25 ಲಕ್ಷ ಗೆಲ್ಲೋಕೆ ಹೋಗಿ ದೊಡ್ಡ ಮೊತ್ತವನ್ನ ಕಳೆದುಕೊಂಡ ಸೋಮಶೇಖರ್

By Bharath Kumar

Recommended Video

Kannadada Kotyadhipathi Season 3 : ದೊಡ್ಡ ಮೊತ್ತವನ್ನ ಕಳೆದುಕೊಂಡ ಸೋಮಶೇಖರ್ | Filmibeat Kannada

'ಕನ್ನಡದ ಕೋಟ್ಯಧಿಪತಿ'ಯಲ್ಲಿ ಮಂಗಳವಾರ ಸೋಮಶೇಖರ್ ಅವರ ಹಾಟ್ ಸೀಟ್ ನಲ್ಲಿ ಕೂತಿದ್ದರು. ಸೋಮವಾರ ಸಂಚಿಕೆಯಲ್ಲಿ ಯಶಸ್ವಿಯಾಗಿ ಆಟವಾಡಿದ್ದ ಅವರು 6.40 ಲಕ್ಷ ಹಣ ಗೆದ್ದಿದ್ದರು.

ಹೀಗಾಗಿ, ಅವರ ಆಟದ ಮೇಲೆ ದೊಡ್ಡ ಭರವಸೆ ಇತ್ತು. ಸೋಮಶೇಖರ್ ಅವರು ಗರಿಷ್ಠ ಮೊತ್ತವನ್ನ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಬಹುಶಃ ಮೂರನೇ ಆವೃತ್ತಿಯ ಕನ್ನಡ ಕೋಟ್ಯಧಿಪತಿಯ ಸಂಚಿಕೆಯಲ್ಲಿ ಇವರು ಹೊಸ ದಾಖಲೆ ನಿರ್ಮಾಣ ಮಾಡಬಹುದು ಎಂದುಕೊಂಡಿದ್ದರು.

ಅದರಂತೆ ಸೋಮಶೇಖರ್ ಅವರ ಆಟವೂ ಮುಂದುವರೆದಿತ್ತು. ಎಲ್ಲ ಲೈಫ್ ಲೈನ್ ಗಳು ಮುಗಿದರು ಧೈರ್ಯದಿಂದ ಮುನ್ನುಗ್ಗಿದ ಅವರು 25 ಲಕ್ಷದ ಸನಿಹ ಬಂದು ನಿಂತರು. ಅಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಕೈನಲ್ಲಿದ್ದ ದೊಡ್ಡ ಮೊತ್ತವನ್ನ ಕಳೆದುಕೊಂಡರು. ಅಷ್ಟಕ್ಕೂ, ಸೋಮಶೇಖರ್ ಅವರು ಗಳಿಸಿದ್ದೆಷ್ಟು.? ಕಳೆದುಕೊಂಡಿದ್ದೆಷ್ಟು.? ಮುಂದೆ ಓದಿ.....

12.5 ಲಕ್ಷ ಗೆದ್ದು ಸರ್ಪ್ರೈಸ್ ಕೊಟ್ಟ ಸ್ಪರ್ಧಿ

12.5 ಲಕ್ಷ ಗೆದ್ದು ಸರ್ಪ್ರೈಸ್ ಕೊಟ್ಟ ಸ್ಪರ್ಧಿ

ಇವರಲ್ಲಿ ಯಾರು ವಿಶ್ವದ ಮೊಟ್ಟಮೊದಲ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾಯಿತರಾದ ಮಹಿಳಾ ಅಧ್ಯಕ್ಷರು.?
A ವಿಗ್ಡಿಸ್ ಫಿನ್ ಬೋಗೆಡಾಟಿಯರ್
B ಸಾಯ್ ಇಂಗ್ ವೆನ್
C ಅಮೀನಾ ಗುರಿಬ್
D ಇಸಬೆಲ್ ಪೆರೋನ್
ಲೈಫ್ ಲೈನ್ ಮುಗಿದಿತ್ತು. ಉತ್ತರ ಖಚಿತವಾಗಿ ಗೊತ್ತಿರಲಿಲ್ಲ. ಆದ್ರೂ, ಊಹೆಯ ಮೇಲೆ ಸರಿ ಉತ್ತರ ನೀಡಿ ಸರ್ಪ್ರೈಸ್ ಕೊಟ್ಟರು. ಸರಿಯಾದ ಉತ್ತರ: A ವಿಗ್ಡಿಸ್ ಫಿನ್ ಬೋಗೆಡಾಟಿಯರ್

