ಕರೋಡ್ ಪತಿಯಲ್ಲಿ ಈ ಪ್ರಶ್ನೆಗೆ ಉತ್ತರ ಹೇಳದ ಸೋನಾಕ್ಷಿ ಸಿಕ್ಕಾಪಟ್ಟೆ ಟ್ರೋಲ್
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಶನಿವಾರ ಬೆಳಿಗೆ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡದೆ ಇದ್ದದ್ದು. ಬೇರೆ ಯಾವುದಾದರೂ ಪ್ರಶ್ನೆಯಾಗಿದ್ದರೆ ಈ ಮಟ್ಟಕ್ಕೆ ಟ್ರೋಲ್ ಆಗ್ತಿರಲಿಲ್ಲ. ಆದರೆ, ಸೋನಾಕ್ಷಿ ಸಿನ್ಹಾಗೆ ಬಹಳ ಹತ್ತಿರವಾದ ಪ್ರಶ್ನೆ ಇದಾಗಿತ್ತು.
ಕರೋಡ್ ಪತಿ ಹನ್ನೊಂದನೇ ಆವೃತ್ತಿಯಲ್ಲಿ ಸ್ಪಷೆಲ್ ಗೆಸ್ಟ್ ಆಗಿ ಭಾಗವಹಿಸಿದ್ದ ಸೋನಾಕ್ಷಿ, ಹಾಟ್ ಸೀಟ್ ನಲ್ಲಿ ಕುಳಿತು ಆಟ ಆಡುತ್ತಿದ್ದ ಸ್ಪರ್ಧಿಗೆ ಸಹಾಯ ಮಾಡಬೇಕಿತ್ತು. ಈ ಮಧ್ಯೆ ರಾಮಾಯಣ ಕುರಿತು ಪ್ರಶ್ನೆ ಕೇಳಲಾಯಿತು.
ಈ ಪ್ರಶ್ನೆಗೆ ಸ್ಪರ್ಧಿ ರುಮಾದೇವಿಗೂ ಉತ್ತರ ಗೊತ್ತಿರಲಿಲ್ಲ. ಸೋನಾಕ್ಷಿ ಸಿನ್ಹಾ ಕೂಡ ಗೊಂದಲದಿಂದ ಅದು, ಇದು ಎಂದು ಕುಳಿತುಕೊಂಡರು. ನಂತರ ಎಕ್ಸ್ ಪರ್ಟ್ ಲೈಫ್ ಲೈನ್ ಬಳಸಿ ಉತ್ತರ ಪಡೆದರು. ಯಾವುದು ಆ ಪ್ರಶ್ನೆ? ಮುಂದೆ ಓದಿ...

ರಾಮಾಯಣದ ಪ್ರಶ್ನೆ ಇದೇ
ರಾಮಾಯಣದ ಪ್ರಕಾರ, ಹನುಮಂತನು ಸಂಜೀವಿನ ಔಷಧಿಯನ್ನ ಯಾರಿಗಾಗಿ ತೆಗೆದುಕೊಂಡು ಬರುತ್ತಾನೆ?
A ಸುಗ್ರೀವ
B ಲಕ್ಷ್ಮಣ
C ಸೀತಾ
D ರಾಮ

ಮನೆತನ ಎಲ್ಲ ರಾಮಾಯಣ
ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ. ಇದು ರಾಮಾಯಣದಲ್ಲಿ ಬರುವ ಒಂದು ಪಾತ್ರದ ಹೆಸರು. ಸೋನಾಕ್ಷಿ ಅವರ ಸಹೋದರರ ಹೆಸರು ಲವ್ ಸಿನ್ಹಾ ಮತ್ತು ಕುಶ್ ಸಿನ್ಹಾ. ಇದು ರಾಮಾಯಣದಲ್ಲಿ ಬರುವ ಪಾತ್ರಗಳು. ಶತ್ರುಘ್ನ ಅವರ ಸಹೋದರರ ಹೆಸರು ಲಕ್ಷ್ಮಣ್, ಭರತ, ರಾಮ...ಇದು ರಾಮಾಯಣದಲ್ಲಿ ಬರುವ ಹೆಸರು. ಅವರ ಮನೆಯ ಹೆಸರು ರಾಮಾಯಣ. ಆದರೂ ಸೋನಾಕ್ಷಿ ಈ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ.

ಸೋನಾಕ್ಷಿ ಸಿಕ್ಕಾಪಟ್ಟೆ ಟ್ರೋಲ್
ಮನೆತನ ಎಲ್ಲ ರಾಮಾಯಣದಿಂದ ಕೂಡಿದೆ. ಆದರೂ ರಾಮಾಯಣದ ಬಗ್ಗೆ ಕೇಳಿದ ಒಂದು ಪ್ರಶ್ನೆ ಉತ್ತರ ಕೊಡೋದಕ್ಕೆ ಆಗಿಲ್ಲ ಎಂದು ನೆಟ್ಟಿಗರು ಸೋನಾಕ್ಷಿಗೆ ಟ್ರೋಲ್ ಮಾಡುತ್ತಿದ್ದಾರೆ. ಸೋನಾಕ್ಷಿ ಫೋಟೋಗೆ ಬಗೆ ಬಗೆಯ ಮೇಮ್ಸ್ ಮಾಡುತ್ತಿದ್ದಾರೆ.

ಸಂಜೀವಿನ ಔಷಧದ ಬಗ್ಗೆ ವಿವರಣೆ
ರಾವಣನ ಮಗನಾದ ಇಂದ್ರಜಿತನು ಲಕ್ಷ್ಮಣನ ಮೇಲೆ ಒಂದು ಪ್ರಬಲ ಅಸ್ತ್ರವನ್ನು ಎಸೆದಾಗ, ಲಕ್ಷ್ಮಣನು ಗಂಭೀರವಾಗಿ ಗಾಯಗೊಳ್ಳುತ್ತಾನೆ ಮತ್ತು ಇಂದ್ರಜಿತನಿಂದ ಹೆಚ್ಚು ಕಡಿಮೆ ಹತನಾಗುತ್ತಾನೆ. ಹಿಮಾಲಯದಲ್ಲಿನ ದ್ರೋಣಗಿರಿ (ಮಹೋದಯ) ಪರ್ವತದಿಂದ ಈ ಮೂಲಿಕೆಯನ್ನು ತರಲು ಹನುಮಂತನಿಗೆ ಹೇಳಲಾಗುತ್ತದೆ. ದ್ರೋಣಗಿರಿ ಪರ್ವತವನ್ನು ತಲುಪಿದಾಗ, ಹನುಮಂತನು ಆ ಮೂಲಿಕೆಯನ್ನು ಗುರುತಿಸಲಾಗದೇ ಆ ಇಡೀ ಪರ್ವತವನ್ನು ಎತ್ತಿಕೊಂಡು ರಣರಂಗಕ್ಕೆ ತರುತ್ತಾನೆ.


Click it and Unblock the Notifications











