುಟ್ಟೂರಿನಲ್ಲಿ ಒಂದು ಶಾಲೆಯನ್ನ ಕಟ್ಟಬೇಕು ಎಂಬ ಆಸೆ.

    ಈ ಆಸೆಯನ್ನ ಈಡೇರಿಸುವ ಕಾರಣದಿಂದ ಜ್ಞಾನೇಶ್ ಕನ್ನಡದ ಕೋಟ್ಯಧಿಪತಿ ಹಾಟ್ ಸೀಟ್ ಗೆ ಬಂದರು. ಕೋಟ್ಯಧಿಪತಿಯಲ್ಲಿ ಭರ್ಜರಿ ಆಟ ಆಡಿದ ಜ್ಞಾನೇಶ್ ಒಳ್ಳೆಯ ಮೊತ್ತ ಗೆದ್ದುಕೊಂಡು ಹೋದರು.

    ಕೋಟ್ಯಧಿಪತಿಯಲ್ಲಿ ಭರ್ಜರಿ ಮೊತ್ತ ಗೆದ್ದ ಬ್ಯಾಂಕ್ ಅಟೆಂಡರ್ ಮನು ಕೋಟ್ಯಧಿಪತಿಯಲ್ಲಿ ಭರ್ಜರಿ ಮೊತ್ತ ಗೆದ್ದ ಬ್ಯಾಂಕ್ ಅಟೆಂಡರ್ ಮನು

    ಬಹಳ ಕಾನ್ಫಿಡೆಂಟ್ ಆಗಿ ಆಟ ಆಡ್ತಿದ್ದ ಜ್ಞಾನೇಶ್ ಅವರಿಗೆ ಈ ಒಂದು ಪ್ರಶ್ನೆ ಅಡ್ಡಗಾಲು ಹಾಕಿ, ವಿಲನ್ ಆಗಿ ಕಾಡಿತು. ಸೋ, ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಆಟವನ್ನ ಕೈಬಿಟ್ಟರು. ಅಷ್ಟಕ್ಕೂ, ಜ್ಞಾನೇಶ್ ಗೆದ್ದ ಹಣವೆಷ್ಟು? ಯಾವ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ಮುಂದೆ ಓದಿ....

    ಲೈಫ್ ಲೈನ್ ಬಳಸದೇ ಮೊದಲ ಹಂತ ಕ್ರಾಸ್

    ಲೈಫ್ ಲೈನ್ ಬಳಸದೇ ಮೊದಲ ಹಂತ ಕ್ರಾಸ್

    ಯಾವುದೇ ಲೈಫ್ ಲೈನ್ ಬಳಸದೇ ಮೊದಲ ಸೇಫ್ ಝೋನ್ ದಾಟಿದ ಜ್ಞಾನೇಶ್ ಅವರು ಮೊದಲ ಐದು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದರು. ಮೊದಲ ಐದು ಪ್ರಶ್ನೆಗೆ ಸರಿ ಉತ್ತರ ಕೊಟ್ಟ ಕಾರಣ ಜ್ಞಾನೇಶ್ ಅವರಿಗೆ ಹತ್ತು ಸಾವಿರ ಸಿಕ್ಕಿತು.

    ಬುದ್ದಿವಂತಿಕೆಯಿಂದ 3.20 ಲಕ್ಷ ಗೆದ್ದರು

    ಬುದ್ದಿವಂತಿಕೆಯಿಂದ 3.20 ಲಕ್ಷ ಗೆದ್ದರು

    ಮೊದಲ ಐದು ಪ್ರಶ್ನೆಗಳಿಗೆ ಯಾವುದೇ ಲೈಫ್ ಲೈನ್ ಬಳಸದೇ ಸರಿ ಉತ್ತರ ಕೊಟ್ಟ ಜ್ಞಾನೇಶ್, ಹತ್ತು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ಎರಡನೇ ಸೇಫ್ ಝೋನ್ ಕೂಡ ದಾಟಿದರು. ಈ ಮೂಲಕ 3.20 ಲಕ್ಷ ಗೆದ್ದು ಕೋಟಿ ಗೆಲ್ಲುವ ಭರವಸೆ ಮೂಡಿಸಿದರು. ಈ ಹಂತದಲ್ಲಿ ಮೂರು ಲೈಫ್ ಲೈನ್ ಬಳಸಿಕೊಂಡರು.