25 ಲಕ್ಷದ ಪ್ರಶ್ನೆಗೆ ಔಟ್.!

25 ಲಕ್ಷದ ಪ್ರಶ್ನೆಗೆ ಔಟ್.!

ಒಂದು ವೇಳೆ 12.5 ಲಕ್ಷದ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟಿದ್ದರೇ 3.20 ಲಕ್ಷಕ್ಕೆ ಜಾರುತ್ತಿದ್ದರು. ಆದ್ರೆ, ಅಲ್ಲಿ ಅವರ ಅದೃಷ್ಟ ಕೈಹಿಡಿಯಿತು. ಹಾಗಾಗಿ, 12.5 ಲಕ್ಷದ ಪ್ರಶ್ನೆಗೆ ಸರಿ ಉತ್ತರ ನೀಡಿ ಇನ್ನೊಂದು ಹೆಜ್ಜೆ ಮುಂದೆ ಹೋದರು. ಆಮೇಲೆ 25 ಲಕ್ಷದ ಪ್ರಶ್ನೆ ಸುಲಭವಾಗಿರಲಿಲ್ಲ. ಹಾಗಿದ್ದರೂ ಧೈರ್ಯ ಮಾಡಿದ ಸೋಮಶೇಖರ್ ಅವರು ಆಟವನ್ನ ಮುಂದುವರೆಸಿ, ಕೈ ಸುಟ್ಟುಕೊಂಡರು.

ಕೇವಲ 3.20 ಲಕ್ಷಕ್ಕೆ ಇಳಿಕೆ

ಕೇವಲ 3.20 ಲಕ್ಷಕ್ಕೆ ಇಳಿಕೆ

25 ಲಕ್ಷದ ಪ್ರಶ್ನೆಗೆ ತಪ್ಪು ಉತ್ತರ ನೀಡಿದ ಹಿನ್ನೆಲೆ ಸೋಮಶೇಖರ್ ಅವರು 3.20 ಲಕ್ಷಕ್ಕೆ ಜಾರಿದರು. ಅಲ್ಲಿಗೆ ಕೈಯಲ್ಲಿದ್ದ 12.5 ಲಕ್ಷದಲ್ಲಿ ದೊಡ್ಡ ಮೊತ್ತವನ್ನೇ ಕಳೆದುಕೊಂಡರು. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವುದು ನಿರಾಸೆ ಉಂಟು ಮಾಡಿತು.

ಯಾವುದು 25 ಲಕ್ಷ ಪ್ರಶ್ನೆ.?

ಯಾವುದು 25 ಲಕ್ಷ ಪ್ರಶ್ನೆ.?

ಇಲ್ಲಿನ ಯಾವ ಪರ್ವತ ಶಿಖರದ ಎತ್ತರ 8000 ಮೀಟರ್ ಗಳಿಗಿಂತ ಅಧಿಕವಾಗಿಲ್ಲ.?
A ಹಿಮಾಲ್ ಚುಲಿ
B ನಂಗಾ ಪರ್ವತ
C ಮನಾಸ್ಲು
D ಅನ್ನಪೂರ್ಣ 1
ಸೋಮಶೇಖರ್ ಅವರ ಕೊಟ್ಟ ಉತ್ತರ : D ಅನ್ನಪೂರ್ಣ 1
ಸರಿಯಾದ ಉತ್ತರ : A ಹಿಮಾಲ್ ಚುಲಿ

More from Filmibeat

English summary
'Kannadada Kotyadhipathi season 3' contestant Soma shekar has won 3 lakh 20 thousand rupees.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X