ನವೀನ್ ಗೆ ಕಿಸ್ ಕೊಟ್ಟ ಸೋನು: 'ದೊಡ್ಮನೆ'ಯಲ್ಲಿ ಶುರುವಾಯ್ತು 'ಮುತ್ತಿನ' ಕಥೆ
ಈ ಬಾರಿ ಬಿಗ್ ಬಾಸ್ ನಲ್ಲಿ ಯಾರು ಜೋಡಿಯಾಗಬಹುದು, ಯಾರು ಲವರ್ಸ್ ಆಗಬಹುದು, ಯಾವ ಜೋಡಿ ಹೆಚ್ಚು ಗಾಸಿಪ್ ಗೆ ಗುರಿಯಾಗಬಹುದು ಎಂಬ ಕುತೂಹಲ ಕಾಡುತ್ತಿತ್ತು. ಆರಂಭದ ದಿನವೇ ಶಶಿಕುಮಾರ್ ಮತ್ತು ರೀಮಾ ಅವರನ್ನ ಒಟ್ಟಿಗೆ ಕಳುಹಿಸಿ ಚರ್ಚೆಗೆ ಕಾರಣವಾಗಿತ್ತು ಬಿಗ್ ಬಾಸ್.
ಇನ್ನು 200 ಹುಡುಗಿಯರ ಜೊತೆ ಡೇಟಿಂಗ್ ಮಾಡಿರುವುದಾಗಿ ಹೇಳಿದ ರಾಕೇಶ್ ಈ ಬಾರಿ ಬಿಗ್ ಮನೆಯಲ್ಲಿ ಲವರ್ ಬಾಯ್ ಆಗಿ ಆಟವಾಡ್ತಾರೆ ಎನ್ನಲಾಗಿತ್ತು. ಇದೆಲ್ಲರ ಮಧ್ಯೆ, ಇವರೆಲ್ಲರನ್ನೂ ಹಿಂದಿಕ್ಕಿ ಬಿಗ್ ಬಾಸ್ ಮನೆಯಲ್ಲಿ ಇನ್ನೊಂದು ಜೋಡಿಯ ನಡುವೆ ಕುಚ್ ಕುಚ್ ನಡೆತಿದೆ.
ಹೌದು, ಗಾಯಕ ನವೀನ್ ಸಜ್ಜು ಮತ್ತು ಸೋನು ಪಾಟೀಲ್ ಇತ್ತೀಚಿನ ದಿನದಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದು, ಈಗ ನವೀನ್ ಗೆ ಕಿಸ್ ಮಾಡುವ ಮೂಲಕ ಸೋನು ಎಲ್ಲರಿಗೂ ಶಾಕ್ ನೀಡಿದ್ದಾರೆ. ಏನಿದು ಮುತ್ತಿನ ಕಥೆ ಮುಂದೆ ಓದಿ.....

ಏನೋ ಏನೋ ಆಗಿದೆ
ಬಿಗ್ ಬಾಸ್ ಮನೆಯಲ್ಲಿ ನವೀನ್ ಮತ್ತು ಸೋನು ಪಾಟೀಲ್ ನಡುವೆ ಕುಚ್ ಕುಚ್ ನಡೆತಿದೆ ಎಂದು ಹೇಳಲಾಗ್ತಿದೆ. ದೊಡ್ಮನೆಯಲ್ಲೇ ಈ ಮಾತು ಕೇಳಿಬಂದಿದೆ. ಹೀಗಿರುವಾಗ ನವೀನ್ ಸಜ್ಜು ಕೆನ್ನೆಗೆ ಸೋನು ಪಾಟೀಲ್ ಎಲ್ಲರ ಮುಂದೆ ಕಿಸ್ ಮಾಡಿ ಶಾಕ್ ನೀಡಿದ್ದಾರೆ.

ಅಸಲಿ ಕಥೆ ಏನು ಗೊತ್ತಾ.?
ಕ್ರೇಜಿಟಾಸ್ಕ್ ನಡೆಯುತ್ತಿದ್ದಾಗ ನವೀನ್ ಗೆ ಸೋನು ಕಿಸ್ ಮಾಡಿದ್ದಾರೆ. ಕಿಸ್ ಮಾಡಿದ ಬಳಿಕ ನವೀನ್ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದಿದ್ದಾರೆ. ಈ ವೇಳೆ ಸೋನು 'ಬೇಡ' ಎಂದು ಕಿರುಚಿರುವ ಪ್ರೋಮೋವೊಂದು ಬಿಡುಗಡೆಯಾಗಿದೆ. ಆದ್ರೆ, ನಿಜಕ್ಕೂ ಈ ಕಿಸ್ ಕೊಟ್ಟಿದ್ದೇಕೆ, ಏನಿದು ಕ್ರೇಜಿಟಾಸ್ಕ್ ಎಂದು ಇಂದಿನಿ ಎಪಿಸೋಡ್ ನಲ್ಲಿ ನೋಡಬೇಕಿದೆ.

ಜಾಕೆಟ್ ಕೊಟ್ಟಿದ್ದ ನವೀನ್
ಈ ಹಿಂದೆ ಸೋನು ಪಾಟೀಲ್ ಚಳಿ ಎಂದು ಹೇಳಿದ್ದಕ್ಕೆ ನವೀನ್ ಸಜ್ಜು ತಾವು ತೊಟ್ಟಿದ್ದ ಜಾಕೆಟ್ ಬಿಚ್ಚಿ ಕೊಟ್ಟಿದ್ದರು. ಅಲ್ಲಿಂದ ಮನೆಯ ಸದಸ್ಯರು ಇಬ್ಬರನ್ನ ರೇಗಿಸಲು ಶುರು ಮಾಡಿದರು. ನವೀನ್ ವಿಷ್ಯ ಪ್ರಸ್ತಾಪಿಸಿದಾಗ ಸೋನು ಪಾಟೀಲ್ ನಾಚಿಕೆ ಪಡುತ್ತಿದ್ದನ್ನ ಗಮನಿಸಿ ಇತರೆ ಸದಸ್ಯರು ಏನೋ ಇದೆ ಎಂದಿದ್ದರು. ನಂತರ ಜಗ್ಗೇಶ್ ಅವರ ಮೂಲಕ ನವೀನ್ ಗೆ ಹೊಸ ಜಾಕೆಟ್ ನೀಡಿದ್ರು ಬಿಗ್ ಬಾಸ್.

ಸ್ನೇಹಿತ ಎಂದಿದ್ದ ಸೋನು
ಚಳಿ ಎಂದಿದ್ದಕ್ಕೆ ಜಾಕೆಟ್ ಕೊಟ್ಟ ನವೀನ್ ಅಂದ್ರೆ ನನಗೆ ತುಂಬಾ ಇಷ್ಟ. ಸ್ನೇಹಿತನಾಗಿ ನಾನು ಅವನನ್ನ ಇಷ್ಟಪಡ್ತೀನಿ ಎಂದು ಸೋನು ಹೇಳಿಕೊಂಡಿದ್ದರು. ಬಟ್, ಇಂದಿನ ಸಂಚಿಕೆ ಇವರಿಬ್ಬರ ಬಗ್ಗೆ ಮತ್ತಷ್ಟು ವಿಷ್ಯವನ್ನ ತಿಳಿಸಲಿದೆ.


Click it and Unblock the Notifications