    ಕೋಟ್ಯಧಿಪತಿಯಲ್ಲಿ 25 ಲಕ್ಷ ಗೆಲ್ಲುವ ಅವಕಾಶ ಕಳೆದುಕೊಂಡ ವೈಭವ್

    ಡಪಲ್ ಡಿಪ್ ಬಳಸಿ 6.40ಲಕ್ಷ ಗೆದ್ದರು

    ಡಪಲ್ ಡಿಪ್ ಬಳಸಿ 6.40ಲಕ್ಷ ಗೆದ್ದರು

    ಹತ್ತು ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟು 3.20 ಲಕ್ಷ ಗೆದ್ದ ಜ್ಞಾನೇಶ್ ಅವರ ಮೂರು ಲೈಫ್ ಲೈನ್ ಬಳಸಿಕೊಂಡಿದ್ದರು. ಹಾಗಾಗಿ, ಅವರ ಬಳಿ ಹೆಚ್ಚುವರಿ ಲೈಫ್ ಲೈನ್ ಡಬಲ್ ಡಿಪ್ ಮಾತ್ರ ಇತ್ತು. ಈ ಆಯ್ಕೆ ಬಳಸಿದಾಗ ಆಟವನ್ನ ಕ್ವಿಟ್ ಮಾಡುವಂತಿರಲಿಲ್ಲ. ಆದರೆ, ಧೈರ್ಯದಿಂದ ಲೈಫ್ ಲೈನ್ ಬಳಸಿದರು. ಅದೃಷ್ಟವಶಾತ್ ಮೊದಲನೇ ಉತ್ತರವೇ ಸರಿಯಾಗಿತ್ತು. ಅಲ್ಲಿಗೆ 6.40 ಲಕ್ಷ ಗೆದ್ದು ಖುಷಿಯಾದರು.

    ಮೊದಲ ಸಂಚಿಕೆಯಲ್ಲೇ ದೊಡ್ಡ ಮೊತ್ತ ಗೆದ್ದ ಕೋಟ್ಯಧಿಪತಿಯ ಮೊದಲ ಸ್ಪರ್ಧಿಮೊದಲ ಸಂಚಿಕೆಯಲ್ಲೇ ದೊಡ್ಡ ಮೊತ್ತ ಗೆದ್ದ ಕೋಟ್ಯಧಿಪತಿಯ ಮೊದಲ ಸ್ಪರ್ಧಿ

    12.50 ಲಕ್ಷದ ಪ್ರಶ್ನೆಗೆ ಜ್ಞಾನೇಶ್ ಗೊಂದಲ

    12.50 ಲಕ್ಷದ ಪ್ರಶ್ನೆಗೆ ಜ್ಞಾನೇಶ್ ಗೊಂದಲ

    ಡೇವಿಸ್ ಕಪ್ ಟೆನ್ನಿಸ್ ಪಂದ್ಯಾವಳಿಯಲ್ಲೂ ಭಾರತವನ್ನು ಪ್ರತಿನಿಧಿಸಿದ್ದ ಟೆಸ್ಟ್ ಕ್ರಿಕೆಟ್ ಆಟಗಾರ ಯಾರು?

    A ವಿನೂ ಮಂಕಡ್

    B ಚುನಿ ಗೋಸ್ವಾಮಿ

    C ಕೋಟ ರಾಮಸ್ವಾಮಿ

    D ಮನ್ಸೂರ್ ಅಲಿ ಖಾನ್ ಪಟೌಡಿ

    ಸರಿ ಉತ್ತರ ಯಾವುದು?

    ಸರಿ ಉತ್ತರ ಯಾವುದು?

    A ವಿನೂ ಮಂಕಡ್ ಮತ್ತು D ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಬಗ್ಗೆ ತಿಳಿದಿದ್ದ ಜ್ಞಾನೇಶ್ ಅವರಿಗೆ ಉಳಿದವರಿಬ್ಬರ ಬಗ್ಗೆ ಅರಿವಿರಲಿಲ್ಲ. ಲೈಫ್ ಲೈನ್ ಕೂಡ ಇರಲಿಲ್ಲ. ಹಾಗಾಗಿ, ಜ್ಞಾನೇಶ್ ಅವರು ಕನ್ನಡದ ಕೋಟ್ಯಧಿಪತಿ ಆಟವನ್ನ ಕ್ವಿಟ್ ಮಾಡಿದ್ರು. ಈ ಮೂಲಕ 6.40 ಲಕ್ಷ ತಮ್ಮಲ್ಲಿ ಉಳಿಸಿಕೊಂಡರು.
    ಸರಿ ಉತ್ತರ: C ಕೋಟ ರಾಮಸ್ವಾಮಿ

    English summary
    Kannadada kotyadhipathi 4: Jnanesh, a software engineer from Bangalore has particepated in Kannadada kotyadhipathi and he won huge amount.
    Tuesday, July 23, 2019, 13:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X