'ಮಾಂಗಲ್ಯಂ ತಂತುನಾನೇನ' ಧಾರಾವಾಹಿ ನಟ ಚಂದನ್ ಹೆಸರಿನಲ್ಲಿ ನಡೆಯುತ್ತಿದೆ ದೊಡ್ಡ ಮೋಸ
Recommended Video
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಾಂಗಲ್ಯಂ ತಂತುನಾನೇನ' ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದೆ. ಅಲ್ಪಾವಧಿಯಲ್ಲೇ ಭಾರಿ ಬೇಗ ಯಶಸ್ಸುಗಳಿಸಿದ 'ಮಾಂಗಲ್ಯಂ ತಂತುನಾನೇನ' ಸೀರಿಯಲ್ ನ ಮುಖ್ಯ ಪಾತ್ರದಲ್ಲಿ ನಟ ಆರ್ ಕೆ ಚಂದನ್ ಕಾಣಿಸಿಕೊಳ್ಳುತ್ತಿದ್ದಾರೆ.
ಆರ್ ಚಂದನ್ ಎನ್ನುವುದಕ್ಕಿಂತ ತೇಜು ಅಂದ್ರೆ ಬಹುಬೇಗ ಎಲ್ಲರಿಗೂ ಗೊತ್ತಾಗುತ್ತೆ. ಯಾಕಂದ್ರೆ ಧಾರಾವಾಹಿಯಲ್ಲಿ ತೇಜು ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ ಚಂದನ್. ಪಕ್ಕಾ ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ ಚಂದನ್ ಅದೆಷ್ಟು ಯುವತಿಯ ಪಾಲಿಗೆ ಡ್ರೀಮ್ ಬಾಯ್ ಆಗಿದ್ದಾರೆ.
ಮುದ್ದು ಮುದ್ದಾಗಿ ಅಭಿನಯಿಸುವ ಚಂದನ್ ಮುದ್ದುತನವನ್ನು ಅನೇಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಚಂದನ್ ಹೆಸರಿನಲ್ಲಿ ದೊಡ್ಡ ಮೋಸ ನಡೆಯುತ್ತಿದೆ. ಇನ್ಮುಂದೆ 'ಮಾಂಗಲ್ಯಂ ತಂತುನಾನೇನ' ಧಾರಾವಾಹಿ ನೋಡುವವರು ಎಚ್ಚರವಾಗಿರಬೇಕು ಅಷ್ಟೆ. ಹಾಗಾದ್ರೆ ಅದೆಂತಾ ಮೋಸ ಅಂತೀರಾ. ಮುಂದೆ ಓದಿ.

ಚಂದನ್ ಹೆಸರಿನಲ್ಲಿ ಹಣ ವಸೂಲಿ
ಧಾರಾವಾಹಿಯಲ್ಲಿ ಎಲ್ಲರ ಅಚ್ಚುಮೆಚ್ಚಿನ ತೇಜು ಆಗಿರುವ ಚಂದನ್ ಹೆಸರಿನಲ್ಲಿ ಅನೇಕರು ಹಣ ವಸೂಲಿ ಮಾಡುತ್ತಿದ್ದಾರೆ. ಚಂದನ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ಆ ಮೂಲಕ ಎಲ್ಲರಿಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಚಂದನ್ ಹೆಸರನ್ನು ಹೇಳಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತೇನೆ, ಸ್ಟೂಡೆಂಟ್ ಗೆ ಸಹಾಯ ಮಾಡುತ್ತೇನೆ ಎಂದು ಹೇಳಿ ಹಣವನ್ನು ಪಡೆಯುತ್ತಿದ್ದಾರಂತೆ. ಇದನ್ನ ನಂಬಿ ಅನೇಕರು ಹಣ ಕೊಟ್ಟು ಮೋಸ ಹೋಗಿದ್ದಾರೆ.

