ಬಿಗ್‌ಬಾಸ್ ಪ್ರಸಾರ ಸಮಯ ಬದಲಾಯಿಸುವಂತೆ ಪ್ರೇಕ್ಷಕರ ಒತ್ತಾಯ
ಬಿಗ್‌ಬಾಸ್ ಸೀಸನ್ 8 ನಾಳೆ (ಫೆಬ್ರವರಿ 28) ಸಂಜೆ ಆರು ಗಂಟೆಗೆ ಅದ್ಧೂರಿ ಆರಂಭ ಕಾಣಲಿದೆ. ಸುದೀಪ್ ಅವರು ನಾಳೆ 6 ಗಂಟೆಯಿಂದ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಪರಿಚಯಿಸಿ ಅವರನ್ನು ಬಿಗ್‌ಬಾಸ್ ಮನೆಯ ಒಳಕ್ಕೆ ಕಳುಹಿಸಲಿದ್ದಾರೆ.
ನಾಳೆಯ ನಂತರ ಸೋಮವಾರದಿಂದ ಬಿಗ್‌ಬಾಸ್ ಕಾರ್ಯಕ್ರಮವು ಟಿವಿಯಲ್ಲಿ ಪ್ರತಿದಿನ ರಾತ್ರಿ 9:30 ಕ್ಕೆ ಪ್ರಸಾರವಾಗಲಿದೆ. ಒಂದು ಗಂಟೆ ಕಾಲ ಕಾರ್ಯಕ್ರಮ ನಡೆಯಲಿದೆ.
ಆದರೆ ಬಿಗ್‌ಬಾಸ್ ನ ಈ ಪ್ರಸಾರ ಸಮಯ ಹೆಚ್ಚಿನ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಕಾರ್ಯಕ್ರಮದ ಪ್ರಸಾರ ಸಮಯವನ್ನು ಬದಲಾಯಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿದ್ದಾರೆ.

ಬಿಗ್‌ಬಾಸ್ ಆಯೋಜಕರಾದ ಪರಮೇಶ್ವರ್ ಗುಂಡ್‌ಕಲ್ ಅವರು ಬಿಗ್‌ಬಾಸ್ ಸೀಸನ್ 8 ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳಲ್ಲಿ ಈ ಬಗ್ಗೆ ಹಲವು ಕಮೆಂಟ್ ಮಾಡಿದ್ದು, ಬಿಗ್‌ಬಾಸ್ ನ ಪ್ರಸಾರ ಸಮಯ ಬಹಳ ತಡವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾತ್ರಿ 9:30 ಕ್ಕೆ ಪ್ರಾರಂಭವಾಗುವ ಬಿಗ್‌ಬಾಸ್ ಶೋ ಮುಗಿಯುವುದು 10:30 ಆಗಿಬಿಡುತ್ತದೆ. ಇದು ಬಹಳ ತಡವಾಯ್ತು ಎಂದು ಹಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರ ಬದಲು, 8 ಗಂಟೆ ಅಥವಾ 9 ಗಂಟೆಗೆ ಪ್ರಾರಂಭ ಮಾಡಿ ಎಂದು ಸಲಹೆಗಳನ್ನು ಕೆಲವರು ನೀಡಿದ್ದಾರೆ. ಒಬ್ಬ ಫೇಸ್‌ಬುಕ್ ಬಳಕೆದಾರರಂತೂ ಬಿಗ್‌ಬಾಸ್ ನ ಪ್ರಸಾರ ಅವಧಿಯನ್ನು ಕಡಿಮೆ ಮಾಡಿ 40 ನಿಮಿಷ ಮಾಡಿಬಿಡಿ ಎಂದು ಸಹ ಕಮೆಂಟ್ ಮಾಡಿದ್ದಾರೆ.
8-9 ಹಾಗೂ 9 ರಿಂದ 10 ನ್ನು ಟಿವಿ ಗೆ ಬಹುಮುಖ್ಯವಾದ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿಯೇ ಹಲವು ಚಾನೆಲ್‌ಗಳಲ್ಲಿ ಪ್ರಮುಖ ಧಾರಾವಾಹಿಗಳು, ಪ್ರೈಂ ಟೈಂ ವಾರ್ತೆಗಳು ನಡೆಯುತ್ತವೆ. ಬಹುಷಃ ಇದೇ ಕಾರಣಕ್ಕೆ ಈ ಸಮಯವನ್ನು ತಪ್ಪಿಸಿ ತಡವಾಗಿ ಬಿಗ್‌ಬಾಸ್ ಅನ್ನು ಪ್ರಸಾರ ಮಾಡಲು ನಿರ್ಧರಿಸಿದ್ದಾರೆ ಆಯೋಜಕರು.


Click it and Unblock the Notifications