ಸ್ಪಷ್ಟನೆ ನೀಡಿದ ನಟ ಆರ್ ಕೆ ಚಂದನ್
ಚಂದನ್ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. "ನನ್ನ ಹೆಸರಿನಲ್ಲಿ ಹಲವಾರು ನಕಲಿ ಖಾತೆಗಳಿವೆ. ಅವುಗಳಿಂದ ಜನರ ಒಳಿತಿಗೆ, ಸಹಾಯಕ್ಕಾಗಿ ಹಣ ಕಳಿಸಿಕೊಡಿ ಎಂದು, ಅಥವಾ ಅಗತ್ಯಕ್ಕಿಂತ ಹೆಚ್ಚಾಗಿ personal message ಬಂದರೆ, ನಿಮ್ಮನ್ನು ಭೇಟಿಯಾಗುತ್ತೇನೆ ನಂಬರ್ ಕೊಡಿ ಎಂದು ಕೇಳಿದರೆ ಅದನ್ನು ನಂಬದಿರಿ. ಸಾಕಷ್ಟು ಜನ ಹಣ ಕಳೆದುಕೊಂಡಿರುವುದು, ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. Facebookನಲ್ಲಿ ಕೇವಲ official page ಮಾತ್ರ ಇದ್ದು ಇನ್ಯಾವುದೇ ಖಾತೆಗಳಿಲ್ಲ. Instagramನಲ್ಲಿ @iam___rk ಮಾತ್ರ ಖಾಸಗಿ ಖಾತೆ"

ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ ಚಂದನ್
ಈ ಹಿಂದೆ ಚಂದನ್ ಒಂದಿಷ್ಟು ಜನರಿಗೆ ಊಟವನ್ನು ತಲುಪಿಸುವಂತ ಕೆಲಸ ಮಾಡಿದ್ದರು. ಲೆಟ್ಸ್ ಪುಟ್ ಎ ಸ್ಮೈಲ್ ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ಹಸಿದ ಜೀವಕ್ಕೆ ಊಟ ತಲುಪಿಸುವ ಕೆಲಸ ಮಾಡಿದ್ದರು. ಆದ್ರೆ ಅದು ಬಿಟ್ಟರೆ ಬೇರೆ ಯಾವ ಸೇವೆಯನ್ನು ಮಾಡುತ್ತಿಲ್ಲ. ಯಾರ ಬಳಿಯು ಹಣ ಕೇಳಲ್ಲ ಎಂದು ಚಂದನ್ ಹೇಳಿಕೊಂಡಿದ್ದಾರೆ. ಅಲ್ಲದೆ ಚಂದನ್ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಖಾತೆ ಬಿಟ್ಟರೆ ಬೇರೆಯಾವುದೆ ಸಾಮಾಜಿಕ ಜಾಲತಾಣ ಬಳಸುತ್ತಿಲ್ಲವಂತೆ ಚಂದನ್.

ತೇಜು-ಶ್ರಾವಣಿ ಹಿಟ್ ಪೇರ್
'ಮಾಂಗಲ್ಯಂ ತಂತುನಾನೇನ' ಧಾರಾವಾಹಿಯಲ್ಲಿ ತೇಜು ಮತ್ತು ಶ್ರಾವಣಿ ಜೋಡಿ ಈಗಾಗಲೆ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ. ಶ್ರಾವಣಿ ಪಾತ್ರದಲ್ಲಿ ನಟಿ ದಿವ್ಯಾ ಕಾಣಿಸಿಕೊಂಡಿದ್ದಾರೆ. ಸೀರಿಯಲ್ ನಲ್ಲಿ ಎಂ ಎಲ್ ಎ ಮಗನಾಗಿ, ತಾಯಿಯ ಮುದ್ದಿನ ಮಗ ತೇಜು, ಪತ್ನಿಯ ಪ್ರೀತಿಯಲ್ಲಿ ಬಂದಿಯಾದ್ರು, ಪತ್ನಿಗೆ ಡೈವೋರ್ಸ್ ನೀಡಿ ಈಗ ಪರದಾಡುತ್ತಿದ್ದಾರೆ.


Click it and Unblock the Notifications











